ಬೆಂಗಳೂರು : ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಇಂದಿನ ರೌಡಿಗಳೇ ಭವಿಷ್ಯದ ಬಿಜೆಪಿ ಮುಖಂಡರು ಎಂದು ರಾಜ್ಯ ಬಿಜೆಪಿ ವಿರುದ್ಧ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಹದೇವಪ್ಪ ಅವರು, ಚುನಾವಣೆ ಹೊತ್ತಲ್ಲಿ ಏನೇನೋ ಸಮರ್ಥನೆ ಕೊಟ್ಟು 30-40 ಕೊಲೆ ಮಾಡಿದಂತಹ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ರಾಜ್ಯ ಬಿಜೆಪಿ ಮುಂದೆ ಭಯೋತ್ಪಾದಕರನ್ನೂ ಸೇರಿಸಿಕೊಂಡು ಇವರೇ ನೋಡಿ ನಮ್ಮ ದೇಶದ ನಿಜವಾದ ದೇಶಪ್ರೇಮಿಗಳು ಎನ್ನುತ್ತಾರಾ ಎಂಬ ಆತಂಕ ನನ್ನದು ಎಂದು ಹೇಳಿದ್ದಾರೆ. https://twitter.com/CMahadevappa/status/1599275333139632128 ಅದರಲ್ಲೂ ಬಿಜೆಪಿಯ ಸಿ.ಟಿ. ರವಿ ಅವರು ಬೇರೆ ಇಸ್ಲಾಮಾಬಾದ್ ನಲ್ಲಿ ನಮ್ಮ ಧ್ವಜ ಹಾರಿಸುತ್ತೇವೆ ಎಂದು ಆಗಾಗ್ಗೆ ಹೇಳುವುದನ್ನು ನೋಡಿದರೆ ಮೇಲಿನ ಮಾತು ವಾಸ್ತವಕ್ಕೆ ಹತ್ತಿರವಿದೆಯೇನೋ ಅನಿಸುತ್ತದೆ, ಎಷ್ಟೇ ಆದರೂ ಗೋಡ್ಸೆಯಂತಹ ದೇಶಕ್ಕೆ ಮೊದಲ ಭಯೋತ್ಪಾದಕನನ್ನು ನೀಡಿದ ಸಂತತಿ ಅಲ್ಲವೇ? ಇವರಿಂದ ಇನ್ನೇನು ನಿರೀಕ್ಷಿಸಬಹುದು ಎಂದು ಕಿಡಿಕಾರಿದ್ದಾರೆ. https://twitter.com/CMahadevappa/status/1599276083391569922 https://kannadanewsnow.com/kannada/bigg-news-educational-incentives-for-children-of-workers-online-applications-invited/
Author: kannadanewslive
ಧಾರವಾಡ : ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳಿಂದ ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿಯವರೆಗೆ ಹಾಗೂ ವೈದ್ಯಕೀಯ, ಇಂಜಿನೀಯರಿಂಗ್ನಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ 2022-23ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ಬಯಸುವ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವೆಬ್ಸೈಟ್ನಲ್ಲಿ www.klwbapps.karnataka.gov.in ಡಿಸೆಂಬರ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಕಾರ್ಮಿಕರ ಮಾಸಿಕ ವೇತನ ರೂ.35,000/- ಗಿಂತ ಮೀರಿರಬಾರದು. ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು. ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ಶೇ.50, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕ ಕಲ್ಯಾಣ ಭವನ, ನಂ.48, 1ನೇ ಹಾಗೂ 2ನೇ ಮಹಡಿ, ಮತ್ತೀಕೆರೆ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು-560022 ಇಲ್ಲಿ ಖುದ್ದಾಗಿ ಅಥವಾ ದೂರವಾಣಿ…
ಬೆಂಗಳೂರು : ಹಿಜಾಬ್, ಹಲಾಲ್ ಕಟ್, ಅಜಾನ್ ಬಳಿಕ ರಾಜ್ಯದಲ್ಲಿ ಮತ್ತೊಂದು ಧರ್ಮ ದಂಗಲ್ ಶುರುವಾಗಿದ್ದು, ರಾಜ್ಯದಲ್ಲಿ ಮದರಸಾ ಬ್ಯಾನ್ ಮಾಡದಿದ್ದರೆ ಕೇಸರಿ ಶಾಲೆಗಳನ್ನು ಆರಂಭಿಸಲು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. https://kannadanewsnow.com/kannada/breaking-news-police-are-investigating-wall-writing-case-in-shiralakoppa-cm-bommai/ ರಾಜ್ಯದಲ್ಲಿ ಮದರಸಾಗಳನ್ನು ನಿಷೇಧ ಮಾಡಿ ಇಲ್ಲವೇ ಕೇಸರಿ ಶಾಲೆ ಆರಂಭಿಸಿ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಮದರಸಾಗಳನ್ನು ನಿಷೇಧ ಮಾಡಲಾಗಿದೆ. ಕರ್ನಾಟಕದಲ್ಲೂ ಮದಸರಾಸಗಳನ್ನು ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಕೇಸರಿ ಶಾಲೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. ಕೇಸರಿ ಶಾಲೆಗಳಲ್ಲಿ ಪ್ರತ್ಯೇಕ ಪಠ್ಯ ಇರಬೇಕು. ಪಠ್ಯ ಪುಸ್ತಕಗಳಲ್ಲಿ ಹಿಂದುತ್ವದ ಹಿನ್ನೆಲೆ ಇರುವ ಪಾಠಗಳು ಜೊತೆಗೆ ಹಿಂದುತ್ವದ ಹಿನ್ನೆಲೆ ಇರುವ ಪ್ರಾಧ್ಯಾಪಕರು ಇರಬೇಕು, ಕೇಸರಿ ಕಾಲೇಜಿಗೆ ಕೇಸರಿ ಬಣ್ಣ, ಎಲ್ಲಾ ವಿದ್ಯಾರ್ಥಿಗಳು ಕೇಸರಿ ಬಣ್ಣದ ಸಮವಸ್ತ್ರ ಇರಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ. https://kannadanewsnow.com/kannada/bigg-news-c-t-ravi-sidramullah-khans-statement-is-not-right-ex-minister-m-b-patil/
ಹುಬ್ಬಳ್ಳಿ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಸಿಎಫ್ ಐ ಸಂಘಟನೆಗೆ ಸೇರಿ ಎಂಬ ಗೋಡೆ ಬರಹದ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. https://kannadanewsnow.com/kannada/bigg-news-important-information-for-differently-abled-registration-of-new-voters-allowed-till-december-8/ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಶಿರಾಳಕೊಪ್ಪ ಪಟ್ಟಣದಲ್ಲಿ ಗೋಡೆ ಬರಹ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ನವೆಂಬರ್ 28 ರಂದು ಶಿರಾಳಕೊಪ್ಪಳದ 9 ಕಡೆಗಳಲ್ಲಿ ಪುಂಡರು ಪಿಎಫ್ ಐಗೆ ಸೇರಿ ಎಂದು ಗೋಡೆಬರಹ ಬರೆಯಲಾಗಿದ್ದು, ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು. ಗೋಡೆ ಬರಹ ಬರೆದ ಕಿಡಿಗೇಡಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. https://kannadanewsnow.com/kannada/maharashtra-lifts-single-use-plastic-ban-after-4-years-here-is-a-list-of-things-now-allowed/
ಬೆಂಗಳೂರು: ವಿಕಲಚೇತನರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗುತ್ತಿದೆ.ಪಟ್ಟಿಯಲ್ಲಿ ನೋಂದಣಿಯಾಗದ ಅರ್ಹ ವಿಕಲಚೇತನರು ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 8 ರವರೆಗೆ ಅವಕಾಶವಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೀಕ್ಷಕಿ,ಹಿರಿಯ ಐಎಎಸ್ ಅಧಿಕಾರಿ ಬಿ.ಆರ್.ಮಮತಾ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ( ನಿನ್ನೆ ಡಿ.3 ರಂದು) ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ “ವಿಶ್ವ ವಿಕಲಚೇತನರ ದಿನಾಚರಣೆ-2022” ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನವ ಮತದಾರರನ್ನು ನೋಂದಣಿ ಮಾಡಲು ಕಾಲೇಜು ಮಟ್ಟದಲ್ಲಿ ಈಗಾಗಲೇ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. 18 ವರ್ಷ ಪೂರ್ಣಗೊಂಡ ನವ ಮತದಾರರು ಹಾಗೂ ಅರ್ಹ ಸಾರ್ವಜನಿಕರನ್ನು ನೋಂದಣಿ ಮಾಡಿಸಲು ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಮಟ್ಟದಲ್ಲಿರುವ ಎಲ್ಲಾ ಗ್ರಾಮೀಣ,ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಶ್ರಮವಹಿಸಿ ನೋಂದಾಯಿಸಲು ಕ್ರಮ ತೆಗೆದುಕೊಳ್ಳುವಂತೆ…
ಬೆಂಗಳೂರು : ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾಖಾನ್ ಎಂದು ಹೇಳಿದ್ದು ಸರಿಯಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. https://kannadanewsnow.com/kannada/viral-video-aizawl-traffic-moves-seamlessly-internet-surprised/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಅವರು ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ್ದು ಸರಿಯಲ್ಲ, ಸಿ.ಟಿ. ರವಿ ಸಿದ್ದರಾಮಯ್ಯ ಬಗ್ಗೆ ರಾಜಕೀಯವಾಗಿ ಮಾತನಾಡಬೇಕು. ಆದರೆ ಸಿದ್ರಾಮುಲ್ಲಾಖಾನ್ ಎಂದು ಹೇಳುವುದು ಸರಿಯಲ್ಲ. ಸಿದ್ದರಾಮೇಶ್ವರ ದೇವರಿಂದ ಸಿದ್ದರಾಮಯ್ಯ ಹೆಸರು ಬಂದಿದೆ ಎಂದು ಸಿ.ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಫೈಟ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್, ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ ನಲ್ಲಿ 15-20 ನಾಯಕರು ಸಮರ್ಥರಿದ್ದಾರೆ. ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆಗೆ ಒಂದು ವಿಧಾನ ಇದೆ.ಹೈಕಮಾಂಡ್ ತೀರ್ಮಾನದಂತೆ ಸಿಎಂ ಆಯ್ಕೆ ನಡೆಯಲಿದೆ ಎಂದರು. https://kannadanewsnow.com/kannada/breaking-news-boy-dies-after-coming-in-contact-with-high-tension-electric-wire-in-bengaluru/
ಬೆಂಗಳೂರು : ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಡೆಂಗ್ಯೂ ಜ್ವರ ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಕೆಲ ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದು, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ವರದಿ ಬಂದಿದ್ದು, ವರದಿಯಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಡೆಂಗ್ಯೂ ಜ್ವರ ಇರುವುದು ದೃಢಪಟ್ಟಿದೆ. https://kannadanewsnow.com/kannada/breaking-news-boy-dies-after-coming-in-contact-with-high-tension-electric-wire-in-bengaluru/ ಈ ಕುರಿತು ನೀಡಿರುವ ಪ್ರಿಯಾಂಕ್ ಖರ್ಗೆ, ಕಳೆದ ಮೂರು ದಿನಗಳಿಂದ ನಾನು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಹಾಗೂ ಜನರನ್ನು, ಕಾರ್ಯಕರ್ತರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ಕ್ಷಮೆಯಿರಲಿ. ಕಳೆದ ಮೂರು ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದು, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ. ನಿನ್ನೆ ಬಂದಿರುವ ವರದಿಯ ಅನುಸಾರ ಡೆಂಗ್ಯೂ ಸೋಂಕು ಪಾಸಿಟಿವ್ ಆಗಿದೆ, ಆದ್ದರಿಂದ ನಿರಂತರ ವೈದ್ಯಕೀಯ ಆರೈಕೆಯಲ್ಲಿದ್ದು, ಇನ್ನೂ ಕೆಲವು ದಿನಗಳ ಕಾಲ ಯಾರನ್ನೂ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಹನೆ ಮತ್ತು ಸಹಕಾರ ಸದಾ ನನ್ನೊಂದಿಗಿರಲಿ…
ಬೆಂಗಳೂರು : 3 ದಿನಗಳ ಹಿಂದೆ ಪಾರಿವಾಳ ಹಿಡಿಯಲು ಹೋಗಿ ಬೆಂಗಳೂರಿನಲ್ಲಿ ಹೈಟೆನ್ಷನ್ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಬಾಲಕರಲ್ಲಿ ಒಬ್ಬ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. https://kannadanewsnow.com/kannada/pm-modi-lauds-indian-navy-on-navy-day/ ಬೆಂಗಳೂರಿನ ನಂದಿನಿಲೇಔಟ್ ನಲ್ಲಿ ಪಾರಿವಾಳ ಹಿಡಿಯೋ ಭರದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿದ್ದರು. ಗುರುವಾರ ಸಂಜೆ 6.30 ರ ಸುಮಾರಿಗೆ ಅವಘಡ ಸಂಭವಿಸಿದ್ದು, ಚಂದ್ರು (10), ಸುಪ್ರೀತ್ (12) ಗಂಭೀರವಾಗಿ ಗಾಯಗೊಂಡದ್ದರು. ಗಾಯಗೊಂಡಿದ್ದ ಚಂದ್ರು ಹಾಗೂ ಸುಪ್ರೀತ್ ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಸುಪ್ರೀತ್ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ.
ಹುಬ್ಬಳ್ಳಿ : ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಹೆಚ್.ಡಿ.ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಶನಿವಾರ ಹೇಳಿದ್ದಾರೆ. https://kannadanewsnow.com/kannada/after-apple-amazon-to-restart-advertising-on-twitter-report/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದು, ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದರೆ ಮುಸ್ಲಿಂ, ದಲಿತ, ಮಹಿಳೆ, ಒಬಿಸಿ, ಲಿಂಗಾಯತ ಅಥವಾ ಇತರ ಸಮುದಾಯದ ನಾಯಕರಿಗೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು. ಕುಮಾರಸ್ವಾಮಿ ಅವರು ಮುಸ್ಲಿಂ ಅಥವಾ ದಲಿತ ಸಿಎಂ ಆಗಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ, ಅದರಲ್ಲಿ ತಪ್ಪೇನಿದೆ? ಇಲ್ಲಿ ಪಕ್ಷದ ಅಧ್ಯಕ್ಷನಾಗಿ, ಕುಮಾರಸ್ವಾಮಿ ಅವರೇ ಸಿಎಂ ಆಗುತ್ತಾರೆ ಎಂದು ನಾನು ಹೇಳುತ್ತೇನೆ. ಆದರೆ, 2024 ರ ಲೋಕಸಭಾ ಚುನಾವಣೆಯಲ್ಲಿ ಅವರು ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸುವ ಸಾಧ್ಯತೆಯಿದೆ ಆಗ ಇತರರು ಇಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಇಬ್ರಾಹಿಂ ಹೇಳಿದರು. https://kannadanewsnow.com/kannada/pm-awas-yojana-list-of-beneficiaries-of-pm-awas-yojana-released-is-your-name-on-the-list-check-this-way/
ನವದೆಹಲಿ : ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, ಸರ್ಕಾರವು ಮನೆ ನಿರ್ಮಿಸಲು ಬಡವರಿಗೆ ಸಹಾಯಧನ ನೀಡಲಿದೆ. ಅದ್ರಂತೆ, ಸಂಬಂಧಪಟ್ಟ ಬ್ಯಾಂಕ್ ಈ ಸಾಲಗಳ ಮೇಲೆ ನಿಮಗೆ ನಿಯಮಿತ EMI ವಿಧಿಸುತ್ತದೆ. ಆದ್ರೆ, ಸಬ್ಸಿಡಿ ಸಿಗುವುದಿಲ್ಲ. ಹಲವು ಬಾರಿ ಒಂದೇ ನಿವೇಶನದಲ್ಲಿ ನಿರ್ಮಿಸಿರುವ ಎರಡು ಪ್ರತ್ಯೇಕ ಮನೆಗಳಲ್ಲಿ ಒಂದಕ್ಕೆ ಮಾತ್ರ ಸಹಾಯಧನ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅರ್ಜಿಯ ಸ್ಥಿತಿಯನ್ನ ಪರಿಶೀಲಿಸುವುದು ಬಹಳ ಮುಖ್ಯ. ಸ್ಥಿತಿ ಪರಿಶೀಲಿಸುವುದು ಹೇಗೆ? ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ನೀವು ಆನ್ಲೈನ್ನಲ್ಲಿ ಅಪ್ಲಿಕೇಶನ್ ಸ್ಥಿತಿಯನ್ನ ಪರಿಶೀಲಿಸಬಹುದು. * ಮೊದಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ. * ಇಲ್ಲಿ ‘ನಾಗರಿಕ ಮೌಲ್ಯಮಾಪನ’ ಆಯ್ಕೆ ಲಭ್ಯವಿದ್ದು, ಅದರ ಮೇಲೆ ಕ್ಲಿಕ್ ಮಾಡಿ. * ಹೊಸ ಪುಟ ತೆರೆಯುತ್ತದೆ. ಅದರಲ್ಲಿ ‘ಟ್ರ್ಯಾಕ್ ಯುವರ್ ಅಸೆಸ್ಮೆಂಟ್ ಸ್ಟೇಟಸ್’ ಆಯ್ಕೆಯನ್ನ ಆರಿಸಿ. ಇದರ ಮೇಲೆ ಕ್ಲಿಕ್ ಮಾಡಿ. * ಇದರ…