ಸುಭಾಷಿತ :

Sunday, January 26 , 2020 8:24 PM

ಎಲ್ಲ ಬ್ಯಾಂಕ್ ಖಾತೆದಾರರೇ ಗಮನಿಸಿ: 2020ರ ಜನವರಿ 1 ಒಳಗೆ ಕಡ್ಡಾಯವಾಗಿ ‘ನಿಮ್ಮ ಬ್ಯಾಂಕ್‌ಗೆ ಈ ದಾಖಲೆಗಳನ್ನು ತಪ್ಪದೇ ಸಲ್ಲಿಸಿ’!


Monday, November 11th, 2019 1:18 pm

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಎಲ್ಲಾ ಖಾತೆದಾರರು 2020 ಜನವರಿ 1 ರಂದು ಅಥವಾ ಅದಕ್ಕೂ ಮೊದಲು ತಮ್ಮ ಕೆವೈಸಿಯನ್ನು ನವೀಕರಿಸುವುದು ಕಡ್ಡಾಯ ಮಾಡಿದೆ. ಇಲ್ಲದಿದ್ದರೆ ಅವರ ಬ್ಯಾಂಕ್ ಖಾತೆಗಳು ರದ್ದುಗೊಳಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದೆ.

ಈ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು, ಎಸ್‌ಬಿಐ, ಐಡಿಬಿಐ, ಐಸಿಸಿಐ ಸೇರಿದಂತೆ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಗ್ರಾಹಕರಿಗೆ ತಮ್ಮ ಕೆವೈಸಿ ವಿವರಗಳನ್ನು ನವೀಕರಿಸಲು ನಿಯಮಿತವಾಗಿ ಎಚ್ಚರಿಕೆಗಳು, ಅಧಿಸೂಚನೆಗಳು ಮತ್ತು ಇಮೇಲ್ ಕಳುಹಿಸುತ್ತಿದೆ ಎನ್ನಲಾಗಿದೆ.

ಜನವರಿ 1, 2020, ಸಾಮಾನ್ಯ ಬ್ಯಾಂಕ್ ಖಾತೆದಾರರಿಗೆ ಗಡುವು ಆಗಿದ್ದರೆ, ಫೋನ್‌ಪೇ, ಪೇಟಿಎಂ, ಅಮೆಜಾನ್ ಪೇ ಅಥವಾ ಇತರ ವ್ಯಾಲೆಟ್‌ಗಳನ್ನು ಬಳಸುವ ಜನರು ಫೆಬ್ರವರಿ 29, 2020 ರೊಳಗೆ ತಮ್ಮ ಕೆವೈಸಿಯನ್ನು ನವೀಕರಿಸಬಹುದಾಗಿದೆ. ಇನ್ನು KYC ಅನ್ನು ದೀರ್ಘಕಾಲದವರೆಗೆ ನವೀಕರಿಸದಿದ್ದರೆ, ಬ್ಯಾಂಕ್ ನಿಮ್ಮ ಖಾತೆಯನ್ನು ಫ್ರೀಜ್ ಮಾಡುವ ಅವಕಾಶವಿದ್ದು, ಆದ್ದರಿಂದ ಎಲ್ಲರೂ ಗಡುವಿನ ಮೊದಲು KYS ನೊಂದಿಗೆ ತಮ್ಮ ಖಾತೆಗಳನ್ನು ನವೀಕರಿಸಲು ಕೂಡಲೇ ಹೋದರೆ ಕ್ಷೇಮ. ಒಂದು ವೇಳೆ ಖಾತೆಯನ್ನು ರದ್ದುಗೊಳಿಸಿದ ನಂತರ, ಯಾರೂ ಯಾವುದೇ ವಹಿವಾಟು ನಡೆಸಲು ಸಾಧ್ಯವಿಲ್ಲ ಎನ್ನಲಾಗಿದೆ. ಪಾನ್ ಕಾರ್ಡ್, ವೋಟರ್ಸ್ ಕಾರ್ಡ್, ಡ್ರೖೆವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ನರೇಗ ಕಾರ್ಡ್, ಪಾಸ್​ಪೋರ್ಟ್ ಮುಂತಾದ ದಾಖಲೆಗಳನ್ನು ನೀಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions