ಸುಭಾಷಿತ :

Wednesday, January 22 , 2020 12:11 PM

‘ಬೆಂಗಳೂರಿನ 4 ಕ್ಷೇತ್ರ’ಗಳ ‘ಉಪ ಚುನಾವಣೆ ಸಿದ್ಧತೆ’ಯ ಕುರಿತಂತೆ ಬಹು ಮುಖ್ಯ ಮಾಹಿತಿ


Monday, November 11th, 2019 5:03 pm

ಬೆಂಗಳೂರು : ಡಿಸೆಂಬರ್ 5ರಂದು ರಾಜ್ಯದ 15 ಅನರ್ಹ ಶಾಸಕರಿಂದ ತೆರವಾದಂತ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಇಂತಹ ಉಪ ಚುನಾವಣೆಯಲ್ಲಿ ಬೆಂಗಳೂರಿನ 4 ವಿಧಾನಸಭಾ ಕ್ಷೇತ್ರಗಳೂ ಕೂಡ ಸೇರ್ಪಡೆಗೊಂಡಿವೆ. ಹೀಗಾಗಿ ಈ ನಾಲ್ಕು ಕ್ಷೇತ್ರಗಳ ವಿಧಾನಸಭಾ ಸಿದ್ದತೆ ಮತ್ತು ಪ್ರಮುಖ ಮಾಹಿತಿಗಳನ್ನು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ಈ ಕೆಳಗಿನಂತಿದೆ.

ಭಾರತ ಚುನಾವಣಾ ಆಯೋಗದ ಪ್ರಕಟಿಸಿದಂತೆ ಬೆಂಗಳೂರು ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ 2019ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಆ ವೇಳಾಪಟ್ಟಿಯ ಅನುಸಾರದಂತೆ ಬಹುಮುಖ್ಯ ವಿವರ ಮತ್ತು ಮಾಹಿತಿ ಹೀಗಿದೆ..

ಬೆಂಗಳೂರು ಉತ್ತರ – 151 ಕೆ ಆರ್ ಪುರಂ ಮತ್ತು 156 ಮಹಾಲಕ್ಷ್ಮೀಲೇಔಟ್
ಬೆಂಗಳೂರು ನಗರ – 153 ಯಶವಂತಪುರ
ಬೆಂಗಳೂರು ಕೇಂದ್ರ – 162 ಶಿವಾಜಿನಗರ

ಉಪ ಚುನಾವಣೆ 2019ರ ಪರಿಷ್ಕೃತ ವೇಳಾಪಟ್ಟಿ ವಿವರ

ನಾಮಪತ್ರ ಸಲ್ಲಿಕೆ ಆರಂಭ – 11-11-2019
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ – 18-11-2019
ನಾಮಪತ್ರ ಪರಿಶೀಲನೆ ದಿನಾಂಕ – 19-11-2019
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ – 21-11-2019
ಮತದಾನ ನಡೆಯುವ ದಿನಾಂಕ – 5-12-2019
ಮತ ಎಣಿಕೆ ದಿನಾಂಕ – 09-12-2019
ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ದಿನಾಂಕ – 11-12-2019

ಈಗಾಗಲೇ ಬೆಂಗಳೂರು ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯಾಗಿರುವ ವಿವರ ಹೀಗಿದೆ

ಕೆ ಆರ್ ಪುರಂ – 03 ನಾಮಪತ್ರ ಸಲ್ಲಿಕೆ
ಯಶವಂತಪುರ – 01 ನಾಮಪತ್ರ ಸಲ್ಲಿಕೆ
ಶಿವಾಜಿನಗರ – 02 ನಾಮಪತ್ರ ಸಲ್ಲಿಕೆ
ಇದುವರೆಗೆ ಒಟ್ಟು 6 ನಾಮಪತ್ರಗಳನ್ನು ಅಭ್ಯರ್ಥಿಗಳು ಸಲ್ಲಿಸಿದ್ದಾರೆ.

ಮತಗಟ್ಟೆಗಳ ವಿವರ

ಕೆ ಆರ್ ಪುರಂ – 437 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ
ಯಶವಂತಪುರ – 461 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ
ಮಹಾಲಕ್ಷ್ಮೀಲೇಔಟ್ – 270 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ
ಶಿವಾಜಿನಗರ – 193 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ

ಒಟ್ಟಾರೆಯಾಗಿ ಬೆಂಗಳೂರು ವ್ಯಾಪ್ತಿಯ ನಾಲ್ಕು ವಿಧಾನಸಭಾ ಉಪ ಚುನಾವಣೆಯ ಕ್ಷಏತ್ರಗಳ ಉಪ ಚುನಾವಣೆಗೆ 1,361 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರು ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ವಿವರ ಹೀಗಿದೆ

ಕೆ ಆರ್ ಪುರಂ – ಪುರುಷರು- 2,51,885, ಮಹಿಳೆಯರು-229087, ಇತರೆ 160 ಒಟ್ಟು 481132
ಯಶವಂತಪುರ – ಪುರುಷರು – 246295, ಮಹಿಳೆಯರು-229424, ಇತರೆ 40, ಒಟ್ಟು 475759
ಮಹಾಲಕ್ಷ್ಮೀ ಲೇಔಟ್ – ಪುರುಷರು-146415, ಮಹಿಳೆಯರು-137428, ಇತರೆ 42, ಒಟ್ಟು-283885
ಶಿವಾಜಿನಗರ – ಪುರುಷರು – 96928, ಮಹಿಳೆಯರು- 94689, ಇತರೆ-01, ಒಟ್ಟು 191618

ಒಟ್ಟಾರೆಯಾಗಿ ನಾಲ್ಕು ಕ್ಷೇತ್ರಗಳಿಂದ ಇರುವಂತ ಮತದಾರರ ಸಂಖ್ಯೆ ಪುರುಷರು-741523, ಮಹಿಳೆಯರು-690628, ಇತರೆ-243, ಒಟ್ಟು 1432394 ಆಗಿರುತ್ತದೆ.

ಡಿಸೆಂಬರ್ 5ರಂದು ನಡೆಯಲಿರುವ ಮತ ಎಣಿಕೆ ಪ್ರದೇಶಗಳು ಹೀಗಿವೆ

ಕೆ ಆರ್ ಪುರಂ – ಬಿಬಿಎಂಪಿ ಸಂಕೀರ್ಣ, 2ನೇ ಬ್ಲಾಕ್, ಜಯನಗರ, ಬೆಂಗಳೂರು
ಯಶವಂತಪುರ – ವಿವಿ ಟವರ್, ಇಂಡಿಯನ್ ಎಕ್ಸ್ ಪ್ರೆಸ್ ಎದುರು, ಬೆಂಗಳೂರು
ಮಹಾಲಕ್ಷ್ಮೀ ಲೇಔಟ್ – ಬಿಬಿಎಂಪಿ ಸಂಕೀರ್ಣ, 2ನೇ ಬ್ಲಾಕ್, ಜಯನಗರ, ಬೆಂಗಳೂರು
ಶಿವಾಜಿನಗರ – ಡಾ.ಅಂಬೇಡ್ಕರ್ ಕ್ರೀಡಾಂಗಣ ಕಟ್ಟಡ, ಬಸವೇಶ್ವರ ನಗರ, ಬೆಂಗಳೂರು

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions