ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಡಿಸೆಂಬರ್ ತಿಂಗಳಲ್ಲಿ (month of December) ಬ್ಯಾಂಕ್ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದ್ದು, ಪ್ರದೇಶವಾರು ಆಧಾರದ ಮೇಲೆ ಡಿಸೆಂಬರ್ ತಿಂಗಳಲ್ಲಿ ದೇಶದಲ್ಲಿ ಬ್ಯಾಂಕುಗಳಿಗೆ ಒಟ್ಟು 12 ದಿನಗಳ ರಜೆ ಇರಲಿದೆ ಎಂದು ಆರ್ ಬಿಐ (RBI) ತಿಳಿಸಿದೆ.
ಬ್ಯಾಂಕುಗಳು ಪ್ರತಿ ತಿಂಗಳು ಭಾನುವಾರ, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆ ಯನ್ನು ಹೊಂದಿವೆ. ಈ ಮೂಲಕ ಡಿಸೆಂಬರ್ ನಲ್ಲಿ ಬ್ಯಾಂಕುಗಳಿಗೆ 12 ದಿನಗಳ ರಜೆ ಇರಲಿದೆ. ಈ 12 ದಿನಗಳಲ್ಲಿ. 6 ಸಾಮಾನ್ಯ ರಜಾದಿನಗಳು ಮತ್ತು ಇತರ 6 ರಜಾದಿನಗಳು ಆ ಪ್ರದೇಶಗಳಲ್ಲಿ ವಿಶೇಷ ರಜಾದಿನಗಳನ್ನು ಆಧರಿಸಿರುತ್ತವೆ.
ಡಿಸೆಂಬರ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ
ಡಿಸೆಂಬರ್ 3- ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬದ ಸಮಯದಲ್ಲಿ ಪಣಜಿಯಲ್ಲಿ ಬ್ಯಾಂಕ್ ರಜಾದಿನ
ಡಿಸೆಂಬರ್ 5 – ಭಾನುವಾರ (ರಜಾದಿನ)
ಡಿಸೆಂಬರ್ 11- ಶನಿವಾರ (ತಿಂಗಳ ಎರಡನೇ ಶನಿವಾರ)
ಡಿಸೆಂಬರ್ 12- ಭಾನುವಾರ (ರಜಾದಿನ)
ಡಿಸೆಂಬರ್ 18- ಥಾಮ್ ಪುಣ್ಯತಿಥಿ (ಶಿಲ್ಲಾಂಗ್ ನಲ್ಲಿ ಬ್ಯಾಂಕ್ ರಜಾದಿನ)
ಡಿಸೆಂಬರ್ 19- ಭಾನುವಾರ (ರಜಾದಿನ)
ಡಿಸೆಂಬರ್ 24- ಕ್ರಿಸ್ ಮಸ್ ಈವ್ (ಐಜ್ವಾಲ್ ನಲ್ಲಿ ಬ್ಯಾಂಕ್ ಹಾಲಿಡೇ)
ಡಿಸೆಂಬರ್ 25- ಕ್ರಿಸ್ ಮಸ್ ಈವ್, ಶನಿವಾರ (ತಿಂಗಳ ನಾಲ್ಕನೇ ಶನಿವಾರ)
ಡಿಸೆಂಬರ್ 26- ಭಾನುವಾರ (ರಜಾದಿನ)
ಡಿಸೆಂಬರ್ 27- ಕ್ರಿಸ್ ಮಸ್ ಆಚರಣೆ (ಐಜ್ವಾಲ್ ನಲ್ಲಿ ಬ್ಯಾಂಕ್ ರಜಾದಿನ)
ಡಿಸೆಂಬರ್ 30- ಯು ಕಿಯಾಂಗ್ ನೊಂಗ್ಬಾ (ಶಿಲ್ಲಾಂಗ್ ನಲ್ಲಿ ಬ್ಯಾಂಕ್ ಹಾಲಿಡೇ)
ಡಿಸೆಂಬರ್ 31- ಹೊಸ ವರ್ಷದ ಮುನ್ನಾದಿನ (ಐಜ್ವಾಲ್ ನಲ್ಲಿ ಬ್ಯಾಂಕ್ ರಜಾದಿನ)