ಬೆಂಗಳೂರು : ಕಳ್ಳತನ ಮಾಡಲು ಖದೀಮರು ಅದೆಂತಹ ಪ್ಲ್ಯಾನ್ ಮಾಡುತ್ತಾರೆ ಎಂಬುದನ್ನು ಸಿನಿಮಾಗಳಲ್ಲಿ ಹೆಚ್ಚಾಗಿ ನೋಡಿರುತ್ತೀರಿ, ಇದೀಗ ಅದೇ ತೆರನಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖದೀಮರು ಖತರ್ ನಾಕ್ ಪ್ಲ್ಯಾನ್ ಮಾಡಿದ್ದು, ವ್ಯಾಕ್ಸಿನ್ ಹಾಕುವ ನೆಪದಲ್ಲಿ ಬಂದು ಖದೀಮರು ಚಿನ್ನಾಭರಣ ದೋಚಿದ್ದಾರೆ.
ಚಿತ್ರದುರ್ಗ: ಹಿರಿಯೂರಿನ ಮ್ಯಾಕ್ಲೂರಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ‘ಕಾಡುಗೊಲ್ಲರ ಜನಪದ ಸಮ್ಮೇಳನ’
ಏನಿದು ಘಟನೆ
ಆರೋಗ್ಯ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ಮೂವರು ಪಿಸ್ತೂಲ್ ತೋರಿಸಿ ದರೋಡೆ ಮಾಡಿರುವ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯ ಎಸ್ಬಿಎಂ ಕಾಲೊನಿಯಲ್ಲಿ ನಡೆದಿದೆ. ಕೊರೊನಾ ಲಸಿಕೆ ಹಾಕುವುದಾಗಿ ಸಂಪತ್ ಎಂಬುವವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿ ಬೆದರಿಸಿ 150 ಗ್ರಾಂ ಚಿನ್ನಾಭರಣ ದೋಚಿ, ಪರಾರಿಯಾಗಿದ್ದಾರೆ.
ಕಾರು ಹಾಗೂ ಬೈಕಿನಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.
Covid19 Karnataka Update: ಬೆಂಗಳೂರಿನ 131 ಸೇರಿದಂತೆ ರಾಜ್ಯದಲ್ಲಿ ಇಂದು 257 ಜನರಿಗೆ ಕೊರೋನಾ, ಐವರು ಸಾವು