ನವದೆಹಲಿ : ಜೂನ್ 25ರ ನಾಲ್ಕನೇ ಶನಿವಾರ ಮತ್ತು ಜೂನ್ 26ರ ಭಾನುವಾರದಂದು ಬ್ಯಾಂಕುಗಳಿಗೆ ವಾರಾಂತ್ಯದ ರಜಾದಿನಗಳಿವೆ. ಇನ್ನು ಜೂನ್ 27ರಂದು ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಹಾಗಾಗಿ ಜೂನ್ 25, 26 ಮತ್ತು 27ರಂದು ಬ್ಯಾಂಕ್‌ಗಳು ತೆರೆದಿರುವುದಿಲ್ಲ. ಬ್ಯಾಂಕ್‌ಗಳು ಸತತ ಮೂರು ದಿನಗಳವರೆಗೆ ಬಂದ್ ಇರುತ್ವೆ ಅನ್ನೋದನ್ನ ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU), ಸಾರ್ವಜನಿಕ ವಲಯದ ಬ್ಯಾಂಕುಗಳ ಒಕ್ಕೂಟವು ಜೂನ್ 27ರಂದು ಮುಷ್ಕರ ನಡೆಸುವುದಾಗಿ ಹಲವು ದಿನಗಳ ಹಿಂದೆ ಘೋಷಿಸಿತು. ಬ್ಯಾಂಕ್ ಉದ್ಯೋಗಿಗಳ ಬೇಡಿಕೆಗೆ ಸಂಬಂಧಿಸಿದಂತೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಜೊತೆ ಮಾತುಕತೆ ನಡೆಸಲಾಯಿತು. ಬ್ಯಾಂಕ್ ನೌಕರರ ಬೇಡಿಕೆಗಳ ಕುರಿತು ಭಾರತೀಯ ಬ್ಯಾಂಕ್‌ಗಳ ಸಂಘದಿಂದ ಭರವಸೆ ಸಿಗದ ಕಾರಣ ಮುಷ್ಕರವನ್ನ ಹಿಂಪಡೆಯಲು ನಿರಾಕರಿಸಲಾಗಿದೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಮಾತನಾಡಿ, ಬ್ಯಾಂಕ್ ನಿಗದಿತ ಸಮಯದೊಳಗೆ ಯೂನಿಯನ್ ಬೇಡಿಕೆಗಳನ್ನ ಪರಿಹರಿಸುತ್ತದೆ ಎಂದು ಖಾತರಿ ನೀಡಲು ಐಬಿಎ ನಿರಾಕರಿಸಿದೆ ಮತ್ತು ಆದ್ದರಿಂದ ಮುಷ್ಕರವನ್ನ ಮುಂದುವರಿಸಲು ನಿರ್ಧರಿಸಿದೆ ಎಂದರು.
ಬ್ಯಾಂಕ್ ನೌಕರರು ಹಲವಾರು ಬೇಡಿಕೆಗಳೊಂದಿಗೆ ಮುಷ್ಕರವನ್ನ ಘೋಷಿಸಿದ್ದು, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ 5 ದಿನಗಳ ಸಪ್ತಾಹವನ್ನ ಜಾರಿಗೆ ತರಬೇಕೆಂದು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದೆ. ಇನ್ನು ವಾರಾಂತ್ಯದಲ್ಲಿ ಎರಡು ದಿನ ರಜೆ ನೀಡಬೇಕೆಂಬ ಬಹುದಿನಗಳ ಬೇಡಿಕೆ ಬ್ಯಾಂಕ್ ಉದ್ಯೋಗಿಗಳದ್ದಾಗಿದ್ದು, ಖಾಸಗಿ ಬ್ಯಾಂಕ್‌ಗಳು ಈ ನೀತಿಯನ್ನು ಜಾರಿಗೆ ತರುತ್ತಿವೆ.
ಇನ್ನು ಪಿಂಚಣಿಗೆ ಬೇಡಿಕೆಯೂ ಇದ್ದು, ಎನ್‌ಪಿಎಸ್ ಡಿಎಗೆ ಲಿಂಕ್ ಮಾಡಲಾದ ಪಿಂಚಣಿ ಯೋಜನೆಯನ್ನ ಜಾರಿಗೆ ತರಲು ಬಯಸಿದ್ದು, ಹೆಚ್ಚಿನ ಬಾಕಿ ಇರುವ ಸಮಸ್ಯೆಗಳನ್ನ ಪರಿಹರಿಸಲು ಬಯಸಿದೆ. ಜೂನ್ 27ರಂದು ಸುಮಾರು 7 ಲಕ್ಷ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಆದ್ದರಿಂದ ಸಾರ್ವಜನಿಕ ವಲಯದ ಬ್ಯಾಂಕುಗಳು ಜೂನ್ 27ರಂದು ತೆರೆಯದಿರಬಹುದು. ಜೂನ್ 27ರಂದು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಅಡಚಣೆ ಉಂಟಾಗುತ್ತದೆ. ಮುಂದಿನ ಎರಡು ದಿನಗಳ ಕಾಲ ಬ್ಯಾಂಕ್‌ಗಳು ತೆರೆದಿರುವುದಿಲ್ಲ. ಆದ್ದರಿಂದ ಸತತ ಮೂರು ದಿನಗಳ ಕಾಲ ಬ್ಯಾಂಕಿಂಗ್ ಚಟುವಟಿಕೆಗಳು ಇರುವುದಿಲ್ಲ.
ಬ್ಯಾಂಕ್‌ಗಳು ತೆರೆಯದಿದ್ದರೂ ಗ್ರಾಹಕರು ಆನ್‌ಲೈನ್‌ನಲ್ಲಿ ವಹಿವಾಟು ನಡೆಸಬಹುದು. UPI, NEFT, RTGS, IMPS, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ATM ಸೇವೆಗಳು ಲಭ್ಯವಿದೆ. ಗ್ರಾಹಕರು ಈ ಸೇವೆಗಳನ್ನು ಬಳಸಬಹುದು. ಬ್ಯಾಂಕ್‌ಗೆ ಹೋಗಬೇಕಾದರೆ ಜೂ.28ರವರೆಗೆ ಕಾಯಬೇಕು.