Author: kannadanewslive

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು, ಲಲಿತ ಅಕಾಡೆಮಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ ಹಿರಿಯ ನಾಗರೀಕ ಸಹಾಯವಾಣಿಯನ್ನು ಸಾಗರ ರಸ್ತೆಯ ಡಿವೈ,ಎಸ್,ಪಿ, ಕಚೇರಿಯಲ್ಲಿ ಸ್ಥಾಪಿಸಲಾಗಿದೆ.  ಹಿರಿಯ ನಾಗರೀಕ ಸಹಾಯವಾಣಿ ಮೂಲಕ ತೊಂದರೆಯಲ್ಲಿರುವ ಹಿರಿಯರಿಗೆ ಬೆಂಬಲ, ಉಚಿತ ಕಾನೂನು ನೆರವು, ಹಿರಿಯರ ತೊಂದರೆಗಳಿಗೆ ಸೂಕ್ತ ಸಲಹೆ, ಅಗತ್ಯವಿದ್ದಲ್ಲಿ ಪೊಲೀಸ್ ನೆರವಿನಿಂದ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.  ಕೌಟುಂಬಿಕ ವಿಷಯದಲ್ಲಿ ರಾಜೀ ಮಾಡಿಸುವುದು, ವೈದ್ಯಕೀಯ ಸಲಹೆ ಮೇರೆಗೆ ಸೇವೆ ಒದಗಿಸುವುದು, ನಿರ್ಲಕ್ಷಿಸಲ್ಪಟ್ಟ ಹಿರಿಯರಿಗೆ ಅಗತ್ಯವಿದ್ದಲ್ಲಿ ಪುನರ್ವಸತಿ (ವೃದ್ಧಾಶ್ರಮ) ಸೌಕರ್ಯ ಒದಗಿಸುವುದು, ವಿವಾದಗಳನ್ನು ಬಗೆಹರಿಸಲು ಮಾರ್ಗೋಪಾಯಗಳನ್ನು ಸೂಚಿಸುವುದು, ಹಿರಿಯ ನಾಗರೀಕರ ಗುರುತಿನ ಚೀಟಿ ಮಾಡಿಸುವುದು, ವೃದ್ಧಾಪ್ಯವೇತನ ಮಾಡಿಸಿಕೊಡಲಾಗುವುದು.     ಹಿರಿಯ ನಾಗರೀಕ ಸಹಾಯವಾಣಿ ಸಂಖ್ಯೆ : 1090 ಆಗಿದ್ದು ಉಚಿತವಾಗಿ ಕರೆ ಮಾಡಿ ಇದರ ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಡಿವೈಎಸ್‍ಪಿ ಕಚೇರಿ ಸಂಖ್ಯೆ 08182-26024 ನ್ನು ಸಂಪರ್ಕಿಸಬಹುದೆಂದು ಹಿರಿಯ ನಾಗರೀಕ ಸಹಾಯವಾಣಿ ಯೋಜನಾ ಸಂಯೋಜಕರು…

Read More

ಹೊಸಪೇಟೆ : ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಸಂಘ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ವೆಬ್‍ಸೈಟ್ https://vijayanagara.nic.in ನಲ್ಲಿ ಅಥವಾ ಹೊಸಪೇಟೆಯ ಹೊಸ ಎಮ್.ಸಿ.ಹೆಚ್ ಆಸ್ಪತ್ರೆ ಹಿಂಭಾಗದ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು. ಅರ್ಜಿಗಳನ್ನು ಜ.13ರಿಂದ 21ರವರೆಗೆ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜ.21 ಸಂಜೆ 5.30ರೊಳಗಾಗಿ ಸಲ್ಲಿಸಬೇಕು. ಹುದ್ದೆಗಳ ವಿವರ: ಎಸ್‍ಎನ್‍ಸಿಯು ವೈದ್ಯಾಧಿಕಾರಿಗಳ ಹುದ್ದೆ 02 ಇದ್ದು, ವಿದ್ಯಾರ್ಹತೆ ಎಂಬಿಬಿಎಸ್ ಆಗಿರಬೇಕು. ಯುಪಿಹೆಚ್‍ಸಿ ವೈದ್ಯಾಧಿಕಾರಿಗಳ ಹುದ್ದೆ 03 ಇದ್ದು, ವಿದ್ಯಾರ್ಹತೆ ಎಂಬಿಬಿಎಸ್ ಪದವಿ ಹೊಂದಿರಬೇಕು. ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು-03 ಹುದ್ದೆಗೆ ಎಂಬಿಬಿಎಸ್ ಅಥವಾ ಬಿಎಎಂಎಸ್ ಪದವಿ, ಆಯುಷ ವೈದ್ಯಾಧಿಕಾರಿಗಳು-02 ಹುದ್ದೆಗೆ ಬಿಎಎಂಎಸ್, ಎನ್‍ಹೆಚ್‍ಎಂಎಸ್, ಬಿಎನ್‍ವೈಎಸ್,  ಬಿಯುಎಂಎಸ್ ಪದವಿ, ಆಶಾ ಮೇಲ್ವಿಚಾರಕರು (ಮಹಿಳೆ)-01 ಹುದ್ದೆಗೆ ಜಿಎನ್‍ಎಂ,  ಬಿಎಸ್ಸಿ ನರ್ಸಿಂಗ್, ಡಿಪ್ಲೋಮಾ ಇನ್ ನರ್ಸಿಂಗ್ ಹೊಂದಿರಬೇಕು. ಶುಶ್ರೂಷಕಿಯರು (ಮಹಿಳೆ)-10 ಹುದ್ದೆಗೆ ಬಿಎಸ್ಸಿ, ಪಿಬಿಬಿಎಸ್, ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಹತೆ, ಹಿರಿಯ…

Read More

ಮಂಗಳೂರು : ಮಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೈದ್ಯ, ವೈದ್ಯಕೀಯ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಇಂದು ಮಂಗಳೂರು ಸಿಸಿಬಿ ಪೊಲೀಸರು ಮೆಡಿಕಲ್ ಕಾಲೇಜುಗಳ ಮೇಲೆ ದಾಳಿ ಮುಂದುವರೆಸಿದ್ದು, ಬೆಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜನ್ ಡಾ.ಬಾಲಾಜಿ (29) ಹಾಗೂ ಪಿ.ಜಿ ವಿದ್ಯಾರ್ಥಿ ರಾಘವ ಬಂಧಿತ ಆರೋಪಿಗಳು. ಡಾ. ಬಾಲಜಿ ಹಲಸೂರು ಮೂಲದವರಾಗಿದ್ದು, ವಿದ್ಯಾರ್ಥಿ ಆಂಧ್ರಪ್ರದೇಶದ ಮೂಲದವನೆಂದು ತಿಳಿದುಬಂದಿದೆ. https://kannadanewsnow.com/kannada/bigg-news-hc-allows-adiyogi-consecration-programme-in-chikkaballapur/

Read More

ಬೆಂಗಳೂರು : ಚಿಕ್ಕಬಳ್ಳಾಪುರ ನಗರದ ಸಮೀಪವಿರುವ ಆವಲಗುರ್ಕಿಯಲ್ಲಿ ಆದಿ ಯೋಗಿ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೈಕೋರ್ಟ್ ಅವಕಾಶ ನೀಡಿದೆ. ಆದಿಯೋಗಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಉಪರಾಷ್ಟ್ರಪತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ನ್ಯಾಯಾಲಯದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ್ ರಸ್, ಕಿಣಗಿ ಅವರಿದ್ದ ಪೀಠಕ್ಕೆ ಈಶಾ ಪ್ರತಿಷ್ಠಾನ ಮನವಿ ಮಾಡಿ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ನ್ಯಾಯಲಯ ಆದಿಯೋಗಿ ಪ್ರತಿಷ್ಠಾಪನಾ ಕಾರ್ಯಕ್ರಮ ಪೂರ್ವನಿಗದಿಯಾಗಿದ್ದು, ಇದಕ್ಕೆ ಅಡ್ಡಿ ಮಾಡವುದು ಸರಿಯಲ್ಲ. ಮರಗಳನ್ನು ಕಡಿಯದಂತೆ ನಿರ್ಬಂಧ ಹೇರಿದ್ದು, ಯಥಾಸ್ಥಿತಿ ಮುಂದುವರೆಸಲು ಸೂಚನೆ ನೀಡಿದೆ. https://kannadanewsnow.com/kannada/bigg-news-panchamasali-reservation-will-lay-siege-to-cms-house-today-warns-basavajaya-mrutyunjaya-swamiji/

Read More

ಹಾವೇರಿ : ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊಟ್ಟ ಮಾತಿಗೆ ತಪ್ಪಿದ್ದಾರೆ ಹೀಗಾಗಿ ಇಂದು ಶಿಗ್ಗಾಂವಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಇಂದು ಮುತ್ತಿಗೆ ಹಾಕುತ್ತೇವೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಂಬಂಧ ಸಿಎಂ ಬೊಮ್ಮಾಯಿ ಅವರು ಮಾತಿಗೆ ತಪ್ಪಿದ್ದಾರೆ. ತಾಯಿ ಮೇಲೆ ಪ್ರಮಾಣ ಮಾಡಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. 2 ಸಿ, 2 ಡಿ ಮೀಸಲಾತಿ ಎಂದು ಹೇಳುವ ಮೂಲಕ ನಮ್ಮ ಹೋರಾಟವನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ. ಇಂದಿನ ಪ್ರತಿಭಟನಾ ಸಭೆಯಲ್ಲಿ ನಮ್ಮ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. https://kannadanewsnow.com/kannada/tiger-attack-kills-kerala-farmer-52-in-wayanad/ https://kannadanewsnow.com/kannada/rti-activist-ramakrishna-murder-case-in-davanagere-main-accused-pdo-nagaraj-surrenders-before-court/

Read More

ಬೆಂಗಳೂರು : ವಿಧಾನಸೌಧದ ಎದುರು ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಚುನಾವಣೆ ಬರುತ್ತಿದೆ ಎಂದು ಬಿಜೆಪಿ ತರಾತುರಿಯಲ್ಲಿ ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆಯನ್ನ ವಿಧಾನಸೌಧದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.  ಬಿಜೆಪಿ ಅವರು ಸ್ವಂತ ಆಸ್ತಿಯಿಂದ ಪ್ರತಿಮೆ ಮಾಡಲಿ, ಒಳ್ಳೆ ಕೆಲಸ ಮಾಡಲಿ. ಚುನಾವಣೆ ಬಂತು ಅಂತ ತರಾತುರಿಯಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಅವರಿಗೆ ಗೊತ್ತಾಗಿದೆ ಎರಡು ತಿಂಗಳು ಮಾತ್ರ ಅವರ ಸರ್ಕಾರ ಇರೋದು ಅಂತ. ಹೀಗಾಗಿ ಪ್ರತಿಮೆ ಮಾಡಲು ಮುಂದಾಗ್ತಿದ್ದಾರೆ. ಬಿಜೆಪಿ ಅವರಿಗೆ ಶುಭವಾಗಲಿ ಎಂದು ಕಿಡಿಕಾರಿದ್ದಾರೆ. https://kannadanewsnow.com/kannada/tiger-attack-kills-kerala-farmer-52-in-wayanad/

Read More

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಐತಿಹಾಸಿಕ 30 ಸಾವಿರ ಸೇರಿದಂತೆ ವಿವಿಧ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಜನವರಿ 19ಕ್ಕೆ ಕಲಬುರಗಿಗೆ ಆಗಮಿಸಲಿದ್ದಾರೆ. ಸೇಡಂ ತಾಲೂಕಿನ ಮಳಖೇಡ ಬಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 60 ಎಕರೆ ವಿಶಾಲ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರಧಾನಮಂತ್ರಿಗಳು ಅಂದು ಕಲಬುರಗಿ ಸೇರಿದಂತೆ ಯಾದಗಿರಿ, ಬೀದರ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮತ್ತು ಜಿಲ್ಲೆಯ ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡುವರು. ಅಧಿಕಾರಿಗಳು ಕೇಂದ್ರಸ್ಥಾನ ಬಿಡುವಂತಿಲ್ಲ: ಪ್ರಧಾನಮಂತ್ರಿಗಳ ಪ್ರವಾಸ ಹಿನ್ನೆಲೆಯಲ್ಲಿ ಜನವರಿ 20ರ ವರೆಗೆ ಜಿಲ್ಲೆಯ ಯಾವುದೇ ಅಧಿಕಾರಿ-ಸಿಬ್ಬಂದಿ ಕೇಂದ್ರಸ್ಥಾನ ಬಿಡುವಂತಿಲ್ಲ. ಅಲ್ಲದೇ ಪ್ರತಿ ಕಚೇರಿಯಲ್ಲಿ ಶೇ.100ರ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಬೇಕು. ಕೇಂದ್ರಸ್ಥಾನ ಬಿಡಬೇಕಾದಲ್ಲಿ ತಮ್ಮ ಅನುಮತಿ ಅಗತ್ಯ. ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಕಟ್ಟುನಿಟ್ಟಿನ ಎಚ್ಚರಿಕೆ…

Read More

ಮಡಿಕೇರಿ : ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳಿಂದ (ಪ್ರೌಢ ಶಾಲೆಯಿಂದ ಸ್ನಾತ್ತಕೋತ್ತರ ಪದವಿಯವರೆಗೆ ಹಾಗೂ ವೈಧ್ಯಕೀಯ/ ಎಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ) 2022-23ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹಧನ ಸಹಾಯಕ್ಕೆ ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ, 28 ರವರೆಗೆ ಅವಧಿ ವಿಸ್ತರಿಸಲಾಗಿದೆ. ಕಾರ್ಮಿಕರ ಮಾಸಿಕ ವೇತನ ರೂ.35 ಸಾವಿರ ಮೀರಿರಬಾರದು. (ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು). ಶೈಕ್ಷಣಿಕ ಪ್ರೋತ್ಸಾಹಧನ ಸಹಾಯ ಬಯಸುವ ವಿದ್ಯಾರ್ಥಿಗಳು ಆನ್‍ಲೈನ್ ಮುಖಾಂತರ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವೆಬ್‍ಸೈಟ್‍ನಲ್ಲಿ WWW.klwbapps.karnataka.gov.in ಅರ್ಜಿ ಸಲ್ಲಿಸಬಹುದು(ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ಶೇ.50 ಪ.ಜಾ/ಪ.ಪಂ. ಶೇ.45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು). ಹೆಚ್ಚಿನ ಮಾಹಿತಿಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕ ಕಲ್ಯಾಣ ಭವನ, ನಂ.48, 1ನೇ & 2ನೇ ಮಹಡಿ, ಮತ್ತೀಕೆರೆ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು-560022 ಇಲ್ಲಿ ಖುದ್ದಾಗಿ ಅಥವಾ…

Read More

ಮಂಡ್ಯ : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಂತೆ ಸಿದ್ದರಾಮ್ಯಯ ಅವರ ಮನೆ ದೇವರು ರಾಜಕೀಯ ಭವಿಷ್ಯ ನುಡಿದಿದೆ. ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಆದಿನಾಡು ಚಿಕ್ಕತಾಯಮ್ಮ ದೇವರು ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದಿದ್ದು, ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಪರೋಕ್ಷವಾಗಿ ಭವಿಷ್ಯ ನುಡಿದಿದೆ. ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುವ ವೇಳೆ ದೇವರು ಈ ಸೂಚನೆ ನೀಡಿದ್ದು, ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ಒಂದು ಕಡೆ ಬಾಹುಬಲ‌ ಚಾಚಿದ್ರೆ ಆಗಲ್ಲ. ಅರ್ಥ ಆಯ್ತೇನಪ್ಪ. ಬಾಹುಬಲ ಎರಡು ಕಡೆ ಚಾಚಬೇಕು. ಒಂದು ಕಡೆ ಚಾಚಿದ್ರೆ ತಪ್ಪಾಗುತ್ತೆ, ಅರ್ಥ ಮಾಡ್ಕೊಳ್ಳಿ. ಎರಡು ಕಡೆ ಚಾಚಿದ್ರೆ ನಾನು ಗೆಲ್ಲಿಸಿಕೊಂಡು ಬರ್ತೀನಿ ಎಂದು ದೇವಾಲಯದ ಅರ್ಚಕ ಡಾ. ಲಿಂಗಣ್ಣ ಮೈ ಮೇಲೆ ಬಂದ ಶಕ್ತಿ ದೇವತೆ ಹೇಳಿದೆ. https://kannadanewsnow.com/kannada/ola-fires-200-people-in-fresh-round-of-layoffs/

Read More

ಕೋಲಾರ : ಚುನಾವಣೆ ಹೊತ್ತಲ್ಲೇ ಪಕ್ಷಾಂತರ ಪರ್ವ ಶುರುವಾಗಿದ್ದು, ಬಿಜೆಪಿ ಬೆಂಬಲಿತ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್.ನಾಗೇಶ್ ಜನವರಿ 14 ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವುದಾಗಿ ಖಚಿತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ನಾಗೇಶ್, ಜನವರಿ 14ರಂದು ನಾಳೆ ಸಂಕ್ರಾಂತಿಯಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ರಾಜೀನಾಮೆ ನೀಡಿರುವ ವಿಚಾರವನ್ನು ಈವರೆಗೂ ಯಾರ ಜೊತೆಗೂ ಚರ್ಚೆ ಮಾಡಿಲ್ಲ. ಸಧ್ಯಕ್ಕೆ ಬಿಜೆಪಿ ಸರ್ಕಾರದ ಬಗ್ಗೆ ಏನೂ ಮಾತನಾಡಲ್ಲ. ಕಾಂಗ್ರೆಸ್ ವರಿಷ್ಠರು ಯಾವ ಕ್ಷೇತ್ರ ಹೇಳ್ತಾರೋ ಆ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನೆ ಎಂದರು. ಇನ್ನು ನಾಳೆ ಜೆಡಿಎಸ್ ನಾಯಕ ವೈಎಸ್ ವಿ ದತ್ತಾ ಹಾಗೂ ಹೆಚ್. ನಾಗೇಶ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. https://kannadanewsnow.com/kannada/pm-modi-to-visit-kalaburagi-district-on-january-19-r-ashoka-to-hold-meeting-with-dc-this-afternoon/

Read More


best web service company