ಸ್ಟೈಲಿಶ್ ಆಗಿ ಗಡ್ಡ ಬಿಟ್ಟಿರೋರಿಗೆ ಇಲ್ಲಿದೆ ಒಂದಿಷ್ಟು ಕಿವಿ ಮಾತು… – Kannada News Now


Beauty Tips Lifestyle

ಸ್ಟೈಲಿಶ್ ಆಗಿ ಗಡ್ಡ ಬಿಟ್ಟಿರೋರಿಗೆ ಇಲ್ಲಿದೆ ಒಂದಿಷ್ಟು ಕಿವಿ ಮಾತು…

ಸ್ಪೆಷಲ್ ಡೆಸ್ಕ್ : ಇತ್ತೀಚಿನ ಹುಡುಗರ ಕ್ರೇಜ್ ಎಂದರೆ ಗಡ್ಡ ಬಿಡೋದು. ಬಿಯರ್ಡ್ ಮ್ಯಾನ್ ಕಾಂಪಿಟಿಶನ್ ಗಳು ಸಹ ನಡೆಯುತ್ತವೆ. ಅದಕ್ಕಾಗಿಯೇ ಹೆಚ್ಚಿನ ಎಲ್ಲಾ ಪುರುಷರು ಸಹ ಸ್ಟೈಲ್‌ ಆಗಿ ಗಡ್ಡ ಬಿಡಲು ಆರಂಭಿಸಿದ್ದಾರೆ. ಗಡ್ಡವೇನೋ ಬಿಟ್ಟಾಯ್ತು ಆದರೆ ಅದರ ರಕ್ಷಣೆ ಹೇಗೇ..? ಇದೇ ಎಲ್ಲಾರಿಗೂ ದೊಡ್ಡ ತಲೆ ನೋವಾಗಿ ಬಿಟ್ಟಿದೆ. ನಿಮಗೂ ಈ ಸಮಸ್ಯೆ ಕಾಡುತ್ತಿದೆಯೇ..? ಹಾಗಾದರೆ ಈ ಟಿಪ್ಸ್‌ ಅನುಸರಿಸಿ..

ಗಡ್ಡ ಬಿಡಲು ಆರಂಭಿಸಿದಾಗ ತುರಿಕೆ ಆರಂಭವಾಗುತ್ತದೆ. ಆದುದರಿಂದ ಮೊದಲಿನಿಂದಲೇ ಗಡ್ಡವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಆರಂಭಿಸಿ.
ಗಡ್ಡ ಸಣ್ಣದಿರುವಾಗ ಅದನ್ನು ಕತ್ತರಿಸಲು ಹೋಗಬೇಡಿ. ಸ್ವಲ್ಪ ಉದ್ದ ಬಿಡಿ. ಎರಡು ಮೂರು ತಿಂಗಳು ಕಳೆದ ಮೇಲೆ ಅದನ್ನು ಕತ್ತರಿಸಿ. ಇದರಿಂದ ಗಡ್ಡಕ್ಕೆ ಮೆರುಗು ಬರುತ್ತದೆ.
ಗಡ್ಡವನ್ನು ಸ್ವಚ್ಛಗೊಳಿಸಲು ಶ್ಯಾ೦ಪೂ ಬಳಸಿ. ನಿಮ್ಮಕೂದಲನ್ನು ನಿಯಮಿತವಾಗಿ ತೊಳೆದು ಸ್ವಚ್ಛಗೊಳಿಸಿಕೊಳ್ಳುವ೦ತೆ, ನಿಮ್ಮ ಮುಖದ ಮೇಲಿನ ಕೂದಲನ್ನೂ ಕೂಡಾ ನಿಯಮಿತವಾಗಿ ಸ್ವಚ್ಛಗೊಳಿಸಿ.
ಗಡ್ಡ ತೊಳೆಯಲು ಸಾಬೂನನ್ನು ಎ೦ದಿಗೂ ಬಳಸಿಕೊಳ್ಳಬೇಡಿ. ಇದರಿಂದ ತ್ವಚೆಯು ಶುಷ್ಕವಾಗುತ್ತದೆ
ಗಡ್ಡದ ಮೇಲೆ ಕ೦ಡೀಶನರ್ ಬಳಸಿಕೊಳ್ಳುವ ವಿಚಾರವು ಶ್ಯಾ೦ಪೂ ಬಳಸಿಕೊಳ್ಳುವಷ್ಟೇ ಮುಖ್ಯ.
ಗಡ್ಡವು ಮುಖದ ಅಂದ ಹೆಚ್ಚಿಸಬೇಕೆ೦ದು ನೀವು ಬಯಸಿದ್ದಲ್ಲಿ, ಗಡ್ಡದಲ್ಲಿರುವ ಸೀಳುತುದಿಗಳುಳ್ಳ ಕೂದಲುಗಳನ್ನು ನಿವಾರಿಸುವುದು ಒಳ್ಳೆಯದು.
ಗಡ್ಡವನ್ನು ಸಹ ಚೆನ್ನಾಗಿ ಬಾಚುತ್ತಿರಿ. ಇದರಿಂದ ಅದು ಆರೋಗ್ಯಯುತವಾಗಿರುತ್ತದೆ.