ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಭೂಮಿ ಒತ್ತುವರಿ ತಡೆಗೆ ಸರ್ಕಾರ ಬಿಗ್ ಪ್ಲಾನ್ ಮಾಡಿದೆ. ಅದರ ಸಲುವಾಗಿ ನೂತನ ಆಪ್ ಕೂಡ ಅಭಿವೃದ್ಧಿ ಪಡಿಸಿದೆಯಂತೆ. ಈ ಆಪ್ ನಲ್ಲಿ ರಾಜ್ಯದಲ್ಲಿ ಇರುವಂತ ಸರ್ಕಾರಿ ಭೂಮಿಗಳ ಎಲ್ಲಾ ಮಾಹಿತಿಯನ್ನು ಅಪ್ ಲೋಡ್ ಮಾಡಿ, ಒತ್ತುವರಿಯಾಗದಂತೆ ತಡೆಯೋದಕ್ಕೆ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ರಾಜ್ಯದಲ್ಲಿನ ಸರ್ಕಾರಿ ಭೂಮಿ ಒತ್ತುವರಿ ತಡೆಯೋದಕ್ಕೆ ಆಪ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಯಾವ ಊರಿನಲ್ಲಿ ಎಷ್ಟು ಎಷ್ಟು ಸರ್ಕಾರಿ ಭೂಮಿ ಇದೆ ಅನ್ನೋ ಮಾಹಿತಿಯನ್ನು ಅದರಲ್ಲಿ ಅಪ್ ಲೋಡ್ ಮಾಡಲಾಗುತ್ತದೆ. ಮೂರು ತಿಂಗಳಿಗೆ ಒಮ್ಮೆ ಸರ್ಕಾರಿ ಭೂಮಿ ಇರೋ ಸ್ಥಿತಿಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಅಪ್ ಡೇಟ್ ಮಾಡೋದಕ್ಕೂ ಕ್ರಮವಹಿಸಲಾಗುತ್ತದೆ ಎಂದರು.
ಯಾವ ಊರು, ತಾಲೂಕಿನಲ್ಲಿ ಎಷ್ಟು ಸರ್ಕಾರಿ ಭೂಮಿ ಇದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಆಪ್ ನಲ್ಲಿ ಲಭ್ಯವಾಗುವಂತೆ ಇದರಿಂದ ಆಗಲಿದೆ. ಒಂದು ವೇಳೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೇ, ಅದನ್ನು ತೆರವುಗೊಳಿಸೋ ಕ್ರಮವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಕೈಗೊಳ್ಳಲಿದ್ದಾರೆ. ಆ ನಿಟ್ಟಿನಲ್ಲಿ ಸರ್ಕಾರ ಆಪ್ ಅಭಿವೃದ್ಧಿ ಪಡಿಸುತ್ತಿದೆ ಎಂದು ತಿಳಿಸಿದರು.
‘ಇದು ನಮ್ಮದು, ಇದು ನಮ್ಮದು’ : ಮಹಿಳಾ ಮೀಸಲಾತಿ ಮಸೂದೆ ಕುರಿತು ‘ಸೋನಿಯಾ ಗಾಂಧಿ’ ಪ್ರತಿಕ್ರಿಯೆ
BREAKING : ‘ವಾಟ್ಸಾಪ್ ಚಾನೆಲ್’ ಸೇರಿದ ಪ್ರಧಾನಿ ಮೋದಿ : ‘ನಮೋ’ ಸಂಪರ್ಕಿಸೋದು ಈಗ ಇನ್ನಷ್ಟು ಸುಲಭ