ಬೆಂಗಳೂರು: ನಗರ ಪಬ್ ಒಂದರಲ್ಲಿ ಕನ್ನಡ ಹಾಡು ( Kannada Songs ) ಹಾಕುವಂತೆ ಕೇಳಿದ್ದಕ್ಕೆ ಡಿಜೆಯೊಬ್ಬರು ಯುವತಿ ಹಾಗೂ ಆಕೆಯ ಸಹೋದರನ ಮೇಲೆ ಹಲ್ಲೆ ಮಾಡಿರೋ ಘಟನೆ ನಡೆದಿತ್ತು. ಈ ಸಂಬಂಧ ಇದೀಗ ಬದ್ಮಾಶ್ ಹ್ಯಾಂಗೋವರ್ ಪಬ್ ನ ಡಿಜೆ ಸಿದ್ಧಾರ್ಥ್ ( DJ Siddharth ) ಕನ್ನಡಿಗರ ಕ್ಷಮೆ ಕೇಳಿದ್ದಾರೆ.
ಶಿವಮೊಗ್ಗ: ನಾಳೆಗೆ ಓಬವ್ವ ಆತ್ಮ ರಕ್ಷಣಾ ಕಲೆ-ಕರಾಟೆ ತರಬೇತಿ ಉದ್ಘಾಟನೆ ಮುಂದೂಡಿಕೆ
ಈ ಕುರಿತಂತೆ ಫೇಸ್ ಬುಕ್ ನಲ್ಲಿ ( Facebook ) ಪೋಸ್ಟ್ ಮಾಡಿರುವಂತ ಅವರು, ನಾನು 5 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಡಿಜೆಯನ್ನು ನಡೆಸುತ್ತಿದ್ದೇನೆ. ನಾನು ಹುಟ್ಟಿ ಬೆಳೆದದ್ದು, ಶಾಲೆಯನ್ನು ಕಲಿತಿದ್ದು ಎಲ್ಲಾ ಬೆಂಗಳೂರಿನಲ್ಲೇ. ನಾನು ಕನ್ನಡಿಗನೇ ಆಗಿದ್ದೇನೆ. ನಾನು ನನ್ನ ಎಲ್ಲಾ ಪಾರ್ಟಿಗಳಲ್ಲಿ ಅಪ್ಪು ಸಾರ್ ಅವರ ಕನ್ನಡ ಹಾಡುಗಳನ್ನು, ಅದರಲ್ಲೂ ಬೊಂಬೆ ಹೇಳುತೈತೆ ಹಾಡು ನುಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
BIGG NEWS: ಸಕ್ರೀಯ ರಾಜಕಾರಣಕ್ಕೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಎಂಟ್ರಿ.? ಈ ಬಗ್ಗೆ ಹೇಳಿದ್ದೇನು ಗೊತ್ತಾ.?
ಇನ್ನೂ ನಿನ್ನೆ ದಿನ ರಾತ್ರಿ ಕೂಡ ನಾನು ಕನ್ನಡ ಹಾಡನ್ನು ಹಾಕಬೇಕಿತ್ತು. ಆದ್ರೇ ಪಬ್ ಮ್ಯಾನೇಜ್ಮೆಂಟ್ ಅವರು 1 ಗಂಟೆಯ ಒಳಗೆ ಪಬ್ ಮುಚ್ಚಬೇಕು. ಬೇಗ ಮುಗಿಸಿ ಎಂದು ಹೇಳಿದರು. ಸಮಯದ ಅಭಾವ ಆಯಿತು. ಆದ್ದರಿಂದ ಮಧ್ಯರಾತ್ರಿ 12.30ಕ್ಕೆ ಕಾರ್ಯಕ್ರಮ ಮುಗಿಯಿತು. ಕನ್ನಡ ಹಾಡನ್ನು ಹಾಕಲು ಆಗಲಿಲ್ಲ. ಆದ್ಧರಿಂದ ನಾನು ದಯವಿಟ್ಟು ಕ್ಷಮೆಯನ್ನು ಕೇಳುತ್ತೇನೆ ಎಂದು ಕನ್ನಡಿಗರ ಕ್ಷಮೆಯನ್ನು ಕೋರಿದ್ದಾರೆ.
ನಾನು ಎಲ್ಲಾ ಮಧ್ಯಮದವರನ್ನು, ಕನ್ನಡಪರ ಸಂಘಟನೆಗಳನ್ನು ಗೌರವದಿಂದ ಕಾಣುತ್ತೇನೆ. ನಿನ್ನೆ ನಡೆದ ಘಟನೆಯ ಬಗ್ಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವೆ ಎಂದು ತಿಳಿಸಿದ್ದಾರೆ.