ಸುಭಾಷಿತ :

Tuesday, January 28 , 2020 2:05 PM

‘ಮೈಸೂರು-ಬಾಗಲಕೋಟೆ’ ರೈಲು ಪ್ರಯಾಣಿಕರ ಗಮನಿಸಿ : 14 ದಿನ ‘ಬಸವ ಎಕ್ಸ್ ಪ್ರೆಸ್’ ರೈಲು ಸಂಚಾರ ಬಂದ್


Monday, November 11th, 2019 6:39 pm

ಮೈಸೂರು : ಬಾಗಲಕೋಟೆ-ಮೈಸೂರು ನಡುವೆ ಸಂಚರಿಸುತ್ತಿದ್ದ ಬಸವ ಎಕ್ಸ್ ಪ್ರೆಸ್ ರೈಲು ಸಂಚಾರ 14 ದಿನಗಳ ಕಾಲ ರದ್ದು ಪಡಿಸಲಾಗಿದೆ ಎಂದು ಪ್ರಯಾಣಿಕರಿಗೆ ಈ ಮೂಲಕ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತಂತೆ ಮಾಹಿತಿ ನೀಡಿದ ಮೈಸೂರು ರೈಲ್ವೆ ಸಾರ್ವಜನಿಕ ಸಂಪರ್ಕ ಶಾಖೆ ವಿಭಾಗೀಯ ಕಚೇರಿಯ ಸೀನಿಯರ್ ಮ್ಯಾನೇಜರ್ ಸತೀಶ್, ಕಲಬುರ್ಗಿ-ಸೆವಲಗಿ ನಡುವೆ ಡಬಲ್ ಟ್ರ್ಯಾಕ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ರೈಲು ಗಾಡಿ ಸಂಖ್ಯೆ 1730 ರೈಲು  ಹಾಗೂ ರೈಲು ಗಾಡಿ ಸಂಖ್ಯೆ 17308 ಬಾಗಲಕೋಟೆ-ಮೈಸೂರು ಸಂಚರಿಸುತ್ತಿದ್ದ ಬಸವ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ನವೆಂಬರ್ 13ರಿಂದ 27ರವರೆಗೆ ಬಸವ ಎಕ್ಸ್ ಪ್ರೆಸ್ ಒಟ್ಟು 14 ದಿನಗಳ ಕಾಲ ಬಂದ್ ಆಗಲಿದ್ದು, ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ರೈಲ್ವೆ ಇಲಾಖೆ ತಿಳಿಸಿದೆ. ಹೀಗಾಗಿ ಬಸವ ಎಕ್ಸ್ ಪ್ರೆಸ್ ರೈಲನ್ನು ನೆಚ್ಚಿಕೊಂಡು ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಿಗೆ ನ.13ರಿಂದ ನ.27ರ ವರಗೆ ಬಸವ ಎಕ್ಸ್ ಪ್ರೆಸ್ ರೈಲು ಇರುವುದಿಲ್ಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions