BREAKING: ‘ಆಗುಂಬೆ ಘಾಟಿ’ಯಲ್ಲಿ ‘ಭಾರೀ ವಾಹನ’ಗಳ ಸಂಚಾರ ನಿಷೇಧ: ಶಿವಮೊಗ್ಗ ಡಿಸಿ ಆದೇಶ | Agumbe Ghat

ಶಿವಮೊಗ್ಗ: ಜಿಲ್ಲೆಯ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಮಳೆಗಾಲದ ಹಿನ್ನಲೆಯಲ್ಲಿ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಧಿಸೂಚನೆ ಹೊರಡಿಸಿದ್ದು, ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರೀ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಆಗುವ ಸಂಭವ ಇರುವುದರಿಂದ ದಿನಾಂಕ 27-06-2024ರ ಇಂದಿನಿಂದ ದಿನಾಂಕ 15-09-2024ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಅಂತ ತಿಳಿಸಿದ್ದಾರೆ. ಅಗುಂಬೆ … Continue reading BREAKING: ‘ಆಗುಂಬೆ ಘಾಟಿ’ಯಲ್ಲಿ ‘ಭಾರೀ ವಾಹನ’ಗಳ ಸಂಚಾರ ನಿಷೇಧ: ಶಿವಮೊಗ್ಗ ಡಿಸಿ ಆದೇಶ | Agumbe Ghat