ಬೆಂಗಳೂರು :  2015-2016 ರಲ್ಲಿ ನಡೆದ ಶಿಕ್ಷಕರ ಅಕ್ರಮ ನೇಮಕ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ವಿಧಾನಸೌಭೆಯಲ್ಲಿ ಮಾತನಾಡಿದ ಅವರು 2015-2016 ರಲ್ಲಿ ಇದಕ್ಕಿದ್ದಂತೆ ಯಾವುದೇ ಪರೀಕ್ಷೆ ನಡೆಸದೇ ಅಕ್ರಮವಾಗಿ ಕೆಲವು ಶಿಕ್ಷಕರನ್ನು ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಬೆಂಗಳೂರು ವಿಭಾಗದ 15 ಜನರು ಈ ರೀತಿ ನೇಮಕ ಆದೇಶ ಪಡೆದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.  ರಾಜ್ಯಾದ್ಯಂತ ಈ ರೀತಿ ಘಟನೆ ನಡೆದಿದ್ದು, ಇದು ಸಮಾಜವೇ ತಲೆ ತಗ್ಗಿಸುವ ಪ್ರಕರಣ , ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳನ್ನು 2012-13 ಮತ್ತು 2014-15ರಲ್ಲಿ ತಲಾ 5 ರಿಂದ 10 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಸಿಐಡಿ ತನಿಖೆಯಿಂದ ತಿಳಿದುಬಂದಿದೆ.

ತುಮಕೂರು, ವಿಜಯಪುರ ಹಾಗೂ ಕೋಲಾರ ಜಿಲ್ಲೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ದಾಖಲೆಗಳಿಂದ ಗೊತ್ತಾಗಿದೆ’ ಎಂದಿವೆ.  ಈ ಜಿಲ್ಲೆಯಲ್ಲಿ ಅಕ್ರಮವಾಗಿ ಹುದ್ದೆಗೆ ಆಯ್ಕೆಯಾಗಲು ಸಹ ಶಿಕ್ಷಕರು, ತಲಾ ₹ 5 ಲಕ್ಷದಿಂದ ₹ 10 ಲಕ್ಷ ನೀಡಿರುವುದು ಪತ್ತೆಯಾಗಿದೆ. ಈ ಹಣವನ್ನು ಹಂತ ಹಂತವಾಗಿ ಪಾವತಿಸಲಾಗಿದೆ ಎಂದು ಹೇಳಳಾಗುತ್ತಿದೆ.

BREAKING NEWS : ತಿರುಪತಿ ಭಕ್ತಾಧಿಗಳಿಗೆ ಗುಡ್‌ನ್ಯೂಸ್‌ : 300 ರೂ.ಗೆ ನವರಾತ್ರಿ ʻವಿಶೇಷ ದರ್ಶನ ಟಿಕೆಟ್‌ ಬಿಡುಗಡೆʼ | Tirupati temple

ಇಂದಿನ ರಾಶಿ ಭವಿಷ್ಯ ನೋಡಿ (20 ಸೆಪ್ಟೆಂಬರ್ , 2022) ಮಂಗಳವಾರ

Share.
Exit mobile version