ಸುಭಾಷಿತ :

Tuesday, February 18 , 2020 1:50 PM

Hello… ! ಗಡ್ಡ ಬಿಟ್ಕೊಂಡಿರೋ ಪುರುಷರೇ ಸ್ವಲ್ಪ ಇದನ್ನು ಓದಿ…


Friday, January 17th, 2020 10:32 am

ಸ್ಪೆಷಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಗಡ್ಡ ಬಿಡೋದು ಒಂದು ಫ್ಯಾಷನ್ ಆಗಿದೆ. ನೀವು ಕೂಡ ಗಡ್ಡ ಬಿಟ್ಟವರಲ್ಲಿ ಒಬ್ಬರಾಗಿರಬಹುದು. ಗಡ್ಡ ಬಿಡೋದು ಸ್ಟೈಲ್ ಅಂತಾನೂ ನಿಮಗೆ ಅನಿಸಿರಬಹುದು. ಆದರೆ ಗಡ್ಡದಲ್ಲಿ ಎಷ್ಟೊಂದು ಬ್ಯಾಕ್ಟೀರಿಯಾ ಇರುತ್ತೆ ಅನ್ನೋದು ಗೊತ್ತಾ?

ಅಯ್ಯೋ ಏನು ಗಡ್ಡದಲ್ಲಿ ಕೀಟಾಣುವೇ ಎಂದು ಹುಬ್ಬೇರಿಸಬೇಡಿ.. ಇದು ನಿಜ ಹೌದು…. ಪುರುಷರ ಗಡ್ಡದಲ್ಲಿ ನಾಯಿಯ ಮೈಮೇಲೆ ಇರೋದಕ್ಕಿಂತ ಹೆಚ್ಚು ಕೀಟಾಣು ಇರುತ್ತಂತೆ. ಸಂಶೋಧನೆಯೊಂದು ತಿಳಿಸಿರುವಂತೆ ನಾಯಿಯ ಮೈ ಮೇಲೆ ಎಷ್ಟು ಕೀಟಗಳು ಇರುತ್ತವೆಯೋ, ಅದಕ್ಕಿಂತ ಹೆಚ್ಚು ಕೀಟಾಣುಗಳನ್ನು ಗಡ್ಡದಲ್ಲಿರುತ್ತವೆ ಎಂದು ಸಾಬೀತಾಗಿದೆ.

ಸ್ವಿಡ್ಜರ್ ಲ್ಯಾಂಡ್ ನ ಕ್ಲಿನಿಕ್ ಈ ಸಂಶೋಧನೆ ನಡೆಸಿದ್ದು, ಇದಕ್ಕಾಗಿ18 ಗಡ್ಡಧಾರಿ ಪುರುಷರು ಮತ್ತು ನಾಯಿಗಳ ಮೇಲೆ ಪ್ರಯೋಗ ಮಾಡಲಾಯಿತು. ನಾಯಿಯ ಕುತ್ತಿಗೆಯವರೆ ಮತ್ತು ಪುರುಷರ ಗಡ್ಡವನ್ನು ಪರೀಕ್ಷೆ ಮಾಡಿ ಎರಡನ್ನು ಹೋಲಿಕೆ ಮಾಡಿದಾಗ ಏಳು ಪುರುಷರ ಗಡ್ಡದಲ್ಲಿ ನಾಯಿಕ್ಕಿಂತ ಹೆಚ್ಚು ಕೀಟಾಣು ಇರುವುದು ತಿಳಿದು ಬಂದಿದೆ. ಇದು ಮನುಷ್ಯನ ಆರೋಗ್ಯಕ್ಕೆ ಮಾರಕವಾಗಲಿದೆ ಎಂದು ಸಹ ತಿಳಿದು ಬಂದಿದೆ.

ಹಾಗಿದ್ದರೆ ಗಡ್ಡವನ್ನು ಕ್ಲೀನ್ ಆಗಿಟ್ಟುಕೊಳ್ಳುವುದು ಹೇಗೆ ಅನ್ನೋದನ್ನು ನೀವು ತಿಳಿದುಕೊಂಡಿದ್ದರೆ ಉತ್ತಮ…
ತಲೆ ಕೂದಲು ಕ್ಲೀನ್ ಮಾಡಿದಂತೆ ಗಡ್ಡವನ್ನು ಸಹ ಕ್ಲೀನ್ ಮಾಡಿ. ಇದರಿಂದ ಬ್ಯಾಕ್ಟೀರಿಯಾ ಸಮಸ್ಯೆ ಉಂಟಾಗುವುದಿಲ್ಲ.
ಗಡ್ಡದಲ್ಲಿ ಬಿಟ್ಟಾಗ ತುರಿಕೆ ಆರಂಭವಾಗುತ್ತದೆ. ಆದುದರಿಂದ ಮೊದಲಿನಿಂದಲೇ ಗಡ್ಡವನ್ನು ಸ್ವಚ್ಚವಾಗಿಟ್ಟುಕೊಳ್ಳಿ.
ಗಡ್ಡವನ್ನು ಸ್ವಚ್ಛಗೊಳಿಸಲು ಶ್ಯಾ೦ಪೂ ಬಳಸಿ. ಇದರಿಂದ ಗಡ್ಡ ಬೇಗನೆ ಕ್ಲೀನ್ ಆಗುತ್ತದೆ.
ಗಡ್ಡ ತೊಳೆಯಲು ಸಾಬೂನನ್ನು ಎ೦ದಿಗೂ ಬಳಸಿಕೊಳ್ಳಬೇಡಿ. ಇದರಿಂದ ತ್ವಚೆಯು ಶುಷ್ಕವಾಗುತ್ತದೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions