ನವದೆಹಲಿ : 2,414 ಕೋಟಿ ರೂ.ಗಳ 11 ಯೋಜನೆಗಳಿಗೆ ವರ್ಚುವಲ್ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಈಶಾನ್ಯದಲ್ಲಿ ಉಳಿದ ಸಕ್ರಿಯ ಉಗ್ರರನ್ನ ಮುಖ್ಯವಾಹಿನಿಗೆ ಸೇರುವಂತೆ ಮನವಿ ಮಾಡಿದರು. ಮಿಜೋರಾಂನಲ್ಲಿ ಶಾಂತಿ ಸ್ಥಾಪನೆಯು ಭಾರತೀಯ ಪ್ರಜಾಪ್ರಭುತ್ವದ ವಿಜಯಕ್ಕೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
“ಈಶಾನ್ಯದಲ್ಲಿ ಉಳಿದಿರುವ ಕೆಲವು ಸಕ್ರಿಯ ಉಗ್ರಗಾಮಿ ಸಂಘಟನೆಗಳು ಮುಖ್ಯವಾಹಿನಿಗೆ ಮರಳಲು, ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಲು ಮತ್ತು ಪ್ರದೇಶದ ಮತ್ತು ಒಟ್ಟಾರೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ನಾನು ಮನವಿ ಮಾಡುತ್ತೇನೆ” ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
“ಬಂಡಾಯವನ್ನ ಎದುರಿಸಿದ ಮಿಜೋರಾಂನಲ್ಲಿ ಶಾಂತಿಯನ್ನ ಸ್ಥಾಪಿಸಲಾಗಿದೆ. ಇದು ಭಾರತದ ಪ್ರಜಾಪ್ರಭುತ್ವದ ವಿಜಯದ ಅಭೂತಪೂರ್ವ ಉದಾಹರಣೆಯಾಗಿದೆ” ಎಂದು ಅವರು ಹೇಳಿದರು.
BIGG NEWS : “ಹೊಸ ಬೆದರಿಕೆಗಳನ್ನ ಎದುರಿಸಲು ಸಿದ್ಧರಾಗಿರಿ” ; ಕಮಾಂಡರ್’ಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿ
BIGG NEWS : ದೇಶದ ‘ನಿರುದ್ಯೋಗ’ ದರ ಮಾರ್ಚ್ ನಲ್ಲಿ 3 ತಿಂಗಳ ಗರಿಷ್ಠ 7.8ರಷ್ಟು ಏರಿಕೆ ; CMIE ಮಾಹಿತಿ