ಸುಭಾಷಿತ :

Friday, April 3 , 2020 7:20 AM

ಅಭಿಮಾನಿಯ ಮೊಬೈಲ್ ಕಸಿದುಕೊಂಡು ‘BOLLYWOOD ಬ್ಯಾಡ್ ಬಾಯ್’ ಪರಾರಿ…ಕಾರಣ..?


Wednesday, January 29th, 2020 9:01 pm

ಸಿನಿಮಾ ಡೆಸ್ಕ್ : ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮಾಡಿರುವ ಕೆಲಸವೊಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಭಿಮಾನಿಯೊಬ್ಬರ ಮೊಬೈಲ್‌ ಫೋನ್‌ ಕಸಿದುಕೊಂಡು ಸಲ್ಲು ಪರಾರಿ ಆಗಿದ್ದಾರೆ, ಅಯ್ಯೋ..ಇದೇನಿದು ಅದು ಅಂತ ಶಾಕ್ ಆದ್ರ..? ಅದಕ್ಕೆ ಕಾರಣ ಇಲ್ಲಿದೆ.

ಸಲ್ಲು ಸಿನಿಮಾ ಶೂಟಿಂಗ್‌ ಸಲುವಾಗಿ ಪ್ರಯಾಣ ಮಾಡುತ್ತಿದ್ದಾಗ ಗೋವಾ ಏರ್‌ಪೋರ್ಟ್‌ನಲ್ಲಿ ಅಭಿಮಾನಿಯ ಮೊಬೈಲ್‌ ಕಸಿದುಕೊಂಡು ಸಲ್ಲು ಪರಾರಿ ಆಗಿದ್ದಾರೆ. ‘ದಯವಿಟ್ಟು ನನ್ನ ಮೊಬೈಲ್‌ ಕೊಡಿ..’ ಎಂದು ಆ ಅಭಿಮಾನಿ ಗೋಳಿಟ್ಟರೂ ಸಲ್ಮಾನ್ ಕರುಣೆ ತೋರಿಲ್ಲ… ಅವರ ಈ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗೋವಾ ವಿಮಾನ ನಿಲ್ದಾಣದಲ್ಲಿ ಸಲ್ಮಾನ್‌ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬರು ಮುಗಿಬಿದ್ದಿದ್ದಾರೆ. ಅವರು ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದು ಸಲ್ಲುಗೆ ಹಿಡಿಸಿಲ್ಲ. ಕೂಡಲೇ ಆ ವ್ಯಕ್ತಿಯ ಮೊಬೈಲ್‌ ಕಸಿದುಕೊಂಡು ಸಿಟ್ಟಿನಿಂದ ಹೊರನಡೆದಿದ್ದಾರೆ. ಮೊಬೈಲ್‌ ಕಸಿದುಕೊಂಡಿರುವ ಕ್ಷಣಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆ ಆಗಿವೆ. ಸಾಮಾಜಿಕ ಜಾಲತಾಣದಲ್ಲಿ ಅದು ವೈರಲ್‌ ಆಗುತ್ತಿದ್ದು, ಸಲ್ಲು ಮೊಬೈಲ್ ವಾಪಸ್ ಕೊಟ್ಟರಾ ಇಲ್ಲವಾ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions