Author: Kannada News

ಬೆಂಗಳೂರು: ಜನರ ಆರೋಗ್ಯ ದೃಷ್ಟಿಯಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದರು. ಇಂದು ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಬಿಪಿಎಲ್ ಕುಟುಂಬಕ್ಕೆ ಪರಿಹಾರ ಈಗಾಗಲೇ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಚೆಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕೋವಿಡ್ ನಿಯಂತ್ರಣ ಕ್ರಮವಾಗಿ ಘೋಷಿಸಲಾಗಿರುವ ನೈಟ್ ಕರ್ಫ್ಯೂ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಯಿಸಿ, ಜನರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಪಕ್ಷ ಸಂಘಟನೆ ಹಾಗೂ ವಿಷಯಾಧಾರಿತ ಚರ್ಚೆಗಳಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ. ಎರಡು ತಿಂಗಳಿಗೊಮ್ಮೆ ಈ ಸಭೆಯನ್ನು ಕೈಗೊಂಡು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು . ಸಂಪುಟ ವಿಸ್ತರಣೆ ಪಕ್ಷದ ಆಂತರಿಕ ವಿಚಾರವಾಗಿದ್ದು, ಪಕ್ಷದ ಹೈಕಮಾಂಡ್ ಈ ಬಗ್ಗೆ ಗಮನಿಸಲಿದೆ.…

Read More

ಬೆಂಗಳೂರು: ಮದುವೆಯ ಕಾರಣಕ್ಕೆ ಮತಾಂತರವಾದರೆ ಹತ್ತು ವರ್ಷಗಳ ವರೆಗೆ ಶಿಕ್ಷೆ ಕೊಡಬಹುದು ಎಂಬ ನಿಯಮ ಮತಾಂತರ ನಿಷೇಧ ಕಾಯ್ದೆಯಲ್ಲಿ ಇದೆ. ಒಬ್ಬ ಪುರುಷ ಅಥವಾ ಮಹಿಳೆ ಅನ್ಯ ಧರ್ಮದವರನ್ನು ಪ್ರೀತಿಸಿ, ಮದುವೆಯಾಗೋದು ಮತಾಂತರವಾಗುತ್ತಾ? ಇದನ್ನು ನಿರ್ಬಂಧಿಸೋದು ಸಂವಿಧಾನ ಬಾಹಿರವಾಗುತ್ತದೆ. ಮತ ಕ್ರೋಢೀಕರಣವೇ ಮತಾಂತರ ನಿಷೇಧ ಕಾನೂನಿನ ಉದ್ದೇಶ. ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಹೊರಟಿದ್ದಾರೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಅವರು, ಬಲವಂತದ, ಆಸೆ ಆಮಿಷ ಒಡ್ಡಿ ಮೋಸದಿಂದ ಮತಾಂತರ ಮಾಡುವುದಕ್ಕೆ ನಮ್ಮ ಪಕ್ಷದ ವಿರೋಧವೂ ಇದೆ. ಸೆಕ್ಷನ್ 295 ರಡಿ ಕಾನೂನು ಕ್ರಮ ಜರುಗಿಸಲು ಸಂವಿಧಾನದಲ್ಲಿ ಅವಕಾಶವಿದೆ. ಮದುವೆಯ ಕಾರಣಕ್ಕೆ ಮತಾಂತರವಾದರೆ ಹತ್ತು ವರ್ಷಗಳ ವರೆಗೆ ಶಿಕ್ಷೆ ಕೊಡಬಹುದು ಎಂಬ ನಿಯಮ ಮತಾಂತರ ನಿಷೇಧ ಕಾಯ್ದೆಯಲ್ಲಿ ಇದೆ. ಒಬ್ಬ ಪುರುಷ ಅಥವಾ ಮಹಿಳೆ ಅನ್ಯ ಧರ್ಮದವರನ್ನು ಪ್ರೀತಿಸಿ, ಮದುವೆಯಾಗೋದು ಮತಾಂತರವಾಗುತ್ತಾ? ಇದನ್ನು ನಿರ್ಬಂಧಿಸೋದು ಸಂವಿಧಾನ ಬಾಹಿರವಾಗುತ್ತದೆ. ಮತ ಕ್ರೋಢೀಕರಣವೇ ಮತಾಂತರ ನಿಷೇಧ ಕಾನೂನಿನ…

Read More

ಬೆಂಗಳೂರು: ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಂತ ಸಂದರ್ಭದಲ್ಲಿ ಮತಾಂತರ ಮಸೂದೆಗೆ ಸಹಿ ಹಾಕಿದ್ದು ನಾನೇ, ಆಗ ಅದನ್ನು ನಿಲ್ಲಿಸಿದ್ದು ನಾನೇ. ಮಸೂಧೆ ಜಾರಿಗೊಳಿಸಿದ್ರೇ.. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ವಾಪಾಸ್ ಪಡೆಯೋದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ( Ex CM Siddaramaiah ) ಘೋಷಿಸಿದರು. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ಸರ್ಕಾರದ ವಿಧಾನಸಭೆಯಲ್ಲಿ ಮಂಡಿಸಿ ಮತಾಂತರ ನಿಷೇಧ ಕಾಯ್ದೆಗೆ ( Karnataka Anti Conversion Bill ) ವಿರೋಧದ ನಡುವೆಯೂ ಒಪ್ಪಿಗೆ ಪಡೆದುಕೊಂಡಿದೆ. ನಮ್ಮ ಸರ್ಕಾರ ಬಂದ್ರೇ ಮೊದಲ ಅಧಿವೇಶನದಲ್ಲೇ ಕಾಯ್ದೆ ಹಿಂಪಡೆಯುತ್ತೇವೆ ಎಂದರು. ಮತಾಂತರ ನಿಷೇಧ ಕಾಯ್ದೆ ಹುಟ್ಟಿದ್ದು 2009ರಲ್ಲಿ ಆಗಿದೆ. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗಲೇ, ಜಯಚಂದ್ರ ಸಹಿ ಹಾಕಿ ಕ್ಯಾಬಿನೆಟ್ ಮುಂದೆ ತನ್ನಿ ಅಂತ ಹೇಳಿದ್ದೆ. ಆ ಬಳಿಕ ಆಂಜನೇಯ ಸಚಿವರಾಗಿದ್ದಾಗ ಡ್ರಾಫ್ಟ್ ಮಾಡುವಂತೆಯೂ ತಿಳಿಸಿದ್ದೆ. ಅದ್ರೇ ನಾನು ಹೇಳಿದ ನಂತ್ರವೂ ಆಂಜನೇಯ ಇದು ಅಗತ್ಯವಿಲ್ಲ ಎಂದು ಬರದು…

Read More

ಬೆಂಗಳೂರು: ಕೋಮುಭಾವನೆ ಕೆರಳಿಸುವಂತೆ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಂತ ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿಯವರು ಡಿಕೆ ಶಿವಕುಮಾರ್ ಉರೂಪ್ ಡಿಕೆಎಸ್ ದೊಡ್ಡ ದೊಡ್ಡ ಬಂಡೆಗಳನ್ನೇ ಒಡೆದು ಹಾಕಿದವನಿಗೆ Anti Conversion ಬಿಲ್ಲು ಹರಿಯೋದು ಕಷ್ಟವೇನಲ್ಲ ಬಿಡಿ ಎಂಬುದಾಗಿ ಕೋಮುಭಾವನೆ ಕೆರಳಿಸುವಂತ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಈ ಪ್ರಶಾಂತ ಸಂಬರಗಿಯವರ ಪೋಸ್ಟ್ ಗೆ ಅನೇಕರು ಆಕ್ಷೇಪ ಕೂಡ ವ್ಯಕ್ತ ಪಡಿಸಿದ್ದರು. ಈ ಪೋಸ್ಟ್ ಬಗ್ಗೆ ಇದೀಗ ಆಕ್ಷೇಪಿಸಿ ಹಾಗೂ ಅವರು ಕೋಮುಭಾವನೆ ಕೆರಳಿಸುತ್ತಿದ್ದಾರೆ ಎಂಬುದಾಗಿ ಬೆಂಗಳೂರು ದಕ್ಷಿಣ ಸೈಬರ್ ಪೊಲೀಸ್ ಠಾಣೆಗೆ ವಕೀಲ ಸಿ.ಲಕ್ಷ್ಮೀನಾರಾಯಣ ಎಂಬುವರು ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ದೂರಿನ ಬಗ್ಗೆಯೂ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿರುವಂತ ಪ್ರಶಾಂತ್ ಸಂಬರಗಿ ಅವರು, ದುರಾದೃಷ್ಠಕರ ಸಂಗತಿ ನೋಡಿ.. ಕಾಂಗ್ರೆಸ್ ಗುಲಾಮರೊಬ್ಬರು ನನ್ನ ವಿರುದ್ಧ ದೂರು ದಾಖಲಿಸಿದ ಪರಿಣಾಮ,…

Read More

ನವದೆಹಲಿ: ರಾಷ್ಟ್ರೀಯ ಡಿಫೆನ್ಸ್ ಅಕಾಡೆಮಿ ಹಾಗೂ ನಾವೆಲ್ ಅಕಾಡೆಮಿಯಲ್ಲಿ ( National Defence Academy and Naval Academy ) ಖಾಲಿ ಇರುವಂತ 400 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸ್ ಆಗಿರೋರು ಅರ್ಜಿ ಸಲ್ಲಿಸಬಹುದಾಗಿದೆ. https://kannadanewsnow.com/kannada/vatal-nagaraj-reaction-on-karnataka-bundh-on-dec-31st/ ಈ ಸಂಬಂಧ ಕೇಂದ್ರ ಲೋಕಸೇವಾ ಆಯೋಗ( Union Public Service Commission – UPSC ) ಅಧಿಸೂಚನೆ ಹೊರಡಿಸಿದ್ದು, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನಾವೆಲ್ ಅಕಾಡೆಮಿಯಲ್ಲಿ ಖಾಲಿ ಇರುವಂತ 400 ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು https://www.upsc.gov.in/ ಅಥವಾ https://upsconline.nic.in/upsc/mainmenu2.php ಲಿಂಕ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ. https://kannadanewsnow.com/kannada/breaking-news-seben-term-rajya-sabha-mp-mahendra-prasad-passes-away/ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ 370 ಹುದ್ದೆಗಳು, ನಾವೆಲ್ ಅಕಾಡೆಮಿಯಲ್ಲಿ 30 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಸೈನ್ಸ್ ಪರೀಕ್ಷೆಯಲ್ಲಿ ಪಾಸ್ ಆಗಿರೋರು ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ…

Read More

ಬೆಂಗಳೂರು: ಎಂಇಎಸ್ ಪುಂಡಾಟಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳಿಂದ ಡಿಸೆಂಬರ್ 31, 2021ಕ್ಕೆ ಕರ್ನಾಟಕ ಬಂದ್ ಗೆ ( Karnataka Bundh ) ಕರೆ ನೀಡಲಾಗಿದೆ. ಈ ಬಂದ್ ಬಗ್ಗೆ ಅನೇಕರು ವಿರೋಧ ವ್ಯಕ್ತ ಪಡಿಸ್ತಾ ಇದ್ದಾರೆ. ಇದರ ನಡುವೆಯೂ ಕರ್ನಾಟಕ ಬಂದ್ ಮಾಡೇ ಮಾಡ್ತೀವಿ. ಇದನ್ನ ಯಾರಿಂದಲೂ ತಡೆಯೋದಕ್ಕೆ ಆಗೋದಿಲ್ಲ ಎಂಬುದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ( Vatal Nagaraj ) ತಿಳಿಸಿದ್ದಾರೆ. https://kannadanewsnow.com/kannada/karnataka-to-conduct-vaccination-drives-in-schools-to-innoculate-kids-in-the-age-group-of-15-18-years/ ನಗರದಲ್ಲಿ ಇಂದು ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ಮಲ್ಲೇಶ್ವರಂ ಸರ್ಕಲ್ ನಲ್ಲಿ ಉರುಳು ಸೇವೆ ನಂತ್ರ, ಮೆರವಣಿಗೆಯಲ್ಲಿ ಕ್ಷೇತ್ರದ ಜನತೆಯನ್ನು ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದರು. https://kannadanewsnow.com/kannada/fact-check-if-mahatma-gandhi-has-a-green-belt-is-the-%e2%82%b9500-note-fake-heres-the-real-news-of-the-viral-news/ ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿಸೆಂಬರ್ 31ರಂದು ನಾವು ಕರೆ ನೀಡಿರುವಂತ ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಲಿದೆ. ರಾಜ್ಯಾಧ್ಯಂತ 1,800 ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ನೀಡಿದ್ದಾವೆ. ಮಾಜಿ ಸಿಎಂ ಸಿದ್ಧರಾಮಯ್ಯ ಕೂಡ ಬಹಿರಂಗವಾಗೇ ಬೆಂಬಲ ನೀಡಿದ್ದಾರೆ…

Read More

ಬೆಂಗಳೂರು: ಕೇಂದ್ರ ಸರ್ಕಾರ ಜನವರಿ 3ರಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ( Covid19 Vaccine For Children ) ನೀಡಲು ಘೋಷಣೆ ಮಾಡಿದೆ. ಈ ಲಸಿಕೆಯನ್ನು ಯಾವ ರೀತಿಯಲ್ಲಿ ಮಕ್ಕಳಿಗೆ ನೀಡಲಾಗುತ್ತದೆ ಎನ್ನುವುದೇ ಯಕ್ಷ ಪ್ರಶ್ನೆ ಎದ್ದಿತ್ತು. ಆದ್ರೇ.. ರಾಜ್ಯದಲ್ಲಿ ಆಯಾ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ( Vaccination Drives ) ನೀಡಲಾಗುತ್ತದೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದ್ದಾರೆ. https://kannadanewsnow.com/kannada/children-in-age-group-15-18-yrs-can-register-on-cowin-app-from-jan-1/ ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಆಯಾ ಶಾಲೆಗಳಲ್ಲಿ ಲಸಿಕೆ ನೀಡುವ ಕುರಿತಂತೆ ಲಸಿಕಾ ಅಭಿಯಾನಗಳನ್ನು ಸಿದ್ಧಪಡಿಸುತ್ತಿದ್ದೇವೆ. 60 ವರ್ಷ ಮೇಲ್ಪಟ್ಟವರಿಗೆ ಸಹ-ಅಸ್ವಸ್ಥತೆ ಹೊಂದಿರುವವರಿಗೆ ‘ಮುನ್ನೆಚ್ಚರಿಕೆ ಡೋಸ್’ ನೀಡಲು ಸಿದ್ಧತೆ ನಡೆಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಶಾಲೆಗಳಲ್ಲಿ ಲಸಿಕೆ ಅಭಿಯಾನ ಜನವರಿ 3 ರಿಂದ ಪ್ರಾರಂಭವಾಗಲಿದ್ದು, ಜನವರಿ 10 ರಿಂದ 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸಹ-ಅಸ್ವಸ್ಥತೆಹೊಂದಿರುವ ಅರ್ಹರಿಗೆ…

Read More

ಚಿಕ್ಕಮಗಳೂರು: ರಾಜ್ಯ ಸರ್ಕಾರ ನಾಳೆಯಿಂದ ಜಾರಿಗೊಳಿಸುತ್ತಿರುವಂತ ನೈಟ್ ಕರ್ಪ್ಯೂ ( Night Curfew ) ಆದೇಶದ ಬಗ್ಗೆ ಹೋಟೆಲ್ ಮಾಲೀಕರು, ಚಿತ್ರಮಂದಿರದ ಮಾಲೀಕರು ಸೇರಿದಂತೆ ಅನೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಇತ್ತ ಬಿಜೆಪಿ ಸರ್ಕಾರದ ಈ ಆದೇಶ ವಿರುದ್ಧವೇ ಸ್ವಪಕ್ಷೀಯ ನಾಯಕ ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. https://kannadanewsnow.com/kannada/children-in-age-group-15-18-yrs-can-register-on-cowin-app-from-jan-1/ ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ( CT Ravi ) ಅವರು, ಓಮಿಕ್ರಾನ್ ವೈರಸ್ ಬಗ್ಗೆ ಭಯಪಡಬೇಡಿ ಎಂಬುದಾಗಿ ವಿಜ್ಞಾನಿಗಳೇ ತಿಳಿಸಿದ್ದಾರೆ. ಅಲ್ಲದೇ ಮೂಗು ಇರೋರಿಗೆ ನೆಗಡಿ ತಪ್ಪಲ್ಲ ಎಂಬ ಗಾಧೆಯೇ ಇದೆ. ನೆಗಡಿ ಬಂತು ಅಂತ ಆತಂಕ ಪಡೋ ಅವಶ್ಯಕತೆ ಇಲ್ಲ ಎಂದರು. https://kannadanewsnow.com/kannada/biggnews-bjp-mp-tejaswi-surya-withdraws-controversial-ghar-wapsi-comment/ ರಾಜ್ಯದಲ್ಲಿ ಸದ್ಯ ಜನಜೀವನ ಸಹತ ಸ್ಥಿತಿಯಲ್ಲಿ ಇದ್ದು, ನಾರ್ಮಲ್ ಆಗೇ ನಡೆಯುತ್ತಿದೆ. ನಮ್ಮ ಸರ್ಕಾರದ ಆದೇಶವನ್ನು ಸರಿ-ತಪ್ಪು ಅಂತ ವ್ಯಾಖ್ಯಾನಿಸೋದಕ್ಕೆ ಆಗೋದಿಲ್ಲ. ಸರ್ಕಾರ ಕೂಡ ಜನರನ್ನು ಅನಗತ್ಯ ಭಯಕ್ಕೆ ಒಳಪಡಿಸೋ ಕೆಲಸ ಮಾಡಬಾರದು ಎಂದು ಹೇಳುವ…

Read More

ನವದೆಹೆಲಿ: ಜನವರಿ 1, 2022ರಿಂದ  15-18 ವರ್ಷ ವಯಸ್ಸಿನ ಮಕ್ಕಳಿಗೆ ( Children in the age group of 15-18 years ) ಲಸಿಕೆ ( Corona Vaccine ) ನೀಡುವ ಸಂಬಂಧ ಕೋವಿನ್ ಆ್ಯಪ್ ನಲ್ಲಿ ( CoWIN app ) ನೋಂದಣಿ ಆರಂಭಗೊಳ್ಳಲಿದೆ. ಈ ಮೂಲಕ ಮಕ್ಕಳ ಪೋಷಕರು ಜನವರಿ 1 ರಿಂದ ಕೋವಿನ್ ಆ್ಯಪ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಬಗ್ಗೆ ಮಾಹಿತಿ ನೀಡಿರುವಂತ ಕೋವಿನ್ ಪ್ಲಾಟ್ ಫಾರ್ಮ್ ಮುಖ್ಯಸ್ಥ ಡಾ.ಆರ್.ಎಸ್ ಶರ್ಮಾ ಅವರು, 15-18 ವರ್ಷ ವಯಸ್ಸಿನ ಮಕ್ಕಳು ಜನವರಿ 1 ರಿಂದ ಕೋವಿನ್ ಆ್ಯಪ್ ನಲ್ಲಿ ನೋಂದಾಯಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯೊಂದಿಗೆ ನೋಂದಣಿ ಮಾಡಬಹುದಾಗಿದೆ. ಇಲ್ಲವೇ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆಯೂ ನೋಂದಣಿ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ https://twitter.com/ANI/status/1475357682102009857

Read More

ಕೊಪ್ಪಳ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಶಿಶು ಮರಣ ( Children Death ) ಹೆಚ್ಚಾಗಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಸಮಗ್ರ ತನಿಖೆಯನ್ನು ನಡೆಸಲಾಗುತ್ತದೆ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಮ ಸಚಿವ ಹಾಲಪ್ಪ ಆಚಾರ್ ( Minister Halappa Achar ) ತಿಳಿಸಿದ್ದಾರೆ. https://kannadanewsnow.com/kannada/cristian-converter-come-back-to-hindu-religions/ ಈ ಸಂಬಂಧ ಸುದ್ದಿಗಾರರೊಂದಿಗೆ ಇಂದು ನಗರದಲ್ಲಿ ಮಾತನಾಡಿದಂತ ಅವರು, ಇಡೀ ರಾಜ್ಯಕ್ಕೆ ಒಂದೇ ಮಾದರಿಯ ಪೌಷ್ಠಿಕ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಹೀಗಿದ್ದೂ ಶಿಶು ಮರಣ ಹೇಗೆ ಆಗಿದೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದರು. https://kannadanewsnow.com/kannada/mysore-sharath-parents-news/ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಶಿಶು ಮರಣಕ್ಕೆ ಅಪೌಷ್ಠಿಕತೆಯೇ ಕಾರಣ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ನಾನ್ ಏನಾದ್ರೂ ಹೇಳೋದಕ್ಕೆ ವೈದ್ಯನೂ ಅಲ್ಲ. ಆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸಮಗ್ರ ತನಿಖೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು. https://kannadanewsnow.com/kannada/cm-basavaraj-bommai-reaction-on-night-curfew/

Read More


best web service company