ಜುಲೈ.11ರಂದು ಹಾಸನದಲ್ಲಿ ಬಾನುಮುಷ್ತಾಕ್‌ ಅವರ ಎದೆಯ ಹಣತೆ, ತೇಜಸ್ವಿ ಮಾಯಾಮೃಗ ನಾಟಕ ಪ್ರದರ್ಶನ

ಬೆಂಗಳೂರು: ಅಂತಾರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನುಮುಷ್ತಾಕ್ ಅವರ ಎದೆಯ ಹಣತೆ ಕಥೆಯನ್ನು ಆಧರಿಸಿದ ನಾಟಕ ಮತ್ತು ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮಾಯಾಮೃಗ ನಾಟಕ ಪ್ರದರ್ಶನವನ್ನು ಜುಲೈ 11ರಂದು ಶುಕ್ರವಾರ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಹಾಸನದ ರಂಗಸಿರಿ ಕಲಾ ತಂಡ ಆಯೋಜಿಸಿದೆ. ನೀನಾಸಮ್ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲ ಡಾ.ಎಂ.ಗಣೇಶ್ ಹೆಗ್ಗೋಡು ನಿರ್ದೇಶನ ಮಾಡಿರುವ ಈ ನಾಟಕವನ್ನು ಹೆಗ್ಗೋಡಿನ ಸತ್ಯಶೋಧನ ರಂಗಸಮುದಾಯದ ನೇತೃತ್ವದಲ್ಲಿ ಜನಮನದಾಟ ರಂಗ ತಂಡ ಅಭಿನಯಿಸಲಿದೆ. ಇದೇ ಸಂದರ್ಭದಲ್ಲಿ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನುಮುಷ್ತಾಕ್ … Continue reading ಜುಲೈ.11ರಂದು ಹಾಸನದಲ್ಲಿ ಬಾನುಮುಷ್ತಾಕ್‌ ಅವರ ಎದೆಯ ಹಣತೆ, ತೇಜಸ್ವಿ ಮಾಯಾಮೃಗ ನಾಟಕ ಪ್ರದರ್ಶನ