ನವದೆಹಲಿ : ಇಂದು ನಾಡಿನಾದ್ಯಂತ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಯುಗಾದಿ ಹಬ್ಬಕ್ಕೆ ನಾಡಿನ ಜನತಗೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಶುಭ ಕೋರಿದ್ದಾರೆ. ಟ್ವೀಟರ್ ನಲ್ಲಿ ಯುಗಾದಿ ಹಬ್ಬಕ್ಕೆ ಶುಭ ಕೋರಿರುವ ಪ್ರಧಾನಿ ಮೋದಿ ಅವರು, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. https://twitter.com/narendramodi/status/1638374252838789121?cxt=HHwWgoDR2fqs1rwtAAAA
Author: kannadanewslive
ಬೆಂಗಳೂರು : ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಬಿಗ್ ಶಾಕ್. ಬಿಜೆಪಿ ಎಂಎಲ್ ಸಿ ಬಾಬುರಾವ್ ಚಿಂಚನಸೂರ ಬೆನ್ನಲ್ಲೇ ಕಾಂಗ್ರೆಸ್ ಗೆ ಬಿಜೆಪಿಯ ಪ್ರಭಾವಿ ಮುಖಂಡರೊಬ್ಬರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಸಚಿವ ಬೈರತಿ ಬಸವರಾಜ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ರಾಜ್ಯ ವಿಧಾನ ಸಭೆ ಚುನಾವಣೆಗೆ ನೀತಿ ಸಂಹಿತೆ ಘೋಷಣೆಯಾದ ನಂತರ ಕೆ ಆರ್ ಪುರ ಬಿಜೆಪಿ ಶಾಸಕ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಕಾಂಗ್ರೇಸ್ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಇಬ್ಬರು ಬಿಜೆಪಿ ಎಂಎಲ್‌ಸಿಗಳು ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯಿಂದ ನಾಲ್ಕು ಬಾರಿ ಎಂಎಲ್‌ಸಿ ಆಗಿದ್ದ ಪುಟ್ಟಣ್ಣ ಅವರು ಕಳೆದ ವಾರ ಕಾಂಗ್ರೆಸ್‌ಗೆ ಸೇರಿದ್ದಾರೆ. ಇನ್ನೊಬ್ಬ ಬಿಜೆಪಿ ಎಂಎಲ್‌ಸಿ ಬಾಬುರಾವ್ ಚಿಂಚನಸೂರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಸೇರ್ಪಡೆಗೊಳ್ಳುವುದು ನಿಶ್ಚಿತವಾಗಿದೆ. https://kannadanewsnow.com/kannada/6-6-magnitude-earthquake-in-pakistan-and-afghanistan-11-dead-many-injured/
ಬೆಂಗಳೂರು: 1ನೇ ತರಗತಿಗೆ ಮಕ್ಕಳನ್ನು ಕೇಂದ್ರೀಯ ವಿದ್ಯಾಲಯ ಶಾಲೆಗಳಿಗೆ ( Kendriya Vidyalaya School – KVS ) ಸೇರಿಸಬೇಕು ಎಂಬುದು ಅನೇಕ ಮಕ್ಕಳ ಪೋಷಕರ ಕನಸು. ಈಗ ಮಾರ್ಚ್ 27ರಿಂದ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ 1ನೇ ತರಗತಿ ದಾಖಲಾತಿಗೆ ( 1st Standard Admission ) ಆನ್ ಲೈನ್ ಮೂಲಕ ಅರ್ಜಿ ( Online Application ) ಸಲ್ಲಿಕೆ ಆರಂಭವಾಗುತ್ತಿದೆ. ಈ ಬಗ್ಗೆ ಕೆವಿಎಸ್ ನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 25-03-2023ರಂದು 1ನೇ ತರಗತಿ ದಾಖಲಾತಿಗಾಗಿ ಅಧಿಸೂಚನೆ ಹೊರಡಿಸಲಾಗುತ್ತದೆ. ದಿನಾಂಕ 27-03-2023ರಂದು ಬೆಳಿಗ್ಗೆ 10ಗಂಟೆಯಿಂದ ಆನ್ ಲೈನ್ ಮೂಲಕ ದಾಖಲಾತಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ತಿಳಿಸಿದೆ. 1ನೇ ತರಗತಿ ದಾಖಲಾತಿಗೆ ಪೋಷಕರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-04-2023ರ ಸಂಜೆ 7 ಆಗಿರುತ್ತದೆ. ಆಯ್ಕೆಯಾದ ಮಕ್ಕಳ ಪಟ್ಟಿಯನ್ನು ದಿನಾಂಕ 20-04-2023ರಂದು ಪ್ರಕಟಿಸಲಾಗುತ್ತದೆ. ದಾಖಲಾತಿ ಪ್ರಕ್ರಿಯೆ ದಿನಾಂಕ 21-04-2023ರಿಂದ ಆರಂಭಗೊಳ್ಳಲಿದೆ. ದಿನಾಂಕ 28-04-2023ರಿಂದ ಎರಡನೇ ಪಟ್ಟಿಯ ದಾಖಲಾತಿ…
ಬೆಳಗಾವಿ : ಸೂಕ್ತ ದಾಖಲಾತಿಗಳಲ್ಲದೇ ಸಾಗಿಸಲಾಗುತ್ತಿದ್ದ 9 ಲಕ್ಷ ರೂಪಾಯಿ ನಗದು ಹಣವನ್ನು ಕಣಬರಗಿ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ(ಮಾ.21) ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಬೆಳಗಾವಿ ನಗರದಿಂದ ಅಂಕಲಗಿ ಕಡೆಗೆ ಹೊರಟಿದ್ದ ಕಾರನ್ನು ಕಣಬರಗಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದಾಗ ನಗದು ಪತ್ತೆಯಾಗಿದೆ. ನಗದು ಹಣವು ಖಾಸಗಿ ಫೈನಾನ್ಸ್ ಕಂಪನಿಗೆ ಸೇರಿದೆ. ಆದರೆ ಸದರಿ ಹಣಕ್ಕೆ ಸಂಬಂಧಿಸಿದಂತೆ ಸಮರ್ಪಕ ದಾಖಲೆಗಳನ್ನು ಅವರು ಒದಗಿಸಿರುವುದಿಲ್ಲ. ಇದಲ್ಲದೇ ಹಣ ಸಾಗಾಣಿಕೆಗೆ ಸಂಬಂಧಿಸಿದಂತೆ ಇರುವ ನಿಗದಿತ ಎಸ್.ಓ.ಪಿ.ಯನ್ನು ಕೂಡ ಪಾಲಿಸದಿರುವುದು ಕಂಡುಬಂದಿದೆ. ಸದರಿ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ನಿಯಮಾವಳಿ ಪ್ರಕಾರ ಮುಂದಿನ ಕ್ರಮವನ್ನು ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡದ ಕೆಲಸಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ಕ್ಕೆ ಸಂಬಂಧಪಟ್ಟಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಚುನಾವಣಾ ದೂರುಗಳನ್ನು ನಿರ್ವಹಿಸುವ ಸಂಬಂಧ ಈಗಾಗಲೇ ಜಿಲ್ಲಾ ದೂರು ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಜಗದೀಶ್, ಅವರನ್ನು ಜಿಲ್ಲಾ ಸಂಪರ್ಕ ಅಧಿಕಾರಿಯಾಗಿ(District contact officer) ನೇಮಕ ಮಾಡಲಾಗಿರುತ್ತದೆ. ಸದರಿ ಅಧಿಕಾರಿಯು ಚುನಾವಣಾ ಸಂಬಂಧ ಸ್ವೀಕೃತವಾಗುವ ಎಲ್ಲಾತರಹದ ದೂರುಗಳನ್ನು ಸಂಬಂಧಪಟ್ಟವರಿಗೆ ರವಾನಿಸಿ ನಿಗಧಿತ ಅವಧಿಯಲ್ಲಿ ವರದಿ ಪಡೆದುಕೊಂಡು ದೂರು ವಿಲೇವಾರಿ ಮಾಡುವ ಸಂಬಂಧ ಸೂಕ್ತ ಮೇಲ್ವಿಚಾರಣೆ ನಡೆಸುವ ಕಾರ್ಯನಿರ್ವಹಿಸಲು ಸೂಚಿಸಿ ಆದೇಶಿಸಲಾಗಿದೆ. ವಿಧಾನಸಭೆ ಚುನಾವಣೆ 2023ರ ಸಂಬಂಧ ದೂರುಗಳಿದ್ದಲ್ಲಿ, ಜಿಲ್ಲೆಯ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ ೦8119-1950 ಗೆ ಕರೆ ಮಾಡಿ ಅಥವಾ ಚುನಾವಣಾ ವಿಭಾಗಕ್ಕೆ ಭೇಟಿ ನೀಡಿ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುವಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ಲತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು : ಇಂದು ನಾಡಿನಾದ್ಯಂತ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಯುಗಾದಿ ಹಬ್ಬದ ದಿನವೇ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಹೂ, ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣು ಖರೀದಿಸಲು ಹೋದ ಗ್ರಾಹಕರಿಗೆ ಹೂ, ಹಣ್ಣುಗಳ ಬೆಲೆ ಕೇಳಿ ಶಾಕ್ ಆಗಿದೆ. ಹೂ, ಹಣ್ಣುಗಳ ಬೆಲೆಯಲ್ಲಿ ದುಪ್ಪಟ್ಟು ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಬೆಂಗಳೂರಿನ ಕೆ. ಆರ್. ಮಾರ್ಕೆಟ್ ನಲ್ಲಿ ಮಲ್ಲಿಗೆ ಹೂವು ಒಂದು ಮಾರಿಗೆ 150 ರೂ. ಇದ್ದರೆ, ಗುಲಾಬಿ 240 ರೂ.,ಕನಕಾಂಬರ ಮಾರು 150 ರೂ, ಒಂದು ಮಾರು ಸೇವಂತಿಗೆ 150 ರೂ, ಸುಗಂದ ರಾಜ ಕೆಜಿಗೆ 170 ರೂ. ತುಳಸಿ ಕಟ್ಟು ಒಂದಕ್ಕೆ 80 ರೂ. ಚೆಂಡೂ ಹೂ ಕೆಜಿಗೆ 80 ರೂ. ರುದ್ರಾಕ್ಷಿ ಹೂ ಕೆಜಿಗೆ 100 ರೂ. ಕಾಕಡ ಮಾರಿಗೆ 150 ರೂ. ಇದೆ. ಜೊತೆಗೆ ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದೆ. https://kannadanewsnow.com/kannada/bigg-news-notice-for-state-government-employees-online-nomination-for-sarvottam-seva-puraskar/
ಚಿತ್ರದುರ್ಗ : 2023ನೇ ಸಾಲಿನಲ್ಲಿ ಸವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಸಲ್ಲಿಸಲು ಇಚ್ಛಿಸುವ ಸರ್ಕಾರಿ ಅಧಿಕಾರಿ, ನೌಕರರು ಹಾಗೂ ಸಾರ್ವಜನಿಕರು ನಾಮನಿರ್ದೇಶನಗಳನ್ನು ಇದೇ ಮಾರ್ಚ್ 31ರೊಳಗಾಗಿ ಆನ್‍ಲೈನ್ ಮೂಲಕ ಮಾತ್ರವೇ ಸಲ್ಲಿಸಲು ಸೂಚಿಸಲಾಗಿದೆ. ರಾಜ್ಯ ಸರ್ಕಾರವು ಅತ್ಯುನ್ನತ ಸೇವೆಗೈದ, ಸಾಧನೆಗೈದ ರಾಜ್ಯ ಸರ್ಕಾರಿ ಅಧಿಕಾರಿ, ನೌಕಕರಿಗೆ (ಗ್ರೂಪ್ ಎ,ಬಿ,ಸಿ ಮತ್ತು ಡಿ) “ಸರ್ವೋತ್ತಮ ಸೇವಾ ಪ್ರಶಸ್ತಿ” ನೀಡಲು ತೀರ್ಮಾನಿಸಿದ್ದು, ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ, ರಾಜ್ಯಮಟ್ಟದ ಪ್ರಶಸ್ತಿ ಆಯ್ಕೆಗೆ ನಾಮ ನಿರ್ದೇಶನಗಳನ್ನು ಆನ್‍ಲೈನ್ ಜಾಲತಾಣ https://dparar.karnataka.gov.in/ ಅಥವಾ https://sarvothamaawards.karnataka.gov.in ದ ಮೂಲಕ ಮಾತ್ರವೇ ಸಲ್ಲಿಸಲು ಅವಕಾಶ ನೀಡಲಾಗಿದೆ. 2023ನೇ ಸಾಲಿನಲ್ಲಿ ಸವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಸಲ್ಲಿಸಲು ಇಚ್ಛಿಸುವ ಸರ್ಕಾರಿ ಅಧಿಕಾರಿ, ನೌಕರರು ಹಾಗೂ ಸಾರ್ವಜನಿಕರು ನಾಮನಿರ್ದೇಶನಗಳನ್ನು ನಿಗಧಿತ ಮಾರ್ಚ್ 31ರೊಳಗಾಗಿ ಆನ್‍ಲೈನ್ ಮೂಲಕ ಮಾತ್ರವೇ ಸಲ್ಲಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ. https://kannadanewsnow.com/kannada/breaking-news-9-killed-over-100-injured-as-powerful-earthquake-hits-pakistan/
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಜೀವನದಲ್ಲಿ ಪ್ರತಿಯೊಂದು ಕೂಡ ಯಶಸ್ಸನ್ನಗಳಿಸಬೇಕು ಮತ್ತು ಎಲ್ಲಾ ರೀತಿಯ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೆಂದರೆ ಈ ರೀತಿ ಪರಿಹಾರ ಮಾಡಿಕೊಳ್ಳುವುದು ಉತ್ತಮ. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿಯಾಗಬೇಕೆಂದರೆ ಕೆಲವೊಂದು ಉಪಾಯಗಳನ್ನ ಮಾಡಬೇಕು. ಬಿಳಿ ಎಕ್ಕದ ಗಿಡಕ್ಕೆ ಬಹಳಷ್ಟು ಮಹತ್ವವನ್ನು ನೀಡಲಾಗಿದೆ. ಬಿಳಿ ಎಕ್ಕದ ಗಿಡದ ಎಲೆಗಳನ್ನು ಸೂರ್ಯದೇವನಿಗೆ ಅರ್ಪಿಸಲಾಗುತ್ತದೆ. ಮಹಾ ಶಿವನ ರೂಪ ಎಂದು ಹೇಳಲಾಗುತ್ತದೆ. ನಮ್ಮ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಬಿಳಿ ಎಕ್ಕದ ಗಿಡದಿಂದ ಸಂಪೂರ್ಣವಾಗಿ ಮುಕ್ತಿಯನ್ನು ಹೊಂದಬಹುದಾಗಿದೆ. ನಮ್ಮ ಮೇಲೆ ನಮಗೆ ನಂಬಿಕೆ ವಿಶ್ವಾಸ ಇರಬೇಕು ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಕೂಡ ಆದರಿಂದ ಸಂಪೂರ್ಣವಾಗಿ ಮುಕ್ತಿಯನ್ನ ಹೊಂದಿ ಎಕ್ಕದ ಗಿಡದಿಂದ ಪಡೆದುಕೊಳ್ಳಬಹುದಾಗಿದೆ ಇದನ್ನು ಮನೆಯಲ್ಲಿ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಬುಧವಾರದಂದು ಈ ಪರಿಹಾರ ಮಾಡಿಕೊಳ್ಳುವುದು ಉತ್ತಮ ನೀವು ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆ ಎದ್ದು ನಿಮ್ಮ ನಿತ್ಯ…
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲಾಗಿದೆ. ಭೂಕಂಪನದಿಂದ 9 ಮಂದಿ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಮಂಗಳವಾರ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದು, 9 ಜನರು ಸಾವನ್ನಪ್ಪಿದ್ದಾರೆ. ಉತ್ತರ ಭಾರತದಲ್ಲೂ ಭೂಕಂಪದ ಅನುಭವವಾಗಿದೆ. ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಜುರ್ಮ್ನಲ್ಲಿ 180 ಕಿಲೋಮೀಟರ್ ಆಳದಲ್ಲಿತ್ತು. ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆಯ ಭೂಕಂಪವು ಅಫ್ಘಾನಿಸ್ತಾನದ ಫೈಜಾಬಾದ್ನ 133 ಕಿ.ಮೀ ಎಸ್ಎಸ್ಇಯಲ್ಲಿ ರಾತ್ರಿ 10:17 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಆಘಾತದ ಸ್ಥಿತಿಯಲ್ಲಿ 100 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಪಾಕಿಸ್ತಾನದ ತುರ್ತು ಸೇವೆಗಳ ವಕ್ತಾರ ಬಿಲಾಲ್ ಫೈಝಿ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದ್ದಾರೆ. https://kannadanewsnow.com/kannada/bigg-news-pm-modi-to-visit-state-again-on-march-25-tour-of-three-districts-on-the-same-day/ https://kannadanewsnow.com/kannada/bigg-news-the-race-for-the-post-of-chief-minister-has-begun-in-the-bjp-too-says-cm-bommai/