ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಳಿಗಾದಲ್ಲಿ ತ್ವಚೆಯ ಆರೋಗ್ಯ ಕಾಜಳಿ ಅತ್ಯಗತ್ಯವಾಗಿದೆ. ಇದಕ್ಕಾಗಿ ಉತ್ತಮವಾದ ಆಹಾರ ಮತ್ತು ಹಣ್ಣಗಳ ಸೇವನೆ ಅಗತ್ಯವಾಗಿದೆ. ಹಣ್ಣುಗಳಲ್ಲಿ ವಿಟಮಿನ್ , ಖನಿಜಾಂಶಗಳು ಕಂಡುಬರುತ್ತವೆ. ಇದು ಆರೋಗ್ಯ ಮಾತ್ರವಲ್ಲದೆ ತುಂಬಾ ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ತ್ವಚೆಯ ಆರೈಕೆಯಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವ ಮೂಲಕ ದೋಷರಹಿತ ಮುಖವನ್ನು ಪಡೆಯಬಹುದು.
ಇದರಲ್ಲಿರುವ ವಿಟಮಿನ್-ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಹಾಗಾದರೆ ಹೊಳೆಯುವ ತ್ವಚೆಗಾಗಿ ಯಾವ ಹಣ್ಣಿನ ರಸವನ್ನು ಉಪಯೋಗಿಸಬಹುದು ಎಂಬುದನ್ನು ತಿಳಿಯೋಣ.
ಕಿತ್ತಳೆ ರಸ
ಕಿತ್ತಳೆ ಜ್ಯೂಸ್ ಮುಖದಿಂದ ಕಲೆಗಳನ್ನು ತೆಗೆದುಹಾಕಲು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ಕಿತ್ತಳೆ ರಸಕ್ಕೆ ಜೇನುತುಪ್ಪವನ್ನು ಸೇರಿಸಬೇಕು. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
ಕ್ಯಾರೆಟ್ ಜ್ಯೂಸ್
ಕ್ಯಾರೆಟ್‌ನಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ಪ್ರಯೋಜನಕಾರಿ. ನೀವು ಫೇಸ್ ಪ್ಯಾಕ್‌ನಲ್ಲಿ ಕ್ಯಾರೆಟ್ ರಸ ಅನ್ನು ಸೇರಿಸಬಹುದು. ನೇರವಾಗಿ ಮುಖದ ಮೇಲೆ ಕ್ಯಾರೆಟ್ ರಸವನ್ನು ಅನ್ವಯಿಸಬಹುದು. ಇದನ್ನು ಬಳಸುವುದರಿಂದ ಕಲೆಯಿಲ್ಲದ ಮತ್ತು ಹೊಳೆಯುವ ಚರ್ಮವನ್ನು ಪಡೆಯಬಹುದು.
ಸ್ಟ್ರಾಬೆರಿ ಜ್ಯೂಸ್
ಟ್ಯಾನಿಂಗ್ ಸಮಸ್ಯೆಯನ್ನು ನಿವಾರಿಸಲು ಸ್ಟ್ರಾಬೆರಿ ಜ್ಯೂಸ್ ಸಹಕಾರಿ. ಇದಕ್ಕಾಗಿ ಒಂದು ಚಮಚ ಕಡೆಲೆ ಹಿಟ್ಟಿಗ ಹಿಟ್ಟಿನಲ್ಲಿ ಸ್ಟ್ರಾಬೆರಿ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿ ನಂತರ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 10-15 ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆಯಿರಿ.
ದಾಳಿಂಬೆ ಜ್ಯೂಸ್
ದಾಳಿಂಬೆಯಲ್ಲಿರುವ ಗುಣಗಳು ಚರ್ಮದ ಸಮಸ್ಯೆಗಳನ್ನು ಬಿಡುತ್ತವೆ. ವಿಟಮಿನ್-ಸಿ ದಾಳಿಂಬೆ ರಸದಲ್ಲಿ ಕಂಡುಬರುತ್ತದೆ. ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಇದು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಸೌತೆಕಾಯಿ ರಸ
ಸೌತೆಕಾಯಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್-ಬಿ, ವಿಟಮಿನ್-ಕೆ ಮತ್ತಿತರ ಪೋಷಕಾಂಶಗಳಿವೆ. ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಸೌತೆಕಾಯಿ ರಸವನ್ನು ನಿಯಮಿತವಾಗಿ ಬಳಸುವುದರಿಂದ ಹೊಳೆಯುವ ಚರ್ಮವನ್ನು ಪಡೆಯಬಹುದು.
BIGG NEWS : ಡಿಕೆಶಿ ಸೋಲಿಸಲು 500 ಕೋಟಿ ಸುಪಾರಿ ಕೊಟ್ಟಿದ್ದಾರೆ : ಸಚಿವ ಆರ್.ಅಶೋಕ್ ಹೊಸ ಬಾಂಬ್
BIGG NEWS : ರಾಮನಗರದಲ್ಲಿ ಪುಂಡರ ಅಟ್ಟಹಾಸ : ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ!
BIGG NEWS: ಗಣರಾಜ್ಯೋತ್ಸವಕ್ಕೆ ಖಲಿಸ್ತಾನ್ ಪರ ಗುಂಪಿನಿಂದ ಭಯೋತ್ಪಾದಕ ದಾಳಿ ಬೆದರಿಕೆ ; ಪ್ರಕರಣ ದಾಖಲು