ಲಡಾಖ್‌: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಗಳು ಲಡಾಖ್‌ನಲ್ಲಿ 12,000 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

75ನೇ ಸ್ವಾತಂತ್ರ್ಯ ಮಹೋತ್ಸವದ ಹೊತ್ತಲ್ಲಿ ಐಟಿಬಿಪಿ ಪಡೆಗಳು ಲಡಾಖ್‌ನಲ್ಲಿ ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇದರ ವಿಡಿಯೋವನ್ನು ಐಟಿಬಿಪಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಯೋಧರು ‘ಭಾರತ್ ಮಾತಾ ಕಿ ಜೈ’ ಎಂದು ಕೂಗುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ಸೈನಿಕರು ಸಣ್ಣ ಗುಡ್ಡದ ಮೇಲೆ ಕುಳಿತು ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸುತ್ತಿರುವುದನ್ನು ನೋಡಬಹುದು.

ನಮ್ಮ ದೇಶಕ್ಕೆ ಸ್ವಾತಂತ್ರ ಬಂದು ಆಗಸ್ಟ್‌ 15ಕ್ಕೆ 75 ವರ್ಷ ತುಂಬುತ್ತದೆ. ಈ ಶುಭ ಸಮಯವನ್ನು ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಆಗಸ್ಟ್ 13 ರಿಂದ 15 ರವರೆಗೆ ನಾಗರಿಕರು ತಮ್ಮ ಮನಗಳಲ್ಲಿ ತ್ರಿವರ್ಣ ಧ್ವಜವನ್ನು ಧ್ವಜಾರೋಹಣ ಮಾಡುವಂತೆ ಯೋಧರು ಮನವಿ ಮಾಡಿದ್ದಾರೆ.

BREAKING NEWS: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ : ʻ ಇದೊಂದು ಪೂರ್ವ ನಿಯೋಜಿತ ಕೃತ್ಯ ʼ: ಶೋಭಾ ಕರಂದ್ಲಾಜೆ ಆಕ್ರೋಶ

BIGG NEWS : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಶೀಘ್ರವೇ ಕೊಲೆಗಾರರನ್ನು ಬಂಧಿಸಲಾಗುತ್ತೆ : ಸಚಿವ ಸುಧಾಕರ್

ಮನೆಗೆ ಬಂದ 3,419 ಕೋಟಿ ರೂ. ವಿದ್ಯುತ್ ಬಿಲ್ ಕಂಡು ವ್ಯಕ್ತಿಗೆ ಆಘಾತ, ಆಸ್ಪತ್ರೆಗೆ ದಾಖಲು!

Share.
Exit mobile version