Author: kannadanewsnow

ತೆಲಂಗಾಣ : ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರ ಬೆಂಗಾವಲು ಪಡೆಗೆ ತೆರಳುತ್ತಿದ್ದ ವೇಳೆ ಮಹಿಳಾ ಪೇದೆಯೊಬ್ಬರು ಕಾರಿನಿಂದ ಕೆಳಗೆ ಬಿದ್ದಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಕೆಸಿಆರ್ ಅವರ ಇತ್ತೀಚಿನ ವಾರಂಗಲ್ ಭೇಟಿಯ ವೇಳೆ ಈ ಘಟನೆ ನಡೆದಿದೆ. ಘಟನೆ ವೇಳೆ ಮಹಿಳಾ ಪೇದೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಸಿಎಂ ಕೆಸಿಆರ್ ಕೆಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜನಾಂವ್ ನಿಂದ ವಾರಂಗಲ್‌ಗೆ ತೆರಳುತ್ತಿದ್ದರು. ಬೆಂಗಾವಲು ಪಡೆಯ ಭಾಗವಾಗಿದ್ದ ಮಹಿಳಾ ಕಂದಾಯ ನಿರೀಕ್ಷಕರು ಸಿಎಂ ಅವರ ವಾಹನದ ಹಿಂದೆಯೇ ಕಾರಿನಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಈ ವೇಳೆ ಮಹಿಳಾ ಪೇದೆ ಸಂಪೂರ್ಣವಾಗಿ ಕಾರನ್ನು ಹತ್ತಲು ಸಾಧ್ಯವಾಗದೆ ನಡುರಸ್ತೆಯಲ್ಲೇ ಜಾರಿ ಬಿದ್ದಿದ್ದಾರೆ. ವೀಡಿಯೋದಲ್ಲಿ, ಕೆಲವೊಂದು ವಾಹನಗಳು ಒಂದರ ಹಿಂದೆ ಹೋಗಲು ಪ್ರಾರಣಭಿಸಿದವು. ಈ ವೇಳೆ ಅವುಗಳಲ್ಲಿ ಒಂದು ವಾಹನದಲ್ಲಿ ಮಹಿಳಾ ಪೇದೆ ಬಿದ್ದರು. ಕೂಡಲೇ ಅಲ್ಲಿದ್ದ ಕೆಲವರು ಆಕೆಯ ಸಹಾಯಕ್ಕೆ ಧಾವಿಸಿದರು. ಆದರೆ, ಮುಖ್ಯಮಂತ್ರಿಗಳ ಬೆಂಗಾವಲು ಪಡೆ ತಕ್ಷಣವೇ ಹೊರಟಿದ್ದರಿಂದ ಆಕೆ ಬೇಗ ಎದ್ದು ವಾಹನ ಹತ್ತಿದರು. A…

Read More

ದೆಹಲಿ: ಇಂದು (ಅಕ್ಟೋಬರ್ 2)ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ. ಈ ಹಿನ್ನೆಲೆ, ರಾಷ್ಟ್ರಪತಿ ದ್ರೌಪದಿ ಮುರ್ಮು(President Murmu) ಮತ್ತು ಉಪಾಧ್ಯಕ್ಷ ಜಗದೀಪ್ ಧನಕರ್(Jagdeep Dhankhar) ಅವರು ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ರಾಷ್ಟ್ರಪತಿ ಮುರ್ಮು ಮತ್ತು ಉಪಾಧ್ಯಕ್ಷ ಧಂಖರ್ ಇಬ್ಬರೂ ರಾಜ್‌ಘಾಟ್‌ಗೆ ಭೇಟಿ ನೀಡಿ ಗಾಂಧಿಯವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ನಂತ್ರ, ದೆಹಲಿಯಲ್ಲಿ ಶಾಸ್ತ್ರಿಯವರ ಸ್ಮಾರಕವಾದ ವಿಜಯ್ ಘಾಟ್‌ಗೆ ಭೇಟಿ ನೀಡಿದರು. President Droupadi Murmu paid tributes to Shri Lal Bahadur Shastri, former Prime Minister of India, at Vijay Ghat on his birth anniversary. pic.twitter.com/C9OKiAis7J — President of India (@rashtrapatibhvn) October 2, 2022 आज गांधी जयंती के पावन अवसर पर माननीय उपराष्ट्रपति…

Read More

ಜಾರ್ಖಂಡ್‌: ಇಲ್ಲಿನ ಹಜಾರಿಬಾಗ್ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಶನಿವಾರ ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 110 ಕಿಮೀ ದೂರದಲ್ಲಿರುವ ಬಹುಮಾರ್ ಬಳಿ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಚೋಥೆ ತಿಳಿಸಿದ್ದಾರೆ. ಯಾತ್ರಾರ್ಥಿಗಳನ್ನು ಹೊತ್ತ ಈ ಬಸ್ ಗಯಾದಿಂದ ಹಜಾರಿಬಾಗ್ ಮೂಲಕ ಒಡಿಶಾಗೆ ತೆರಳುತ್ತಿತ್ತು. ಗಾಯಾಳುಗಳನ್ನು ಹಜಾರಿಬಾಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದ್ದು, ಐವರ ಸ್ಥಿತಿ ಗಂಭೀರವಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. https://kannadanewsnow.com/kannada/bigg-news-contesting-from-varuna-constituency-what-did-former-cm-siddaramaiah-say/ https://kannadanewsnow.com/kannada/this-is-scary-bengaluru-man-receives-%e2%82%b9-22-lakh-repair-estimate-for-a-car-worth-%e2%82%b9-11-lakh/ https://kannadanewsnow.com/kannada/bigg-breaking-news-d-k-ed-issues-notice-to-shivakumar-to-appear-before-it-on-october-7/

Read More

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ವರುಣನ ಅಬ್ಬರಕ್ಕೆ ಜರು ತತ್ತರಿಸಿದ್ದರು. ಈ ಎಫೆಕ್ಟ್‌ ವಾಹನಗಳಿಗೂ ತಟ್ಟಿದೆ. ಭಾರೀ ಮಳೆಯಿಂದ ಹಾನಿಯಾದ 11 ಲಕ್ಷ ರೂ. ಮೌಲ್ಯದ ಫೋಕ್ಸ್‌ವ್ಯಾಗನ್ ಕಾರೊಂದು ಕೆಟ್ಟಿದೆ. ಹೀಗಾಗಿ ಕಾರಿನ ಮಾಲೀಕ ಅನಿರುದ್ಧ ಗಣೇಶ್ ಅದನ್ನು ರಿಪೇರಿಗೆಂದು ಕಾರು ಸರ್ವೀಸ್‌ ಕೇಂದ್ರಕ್ಕೆ ಬಿಟ್ಟದ್ದಾರೆ. ಸುಮಾರು 20 ದಿನಗಳ ನಂತರ ಕಾರು ಸರ್ವೀಸ್‌ ಕೇಂದ್ರವು ಬಿಲ್‌ ಕಳುಹಿಸಿದೆ. ಇದನ್ನು ನೋಡಿದ ಕಾರು ಕಾಲೀಕನಿಗೆ ಶಾಕ್‌ ಅಗಿದೆ. ಕಾರಣ ಅದರ ಬಿಲ್‌ 22 ಲಕ್ಷ ರೂ. ಆಗಿತ್ತು. ಅನಿರುದ್ಧ ಅವರು ತಮ್ಮ ಬಿಲ್‌ನ ಇನ್‌ವಾಯ್ಸ್‌ಅನ್ನು ತಮ್ಮ ಲಿಂಕ್‌ಡಿನ್‌ ಪ್ರೊಫೈಲ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕಾರಿನ ವಿಮಾ ಕಂಪನಿಯು ಒಟ್ಟು ನಷ್ಟವೆಂದು ಬರೆದು ಹಣವನ್ನು ಂಗ್ರಹಿಸುವುದಾಗಿ ಭರವಸೆ ನೀಡಿದ್ದರೂ, ಸರ್ವೀಸ್‌ ಕೇಂದ್ರವು ಕಾರನ್ನು ವಾಪಸ್‌ ಪಡೆಯಲು ₹ 44,840 ಪಾವತಿಸುವಂತೆ ಕೇಳಿತು. ಅಷ್ಟೇ ಅಲ್ಲದೇ, ಕಾರಿನ ಹಾನಿಯ ಬಗ್ಗೆ…

Read More

ಪುಣೆ: ಪುಣೆಯ ಚಾಂದನಿ ಚೌಕ್ ಪ್ರದೇಶದಲ್ಲಿರುವ ಹಳೆಯ ಸೇತುವೆಯನ್ನು ಸ್ಫೋಟಕ ಬಳಸಿ ಭಾನುವಾರ ಮುಂಜಾನೆ 1 ಗಂಟೆಗೆ ಕೆಡವಲಾಗಿದೆ. ಈ ಸೇತುವೆಯನ್ನು 90 ರ ದಶಕದ ಆರಂಭದಲ್ಲಿ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ (NH4) ನಗರದ ಚಾಂದನಿ ಚೌಕ್ ಪ್ರದೇಶದಲ್ಲಿ ನಿರ್ಮಿಸಲಾಯಿತು. ಟ್ರಾಫಿಕ್​ ಜಾಮ್​ಗೆ ಕಾರಣವಾಗಿದ್ದ ಹಾಗೂ ಚಾಂದಿನಿ ಚೌಕ್ ಅಭಿವೃದ್ಧಿ ಯೋಜನೆಯ ಭಾಗವಾಗಿ ಸೇತುವೆಯನ್ನು ನೆಲಸಮಗೊಳಿಸಲಾಗಿದೆ. ಜಂಕ್ಷನ್‌ನಲ್ಲಿ ಬಹು ಹಂತದ ಮೇಲ್ಸೇತುವೆ ನಿರ್ಮಾಣವಾಗಲಿದ್ದು, ಆ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ. Pune’s Chandani Chowk bridge demolished to help with city’s traffic woes Read @ANI Story | https://t.co/4iuYEMm2MO#chandanichowkbridge #Pune #Maharashtra #NH4 pic.twitter.com/prRYhzGOjS — ANI Digital (@ani_digital) October 2, 2022 “ಭಾನುವಾರ ಮುಂಜಾನೆ 1 ಗಂಟೆಗೆ ನಿಯಂತ್ರಿತ ಸ್ಫೋಟ ಬಳಸುವ ಮೂಲಕ ಸೇತುವೆಯನ್ನು ಕೆಡವಲಾಯಿತು ಮತ್ತು ಎಲ್ಲವನ್ನೂ ಯೋಜನೆಯ ಪ್ರಕಾರ ಕಾರ್ಯಗತಗೊಳಿಸಲಾಯಿತು. ಈಗ, ನಾವು ಸ್ಥಳದಿಂದ ಅದರ ಅವಶೇಷಗಳನ್ನು ತೆರವುಗೊಳಿಸಲು ಅಗೆಯುವ ಯಂತ್ರಗಳು, ಫೋರ್ಕ್‌ನೈಲ್‌ಗಳು ಮತ್ತು…

Read More

ಫ್ಲೋರಿಡಾ: ಯುನೈಟೆಡ್ ಸ್ಟೇಟ್ಸ್‌ಗೆ ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಚಂಡಮಾರುತಗಳಲ್ಲಿ ಒಂದಾದ ಇಯಾನ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ಶನಿವಾರ 40 ಕ್ಕಿಂತ ಹೆಚ್ಚಾಗಿದೆ. ಈ ಹಿನ್ನೆಲೆ, ಅಧ್ಯಕ್ಷ ಜೋ ಬೈಡೆನ್ ವಾರದ ನಂತರ ವಿನಾಶದ ಸಮೀಕ್ಷೆಗಾಗಿ ಫ್ಲೋರಿಡಾಕ್ಕೆ ತೆರಳಲಿದ್ದಾರೆ. ಬುಧವಾರ ಫ್ಲೋರಿಡಾಗೆ ಅಪ್ಪಳಿಸಿದ ಪ್ರಬಲ ಚಂಡಮಾರುತ ಇಲ್ಲಿಯವರೆಗೂ 40ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿವೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ. ಚಂಡಮಾರುತದ ಅಬ್ಬರಕ್ಕೆ ನೂರಾರು ಮನೆಗಳು, ರೆಸ್ಟೋರೆಂಟ್‌ಗಳು ಹಾನಿಗೊಳಗಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬುಧವಾರ ಫ್ಲೋರಿಡಾಕ್ಕೆ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಟ್ವೀಟ್ ಮಾಡಿ ತಿಳಿಸಿದ್ದಾರೆ. https://kannadanewsnow.com/kannada/breaking-news-actor-dhruva-sarja-prerana-blessed-with-a-baby-girl/ https://kannadanewsnow.com/kannada/watch-viedo-modern-day-sati-savitri-saves-yamrajs-life-after-he-suffers-sudden-heart-attack-at-railway-station/ https://kannadanewsnow.com/kannada/127-killed-in-indonesia-stampede-after-football-fans-invade-pitch-cops/

Read More

ಜಕಾರ್ತ: ಪೂರ್ವ ಜಾವಾ ಪ್ರಾಂತ್ಯದಲ್ಲಿ ನಡೆದ ಫುಟ್‌ಬಾಲ್ ಪಂದ್ಯವೊಂದರಲ್ಲಿ ಅಭಿಮಾನಿಗಳು ಪಿಚ್‌ಗೆ ನುಗ್ಗಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತಕ್ಕೆ 127 ಜನರು ಸಾವನ್ನಪ್ಪಿದ್ದಾರೆ ಮತ್ತು 180 ಜನರು ಗಾಯಗೊಂಡಿದ್ದಾರೆ ಎಂದು ಇಂಡೋನೇಷ್ಯಾ ಪೊಲೀಸರು ತಿಳಿಸಿದ್ದಾರೆ. ಇಲ್ಲಿ ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವಿನ ಪಂದ್ಯ ಮುಗಿದ ನಂತರ, ಸೋತ ತಂಡದ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದಾರೆ. ಆಗ ಅಭಿಮಾನಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇದ್ರಿಂದ ನೂಕುನುಗ್ಗಲು, ಕಾಲ್ತುಳಿತ ಉಂಟಾಗಿದ್ದು, 127 ಜನರ ಸಾವಿಗೆ ಕಾರಣವಾಗಿದೆ. ಘಟನಾ ಸ್ಥಳದಲ್ಲೇ ಇಬ್ಬರು ಪೊಲೀಸರು, 36 ಮಂದಿ ಸಾವನ್ನಪ್ಪಿದರೆ, ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೂರ್ವ ಜಾವಾ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಘಟನೆಯ ಹಿಂಸಾತ್ಮಕ ದೃಶ್ಯಾವಳಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ವಿಡಿಯೋದಲ್ಲಿ, ಹಲವಾರು ಮಂದಿ ಅಭಿಮಾನಿಗಳು ಕ್ರೀಡಾಂಗಣದೊಳಗೆ ನುಗ್ಗುವುದನ್ನು ನೋಡಬಹುದು. #WATCH | At least 127 people…

Read More

ದೆಹಲಿ: ವಾಟ್ಸಾಪ್( WhatsApp) ಆಗಸ್ಟ್‌ ಒಂದೇ ತಿಂಗಳಿನಲ್ಲಿ 2.3 ಭಾರತೀಯ ಖಾತೆಗಳನ್ನು ನಿಷೇಧಿಸಿದೆ. ಅದರಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿ ಪಡೆಯುವ ಮೊದಲೇ ಪೂರ್ವಭಾವಿಯಾಗಿ ತೆಗೆದುಹಾಕಲಾಗಿದೆ ಎಂದು ವಾಟ್ಸಾಪ್ ಶನಿವಾರ ತಿಳಿಸಿದೆ. ಇದು ಹಿಂದಿನ ತಿಂಗಳಲ್ಲಿ ಮಾಡಲಾದ ನಿಷೇಧಕ್ಕಿಂತ ಕಡಿಮೆಯಾಗಿದೆ. ಕಳೆದ ಜುಲೈನಲ್ಲಿ 2.3 ಮಿಲಿಯನ್ ಭಾರತೀಯ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿತ್ತು. ನಂತ್ರ, ಆಗಸ್ಟ್ 1, 2022 ರಿಂದ ಆಗಸ್ಟ್ 31ರ ನಡುವೆ 2,328,000 WhatsApp ಖಾತೆಗಳನ್ನು ನಿಷೇಧಿಸಲಾಗಿದೆ. ಈ ಖಾತೆಗಳಲ್ಲಿ 1,008,000 ಬಳಕೆದಾರರಿಂದ ಯಾವುದೇ ವರದಿ ಪಡೆಯುವ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ” ಎಂದು WhatsApp ಮಾಸಿಕ ವರದಿಯಲ್ಲಿ ತಿಳಿಸಿದೆ. ತನ್ನ ಕುಂದುಕೊರತೆ ಪರಿಹಾರ ಚಾನೆಲ್ ಮೂಲಕ ಮತ್ತು ಉಲ್ಲಂಘನೆಗಳನ್ನು ಪತ್ತೆಹಚ್ಚಲು ತನ್ನದೇ ಆದ ಕಾರ್ಯವಿಧಾನದ ಮೂಲಕ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ ಜೂನ್‌ನಲ್ಲಿ 2.2 ಮಿಲಿಯನ್ ಭಾರತೀಯ ಖಾತೆಗಳನ್ನು WhatsApp ನಿಷೇಧಿಸಿದೆ. ಇದಕ್ಕೂ ಮೊದಲು, ಜೂನ್‌ನಲ್ಲಿ 2.2 ಮಿಲಿಯನ್ ಭಾರತೀಯ ಖಾತೆಗಳನ್ನು WhatsApp ನಿಷೇಧಿಸಿದೆ. ನಂತ್ರ,…

Read More

ಪುಣೆ: ದೇಶದಾದ್ಯಂತ ಹೆಚ್ಚಿನ ನಗರಗಳಲ್ಲಿನ ಸಂಚಾರ ದಟ್ಟಣೆ ಸಾಮಾನ್ಯ. ಟ್ರಾಫಿಕ್‌ ಜಾಮ್‌ನಿಂದ ಜನರು ಬೇಸತ್ತಿದ್ದಾರೆ. ಈ ಎಫೆಕ್ಟ್‌ Mercedes-Benz ಇಂಡಿಯಾ ಸಿಇಒ ಮಾರ್ಟಿನ್ ಶ್ವೆಂಕ್ ಅವರಿಗೂ ಅನುಭವವಾಗಿದೆ. ಹೌದು, ಮಾರ್ಟಿನ್ ಶ್ವೆಂಕ್ ಅವರು ಪುಣೆಯ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ತಮ್ಮ ಮರ್ಸಿಡಿಸ್ ಎಸ್-ಕ್ಲಾಸ್‌ ಅನ್ನು ಬಿಟ್ಟು ತಾವು ಹೋಗಬೇಕಾದ ಸ್ಥಳಕ್ಕೆ ಹೋಗಲು ಆಟೋ ರಿಕ್ಷಾ ಹುಡುಕಿಕೊಂಡು ಕಾಲ್ನಡಿಗೆಯಲ್ಲೇ ಒಂದು ಕಿಮೀ ದೂರ ನಡೆದುಕೊಂಡೇ ಹೋಗಿದ್ದಾರೆ. ಆಟೋ ಸವಾರಿಯ ಫೋಟೋ ತೆಗೆದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಟ್ರಾಫಿಕ್‌ ಜಾಮ್‌ನಿಂದ ಹೊರಬರಲು ಆಟೋ ಆಟೋ ರಿಕ್ಷಾ ಏರಬೇಕಾಯಿತು ಎಂದು ಬರೆದುಕೊಂಡಿದ್ದಾರೆ. View this post on Instagram A post shared by Martin Schwenk (@martins_masala) “ನಿಮ್ಮ ಎಸ್-ಕ್ಲಾಸ್ ಅದ್ಭುತವಾದ ಪುಣೆ ರಸ್ತೆಗಳಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೆ ನೀವು ಏನು ಮಾಡುತ್ತೀರಿ? ಬಹುಶಃ ಕಾರಿನಿಂದ ಇಳಿದು, ಕೆಲವು ಕಿಮೀಗಳವರೆಗೆ ನಡೆಯಲು ಪ್ರಾರಂಭಿಸಿ ನಂತರ ರಿಕ್ಷಾವನ್ನು ಹಿಡಿಯಬಹುದೇ?” ಎಂದು…

Read More

ನ್ಯೂಯಾರ್ಕ್ (ಯುಎಸ್): ಮಹಾತ್ಮಾ ಗಾಂಧಿಯವರ 153 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರ ಅಹಿಂಸಾ (ಅಹಿಂಸೆ) ತತ್ವಗಳನ್ನು ಅನುಸರಿಸುವ ಮೂಲಕ ಹಿಂಸಾಚಾರವನ್ನು ದೂರವಿಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್(Antonio Guterres) ಭಾನುವಾರ ಜನರನ್ನು ಒತ್ತಾಯಿಸಿದ್ದಾರೆ. “ಅಂತರರಾಷ್ಟ್ರೀಯ ಅಹಿಂಸಾ ದಿನದಂದು, ನಾವು ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಆಚರಿಸುತ್ತೇವೆ ಮತ್ತು ಪ್ರತಿಯೊಬ್ಬರೂ ಹಂಚಿಕೊಳ್ಳುವ ಶಾಂತಿ, ಗೌರವ ಮತ್ತು ಅಗತ್ಯ ಘನತೆಯ ಮೌಲ್ಯಗಳನ್ನು ನಾವು ಆಚರಿಸುತ್ತೇವೆ. ಈ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಂಸ್ಕೃತಿಗಳು ಮತ್ತು ಗಡಿಗಳಲ್ಲಿ ಕೆಲಸ ಮಾಡುವ ಮೂಲಕ ನಾವು ಇಂದಿನ ಸವಾಲುಗಳನ್ನು ಸೋಲಿಸಬಹುದು, ” ಎಂದು ಯುಎನ್ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ. ಗಾಂಧೀಜಿ ಅವರು 2 ನೇ ಅಕ್ಟೋಬರ್ 1869 ರಂದು ಜನಿಸಿದರು. ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ. https://kannadanewsnow.com/kannada/pm-modi-pays-homage-to-mahatama-gandhi-lal-bahadur-shastri-on-their-birth-anniversaries/ https://kannadanewsnow.com/kannada/bigg-news-construction-workers-note-applications-invited-for-free-bus-pass/ https://kannadanewsnow.com/kannada/bigg-news-parents-make-sense-even-in-death-sons-organ-donation-lights-up-the-lives-of-8-people/

Read More


best web service company