ಸುಭಾಷಿತ :

Tuesday, April 7 , 2020 6:06 PM

ಚರ್ಮದ ಕಾಂತಿ ಹೆಚ್ಚುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆವರೆಗೆ… ಬೀಟ್ ರೂಟ್ ಬೆಸ್ಟ್


Sunday, February 23rd, 2020 1:24 pm

ಸ್ಪೆಷಲ್ ಡೆಸ್ಕ್ : ಪ್ರತಿಯೊಬ್ಬ ಮನುಷ್ಯನೂ ಸೇವಿಸಲೇ ಬೇಕಾದ ಒಂದು ತರಕಾರಿ ಎಂದರೆ ಅದು ಬೀಟ್ ರೂಟ್. ಇದರಲ್ಲಿರುವ ಅಂಶಗಳು ದೇಹವನ್ನು ಹಲವಾರು ಆರೋಗ್ಯ ಸಮಸ್ಯೆಯಿಂದ ರಕ್ಷಿಸುತ್ತದೆ. ಚರ್ಮವನ್ನು ಅಂದ ಮಾಡುವುದರಿಂದ ಹಿಡಿದು, ಮಲಬದ್ಧತೆ ಸಮಸ್ಯೆ ನಿವಾರಣೆವರೆಗೂ ಬೀಟ್ರೂಟ್ ನಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ…

ರಕ್ತದೊತ್ತಡ ನಿಯಂತ್ರಿಸಲು ಬೀಟ್ ರೂಟ್ ರಸ ಉತ್ತಮ. ಇದರಲ್ಲಿರುವ ನೈಸರ್ಗಿಕ ನೈಟ್ರೇಟ್ ಅಂಶ ರಕ್ತನಾಳಗಳಲ್ಲಿ ನೈಟ್ರಿಕ್ ಆಕ್ಸೈಡ್ ಅಂಶ ಹೆಚ್ಚಿಸಲು ನೆರವಾಗುತ್ತದೆ.
ಬೀಟ್ ರೂಟ್ ನಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುರುವುದರಿಂದ ಒಂದು ಲೋಟ ಜ್ಯೂಸ್ ಸೇವಿಸಿದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ.
ಬೀಟ್ ರೂಟ್ ನಲ್ಲಿ ರಕ್ತ ಶುದ್ಧೀಕರಿಸುವ ಅಂಶ ಹೆಚ್ಚಿದೆ. ಅಲ್ಲದೆ ಇದರಲ್ಲಿ ವಿಟಮಿನ್ ಸಿ ಅಂಶವೂ ಇದೆ. ಇದು ಚರ್ಮದ ಕಾಂತಿ ಹೆಚ್ಚಿಸುತ್ತದೆ.
ಇದು ಅಧಿಕ ರಕ್ತದೊತ್ತಡ ನಿವಾರಿಸಿ ದೇಹದಲ್ಲಿ ರಕ್ತಸಂಚಾರ ಸರಿಯಾಗಿ ಆಗುವತೆ ನೋಡಿಕೊಳ್ಳುತ್ತದೆ.
ಹೆಚ್ಚಿನ ಫೈಬರ್ ಅಂಶ ಹೊಂದಿದ್ದು, ಜೀರ್ಣಕ್ರಿಯೆಗೂ ಒಳ್ಳೆಯದು. ಅಲ್ಲದೆ, ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತೆ.
ಫಾಲಿಕ್ ಆಸಿಡ್ ಕೊರತೆ ಇರುವವರು ಮಾತ್ರೆ ತೆಗೆದುಕೊಳ್ಳುವ ಬದಲು ಪ್ರತಿನಿತ್ಯ ಬೀಟ್ ರೂಟ್ ಅನ್ನು ಜ್ಯೂಸ್ ಮಾಡಿ ಕುಡಿದರೆ ಸಾಕು.
ಬೀಟ್ ರೂಟ್ ನಲ್ಲಿ ವಿಟಮಿನ್ ಎ, ಸಿ, ಬೇಟೈನ್, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ರಂಜಕ, ನೈಸಿನ್ ಮತ್ತು ಕಬ್ಬಿಣದಂಶ ಅಧಿಕವಿರುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions