ಸುಭಾಷಿತ :

Monday, March 30 , 2020 9:46 PM

ಬ್ಯಾಂಕ್ ಗ್ರಾಹಕರೇ ಗಮನಿಸಿ : ಬ್ಯಾಂಕ್ ವ್ಯವಹಾರ ಇದ್ರೇ.. ಮಾರ್ಚ್ 7ರೊಳಗೆ ಮುಗಿಸಿಕೊಳ್ಳಿ.!


Saturday, February 22nd, 2020 9:47 am

ಬೆಂಗಳೂರು : ಈಗಾಗಲೇ ಎರಡು ಬಾರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ, ಪ್ರತಿಭಟನೆ ನಡೆಸಿದ್ದ ಬ್ಯಾಂಕ್ ನೌಕರರು, ಇದೀಗ ಮೂರನೇ ಬಾರಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ಬ್ಯಾಂಕ್ ಗ್ರಾಹಕರು ತಮ್ಮ ಕೆಲಸಗಳೇನಾದ್ರೂ ಇದ್ರೇ.. ಮಾರ್ಚ್ 7ರೊಳಗೆ ಮುಗಿಸಿಕೊಳ್ಳಿ. ಯಾಕೆಂದ್ರೇ.. ಮಾರ್ಚ್ ಎರಡನೇ ವಾರದಲ್ಲಿ ಸಾಲು ಸಾಲು ರಜೆ ಜೊತೆಗೆ, ಮಾರ್ಚ್ 11ರಿಂದ 13ರ ವರೆಗೆ ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಸಿ, ಬ್ಯಾಂಕ್ ನೌಕರರು ದೇಶಾಧ್ಯಂತ ಮಾರ್ಚ್ 11ರಿಂದ 13ರ ವರೆಗೆ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಮಾರ್ಚ್ 7ರ ನಂತ್ರ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಆಗಲಿದೆ. ಇದೇ ಕಾರಣದಿಂದಾಗಿ ಬ್ಯಾಂಕ್ ಗ್ರಾಹಕರಿಗೆ ತೊಂದರೆ ಉಂಟಾಗಲಿದ್ದು, ಮಾರ್ಚ್ 7ರ ಒಳಗೆ ನಿಮ್ಮ ಬ್ಯಾಂಕ್ ವ್ಯವಹಾರ ಇದ್ದರೇ ಮುಗಿಸಿಕೊಳ್ಳೋದು ಮರೆಯಬೇಡಿ.

ಈಗಾಗಲೇ ಈ ಮೊದಲು ಎರಡು ಬಾರಿ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ರು. ಆದ್ರೂ ನೌಕರರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿರಲಿಲ್ಲ. ಇದೇ ಕಾರಣದಿಂದಾಗಿ ಮತ್ತೆ ಮಾರ್ಚ್ 11ರಿಂದ 13ರ ವರೆಗೆ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮೂರು ದಿನಗಳ ಕಾಲ ಮುಷ್ಕರದಲ್ಲಿ ಬ್ಯಾಂಕ್ ನೌಕರರು ಭಾಗವಹಿಸೋದ್ರಿಂದಾಗಿ, ಬ್ಯಾಂಕಿಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಮೂಲಕ ಬ್ಯಾಂಕ್ ಗ್ರಾಹಕರಿಗೆ ಮುಷ್ಕರದ ಬಿಸಿ ಮುಟ್ಟಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions