ದಾವಣಗೆರೆ: ಜಿಲ್ಲೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಕೆ ಎಸ್ ಡಿ ಎಲ್ ಟೆಂಡರ್ ಗುತ್ತಿಗೆ ಅಕ್ರಮದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇಂತಹ ಅವರು ಇಂದು ಚೆನ್ನಗಿರಿಯಲ್ಲಿ ನಡೆಯುತ್ತಿದ್ದಂತ ವಿಜಯಸಂಕಲ್ಪ ಯಾತ್ರೆಗೆ ಆಗಮಿಸುತ್ತಿದ್ದಂತೆ, ಬಿಜೆಪಿ ವರ್ಸಸ್ ಬಿಜೆಪಿ ನಡುವೆ ವಾಗ್ಯುದ್ಧವೇ ನಡೆದಿದೆ. ಅಷ್ಟೇ ಅಲ್ಲದೇ ಪರಸ್ಪರ ಬಿಜೆಪಿ ನಾಯಕರ ಬ್ಯಾನರ್ ಗಳನ್ನೇ, ಬಿಜೆಪಿ ಕಾರ್ಯಕರ್ತರು ಹರಿದು ಹಾಕಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಇಂದು ಬಿಜೆಪಿ ವರ್ಸಸ್ ಬಿಜೆಪಿ ನಡುವ ಸಮರ ತಾರಕಕ್ಕೇರಿದೆ. ವಿಜಯ ಸಂಕಲ್ಪ ಯಾತ್ರೆಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ, ಪ್ರಶಾಂತ್ ಮಾಡಾಳ್ ಆಗಮಿಸುತ್ತಿದ್ದಂತೆ ರಣಾಂಗಣವಾಗಿ ಬಿಜೆಪಿ ಕಾರ್ಯಕರ್ತರ ನಡುವೆ ಏರ್ಪಟ್ಟಿದೆ.
ಚೆನ್ನಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವಂತ ಹೆಚ್ ಎಸ್ ಶಿವಕುಮಾರ್ ಬೆಂಬಲಿಗರು ಹಾಗೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬೆಂಬಲಿಗರ ನಡುವೆ ಗಲಾಟೆಯೇ ನಡೆದಿದೆ.
ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿ ಬ್ಯಾನರ್ ನಲ್ಲಿದ್ದಂತ ಮಾಡಾಳ್ ಪೋಟೋವನ್ನು ಶಿವಕುಮಾರ್ ಬೆಂಬಲಿಗರು ಹಾಗೂ ಶಿವಕುಮಾರ್ ಪೋಟೋವನ್ನು ಮಾಡಾಳ್ ಬೆಂಬಲಿಗರು ಹರಿದು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಕಾರ್ಯಕರ್ತರ ಗಲಾಟೆ ತಾರಕಕ್ಕೇರುತ್ತಿದ್ದಂತೇ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಸ್ಥಳದಿಂದ ಕಾಲ್ ಕಿತ್ತಿದ್ದಾರೆ. ಕಾರ್ಯಕರ್ತರ ನಡುವಿನ ಗಲಾಟೆಯಿಂದಾಗಿ ಚೆನ್ನಗಿರಿಯಲ್ಲಿ ನಡೆಯುತ್ತಿದ್ದಂತ ವಿಜಯ ಸಂಕಲ್ಪ ಯಾತ್ರೆ ಇಂದು ಅರ್ಧಕ್ಕೆ ಮೊಟುಕುಗೊಂಡಿದೆ.
BIGG NEWS : ಐಸಿಸಿ ಬಂಧನ ವಾರಂಟ್ ಬಳಿಕ ರಷ್ಯಾ ಆಕ್ರಮಿತ ಮಾರಿಯುಪೋಲ್, ಕ್ರೈಮಿಯಾಗೆ ‘ಪುಟಿನ್’ ಭೇಟಿ