ಬೆಂಗಳೂರು : ವಂಚನೆ ಪ್ರಕರಣ ಸಂಬಂಧ ನಾಪತ್ತೆಯಾಗಿದ್ದ ಸ್ಯಾಂಟ್ರೋ ರವಿಯನ್ನು ಪೊಲೀಸರು 11 ದಿನಗಳ ಬಳಿಕ ಗುಜರಾತ್ ನಲ್ಲಿ ಬಂಧಿಸಿದ್ದು, ಇದೀಗ ಸ್ಯಾಂಟ್ರೋ ರವಿಯನ್ನು ಪೊಲೀಸರು ರಾಜ್ಯಕ್ಕೆ ಕರೆತಂದಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪೊಲೀಸರು ಪ್ರಧಾನಿಗಳು, ಮುಖ್ಯಮಂತ್ರಿಗಳು ಓಡಾಡುವ ಜಾಗದಲ್ಲಿ ಇಂತಹ ಆರೋಪಿಯನ್ನ ಯಾಕೆ ಕರೆದೊಯ್ದರು?, ಈ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ? ಇದನ್ನ ನೋಡ್ತಾ ಇದ್ರೆ ಈಗಲೂ ಪೊಲೀಸರು ಸ್ಯಾಂಟ್ರೋ ರವಿಗೆ ರಾಜಾತಿಥ್ಯ ನೀಡ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ. ಗೃಹ ಮಂತ್ರಿಗಳು ಗುಜರಾತ್ ಪ್ರವಾಸದಲ್ಲಿದ್ದಾಗಲೇ ಗುಜರಾತ್ ನಲ್ಲಿ ಸ್ಯಾಂಟ್ರೋ ರವಿ ಬಂಧನವಾಗುತ್ತದೆ.ಅಲ್ಲಿ ಬಿಜೆಪಿ ಸರ್ಕಾರ ಇದೆ, ಹೀಗಾಗಿ ಮೊದಲೇ ರವಿಯನ್ನ ಬಂಧನ ಮಾಡಿದ್ದಾರೆ. ಅವನಿಂದ ಇರುವ ದಾಖಲೆಗಳನ್ನ ತೆಗೆದುಕೊಂಡು ಈಗ ಬಂಧನದ ನಾಟಕ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. https://kannadanewsnow.com/kannada/congress-promises-free-electricity-cm-bommai-attacks-kai/
Author: kannadanewslive
ಉಡುಪಿ : ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಎನ್ ಪಿಎಸ್ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೇ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹೇಳಿದ್ದಾರೆ. ಜಿಲ್ಲಾ ಸರಕಾರಿ ನೌಕರರ ಸಂಘದ 2022ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಾರ್ಚ್‌ನಲ್ಲಿ ಹೊಸ ವೇತನ ಆಯೋಗ ಜಾರಿಗೆ ಬಂದ ನಂತರ ಎನ್‌ಪಿಎಸ್ ನೌಕರರಿಗೆ ಹಳೆಪಿಂಚಣಿ ವ್ಯವಸ್ಥೆ ಜಾರಿಗೆ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರು ಕರ್ತವ್ಯದ ಅವಧಿಯಲ್ಲಿ ಮರಣ ಹೊಂದಿದರೆ 1 ಕೋಟಿ ರೂ. ಪರಿಹಾರ ನೀಡುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಮನೆ ಮತ್ತು ವಿದ್ಯಾಭ್ಯಾಸ ಸಾಲದಲ್ಲಿ ರಿಯಾಯತಿ ನೀಡುವ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು : ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗಾಗಿ ಆಗ್ರಹಿಸಿ ನಿನ್ನೆ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ನಿವಾಸದಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆ ಮಾಡಿರುವುದನ್ನು ಖಂಡಿಸುತ್ತೇವೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಜನಮೃತ್ಯುಂಜಯ ಸ್ವಾಮೀಜಿ ಕಾಂಗ್ರೆಸ್ ನವರ ಜೊತೆಗೆ ಸೇರಿಕೊಂಡು ನಿನ್ನೆ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ನಿವಾಸದ ಬಳಿ ಪ್ರತಿಭಟನೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕೊಡಬಾರದು ಎಂದು ನಿರ್ಣಯ ಮಾಡಿತ್ತು. ಇದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು. ನಾವೆಲ್ಲಾ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಬೇಕು ಅಂತಾ ಒತ್ತಡ ಹಾಕಿದ್ದೇವೆ. ಸಿಎಂ ಬೊಮ್ಮಾಯಿ ಎಲ್ಲ ಸಮುದಾಯಗಳ ಬಗ್ಗೆ ಗಮನ ಕೊಡಬೇಕಾಗಿದೆ. ಪಂಚಮಸಾಲಿಗೆ 2 ಎ ಮೀಸಲಾತಿ ಕೊಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. https://kannadanewsnow.com/kannada/the-state-budget-is-likely-to-be-presented-on-february-17-cm-bommai/
ಬೆಂಗಳೂರು : ಫೆಬ್ರವರಿ 17 ರಂದು ರಾಜ್ಯ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ. ಈ ಬಾರಿಯ ಬಜೆಟ್ ನಲ್ಲಿ ಮಹಿಳೆಯರು ಹಾಗೂ ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಫೆಬ್ರವರಿ 17 ರಂದು ರಾಜ್ಯ ಬಜೆಟ್ ಮಂಡನೆ ಸಾಧ್ಯತೆ ಇದ್ದು, ಈ ಬರಿ ಜನಪರ ಬಜೆಟ್ ಮಂಡಿಸಲಿದ್ದೇನೆ. ಬಜೆಟ್ ಅಧಿವೇಶನದ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಬಜೆಟ್ ನಲ್ಲಿ ಜನ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಬಜೆಟ್ ನಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ.ವರೆಗೆ ಸಾಲ ನೀಡಲಾಗುವು, ಈಬಾರಿಯ ಬಜೆಟ್ ನಲ್ಲಿ ಮಹಿಳೆಯರು ಹಾಗೂ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. https://kannadanewsnow.com/kannada/bigg-news-santro-ravi-arrested-over-100-policemen-deployed-around-police-station/
ಮೈಸೂರು : ವಂಚನೆ ಪ್ರಕರಣದಲ್ಲಿ ಗುಜರಾತಿನಲ್ಲಿ ಪೊಲೀಸರು ಬಂಧಿಸಿದ್ದು, ಸದ್ಯ ಮೈಸೂರಿಗೆ ಕರೆದುಕೊಂಡು ಬರಲಾಗಿದ್ದು, ಸ್ಯಾಂಟ್ರೋ ರವಿಗೆ ಇದೀಗ ವಿಐಪಿಗಳಿಗೆ ನೀಡುವ ಭದ್ರತೆ ನೀಡಲಾಗಿದೆ. ಸ್ಯಾಂಟ್ರೋ ರವಿಯನ್ನು ವಶಕ್ಕೆ ಪಡೆದು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಲಾಗುತ್ತಿದ್ದು, ಪೊಲೀಸ್ ಠಾಣೆ ಸುತ್ತ ಹೆಚ್ಚುವರಿ ಭದ್ರತೆ ನೀಡಲಾಗಿದೆ. ಪೊಲೀಸ್ ಠಾಣೆ ಸುತ್ತಮುತ್ತ 100 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇನ್ನು ಇಂದು ಸ್ಯಾಂಟ್ರೋ ರವಿಯನ್ನು ಬಂಧಿಸಿರುವ ಪೊಲೀಸರು ಇಂದು ಜಡ್ಜ್ ಮುಂದೆ ಹಾಜರುಪಡಿಸಿ ವಿಚಾರಣೆಗಾಗಿ ಮತ್ತೆ ವಶಕ್ಕೆ ಪಡೆಯಲಿದ್ದಾರೆ. https://kannadanewsnow.com/kannada/bigg-news-santro-ravi-in-gujarat-what-was-the-deal-between-you-congress-questions-home-minister-aragajnanendra/
ಬೆಂಗಳೂರು : ಸ್ಯಾಂಟ್ರೋ ರವಿ ಬಂಧನದ ಕುರಿತಂತೆ ಕರ್ನಾಟಕ ಕಾಂಗ್ರೆಸ್ ಘಟಕ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದು, ರವಿ ಗೃಹಸಚಿವರೊಂದಿಗೆ ಅಲ್ಲಿಗೆ ಹೋಗಿದ್ದನೇ? ಅಲ್ಲಿ ಅವರಿಬ್ಬರ ನಡುವೆ ಒಪ್ಪಂದ ನಡೆದಿರಬಹುದೇ? ತಮ್ಮ ವಿರುದ್ದದ ಸಾಕ್ಷ್ಯ ನಾಶಕ್ಕಾಗಿ ಗುಜರಾತಿಗೆ ಹೋಗಿದ್ದರೆ? ಎಂದು ಪ್ರಶ್ನಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸ್ಯಾಂಟ್ರೋ ರವಿಯ ಆಪ್ತರಾದ ಗೃಹ ಸಚಿವ ಅರಗಜ್ಞಾನೇಂದ್ರ ಅವರು ಗುಜರಾತಿಗೆ ಹೋಗಿರುತ್ತಾರೆ, ಸ್ಯಾಂಟ್ರೋ ರವಿಯೂ ಗುಜರಾತಿಗೆ ಹೋಗಿರುತ್ತಾನೆ. ಬಂಧನವೂ ಗುಜರಾತಿನಲ್ಲಿ. ರವಿ ಗೃಹಸಚಿವರೊಂದಿಗೆ ಅಲ್ಲಿಗೆ ಹೋಗಿದ್ದನೇ? ಅಲ್ಲಿ ಅವರಿಬ್ಬರ ನಡುವೆ ಒಪ್ಪಂದ ನಡೆದಿರಬಹುದೇ? ತಮ್ಮ ವಿರುದ್ದದ ಸಾಕ್ಷ್ಯ ನಾಶಕ್ಕಾಗಿ ಗುಜರಾತಿಗೆ ಹೋಗಿದ್ದರೆ? ಎಂದು ಹೇಳಿದೆ. https://twitter.com/INCKarnataka/status/1613891285383000065?cxt=HHwWgsDRtdjk2OUsAAAA ಗುಜರಾತಿನಲ್ಲಿ ಸ್ಯಾಂಟ್ರೋ ರವಿ ನಿಮ್ಮ ಮದ್ಯೆ ನಡೆದ ಡೀಲಿಂಗ್ ಏನು?ವರ್ಗಾವಣೆ ದಂಧೆಯ ಸಾಕ್ಷ್ಯಗಳನ್ನು ಮುಚ್ಚಿಡಲು ಒಪ್ಪಂದ ಮಾಡಿಕೊಂಡಿರಾ?ಆತನ ಬಳಿ ಇದ್ದ ಹಲವು ಸಚಿವರ ಸಿಡಿಗಳನ್ನ ವಶಪಡಿಸಿಕೊಳ್ಳಲು ಹೋಗಿದ್ರಾ? ಅಥವಾ ಹೈಕಮಾಂಡ್‌ಗೆ ಭೇಟಿ ಮಾಡಿಸಿ ಆತನಿಗೆ ಉನ್ನತ ಹುದ್ದೆ ಕೊಡಿಸಲು…
ಮಡಿಕೇರಿ : ಮಂಗಳೂರು ವಿಶ್ವವಿದ್ಯಾನಿಲಯದ ಆವರಣ, ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳ ಸ್ನಾತಕ, ಸ್ನಾತಕೋತ್ತರ ಕೋರ್ಸುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿ ಇಂಗ್ಲೀಷ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಸಂಖ್ಯಾಶಾಸ್ತ್ರ, ಕೊಡವ ಭಾಷೆ ವಿಷಯಗಳಿಗೆ ಜನವರಿ, 16 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಆಡಳಿತ ಸೌಧದ ಸಿಂಡಿಕೇಟು ಸಭಾಂಗಣದಲ್ಲಿ ನೇರ ಸಂದರ್ಶನ ನಡೆಯಲಿದೆ. ಇಂಗ್ಲೀಷ್ ಬೆಳಗ್ಗೆ 10.30 ಗಂಟೆಯಿಂದ 11.30 ಗಂಟೆವರೆಗೆ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನಕ್ಕೆ ಬೆಳಗ್ಗೆ 11.30 ಗಂಟೆಯಿಂದ 12.30 ಗಂಟೆವರೆಗೆ, ಸಂಖ್ಯಾ ಶಾಸ್ತ್ರ ಮಧ್ಯಾಹ್ನ 12.30 ಗಂಟೆಯಿಂದ 1.30 ಗಂಟೆಯವರೆಗೆ ಹಾಗೂ ಕೊಡವ ಭಾಷೆ ಮಧ್ಯಾಹ್ನ 2.30 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕ ಹೊಂದಿದ್ದು (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ ಶೇ.50 ಅಂಕಗಳು), ಯುಜಿಸಿ, ಎನ್‍ಇಟಿ/ ಎಸ್‍ಎಲ್‍ಇಟಿ ಉತ್ತೀರ್ಣತೆ, ಎಂ.ಫಿಲ್/ ಪಿಎಚ್‍ಡಿ ಪದವಿ ಪ್ರಮಾಣಪತ್ರ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಅವಶ್ಯಕತೆಗೆ…
ಮಡಿಕೇರಿ: ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 2023-24ನೇ ಸಾಲಿಗೆ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರವು ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ 6ನೇ ತರಗತಿಯಿಂದ 10 ನೇ ತರಗತಿಯವರೆಗೆ ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 06 ರಿಂದ 12 ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಪಠ್ಯ ಪುಸ್ತಕ ಹಾಗೂ ಇನ್ನಿತರೆ ಸಾಮಾಗ್ರಿಗಳನ್ನು ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ರೂ.2.50 ಲಕ್ಷಗಳು, ಪರಿಶಿಷ್ಟ ವರ್ಗದವರಿಗೆ ರೂ.2.50 ಲಕ್ಷಗಳು…
ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಫೆಬ್ರವರಿ 17 ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಏಪ್ರಿಲ್,ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಾರಿ ಸಿಎಂ ಬೊಮ್ಮಾಯಿ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಮಾದರಿಯಲ್ಲಿ ರಾಜ್ಯದಾದ್ಯಂತ ಎಲ್ಲಾ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಬಜೆಟ್ ನಲ್ಲಿ ರಾಜ್ಯದ 55 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ, ಮೊದಲ ಹಂತದಲ್ಲಿ 155 ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಾಜ್ಯದ ಪಟ್ಟಣ, ನಗರವಾಸಿಗಳ ಮನೆಗಳಿಗೆ ಮಾಸಿಕ 10,000 ಲೀಟರ್ ಮಿತಿಗೆ ಒಳಪಟ್ಟು ಉಚಿತವಾಗಿ ನೀರು ಪೂರೈಕೆ ಯೋಜನೆ ಜಾರಿಗೊಳಿಸುವ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. https://kannadanewsnow.com/kannada/breaking-news-mother-son-commit-suicide-due-to-family-feud-in-ramanagara/ https://kannadanewsnow.com/kannada/bigg-news-big-shock-for-pet-shop-owners-registration-mandatory-with-animal-welfare-board/
ರಾಮನಗರ : ರಾಮನಗರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಮನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಹರ್ಷ (25) ಎಂಬಾತ ತನ್ನ ತಾಯಿ ವಿಜಯಲಕ್ಷ್ಮೀ (50) ಜೊತೆಗೆ ರಾತ್ರಿ ಊಟದ ವಿಚಾರವಾಗಿ ಜಗಳವಾಗಿದೆ. ಇದರಿಂದ ಮನನೊಂದು ವಿಜಲಕ್ಷ್ಮೀ ನೀರಿನ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಸಾವಿನ ಸುದ್ದಿ ತಿಳಿದ ಮಗ ಹರ್ಷ ನೇಣಿಗೆ ಶರಣಾಗಿದ್ದಾನೆ. ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/bigg-news-big-shock-for-pet-shop-owners-registration-mandatory-with-animal-welfare-board/