ಸುಭಾಷಿತ :

Saturday, February 29 , 2020 6:07 PM

ಗೊಂದಲದ ನಡುವೆಯೂ ‘ಬಿಬಿಎಂಪಿ ಸ್ಥಾಯಿ ಸಮಿತಿ’ ಚುನಾವಣೆ ಮುಕ್ತಾಯ : ಹೀಗಿದೆ ಸಂಭಾವ್ಯ ‘ಸ್ಥಾಯಿ ಸಮಿತಿ ಅಧ್ಯಕ್ಷರ’ ಪಟ್ಟಿ


Saturday, January 18th, 2020 7:27 pm

ಬೆಂಗಳೂರು : ಅಂತೂ ಇಂತೂ ಹಲವು ಅಸಮಾಧಾನ, ಕಣ್ಣೀರು, ಗೊಂದಲದ ಮಧ್ಯೆ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಇಂದು ಮುಕ್ತಾಯಗೊಂಡಿದೆ. ಎಲ್ಲಾ ಸಮಿತಿಗಳಿಗೆ 11 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಲೆಕ್ಕ ಪತ್ರ ಸ್ಥಾಯಿ ಸಮಿತಿಗೆ ಮಾತ್ರ 10 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ವಾರದಲ್ಲಿ ಮೇಯರ್ ನೇತೃತ್ವದಲ್ಲಿ ಇಂತಹ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ.

ಇಂದು ಹಲವು ದಿನಗಳಿಂದ ಮುಂದೂಡಲ್ಪಟ್ಟಿದ್ದ ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಸದಸ್ಯರು, ಅಧ್ಯಕ್ಷರ ಆಯ್ಕೆ ಕೊನೆಗೂ ಆಯ್ಕೆ ಮಾಡಲಾಗಿದೆ. ಆದ್ರೇ 11 ಸಮಿತಿಗೆ ಮಾತ್ರವೇ 11 ಜನರ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದರೇ, ಲೆಕ್ಕ ಪತ್ರ ಸ್ಥಾಯಿ ಸಮಿತಿಗೆ ಮಾತ್ರವೇ 10 ಜನರ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾಗಿರುವ ಸದಸ್ಯರಲ್ಲಿ ಒಬ್ಬರನ್ನು ಮುಂದಿನ ವಾರದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಮೇಯರ್ ನೇತೃತ್ವದ ಸಭೆಯಲ್ಲಿ ಆಯ್ಕೆ ಮಾಡಲಿದ್ದಾರೆ. ಅದಕ್ಕೂ ಮುನ್ನವೇ ಸಂಭಾವ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರ ಪಟ್ಟಿ ಈ ಕೆಳಗಿನಂತಿದೆ.

12 ಸ್ಥಾಯಿ ಸಮಿತಿ ಸಂಭಾವ್ಯ ಅಧ್ಯಕ್ಷರ ಪಟ್ಟಿ

 1. ನಗರಯೋಜನೆ ಸ್ಥಾಯಿ ಸಮಿತಿ- ಅಶಾ ಸುರೇಶ್
 2. ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ- ಮೋಹನ್ ಕುಮಾರ್
 3. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಹನುಮಂತಯ್ಯ
 4. ಲೆಕ್ಕಪತ್ರ ಸ್ಥಾಯಿ ಸಮಿತಿ- ಮಮತ ಶರವಣ
 5. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ- ಎಲ್ ಶ್ರೀನಿವಾಸ್
 6. ಆರೋಗ್ಯ ಸ್ಥಾಯಿ ಸಮಿತಿ- ಮಂಜುನಾಥ ರಾಜು
 7. ಶಿಕ್ಷಣ ಸ್ಥಾಯಿ ಸಮಿತಿ- ಮಂಜುಳ ನಾರಾಯಣ ಸ್ವಾಮಿ
 8. ಸಿಬ್ಬಂದಿ ಸುಧಾರಣೆ ಸ್ಥಾಯಿ ಸಮಿತಿ- ಅರುಣ ರವಿ
 9. ಅಪೀಲು ಸ್ಥಾಯಿ ಸಮಿತಿ- ಗುಂಡಣ್ಣ
 10. ತೋಟಗಾರಿಕೆ ಸ್ಥಾಯಿ ಸಮಿತಿ- ಉಮದೇವಿ
 11. ಮಾರುಕಟ್ಟೆ ಸ್ಥಾಯಿ ಸಮಿತಿ- ಪದ್ಮವತಿ
 12. ವಾರ್ಡ್ ಕಾಮಗಾರಿ ಸ್ಥಾಯಿ ಸಮಿತಿ- ಜಿ.ಕೆ ವೆಂಕಟೇಶ್

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions