ಬೆಂಗಳೂರು: ದೇಶದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಂದಾಗಿರುವಂತ ಬ್ಯಾಂಕ್ ಆಪ್ ಬರೋಡಾದಲ್ಲಿ ( Bank of Baroda SO Recruitment 2022 ) ಖಾಲಿ ಇರುವಂತ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರದು ಕೋಟಿ ಕೋಟಿ ವಂಚನೆ: ಅರ್ಚಕರ ವಿರುದ್ಧ FIR ದಾಖಲು
ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವಂತ 175 ರಿಲೇಷನ್ ಶಿಪ್ ಮ್ಯಾನೇಜರ್ ಮತ್ತು 150 ಕ್ರೆಡಿಟ್ ಅನಾಲಿಸ್ಟ್ ಸೇರಿದಂತೆ ಒಟ್ಟು 325 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
BREAKING NEWS: ಮೈಸೂರಿನಲ್ಲಿ ಅಪರಣಕ್ಕೆ ಒಳಗಾಗಿದ್ದ ಬಾಲಕನನ್ನು ಕೆಲ ಗಂಟೆಯಲ್ಲೇ ರಕ್ಷಣೆ
ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜುಲೈ 12 ಕೊನೆಯ ದಿನವಾಗಿದೆ. ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸ್ನಾತಕೋತ್ತರ ಪದವಿಯೊಂದಿಗೆ ಸಿಎ, ಸಿಎಫ್ಎ ವ್ಯಾಸಂಗ ಮಾಡಿರಬೇಕಿದೆ.
Health Tips: ಮಧುಮೇಹ ರೋಗಿಗಳ ದೇಹದಲ್ಲಿ ʻಸಕ್ಕರೆ ಪ್ರಮಾಣʼ ನಿಯಂತ್ರಣಕ್ಕೆ ಇದು ರಾಮಬಾಣ | Menthe
ಆನ್ ಲೈನ್ ಮೂಲಕ ನಡೆಸಲಾದಂತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಬಗ್ಗೆ ಅರ್ಹ ಅಭ್ಯರ್ಥಿಗಳು www.bankofbaroda.in ಈ ಲಿಂಕ್ ಕ್ಲಿಕ್ ಮಾಡಿ, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.