ಸುಭಾಷಿತ :

Monday, February 24 , 2020 2:45 AM

‘ಬಿ ಬ್ಲಡ್’ ಗ್ರೂಪ್ ನವರು ಹೆಚ್ಚಾಗಿ ಒಂಟಿಯಾಗಿರುತ್ತಾರಂತೆ… ಅವರ ವಕ್ತಿತ್ವ ಬೇರೇನು ಹೇಳುತ್ತೆ ನೋಡಿ..


Monday, January 20th, 2020 10:56 am

ಸ್ಪೆಷಲ್ ಡೆಸ್ಕ್ : ಜಪಾನ್‌ನಲ್ಲಿ ಜನರು ರಕ್ತದ ಪ್ರಕಾರ ವ್ಯಕ್ತಿತ್ವ ಸಿದ್ಧಾಂತವನ್ನು ನಂಬುತ್ತಾರೆ. ಅಲ್ಲಿನ ಜನ ಇತರ ಜನರ ರಕ್ತದ ಪ್ರಕಾರವನ್ನು ಕೇಳಲು ತುಂಬಾ ಇಷ್ಟಪಡುತ್ತಾರೆ. ಜಪಾನಿನ ಜನರು ಉದ್ಯೋಗಿಯ ಸಾಮರ್ಥ್ಯವನ್ನು ಮತ್ತು ಮದುವೆಯಾಗುವ ಇಬ್ಬರು ವ್ಯಕ್ತಿಗಳ ಹೊಂದಾಣಿಕೆಯನ್ನು ನಿರ್ಣಯಿಸಲು ರಕ್ತದ ಗುಂಪಿನ ಬಗ್ಗೆ ಕೇಳುತ್ತಾರೆ.
ನೀವು ಬಿ ಗುಂಪಿನ ರಕ್ತ ಗ್ರೂಪ್ ನವರು ಆಗಿದ್ದರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ನೋಡಿ…

ಈ ಜನರು ತುಂಬಾ ಸೃಜನಶೀಲ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವವರು. ಆದರೆ ಆದೇಶಗಳನ್ನು ನೀಡುವಲ್ಲಿ ಅವರು ಉತ್ತಮರಲ್ಲ. ಅವರು ತಮಗೆ ಇಷ್ಟವಾದ ಒಂದು ವಿಷಯದ ಬಗ್ಗೆ ಹೆಚ್ಚಾಗಿ ಫೋಕಸ್ ಆಗಿರುತ್ತಾರೆ. ತಾವು ಮಾಡುವ ಎಲ್ಲಾ ಕೆಲಸಗಳೂ ದಿ ಬೆಸ್ಟ್ ಆಗಿರಬೇಕೆಂದು ಅವರು ಬಯಸುತ್ತಾರೆ. ಆದರೆ ಎ ರಕ್ತದ ಪ್ರಕಾರದಂತೆ, ಈ ಜನರು ಸಹ ಮಲ್ಟಿ ಟಾಸ್ಕಿಂಗ್‌ನಲ್ಲಿ ಉತ್ತಮವಾಗಿಲ್ಲ.

ಬಿ ರಕ್ತದ ಪ್ರಕಾರದ ಜನರು ಇತರರ ಬಗ್ಗೆ ಚಿಂತನಶೀಲ ಮತ್ತು ಅನುಭೂತಿ ಹೊಂದಿದ್ದಾರೆ ಮತ್ತು ಉತ್ತಮ ಮತ್ತು ವಿಶ್ವಾಸಾರ್ಹ ಸ್ನೇಹಿತರನ್ನು ಹೊಂದುತ್ತಾರೆ. ಈ ಜನರು ತಮ್ಮ ಸ್ವಾರ್ಥತೆ ಮತ್ತು ಸೆಲ್ಫಿಶ್ ಗುಣದಿಂದಾಗಿ ನಕಾರಾತ್ಮಕವಾಗಿ ಪ್ರತಿಬಿಂಬಿತವಾಗುತ್ತಾರೆ. ಸಮಾಜವು ಬಿ ರಕ್ತದ ಪ್ರಕಾರದ ಜನರಲ್ಲಿ ಒಳ್ಳೆಯ ಗುಣ ಇದ್ದರೂ ಸಹ ಅವರ ನೆಗೆಟಿವ್ ಗುಣದ ಮೇಲೆ ಹೆಚ್ಚು ಫ಼ೊಕಸ್ ಮಾಡುತ್ತಾರೆ. ಇದರ ಪರಿಣಾಮವಾಗಿ, ಅವರು ಒಂಟಿಯಾಗಿರುತ್ತಾರೆ

ಸಕಾರಾತ್ಮಕ ವ್ಯಕ್ತಿತ್ವ : ಕುತೂಹಲ, ಬಲಶಾಲಿ, ಶಾಂತ, ಸೃಜನಶೀಲ, ಸಾಹಸ, ಪ್ಯಾಶನೆಟ್, ಹರ್ಷಚಿತ್ತದಿಂದ, ಸಕ್ರಿಯ ಗುಣ ಹೊಂದಿರುತ್ತಾರೆ.

ನಕಾರಾತ್ಮಕ ವ್ಯಕ್ತಿತ್ವ : ಕ್ರೂರ, ಇರಾಟಿಕ್, ಸ್ವಾರ್ಥಿ, ಕ್ಷಮಿಸದ, ಅಸಹಕಾರಿ, ಬೇಜವಾಬ್ದಾರಿ ಮತ್ತು ಅನಿರೀಕ್ಷಿತ ವ್ಯಕ್ತಿತ್ವ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions