ಸುಭಾಷಿತ :

Monday, February 17 , 2020 5:11 AM

ಬಾಳೆಹಣ್ಣು ತಿಂದು ಸಿಪ್ಪೆ ಎಸೆಯುವ ಮುನ್ನ ಇದನ್ನ ಓದಿ….


Tuesday, January 7th, 2020 12:41 pm

ಸ್ಪೆಷಲ್ ಡೆಸ್ಕ್ : ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತೇವೆ. ತಿಂದ ಮೇಲೆ ಸಿಪ್ಪೆ ಎಸೆಯುತ್ತೇವೆ. ಆದರೆ ಈ ಸಿಪ್ಪೆಯಿಂದ ಎಷ್ಟೊಂದು ಉಪಯೋಗಗಳಿವೆ ಗೊತ್ತಾ? ಹೌದು ಇದರಿಂದ ಸೌಂದರ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಬಾಳೆಹಣ್ಣಿನನ ಸಿಪ್ಪೆಯ ಮೇಲಿನ ಭಾಗವನ್ನು ಮುಖ ಮತ್ತು ಕುತ್ತಿಗೆಗೆ ಉಜ್ಜಿ ಮಸಾಜ್‌ ಮಾಡಿ. ಅರ್ಧ ಗಂಟೆಯ ನಂತರ ಉಗುರು ಬಿಸಿ ನೀರಿನಿಂದ ಮುಖ ತೊಳೆಯುವುದರಿಂದ ಸುಕ್ಕು ನಿವಾರಣೆಯಾಗುತ್ತದೆ.

ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್‌ಗಳು ಮುಖದಲ್ಲಿರುವ ಕಲೆ, ಕೊಳೆಯನ್ನು ನಿವಾರಣೆ ಮಾಡುತ್ತದೆ. ಅಲ್ಲದೆ ಮುಖ ಹೊಳೆಯುವಂತೆ ಮಾಡುತ್ತದೆ.

ಬಾಳೆಹಣ್ಣಿನ ಸಿಪ್ಪೆಯಿಂದ ಬಿಳಿಯ ಅಂಶವನ್ನು ತೆಗೆದು ಅದಕ್ಕೆ ಅಲೋವೆರಾ ಜೆಲ್‌ ಸೇರಿಸಿ ಕಣ್ಣಿನ ಸುತ್ತಲು ಹಚ್ಚಿ. ಇದರಿಂದ ಡಾರ್ಕ್‌ ಸರ್ಕಲ್‌ ನಿವಾರಣೆಯಾಗುತ್ತದೆ.

ಬಾಳೆಹಣ್ಣಿನ ಸಿಪ್ಪೆಯ ಒಂದು ತುಂಡನ್ನು ತೆಗೆದುಕೊಂಡು ಡ್ರೈ ಸ್ಕಿನ್‌ ಮೇಲೆ ಚೆನ್ನಾಗಿ ಮಸಾಜ್‌ ಮಾಡಿ. 10 ನಿಮಿಷಗಳವರೆಗೆ ಇದನ್ನು ಮಾಡಿ. ನಂತರ ಉಗುರುಬಿಸಿ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions