Author: kannadanewslive

ಬೆಂಗಳೂರು: ಮಧುಮೇಹ ( Diabetes ) ಸೇರಿದಂತೆ ಅಸಾಂಕ್ರಾಮಿಕ ರೋಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ʼನಮ್ಮ ಕ್ಲಿನಿಕ್‌ʼ ( Namma Clinic ) ಮೂಲಕ 30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಮಧುಮೇಹದ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ( Minister Dr K Shudakar ) ತಿಳಿಸಿದರು. ಆರೋಗ್ಯ ಸಿಟಿ ಸಮ್ಮಿಟ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಅಸಾಂಕ್ರಾಮಿಕ ರೋಗಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದರ ನಿರ್ವಹಣೆಗೆ ನಗರಗಳಲ್ಲಿ 438 ʼನಮ್ಮ ಕ್ಲಿನಿಕ್‌ʼಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಕೊಳೆಗೇರಿ, ಬಡ ಜನರು ವಾಸಿಸುವ ಪ್ರದೇಶಗಳಲ್ಲಿ ಇಂತಹ ಕ್ಲಿನಿಕ್‌ ಆರಂಭಿಸಿ ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಈ ಮೂಲಕ ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳಿರುವ ಜನರ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಒಟ್ಟು ಮಧುಮೇಹಿಗಳಲ್ಲಿ 75% ಜನರು ಚಿಕಿತ್ಸೆಯನ್ನೇ ಪಡೆಯುತ್ತಿಲ್ಲ. ಆದ್ದರಿಂದ 30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಮಧುಮೇಹ ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.…

Read More

ಆಂಧ್ರಪ್ರದೇಶ: ಕೆ ಸಿ ಆರ್ ಪಕ್ಷದ ಕಾರ್ಯಕರ್ತರ ನಡುವಿನ ಸಂಘರ್ಷಕ್ಕೆ ಕಾರಣವಾದ ನಂತ್ರ, ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ ರೆಡ್ಡಿ ಅವರ ಸಹೋದರಿ ವೈ ಎಸ್ ಶರ್ಮಿಳಾ ಅವರನ್ನು ಬಂಧಿಸಲಾಗಿದೆ. ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ( YSR Telangana Party President YS Sharmila ) ಅವರನ್ನು ತೆಲಂಗಾಣದ ವಾರಂಗಲ್ನಲ್ಲಿ ನಡೆದ ಮೆರವಣಿಗೆಯಲ್ಲಿ ಟಿಆರ್ಎಸ್ ನಾಯಕರ ‘ದೂರು’ ನಂತರ ಬಂಧಿಸಲಾಗಿದೆ. https://kannadanewsnow.com/kannada/bjp-leaders-participate-in-rowdy-sheeter-programme-do-you-know-what-minister-ashwathnarayan-said/ ಟಿಆರ್ ಎಸ್ ಗೆ ಸೇರಿದವರೆಂದು ಹೇಳಲಾದ ದುಷ್ಕರ್ಮಿಗಳು ವಾರಂಗಲ್ ನಲ್ಲಿ ಅವರ ಪ್ರಚಾರ ಬಸ್ ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಶರ್ಮಿಳಾ ಟಿಆರ್ಎಸ್ ಶಾಸಕ ಸುದರ್ಶನ್ ಅವರ ಬಗ್ಗೆ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಈ ದಾಳಿ ನಡೆದಿದೆ. ಟಿಆರ್ ಎಸ್ ಸರ್ಕಾರದ ಪಿತೂರಿಯ ಭಾಗವಾಗಿ ಮೆರವಣಿಗೆ ವೇಳೆ ಬಸ್ ಗೆ ಬೆಂಕಿ ಹಚ್ಚಲಾಗಿತ್ತು ಎಂದು ಬಂಧನಕ್ಕೆ ಮುನ್ನ ಶರ್ಮಿಳಾ ಟ್ವೀಟ್ ಮಾಡಿದ್ದರು. https://kannadanewsnow.com/kannada/bjp-leaders-participate-in-rowdy-sheeter-programme-do-you-know-what-minister-ashwathnarayan-said/ ನಾನು ಎಲ್ಲಾ ಅನುಮತಿಗಳೊಂದಿಗೆ ಪಾದಯಾತ್ರೆ ಮಾಡುತ್ತಿದ್ದೇನೆ. ಅವರು ಕಾನೂನು…

Read More

ಮೈಸೂರು : ಮುಂದಿನ ದಿನಗಳಲ್ಲಿ ನಂಜನಗೂಡು ಕ್ಷೇತ್ರ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನದ ವಿವಿಧ ಕಾಮಗಾರಿ ಗಳ ಗುದ್ದಲಿ ಪೂಜೆ, ನುಗು ಹಾಗೂ ಹೇಡಿಯಾಳ ಏತ ನೀರಾವರಿ ಯೋಜನೆಗೆ ಚಾಲನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು. https://kannadanewsnow.com/kannada/know-how-mysugar-factory-was-made-ashwath-narayan/ ಕಬಿನಿ ಏತನೀರಾವರಿ ಪ್ರಾರಂಭಿಸಿ ಬಲದಂಡೆ ಕಾಲುವೆ ಕಾಮಗಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಬೇರೆ ಸರ್ಕಾರಗಳು ಗುಂಡ್ಲುಪೇಟೆ, ಚಾಮರಾಜಪೇಟೆ ಕೆರೆಗಳನ್ನು ತುಂಬಿಸಬೇಕು ಎನ್ನುವ ಬಗ್ಗೆ ಕಾಳಜಿ ಮಾಡಲಿಲ್ಲ. ಮಾತಿನಿಂದ ಹೊಟ್ಟೆ ತುಂಬುವುದಿಲ್ಲ. ಸಾಮಾಜಿಕ ನ್ಯಾಯ ಭಾಷಣದಿಂದ ಸಿಗುವುದಿಲ್ಲ. ನಮ್ಮ ಸರ್ಕಾರ ದುರ್ಬಲ ವರ್ಗದವರಿಗೆ ಸಮಾನ ಅವಕಾಶಗಳನ್ನು ಕೊಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಎಲ್ಲ ವರ್ಗದವರಲ್ಲಿ ಜಾಗೃತಿ ಮೂಡುತ್ತಿದ್ದು, ಬದಲಾವಣೆ ಪ್ರಾರಂಭವಾಗಿದೆ. ಯಾರು ಎಲ್ಲರನ್ನು ಎದುರಿಸಿ ಬಡವರ ಪರ ನಿಲ್ಲುವವರೇ ನಿಜವಾದ ನಾಯಕ. ವಾಲ್ಮೀಕಿ, ಡಾ.ಬಿ.ಆರ್. ಅಂಬೇಡ್ಕರ್,…

Read More

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ( Karnataka State Road Transport Corporation ) ನೂತನ ವಾಹನ ಬಸ್ ಸೇವೆಗಳನ್ನು ( KSRTC New Bus Service ) ಆರಂಭಿಸಲಾಗುತ್ತಿದೆ. ಈ ವಾಹನಗಳಿಗೆ ಬ್ರಾಂಡಿಂಗ್ ಪರಿಕಲ್ಪನೆಗೆ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ಸ್ ವಿನ್ಯಾಸವನ್ನು ಕೋರಿದೆ. ಉತ್ತಮ ನೇಮ್, ಟ್ಯಾಗ್ ಲೈನ್, ಗ್ರಾಫಿಕ್ ಮಾಡಿಕೊಟ್ಟವರಿಗೆ ರೂ.25,000ವರೆಗೆ ಬಹುಮಾನ ಸಿಗಲಿದೆ. https://kannadanewsnow.com/kannada/sc-stays-andhra-hcs-march-order-directing-state-to-develop-amaravati-as-capital/ ಈ ಕುರಿತು ಕೆ ಎಸ್ ಆರ್ ಟಿ ಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಕೆ ಎಸ್ ಆರ್ ಟಿಸಿಯಿಂದ ನೂತನ ಶ್ರೇಣಿಯ ವಾಹನಗಳ ಸೇವೆಯನ್ನು ಪರಿಚಿಸಲಾಗುತ್ತಿದೆ. ಬಿಎಸ್ ವಿಐ-9600 ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಹಾಗೂ ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಸಂಚಾರ ಪರಿಚಯಿಸಲಾಗುತ್ತಿದೆ ಎಂದಿದೆ. https://kannadanewsnow.com/kannada/know-how-mysugar-factory-was-made-ashwath-narayan/ ನೂತನ ಶ್ರೇಣಿಯ 2 ಮಾದರಿ ಬಸ್ಸಗಳಿಗೆ ನಿಗಮವು ತಮ್ಮಿಂದ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸವನ್ನು ನಿರೀಕ್ಷಿಸುತ್ತಿದೆ. ಉತ್ತಮ ಟ್ಯಾಗ್ ಲೈನ್ ನೊಂದಿಗೆ…

Read More

ಬೆಂಗಳೂರು: ರೌಡಿ ಶೀಟರ್ ಸೈಲೆಂಟ್ ಸುನಿಲ್ ಆಯೋಜಿಸಿದ್ದಂತ ಕಾರ್ಯಕ್ರಮದಲ್ಲಿ ಬಿಜೆಪಿಯ ನಾಯಕರು ( BJP Leader ) ಭಾಗಿಯಾಗಿದ್ದರು. ಈಗ ಇದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಏನು ಹೇಳಿದರು ಅಂತ ಮುಂದೆ ಓದಿ. ನಗರದಲ್ಲಿ ಇಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾನೂನಿನ ಚೌಕಟ್ಟಿನಲ್ಲಿ ಬದುಕಲು ಅವರಿಗೂ ಅವಕಾಶ ಕೊಡೋಣ. ಕಾನೂನು ಎಲ್ಲರಿಗೂ ಅನ್ವಯ ಆಗುತ್ತದೆ. ಕಾನೂನು ಏನಾದರೂ ತಪ್ಪು ಮಾಡಿದ್ದರೇ ತಪ್ಪೇ ಎಂದರು. https://kannadanewsnow.com/kannada/sc-stays-andhra-hcs-march-order-directing-state-to-develop-amaravati-as-capital/ ಸಮಾಜದಲ್ಲಿ ಎಲ್ಲರಿಗೂ ಒಳ್ಳೆಯ ರೀತಿಯಲ್ಲಿ ಬದುಕಲು ಅವಕಾಶವಿದೆ. ಅದಕ್ಕೆ ಯಾವುದೇ ರೀತಿಯ ನಾಮಕರಣ ಮಾಡುವುದು ತಪ್ಪು. ಬದುಕಲು ಅವಕಾಶ ಕೊಡದೇ ಬರಿ ನಿಂದಿಸುವ ಕೆಲಸ ಆಗಬಾರದು. ಚಾರ್ಜ್ ಶೀಟ್, ಶಿಕ್ಷೆ ಆಗಿದ್ದರೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಹೇಳಿದರು. ಈ ಮೂಲಕ ರೌಡಿಶೀಟರ್ ಬಗ್ಗೆ ಸಚಿವರು ಸಾಫ್ಟ್ ಕಾರ್ನರ್ ತೊರಿಸಿದ್ದಾರೆ. ಮತ್ತೊಂದೆಡೆ ಗೃಹ ಸಚಿವ ಅರಗ ಜ್ಞಾನೇಂದ್ರ ರೌಡಿ…

Read More

ಬೆಂಗಳೂರು: ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರಿಗೆ ಅನುಪಾತ ಗಳಿಕೆ ರಜೆ ಸೌಲಭ್ಯವನ್ನು, ನಗಧೀಕರಣ ಸೌಲಭ್ಯವನ್ನು ನೀಡಲು ಕಾಲೇಜು ಶಿಕ್ಷಣ ಇಲಾಖೆ ಅನುಮತಿಸಿದೆ. https://kannadanewsnow.com/kannada/bigg-news-cm-bommai-arrives-in-delhi-this-evening-will-he-get-a-green-signal-for-cabinet-expansion/ ಈ ಕುರಿತಂತೆ ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಆದೇಶ ಹೊರಡಿಸಿದ್ದು, ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಆಡಳಿತ ಮಂಡಳಿಗಳು ನೇಮಕ ಮಾಡಿಕೊಂಡಿರುವ ಪ್ರಭಾರ ಪ್ರಾಂಶುಪಾಲರುಗಳಿಗೆ ಇಲಾಖೆ, ಸರ್ಕಾರದಿಂದ ಅನುಮೋದನೆ ನೀಡುತ್ತಿಲ್ಲವಾದ್ದರಿಂದ ಹಾಗೂ ಯಾವುದೇ ಹೆಚ್ಚುವರಿ ಆರ್ಥಿಕ ಸೌಲಭ್ಯಗಳನ್ನು ನೀಡದೇ ಇರುವುದರಿಂದ ಅವರುಗಳಿಗೆ ಅನುಪಾತ ಗಳಿಕೆ ರಜೆಯ ಸೌಲಭ್ಯ ಮತ್ತು ಅದರ ನಗದೀಕರಣ ಸೌಲಭ್ಯವನ್ನು ಸಂಬಂಧಪಟ್ಟ ಆಡಳಿತ ಮಂಡಳಿಯು ಭರಿಸಲು ತಿಳಿಸಿರುವಂತೆ ಪತ್ರದಲ್ಲಿ ನಿರ್ದೇಶಿಲಲಾಗಿದೆ ಎಂದಿದ್ದಾರೆ. https://kannadanewsnow.com/kannada/sc-stays-andhra-hcs-march-order-directing-state-to-develop-amaravati-as-capital/ ದಿನಾಂಕ 08-08-2022ರಂದು ಅನುದಾನಿತ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಮತ್ತು ಪ್ರಭಾರ ಪ್ರಾಂಶುಪಾಲರುಗಳಿಗೆ ಅನುಪಾತ ಗಳಿಕೆ ರಜೆ ಮಂಜೂರಾತಿ ಸಂಬಂಧ ಸರ್ಕಾರಕ್ಕೆ ಮಾರ್ಗದರ್ಶನ ನೀಡುವಂತೆ ಪತ್ರ ಸಲ್ಲಿಸಲಾಗಿದೆ. https://kannadanewsnow.com/kannada/know-how-mysugar-factory-was-made-ashwath-narayan/ ಈ ಹಿನ್ನಲೆಯಲ್ಲಿ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಮಂಜೂರಾಗಿರುವುದಿಲ್ಲ. ಕಾಲೇಜು…

Read More

ಬೆಂಗಳೂರು : ಸಂವಿಧಾನವನ್ನು ತಿರುಚಿರುವುದು ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮೈಸೂರಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಸಂವಿಧಾನವನ್ನು ತಿರುಚಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಸಂವಿಧಾನವನ್ನು ಗಾಳಿಗೆ ತೂರಿ ತುರ್ತು ಪರಿಸ್ಥಿತಿಯನ್ನು ಹೇರಿದರು. ವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಎಲ್ಲರನ್ನೂ ಜೈಲಿಗೆ ಹಾಕಿದ ಕಾಂಗ್ರೆಸ್ ಪಕ್ಷ ದಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದರು. https://kannadanewsnow.com/kannada/bigg-news-cm-bommai-arrives-in-delhi-this-evening-will-he-get-a-green-signal-for-cabinet-expansion/ ದೆಹಲಿ ಭೇಟಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಅವರಿನ್ನೂ ಸಮಯ ನೀಡಿಲ್ಲ. ಸಮಯ ನೀಡಿದರೆ ಭೇಟಿಯಾಗುತ್ತೇನೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗುವುದಾಗಿ ತಿಳಿಸಿದರು. https://kannadanewsnow.com/kannada/sc-stays-andhra-hcs-march-order-directing-state-to-develop-amaravati-as-capital/

Read More

ಬೆಂಗಳೂರು: ನಗರದಲ್ಲಿ ನಡೆದಿದ್ದಂತ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಸಂಬಂಧ ಕೆಲ ಅಧಿಕಾರಿಗಳನ್ನು ಚುನಾವಣಾ ಆಯೋಗವು ಅಮಾನತುಗೊಳಿಸಿದೆ. ಈ ಬೆನ್ನಲ್ಲೇ, ರಾಜ್ಯ ಸರ್ಕಾರದಿಂದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ( IAS Officer ) ಹೆಚ್ಚುವರಿ ಹೊಣೆಗಾರಿಕೆ ನೀಡಿದೆ. https://kannadanewsnow.com/kannada/bigg-news-cm-bommai-arrives-in-delhi-this-evening-will-he-get-a-green-signal-for-cabinet-expansion/ ಈ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ಸ್ಪೆಷಲ್ ಕಮೀಷನರ್ ಆಗಿದ್ದಂತ ಐಎಎಸ್ ಅಧಿಕಾರಿ ಡಾ. ಹರೀಶ್ ಕುಮಾರ್ ಕೆ ಅವರಿಗೆ ಬಿಬಿಎಂಪಿಯ ಸ್ಪೆಷಲ್ ಕಮೀಷನರ್ ( ಆಡಳಿತಾಧಿಕಾರಿ) ಆಗಿ ಹೆಚ್ಚುವರಿ ಹೊಣೆಗಾರಿಕೆ ನೀಡಿದೆ. https://kannadanewsnow.com/kannada/sc-stays-andhra-hcs-march-order-directing-state-to-develop-amaravati-as-capital/ ಇನ್ನೂ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಸಿಇಓ ಆಗಿದ್ದಂತ ಸಂಗಪ್ಪ ಅವರಿಗೆ, ಬೆಂಗಳೂರು ನಗರ ಜಿಲ್ಲಾಧಿಕಾರಿಯ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಿ ಆದೇಶಿಸಿದೆ.

Read More

ಭದ್ರಕಾಳಿ ಮಾಂತ್ರಿಕ ಜ್ಯೋತಿಷ್ಯರು ಶ್ರೀ ದುರ್ಗಪ್ಪ ಕೊಳ್ಳೇಗಾಲ 8088449514 ನಿಮ್ಮ ಜೀವನದ ಸಮಸ್ಯೆಗಳಾದ,ಆಸ್ತಿ ಕಲಹ ,ತುಂಬಾ ದಿನಗಳ ಅನಾರೋಗ್ಯ ಸಮಸ್ಯೆ,ಉದ್ಯೋಗದಲ್ಲಿ ಶತ್ರುಕಾಟ ಸಮಸ್ಯೆ, ವಿವಾಹ ವಿಳಂಬ , ಮಾಟ-ಮಂತ್ರ, ಸ್ತ್ರೀ-ವಶೀಕರಣ,ಪುರುಷ-ವಶೀಕರಣ,ಕುಟುಂಬ ಕಲಹ , ವ್ಯಾಪಾರ ಅಭಿವೃದ್ಧಿ, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ದುಷ್ಟ ಶಕ್ತಿ ಬಾದೆ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಕೊಳ್ಳೇಗಾಲದ ಆದಿದೈವಗಳ ದಿವ್ಯಶಕ್ತಿಯಿಂದ -ಪುರಾತನ ಯಂತ್ರ-ಮಂತ್ರ ವಿಧಾನಗಳಿಂದ ಸುಧೀರ್ಘವಾಗಿ 2 ದಿನ ಪೂಜೆ ನೆರವೇರಿಸಿ ಪರಿಹಾರ ನೀಡುತ್ತಾರೆ. ಇಂದೇ ಕರೆ ಮಾಡಿ 📞+91 8088449514 ಬರುವಮುನ್ನ ಭೇಟಿಯ ಸಮಯ ನಿಗದಿಪಡೆಸಿಕೊಳ್ಳಿ. ಶನಿವಾರ ಮತ್ತು ಭಾನುವಾರ ಈಗ ಬೆಂಗಳೂರಿನಲ್ಲಿ ಸಿಗುತ್ತಾರೆ. ಮೇಷ ರಾಶಿ : ನಿಮ್ಮ ಅಹಾರ ಕ್ರಮದ ಬಗ್ಗೆ, ವಿಶೇಷವಾಗಿ ಮೈಗ್ರೇನ್ ರೋಗಿಗಳು ಸೂಕ್ತ ಎಚ್ಚರ ತೆಗೆದುಕೊಳ್ಳಬೇಕು. ಅವರು ತಮ್ಮ ಊಟ ತಪ್ಪಿಸಿಕೊಂಡಲ್ಲಿ ಅದು ಅವರಿಗೆ ಅನಗತ್ಯ ಭಾವನಾತ್ಮಕ ಒತ್ತಡವನ್ನು ಉಂಟುಮಾಡಬಹುದು. ಈ ರಾಶಿಚಕ್ರದ ಕೆಲವು ಜನರಿಗೆ ಇಂದು ಮಕ್ಕಳ ಬದಿಯಿಂದ ಆರ್ಥಿಕ…

Read More

ಮೈಸೂರು: ನವೆಂಬರ್ 29 ರಂದು ನವದೆಹಲಿಗೆ ತೆರಳಲಿದ್ದು, ಹಿರಿಯ ವಕೀಲರಾದ ಮುಕುಲ್ ರೋಹಟಗಿಯವರನ್ನು ಭೇಟಿಯಾಗಲಿದ್ದು, ಗಡಿವಿಚಾರದ ಬಗ್ಗೆ ಚರ್ಚೆ ಹಾಗೂ ಕೇಂದ್ರ ಕೈಗಾರಿಕಾ ಸಚಿವರು, ಜಲಸಂಪನ್ಮೂಲ ಸಚಿವರನ್ನೂ ಸಹ ಭೇಟಿಯಾಗುವ ಉದ್ದೇಶವಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಮಾಧ್ಯಮದವರೊಂದಿಗೆ ಮಾತನಾಡಿ, ಮಹಾರಾಷ್ಟ್ರದೊಂದಿಗಿನ ಗಡಿವಿವಾವಕ್ಕೆ ಸಂಬಂಧಪಟ್ಟಂತೆ ಇದೇ 30 ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿಗಳಾದ ಶಿವರಾಜಪಾಟೀಲ್ ಅವರನ್ನು ನೇಮಿಸಲಾಗಿದ್ದು, ಸಭೆ ಕೂಡ ನಡೆಸಲಾಗಿದೆ. ನವೆಂಬರ್ 30 ರಂದು ಗಡಿ ವಿಚಾರದ ಬಗ್ಗೆ ಕಾನೂನು ಸಮರಕ್ಕೆ ರಾಜ್ಯ ಸಿದ್ಧವಿದ್ದು, ರಾಜ್ಯದ ನಿಲುವು, ಕಾನೂನುಗಳ ಬಗ್ಗೆ ವಾದ ಮಂಡಿಸಲಾಗುವುದು. ಮಹಾರಾಷ್ಟ್ರದ ಗಡಿಭಾಗದ ಗ್ರಾಮದ ಜನರು, ಕರ್ನಾಟಕಕ್ಕೆ ಸೇರುವುದಾಗಿ ಮನವಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯ ಸಧ್ಯಕ್ಕೆ ನ್ಯಾಯಾಲಯದಲ್ಲಿರುವುದರಿಮದ ಈ ವಿಷಯದ ಕುರಿತು…

Read More


best web service company