ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಹಿತಕರ ಅನುಭವದ ಬಗ್ಗೆ ನರ್ತಕ ಮತ್ತು ನೃತ್ಯ ನಿರ್ದೇಶಕ ಸಲ್ಮಾನ್ ಯೂಸುಫ್ ಖಾನ್ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಇಡೀ ಘಟನೆಯನ್ನು ವಿವರಿಸುವ ವೀಡಿಯೊವನ್ನು ಹಂಚಿಕೊಂಡ ಅವರು, “@kempegowdainternationalairport .. ನಾನು ದುಬೈಗೆ ಹೋಗುವಾಗ ಮತ್ತು ನನ್ನೊಂದಿಗೆ ಕನ್ನಡದಲ್ಲಿ ಮಾತನಾಡುವ ಈ ವಲಸೆ ಅಧಿಕಾರಿಯನ್ನು ಭೇಟಿಯಾದೆ .. ನನಗೆ ಭಾಷೆ ಅರ್ಥವಾಗುತ್ತದೆ, ಆದರೆ ಚೆನ್ನಾಗಿ ಮಾತನಾಡಲು ಬರುವುದಿಲ್ಲ ಎಂದು ನಾನು ಅವರಿಗೆ ಹೇಳಲು ಪ್ರಯತ್ನ ಪಟ್ಟೆ, ಅವರು ಕನ್ನಡದಲ್ಲಿ ಮಾತನಾಡುವುದನ್ನು ಮುಂದುವರಿಸುವಂತೆ ಕೇಳಿ ಕೊಂಡರು. ಇದೇ ವೇಳೇ ನಾನು ನನ್ನ ಪಾಸ್ಪೋರ್ಟ್ ಅನ್ನು ತೋರಿಸಿದೆ. ನೀವು ಮತ್ತು ನಿಮ್ಮ ತಂದೆ ಬೆಂಗಳೂರಿನಲ್ಲಿ ಜನಿಸಿದ್ದೀರಿ ಮತ್ತು ನಿಮಗೆ ಕನ್ನಡ ಮಾತನಾಡಲು ಬರುವುದಿಲ್ಲ .. ಅಂತ ಪ್ರಶ್ನೆಮಾಡಿದರು.
ನನ್ನ ರಾಷ್ಟ್ರದ ಅಧಿಕೃತ ಭಾಷೆ ಹಿಂದಿ ನನಗೆ ತಿಳಿದಿದೆ ಎಂದು ನಾನು ಅವರಿಗೆ ಹೇಳಿದೆ, ನನಗೆ ಕನ್ನಡ ಏಕೆ ತಿಳಿದಿರಬೇಕು ನಿಮ್ಮಂತಹ ಅವಿದ್ಯಾವಂತ ಜನರು ಈ ದೇಶದಲ್ಲಿ ವಾಸಿಸುವುದನ್ನು ಮುಂದುವರಿಸಿದರೆ ಈ ದೇಶ ಎಂದಿಗೂ ಬೆಳೆಯುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ … ಅದಕ್ಕೆ ಅವನು ತಲೆ ತಗ್ಗಿಸಿಗೊಣಗುತ್ತಿದ್ದನು… ಈ ಘಟನೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ವರದಿ ಮಾಡಲು ಪ್ರಯತ್ನಿಸುತ್ತಿದ್ದೇನೆ ಆದರೆ ಯಾರೂ ನನಗೆ ಮಾರ್ಗದರ್ಶನ ನೀಡುತ್ತಿಲ್ಲ ಅಂತ ಸಲ್ಮಾನ್ ಯೂಸುಫ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.