ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ನಮಸ್ಕಾರ ಬಂದುಗಳೇ ಜನವರಿ 15ತಾರೀಕು ಈ ವರ್ಷದ ಮೊದಲ ಸಂಕ್ರಾಂತಿ ಹಬ್ಬ ಇದೆ ಮಕರ ಸಂಕ್ರಾಂತಿ ಹಬ್ಬ ತುಂಬಾ ವಿಶೇಷವಾಗಿದ್ದು ಸುಗ್ಗಿ ಸಂಕ್ರಾಂತಿ ಹಬ್ಬ ದಿಂದ 5 ರಾಶಿಯವರಿಗೆ ಕಾರ್ಯಸಿದ್ಧಿ ಹುನುಮಂತ ಸ್ವಾಮಿಯ ಆಶೀರ್ವಾದ ಸಿಗುತ್ತದೆ ಜನವರಿಯ ಮೊದಲ ದಿನದಿಂದಲೇ ಶುಕ್ರದೆಸೆ ಆರಂಭವಾಗಿದ್ದು ಸಂಕ್ರಮಣ ದಿಂದ ಗಜಕೇಸರಿ ಯೋಗ ಶುರುವಾಗುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ . ಮೇಷ ಇಂದು ಕೈಗೊಂಡ ಧರ್ಮಾರ್ಥ ಕಾರ್ಯವು ಮಾನಸಿಕ ಶಾಂತಿ ಮತ್ತು ಆರಾಮ ತರುತ್ತದೆ. ದೀರ್ಘಕಾಲದ ಲಾಭಗಳಿಗೆ ಸ್ಟಾಕ್ಗಳು ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗಿದೆ. ಸಹೋದರಿಯ ವೈವಾಹಿಕ ಸಂಬಂಧದ ಸುದ್ದಿ ನಿಮ್ಮನ್ನು ಸಂತುಷ್ಟಗೊಳಿಸಬಹುದು. ಅವಳಿಂದ ಪ್ರತ್ಯೇಕಗೊಳ್ಳುವ ಬಗ್ಗೆ ಯೋಚಿಸಿ ನಿಮಗೆ ಸ್ವಲ್ಪ ದುಃಖವಾಗುವ ಸಾಧ್ಯತೆಗಳಿವೆ. ಆದರೆ ನೀವು ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರಸ್ತುತವನ್ನು ಆನಂದಿಸಬೇಕಾದ…
Author: Kannada News
ನವದೆಹಲಿ : 8 ಪ್ರಯಾಣಿಕ (8 Passenger)ರನ್ನ ಕರೆದೊಯ್ಯುವ ಮೋಟಾರು ವಾಹನಗಳಲ್ಲಿ (motor vehicles) ವಾಸಿಸುವವರ ಸುರಕ್ಷತೆಯನ್ನ ಹೆಚ್ಚಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ( Central Government), ಅಂತಹ ವಾಹನಗಳು ಕನಿಷ್ಠ 6 ಏರ್ ಬ್ಯಾಗ್ (6 Airbag) ಗಳನ್ನ ಹೊಂದಿರಬೇಕು ಎಂದು ನಿರ್ಧರಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ( Union Minister Nitin Gadkari ) ಅವ್ರು ಇದನ್ನ ಘೋಷಿಸಿದ್ದು, “8 ಪ್ರಯಾಣಿಕರವರೆಗೆ ಪ್ರಯಾಣಿಸುವ ವಾಹನಗಳಿಗೆ ಕನಿಷ್ಠ 6 ಏರ್ ಬ್ಯಾಗ್ʼಗಳನ್ನ ಕಡ್ಡಾಯಗೊಳಿಸಲು ಜಿಎಸ್ಆರ್ (ಸಾಮಾನ್ಯ ಶಾಸನಬದ್ಧ ನಿಯಮಗಳು) ಕರಡು ಅಧಿಸೂಚನೆಗೆ ಸರ್ಕಾರ ಅನುಮೋದನೆ ನೀಡಿದೆ” ಎಂದು ಶುಕ್ರವಾರ ಹೇಳಿದ್ದಾರೆ. https://kannadanewsnow.com/kannada/ex-minister-and-retired-ias-officer-dr-j-alexander-no-more/ ಇನ್ನು “ಇದು ಅಂತಿಮವಾಗಿ ವಾಹನದ ವೆಚ್ಚ ಅಥವಾ ರೂಪಾಂತರವನ್ನ ಲೆಕ್ಕಿಸದೆ ಎಲ್ಲಾ ವಿಭಾಗಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನ ಖಚಿತಪಡಿಸುತ್ತದೆ” ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ. ಸರ್ಕಾರವು ಕಳೆದ ವರ್ಷದಿಂದ ಎಲ್ಲಾ ಹೊಸ ಮಾದರಿಗಳ ಕಾರುಗಳಲ್ಲಿ ಎರಡು ಏರ್ ಬ್ಯಾಗ್ʼಗಳ ಫಿಟ್ ಮೆಂಟ್ ಮಾಡಿತ್ತು ಮತ್ತು…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಅನೇಕ ಅಗ್ನಿ ಅವಘಡಗಳು ಉಂಟಾಗಿವೆ. ಬೆಂಕಿ ಅವಘಡಗಳನ್ನು ನಿಯಂತ್ರಿಸೋದಕ್ಕಾಗಿ ಬಿಬಿಎಂಪಿ ಪ್ರತ್ಯೇಕ ಮಾರ್ಗಸೂಚಿ ಕೂಡ ಪ್ರಕಟಿಸಿದೆ. ಹೀಗಿದ್ದೂ ಅಗ್ನಿ ಅವಘಡಗಳಿಗೇನು ಕಡಿಮೆ ಆಗಿಲ್ಲ. ಇಂದು ನಗರದ ಪ್ರಸಿದ್ಧ ಶಾಪಿಂಗ್ ಮಾಲ್ ( Shopping Mall ) ಒಂದರಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಧಗ ಧಗಿಸಿ ಹೊತ್ತಿ ಉರಿಯುವಂತೆ ಆಗಿದೆ. https://kannadanewsnow.com/kannada/ex-minister-and-retired-ias-officer-dr-j-alexander-no-more/ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅರಕೆರೆ ಗೇಟ್ ಬಳಿಯಲ್ಲಿರುವಂತ ಸೌತ್ ಇಂಡಿಯಲ್ ಶಾಪಿಂಗ್ ಮಾಲ್ ನಲ್ಲಿ ( South Indian Shopping Mall ) ಮಧ್ಯರಾತ್ರಿ 3 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ಶಾಪಿಂಗ್ ಮಾಲ್ ಧಗಧಗಿಸಿ ಹೊತ್ತಿ ಉರಿಯುತ್ತಿದೆ. https://kannadanewsnow.com/kannada/today-start-weekend-curfew-in-karnataka-second-time/ ಬೆಂಕಿ ಅವಘಡವನ್ನು ಗಮನಿಸಿದಂತ ಸ್ಥಳೀಯರು ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ 6 ಅಗ್ನಿ ಶಾಮಕ ವಾಹನಗಳು ಆಗಮಿಸಿ, ಬೆಂಕಿಯನ್ನು ನಂದಿಸೋ ಕಾರ್ಯದಲ್ಲಿ ನಿರತವಾಗಿವೆ. ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. https://kannadanewsnow.com/kannada/sweet-news-for-karnataka-degree-college-guest-lecturer/
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹೇರಿರುವ ವೀಕೆಂಡ್ ಕರ್ಪ್ಯೂ (Weekend Curfew ) ನಿನ್ನೆಯ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಆರಂಭಗೊಂಡಿದೆ. https://kannadanewsnow.com/kannada/ex-minister-and-retired-ias-officer-dr-j-alexander-no-more/ ಇಂದಿನಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಪ್ಯೂ ಜಾರಿಯಲ್ಲಿರಲಿದ್ದು, ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದರೆ ನಿಮ್ಮ ವಾಹನ ಸೀಜ್ ಆಗಲಿದೆ. ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪೊಲೀಸರು ಕೇಸ್ ಹಾಕಲಿದ್ದಾರೆ. https://kannadanewsnow.com/kannada/sweet-news-for-karnataka-degree-college-guest-lecturer/ ಕರ್ಪ್ಯೂ ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಖಾಸಗಿ ಕಂಪನಿಗಳು, ಕೈಗಾರಿಕೆ, ಇ-ಕಾಮರ್ಸ್, ಫುಡ್ ಹೋಂ ಡೆಲಿವರಿ ಉದ್ಯೋಗಿಗಳು, ಟೆಲಿಕಾಂ ಸೇವಾ ಕಂಪನಿ, ಸಾರಿಗೆ ಇಲಾಖೆ ಉದ್ಯೋಗಿಗಳಿಗೆ ಮಾತ್ರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ರಾಜ್ಯಾಧ್ಯಂತ ವಾರಾಂತ್ಯ ಕರ್ಪ್ಯೂ ಮಾರ್ಗಸೂಚಿ ಕ್ರಮಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು ತೆರೆದಿರಲು ಅನುಮತಿ. ತುರ್ತು ಸೇವೆ ಕಚೇರಿಗಳು ತೆರೆದಿರಲು ಅವಕಾಶ ಎಲ್ಲಾ ಸಾರ್ವಜನಿಕ ಪಾರ್ಕ್ ಗಳು ಬಂದ್ ಐಟಿ ಕಂಪನಿಗಳು ವಾರಾಂತ್ಯ ಕರ್ಪ್ಯೂ ನಡುವೆಯೂ ಕೆಲಸಕ್ಕೆ ಅವಕಾಶ. ನೌಕರರು…
ಬೆಂಗಳೂರು: ಮಾಜಿ ಸಚಿವ, ನಿವೃತ್ತ ಐಎಎಸ್ ಅಧಿಕಾರಿ ಡಾ.ಜೆ. ಅಲೆಗ್ಸಾಂಡರ್ (83) ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಅಲೆಕ್ಸಾಂಡರ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಅವರು ಎರಡು ಮಕ್ಕಳು ಹಾಗೂ 4 ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಬೆಂಗಳೂರಿನಲ್ಲಿ ನೆರವೇರಲಿದೆ. https://kannadanewsnow.com/kannada/bigg-breaking-news-ministry-of-rail-orders-use-of-train-manager-designation-instead-of-guard/ ಮೂಲತಃ ಕೇರಳ ದವರಾದ ಅಲೆಗ್ಸಾಂಡರ್ ಅವರು ಐಎಎಸ್ ಅಧಿಕಾರಿಯಾಗಿ ರಾಜ್ಯ ಪ್ರವೇಶ ಮಾಡಿದ್ದರು. ನಂತರ ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಆನಂತರ ರಾಜ್ಯ ರಾಜಕಾರಣ ಪ್ರವೇಶ ಮಾಡಿ ಕಾಂಗ್ರೆಸ್ನಲ್ಲಿ ಅಂದಿನ ಬೆಂಗಳೂರು ಭಾರತಿನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. https://kannadanewsnow.com/kannada/second-weak-weekend-karphyue/ ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರವಾಸೋದ್ಯಮ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸುವ ಅಂದಿನ ಪ್ರಮುಖ ರಾಜಕಾರಣಿಯಾಗಿದ್ದರು. ಅಲೆಗ್ಸಾಂಡರ್ ಬೆಂಗಳೂರು ಭಾಗದಲ್ಲಿ ದೀನದಲಿತರ ನಾಯಕ ಎಂದು ಹೆಸರು ಪಡೆದಿದ್ದರು. ಇವರು ಮುಖ್ಯಕಾರ್ಯದರ್ಶಿ ಆಗುವ ಮೊದಲೇ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯಲ್ಲಿ ಕೆಲಸ…
ಬೆಂಗಳೂರು: ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕಿಳಿದಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ( Guest Lecturer ) ಸರಕಾರ ಸಂಕ್ರಾಂತಿಗೆ ಸಿಹಿಸುದ್ದಿ ಕೊಟ್ಟಿದ್ದು, ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಏರಿಸಿದೆ. ಜೊತೆಗೆ, ಸೆಮಿಸ್ಟರ್-ವಾರು ನೇಮಕಾತಿಯನ್ನು ನಿಲ್ಲಿಸಿ, ಇನ್ನು ಮುಂದೆ ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಿಸಿ ಕೊಳ್ಳುವುದಾಗಿ ಘೋಷಿಸಿದೆ. ಸರಕಾರದ ಪರವಾಗಿ ವಿಧಾನಸೌಧದಲ್ಲಿ ಶುಕ್ರವಾರ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಇದ್ದು 5 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರು ಇನ್ನು ಮುಂದೆ ಮಾಸಿಕ 32 ಸಾವಿರ ರೂ, ಇದಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವವರು ಮಾಸಿಕ 30 ಸಾವಿರ ರೂ ಗೌರವಧನ ಪಡೆಯಲಿದ್ದಾರೆ ಎಂದು ಪ್ರಕಟಿಸಿದರು. https://kannadanewsnow.com/kannada/worlds-first-baby-with-bony-tail-operated/ ಹಾಗೆಯೇ, ಯುಜಿಸಿ ಬಯಸುವ ಶೈಕ್ಷಣಿಕ ಅರ್ಹತೆ ಹೊಂದದೆ 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವವರಿಗೆ ಮಾಸಿಕ 28 ಸಾವಿರ ರೂ. ಮತ್ತು…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಅನೇಕ ಅಗ್ನಿ ಅವಘಡಗಳು ಉಂಟಾಗಿವೆ. ಬೆಂಕಿ ಅವಘಡಗಳನ್ನು ನಿಯಂತ್ರಿಸೋದಕ್ಕಾಗಿ ಬಿಬಿಎಂಪಿ ಪ್ರತ್ಯೇಕ ಮಾರ್ಗಸೂಚಿ ಕೂಡ ಪ್ರಕಟಿಸಿದೆ. ಹೀಗಿದ್ದೂ ಅಗ್ನಿ ಅವಘಡಗಳಿಗೇನು ಕಡಿಮೆ ಆಗಿಲ್ಲ. ಇಂದು ನಗರದ ಪ್ರಸಿದ್ಧ ಶಾಪಿಂಗ್ ಮಾಲ್ ಒಂದರಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಧಗ ಧಗಿಸಿ ಹೊತ್ತಿ ಉರಿಯುವಂತೆ ಆಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅರಕೆರೆ ಗೇಟ್ ಬಳಿಯಲ್ಲಿರುವಂತ ಸೌತ್ ಇಂಡಿಯಲ್ ಶಾಪಿಂಗ್ ಮಾಲ್ ನಲ್ಲಿ ಮಧ್ಯರಾತ್ರಿ 3 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ಶಾಪಿಂಗ್ ಮಾಲ್ ಧಗಧಗಿಸಿ ಹೊತ್ತಿ ಉರಿಯುತ್ತಿದೆ. ಬೆಂಕಿ ಅವಘಡವನ್ನು ಗಮನಿಸಿದಂತ ಸ್ಥಳೀಯರು ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ 6 ಅಗ್ನಿ ಶಾಮಕ ವಾಹನಗಳು ಆಗಮಿಸಿ, ಬೆಂಕಿಯನ್ನು ನಂದಿಸೋ ಕಾರ್ಯದಲ್ಲಿ ನಿರತವಾಗಿವೆ.
ಮುಂಬೈ: ಫಾರ್ಮುಲಾ 1ಗೆ ಕಾಲಿಡುವ ಭಾರತದ ಅಗ್ರ ರೇಸರ್ ಜೇಹನ್ ದಾರುವಾಲಾ ಅವರ ಕನಸು ಸಾಕಾರಗೊಳ್ಳುವ ದಿನಗಳು ಹತ್ತಿರವಾದಂತಿದೆ. 2022ರ ಋತುವಿನಲ್ಲಿ 3 ಬಾರಿ ಎಫ್2 ಚಾಂಪಿಯನ್ ತಂಡ ಇಟಲಿಯ ಪ್ರೆಮಾ ರೇಸಿಂಗ್ ಪರ ಕಣಕ್ಕಿಳಿಯಲು ಜೇಹನ್ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಮುಂಬೈ ಮೂಲದ 23 ವರ್ಷದ ಚಾಲಕ ಸತತ 3ನೇ ವರ್ಷವೂ ರೆಡ್ಬುಲ್ ಕಿರಿಯರ ತಂಡದೊಂದಿಗೂ ಮುಂದುವರಿಯಲಿದ್ದಾರೆ. ರೆಡ್ಬುಲ್ ತಂಡವು 4 ಬಾರಿ ಎಫ್1 ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್, ಹಾಲಿ ಎಫ್1 ಚಾಂಪಿಯನ್ ಮ್ಯಾಕ್ಸ್ ವರ್ಸ್ಟಾಪ್ಪೆನ್, ರೇಸ್ ವಿಜೇತರಾದ ಡೇನಿಯಲ್ ರಿಕಾರ್ಡೊ, ಪೀಯರ್ ಗ್ಯಾಸ್ಲಿ ಸೇರಿ ಅನೇಕ ಚಾಲಕರನ್ನು ಬೆಳೆಸಿದೆ. ಜೇಹನ್ ಈಗಾಗಲೇ ಎಫ್ 2 ಚಾಂಪಿಯನ್ಶಿಪ್ನಲ್ಲಿ ಹಲವು ಗೆಲುವು, ಪೋಡಿಯಂ ಫಿನಿಶ್ಗಳನ್ನು ಸಾಧಿಸಿದ್ದಾರೆ. ತಮ್ಮ ಅತ್ಯದ್ಭುತ ಲಯವನ್ನು ಮುಂದುವರಿಸಿ, ತಮ್ಮ ಅಸಾಧಾರಣ ವೇಗದ ಸಹಾಯದಿಂದ ಪ್ರೆಮಾ ರೇಸಿಂಗ್ ತಂಡವು ಸತತ 3ನೇ ವರ್ಷ ಚಾಲಕರ ಚಾಂಪಿಯನ್ಶಿಪ್ ಗಳಿಸಲು ನೆರವಾಗುವುದು ಜೇಹನ್ರ ಗುರಿಯಾಗಿದೆ. `ಪ್ರೆಮಾ ರೇಸಿಂಗ್ ತಂಡದೊಂದಿಗೆ ಮತ್ತೊಮ್ಮೆ ಕೈಜೋಡಿಸುತ್ತಿರುವುದು ನನಗೆ…
ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ಅನ್ನೋದು ಲೆಕ್ಕಕ್ಕೆ ಉಂಟು, ಆಟಕ್ಕೆ ಇಲ್ಲದಂತೆ ಆಗಿದೆ. ಒಂತರ ಬಂದ ಪುಟ್ಟ, ಹೋದ ಪುಟ್ಟ ತರ. ಇದು ನನಗೆ ಅವಶ್ಯಕತೆನೇ ಇರಲಿಲ್ಲ ಎಂಬುದಾಗಿ ಬಿಜೆಪಿ ಸರ್ಕಾರದ ವಿರುದ್ಧವೇ, ಸ್ವಪಕ್ಷೀಯ ಶಾಸಕ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾರೆ. https://kannadanewsnow.com/kannada/dakshin-kannada-rape-case-news/ ಈ ಬಗ್ಗೆ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದಂತ ಹೊನ್ನಾಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (MLA MP Renukacharya ) ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಅಂತ ಹುದ್ದೆ ಕೊಟ್ಟು, ಅದಕ್ಕೊಂದು ಚೇಂಬರ್, ವಾಸಕ್ಕೊಂದು ಮನೆ ಕೊಟ್ಟಿದ್ದಾರೆ. ಅದನ್ನು ಬಿಟ್ಟು ಬೇರೇನೂ ಕೊಟ್ಟಿಲ್ಲ. ಇಲ್ಲಿ ಮಾಡೋಕೆ ಏನೂ ಕೆಲಸವೇ ಇಲ್ಲ ಎಂದರು. https://kannadanewsnow.com/kannada/application-invite-on-handicaps-bus-pass/ ನನಗೆ ನೀಡಿರುವಂತ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕಿಂತ, ನಾನು ಶಾಸಕನಾಗಿಯೇ ಇರುತ್ತೇನೆ ಎಂದು ಅವರು, ಯತ್ನಾಳ್ ರಾಜಕೀಯ ಬದಲಾವಣೆಗೂ ಪ್ರತಿಕ್ರಿಯಿಸಿ, ಸಿಎಂ ಬೊಮ್ಮಾಯಿ ಹೊರತುಪಡಿಸಿ ಉಳಿದೆಲ್ಲ ಸಂಪುಟ ಸಚಿವರು ಬದಲಾವಣೆ ನಿಶ್ಚಿತ. ಅದು ಅಭಿವೃದ್ಧಿಯ ದೃಷ್ಠಿಯಿಂದಲೂ ಒಳ್ಳೆಯದು ಎಂದರು. https://kannadanewsnow.com/kannada/samanwi-father-crying-on-daughter-bode/
ಶಿವಮೊಗ್ಗ : 2022ನೇ ಸಾಲಿಗೆ ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ಗಳ ವಿತರಣೆ/ ನವೀಕರಣವನ್ನು ಜ.17 ರಿಂದ ಪ್ರಾರಂಭಿಸಲಾಗಿದೆ ಹಾಗೂ 2021ನೇ ಸಾಲಿನಲ್ಲಿ ವಿತರಿಸಲಾಗಿರುವ ಬಸ್ ಪಾಸ್ಗಳನ್ನು ( Bus Pass ) ಫೆ.28 ರೊಳಗೆ ನವೀಕರಿಸಿಕೊಳ್ಳಲು ಅನುಮತಿಸಲಾಗಿದೆ. 2022ನೇ ಸಾಲಿನಲ್ಲಿ ಹೊಸದಾಗಿ ವಿಕಲಚೇತನರ ಬಸ್ ಪಾಸ್ ಪಡೆಯಲು/ನವೀಕರಣಕ್ಕೆ ಫಲಾನುಭವಿಗಳು ಸರ್ಕಾರ ನಿಗದಿಪಡಿಸಿರುವ ಸೇವಾಸಿಂಧು ಆನ್ಲೈನ್ ಪೋರ್ಟಲ್ https://sevasindhu.karnataka.gov.in ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತೆ. https://kannadanewsnow.com/kannada/dakshin-kannada-rape-case-news/ 2022ನೇ ಸಾಲಿನಲ್ಲಿ ಹೊಸದಾಗಿ ವಿಕಲಚೇತನರ ಬಸ್ಪಾಸ್ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿವಮೊಗ್ಗ ವಿಭಾಗ ಎಂದು ಕೌಂಟರ್ ಆಯ್ಕೆ ಮಾಡುವುದು ಹಾಗೂ 2021ನೇ ಸಾಲಿನಲ್ಲಿ ಬಸ್ ಪಾಸ್ ಪಡೆದಿರುವ ಫಲಾನುಭವಿಗಳು ಪಾಸ್ ನವೀಕರಣಕ್ಕಾಗಿ ಘಟಕ ವ್ಯವಸ್ಥಾಪಕರ ಕೌಂಟರ್ ಆಯ್ಕೆ ಮಾಡಲು ಸೂಚಿಸಿದೆ. ಅರ್ಜಿದಾರರು ಆನ್ಲೈನ್ನಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿ, ಫಲಾನುಭವಿಗಳ ಭಾವಚಿತ್ರದೊಂದಿಗೆ ಅಗತ್ಯ ದಾಖಲಾತಿಗಳಾದ ಯುಡಿಐಡಿ ಕಾರ್ಡ್, ಡಿಸೆಬಲಿಟಿ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ನ್ನು ಜೆಪಿಜಿ ಅಥವಾ ಪಿಡಿಎಫ್ ನಮೂನೆಯಲ್ಲಿ ಅಡಕಗೊಳಿಸುವುದು.…