ಬೆಂಗಳೂರು : ಕಲೆಗಾರ ಬಾದಲ್ ನಂಜುಂಡಸ್ವಾಮಿ (Artist Badal Nanjundaswamy ) ಅವರು ಸಣ್ಣ ಮಕ್ಕಳ ಅನುಕೂಲಕ್ಕಾಗಿ ಸುಂದರವಾದ ಕನ್ನಡ ಭಾಷೆಯ ವರ್ಣಮಾಲೆಯ ಅಕ್ಷರಗಳನ್ನು ಡಿಫರೆಂಟ್ ಆಗಿ ಚಿತ್ರಿಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರೇ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
A creative way to make learning languages a fun activity, in this case the beautiful Kannada language. https://t.co/OC8XQxh8Sa
— Narendra Modi (@narendramodi) February 6, 2023
ಭಾಷೆ ಕಲಿಕೆಯೂ ಮೋಜಿನಿಂದ ಕೂಡಿದಂತೆ ಪ್ರತಿ ಅಕ್ಷರಕ್ಕೆ ಹೊಂದಿಕೆಯಾಗುವ ಚಿತ್ರ ಬರೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಧಾನಿ ಮೋದಿ ಅವರು ರೀ ಪೋಸ್ಟ್ ಮಾಡುವ ಶ್ಲಾಘನೆ ಮಾಡಿದ್ದಾರೆ. ಕಲೆಗಾರ ಬಾದಲ್ ನಂಜುಂಡಸ್ವಾಮಿ ಅವರ ಕೈಯಲ್ಲಿ ಅರಳಿದ ಕನ್ನಡ ವರ್ಣಮಾಲೆಯನ್ನು ಪುಟಾಣಿ ಮಕ್ಕಳು ನೆನಪಿಸುವುದಕ್ಕಾಗಿ ಈ ರೀತಿಯ ಕೈಚಳಕ ತೋರಿದ್ದಾರೆ. ‘ಅ’ ಅಕ್ಷರದೊಳಗೆ ಅಳಿಲನ್ನು ಕೂರಿಸಿ, ‘ಆ’ದಲ್ಲಿ ಆನೆ ಸೊಂಡಿಲು ಮೂಡಿಸಿ, ‘ಇ’ಯಲ್ಲಿ ಇಲಿಯನ್ನಿಟ್ಟು, ‘ಈ’ಯಲ್ಲಿ ಈರುಳಿಯನ್ನೇ ಬೆಳೆಸಿರುವ ರೀತಿಯಲ್ಲಿ ಚಿತ್ರಣ ಮೂಡಿಸಿದ್ದಾರೆ.
BIGG NEWS : ಪ್ರತಿ ರೈತರಿಂದ 20 ಕ್ವಿಂಟಲ್ ಕೊಬ್ಬರಿ ಖರೀದಿ : ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚನೆ
ಈ ವಿಚಾರವನ್ನು ಖಾಸಗಿ ಮಾಧ್ಯಮಗಳಲ್ಲಿ ಹೇಳಿಕೊಳ್ಳುವ ಮೂಲಕ ಪ್ರಧಾನಿಮೋದಿ ಅವರಿಗೆ ಧನ್ಯವಾದವನ್ನು ಕಲೆಗಾರ ಬಾದಲ್ ನಂಜುಂಡಸ್ವಾಮಿ ತಿಳಿಸಿದ್ದಾರೆ . ಎರಡು ವರ್ಷಗಳ ಹಿಂದೆ ಶಿಕ್ಷಕಿ ಪುಷ್ಪಮ್ಮ ಎಂಬವರ ಮನವಿ ಮೇರೆಗೆ ಈ ಕಲೆ ರಚಿಸಿದ್ದೆನೆ ಎಂದಿದ್ದಾರೆ .
BIGG NEWS : ಪ್ರತಿ ರೈತರಿಂದ 20 ಕ್ವಿಂಟಲ್ ಕೊಬ್ಬರಿ ಖರೀದಿ : ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚನೆ