ಬಲಿಯಾ ಶೂಟಿಂಗ್ ಪ್ರಕರಣ : ಪ್ರಮುಖ ಆರೋಪಿ ಧೀರೇಂದ್ರ ಸಿಂಗ್ ಬಂಧನ – Kannada News Now


India

ಬಲಿಯಾ ಶೂಟಿಂಗ್ ಪ್ರಕರಣ : ಪ್ರಮುಖ ಆರೋಪಿ ಧೀರೇಂದ್ರ ಸಿಂಗ್ ಬಂಧನ

ಲಕ್ನೋ : ಬಲಿಯಾ ಶೂಟಿಂಗ್ ಪ್ರಕರಣದ ಪ್ರಮುಖ ಆರೋಪಿ ಧಿರೇಂದ್ರ ಸಿಂಗ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಲಕ್ನೋದ ಜನೇಶ್ವರ ಮಿಶ್ರಾ ಪಾರ್ಕ್ ಬಳಿ ಯುಪಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತಂಡದವರು ಸಿಂಗ್ ಅವರನ್ನು ಬಂಧಿಸಿದ್ದಾರೆ. ಸಂತೋಷ್ ಯಾದವ್ ಮತ್ತು ಮರಜೀತ್ ಯಾದವ್ ಎಂಬ ಇಬ್ಬರು ಆರೋಪಿಗಳನ್ನು ಸಹ ಬಂಧಿಸಲಾಗಿದೆ. ಶೂಟಿಂಗ್ ಪ್ರಕರಣದಲ್ಲಿ ಈವರೆಗೆ 10 ಜನರನ್ನು ಬಂಧಿಸಲಾಗಿದೆ.

ಧೀರೇಂದ್ರ ಸಿಂಗ್ ಅವರ ಸಹಚರರಾದ ಸಂತೋಷ್ ಯಾದವ್ ಮತ್ತು ಮರಜೀತ್ ಯಾದವ್ ಅವರ ಬಳಿಯೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಜಿ ಎಸ್‌ಟಿಎಫ್ ಅಮಿತಾಬ್ ಯಶ್ ಮಾತನಾಡಿ “ಧಿರೇಂದ್ರ ಸಿಂಗ್ ಮತ್ತು ಅವರ ಸಹಚರರನ್ನು ಇಂದು ಲಖನೌದಿಂದ ಬಂಧಿಸಲಾಗಿದೆ. ಅವರ ಸಹಚರರ ವಶದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸ್‌ಟಿಎಫ್ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ತಿಳಿಸಿದೆ.
error: Content is protected !!