‘ಲಾಕ್‌ಡೌನ್‌ ಟೈಮ್’‌ನಲ್ಲಿ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ‘ಸುಳ್ಳು ಸುದ್ದಿ’ಯೇ ಕಾರಣ : ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಪ್ರತಿಕ್ರಿಯೆ – Kannada News Now


India

‘ಲಾಕ್‌ಡೌನ್‌ ಟೈಮ್’‌ನಲ್ಲಿ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ‘ಸುಳ್ಳು ಸುದ್ದಿ’ಯೇ ಕಾರಣ : ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಪ್ರತಿಕ್ರಿಯೆ

ಡಿಜಿಟಲ್‌ ಡೆಸ್ಕ್‌: ಲಾಕ್‌ಡೌನ್ ಅವಧಿಯ ಬಗ್ಗೆ ನಕಲಿ ಸುದ್ದಿಗಳಿಂದ ಉಂಟಾದ ಭೀತಿಯಿಂದ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ವಲಸೆ ಹೋಗುವುದಕ್ಕೆ ಪ್ರಚೋದಿಸಲ್ಪಟ್ಟಿದ್ದರು ಎಂದು ಕೇಂದ್ರವು ಸೆಪ್ಟೆಂಬರ್ 15 ರ ಮಂಗಳವಾರ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಮಾಲಾ ರಾಯ್ ಅವರ ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಲಾಕ್‌ಡೌನ್ ಘೋಷಿಸುವ ಮೊದಲು ವಲಸೆ ಕಾರ್ಮಿಕರನ್ನು ರಕ್ಷಿಸಲು ಕೈಗೊಂಡ ಕ್ರಮಗಳು, ಅದು ಜಾರಿಗೆ ಬಂದ ನಂತರ ಸಾವಿರಾರು ಕಾರ್ಮಿಕರು ಮನೆಗೆ ವಾಪಸ್ಸು ಹೋಗಲು ಕಾರಣವಾದ ಕಾರಣಗಳು ಮತ್ತು ಮನೆಗೆ ಹೋಗುವಾಗ ಸಾವನ್ನಪ್ಪಿದವರ ಸಂಖ್ಯೆಯ ಬಗ್ಗೆ ಟಿಎಂಸಿ ಸಂಸದರು ಕೇಳಿದ್ದರು.

ಇದಕ್ಕೆ ಉತ್ತರ ನೀಡಿರುವ ಕೇಂದ್ರ ಸರ್ಕಾರ ಲಾಕ್‌ಡೌನ್ ಅವಧಿಯ ಬಗ್ಗೆ ನಕಲಿ ಸುದ್ದಿಗಳಿಂದ ಉಂಟಾದ ಭೀತಿಯಿಂದ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಮತ್ತೆ ತಮ್ಮ ಊರಿಗೆ ವಲಸೆ ಹೋಗುವುದಕ್ಕೆ ಪ್ರಚೋದಿಸಲ್ಪಡಿಸಿದ್ದಾರೆ. ವಿಶೇಷವಾಗಿ ವಲಸೆ ಕಾರ್ಮಿಕರು, ಆಹಾರ, ಕುಡಿಯುವ ನೀರು, ಆರೋಗ್ಯ ಸೇವೆಗಳು ಮತ್ತು ಆಶ್ರಯದಂತಹ ಮೂಲಭೂತ ಅವಶ್ಯಕತೆಗಳ ಸಮರ್ಪಕ ಪೂರೈಕೆಯ ಬಗ್ಗೆ ಚಿಂತಿತರಾಗಿದ್ದರು. ಆದಾಗ್ಯೂ, ಕೇಂದ್ರ ಸರ್ಕಾರವು ಈ ಬಗ್ಗೆ ಸಂಪೂರ್ಣ ಜಾಗೃತಿ ಹೊಂದಿತ್ತು, ಮತ್ತು ಅನಿವಾರ್ಯವಾದ ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ನಾಗರಿಕನು ಆಹಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯಗಳು ಇತ್ಯಾದಿಗಳ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿತ್ತು ಅಂತ ತಿಳಿಸಿದೆ.