ಭಾರತದ ಹಾಕಿ ಲೆಜೆಂಡ್ ಬಲ್ಬೀರ್ ಸಿಂಗ್ ಸೀನಿಯರ್ ನಿಧನ – Kannada News Now


Other Sports Sports

ಭಾರತದ ಹಾಕಿ ಲೆಜೆಂಡ್ ಬಲ್ಬೀರ್ ಸಿಂಗ್ ಸೀನಿಯರ್ ನಿಧನ

ನವದೆಹಲಿ: ಭಾರತ ಹಾಕಿ ಲೆಜೆಂಡ್, ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನ ಜಯಿಸಿದ ಹಾಗೂ ಭಾರತದ ಹಾಕಿ ತಂಡದ ಸದಸ್ಯರಾಗಿದ್ದ ಬಲ್ಬೀರ್ ಸಿಂಗ್ ಸೀನಿಯರ್ (96) ಅವರು ಸೋಮವಾರ ವಿಧಿವಶರಾಗಿದ್ದಾರೆ.

ಹಲವಾರು ಸಮಯದಿಂದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಲ್ಬೀರ್ ಸಿಂಗ್ ಪಂಜಾಬ್ ನ ಮೊಹಾಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಬಲ್ಬೀರ್ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಇವರು 1948, 1952 ಮತ್ತು 1956 ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಧುನಿಕ ಒಲಿಂಪಿಕ್ ಇತಿಹಾಸದ 196 ದಂತಕತೆಗಳಲ್ಲಿ ಒಬ್ಬರು ಎಂದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಬಲ್ಬೀರ್ ಸಿಂಗ್ ಅವರನ್ನು ಆಯ್ಕೆ ಮಾಡಿತ್ತು. ಈ ಗೌರವ ಪಡೆದ ಏಕಮಾತ್ರ ಭಾರತೀಯ ಎಂಬ ಹೆಗ್ಗಳಿಕೆ ಕೂಡ ಅವರದ್ದಾಗಿದೆ.

1971 ಮತ್ತು 1975ರಲ್ಲಿ ಇವರು ಕೋಚ್ ಆಗಿದ್ದಾಗ ಹಾಕಿ ವಿಶ್ವಕಪ್ ನಲ್ಲಿ ಕ್ರಮವಾಗಿ ಕಂಚಿನ ಮತ್ತು ಚಿನ್ನದ ಪದಕವನ್ನು ಭಾರತೀಯ ತಂಡ ಗೆದ್ದಿದ್ದು.

ದೇಶದ ಜನಪ್ರಿಯ ಆಟಗಾರನ ನಿಧನಕ್ಕೆ ದೇಶದ ಗಣ್ಯರು, ಕ್ರೀಡಾಪಟುಗಳು ಸಂತಾಪ ಸೂಚಿಸಿದ್ದಾರೆ.