Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ಬೆಂಗಳೂರು : ಸಿಲಿಕಾನ್ ಸಿಟಿಯ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮಾರಕ ಸೋಂಕು ಇಲ್ಲಿನ ನಿವಾಸಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಪಾದರಾಯನಪುರದಲ್ಲಿ ನಿನ್ನೆ ಸಂಜೆಯಿಂದ 7 ಮಂದಿಯಲ್ಲಿ ಮತ್ತೆ ಕೊರೊನಾ ಸೋಂಕು ದೃಢಪಟ್ಟಿದೆ.
ಪಾದರಾಯನಪುರದಲ್ಲಿ ಕಳೆದ ರಾತ್ರಿ ನಾಲ್ವರಲ್ಲಿ ಹಾಗೂ ಇಂದು ಬೆಳಗ್ಗೆ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಇವರೆಲ್ಲ ಕೊರೊನಾ ಸೋಂಕಿತ ರೋಗಿ ನಂಬರ್ 453 ಹಾಗೂ 449ರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಇನ್ನು ನಿನ್ನೆ ಇಬ್ಬರು ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದೆ. ಪಾದರಾಯನಪುರ 10ನೇ ಕ್ರಾಸ್ ನಿವಾಸಿ 19 ವರ್ಷದ 8 ತಿಂಗಳು ಗರ್ಭಿಣಿಗೆ ಸೋಂಕು ತಗುಲಿದೆ. ಮಹಿಳೆಯ ಪತಿ ರೋಗಿ 706 ಅವರಿಗೆ ಸಾಮೂಹಿಕ ಪರೀಕ್ಷೆಯಲ್ಲಿ ಕೊರೊನಾ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಪತಿಯ ಸಂಪರ್ಕದಲ್ಲಿದ್ದರಿಂದ ಈ ಗರ್ಭಿಣಿಗೂ ಸೋಂಕು ತಗುಲಿದೆ. ಮಹಿಳೆ ಹೊಟ್ಟೆ ನೋವು ಎಂದು ನಗರದ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳೆಯ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ಇದೀಗೆ ಮಹಿಳೆ ಕೊರೊನಾ ತಗುಲಿದ್ದು ದೃಢವಾಗಿದ್ದು, ವಾಣಿ ವಿಲಾಸ ಆಸ್ಪತ್ರೆಯಿಂದ ಗರ್ಭಿಣಿಯನ್ನು ಸ್ಥಳಾಂತರಿಸಲಾಗಿದೆ…
ಉತ್ತರ ಕನ್ನಡ : ಒಂದೇ ದಿನದಲ್ಲಿ 12 ಮಂದಿಯಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಭಟ್ಕಳ ಕೊರೊನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿದ್ದು, ಇಡೀ ಪಟ್ಟಣವನ್ನು ಸೀಲ್ ಡೌನ್ ಮಾಡಲಾಗಿದೆ. ಭಟ್ಕಳದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, ಇಡೀ ಪ್ರದೇಶದಲ್ಲಿ ಹೆಚ್ಚಿನ ಆತಂಕ ಮನೆಮಾಡಿದೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದ ಕುಟುಂಬ ಇಡೀ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದ್ದು, ಐದೂವರೆ ತಿಂಗಳ ಮಗುವಿನಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೇ 5ರಂದು ಪಟ್ಟಣದ ಮದೀನಾ ಕಾಲೋನಿಯ 18 ವರ್ಷದ ಯುವತಿ ರೋಗಿ ನಂಬರ್ 659ರಿಂದಲೇ 12 ಜನರಿಗೆ ಸೋಂಕು ತಗುಲಿದೆ. ಯುವತಿಯ ಕುಟುಂಬದ 10 ಮಂದಿ ಹಾಗೂ ಪಕ್ಕದ ಮನೆಯಾಕೆ, ಆಕೆ ಗೆಳತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅತೀ ಹೆಚ್ಚು ಪಾಸಿಟಿವ್ ಬಂದ ಭಟ್ಕಳದ ಮದೀನ ಕಾಲೋನಿಯನ್ನು ಹಾಟ್ಸ್ಪಾಟ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಇಡೀ ಭಟ್ಕಳವನ್ನು 5 ವಲಯಗಳಾಗಿ ವಿಂಗಡಿಸಿ ಪ್ರತಿ ವಲಯಕ್ಕೆ ಓರ್ವ ಪೊಲೀಸ್ ಅಧಿಕಾರಿ ಹಾಗೂ ವಲಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಇಂದಿನಿಂದ ಭಟ್ಕಳದಲ್ಲಿ ಖಾಸಗಿ ವೈದ್ಯಕೀಯ ಸೇವೆ, ಮೆಡಿಕಲ್, ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲವೂ ಬಂದ್ ಆಗಿದೆ. ಇನ್ನು ಸೋಂಕಿಗೆ ಒಳಗಾದ ಹನ್ನೆರಡು ಜನರನ್ನ ಕಾರವಾರದ ವಿಶೇಷ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ…
ನವದೆಹಲಿ : ಲಾಕ್ ಡೌನ್ ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ವಂದೇ ಭಾರತ್ ಮಿಷನ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಾರ್ಯಾಚರಣೆ ಕೈಗೊಂಡಿದೆ. ಈಗಾಗಲೇ ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿವಿಧೆಡೆ ಸಿಲುಕಿದ್ದ ನೂರಾರು ಪ್ರಯಾಣಿಕರನ್ನು ಯಶಸ್ವಿಯಾಗಿ ಕರೆತರಲಾಗಿದ್ದು, ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ. ಇದರ ಬೆನ್ನಲ್ಲೇ ಮೇ 15 ರಿಂದ 2 ನೇ ಹಂತದಲ್ಲಿ ಮತ್ತೆ 7 ದೇಶಗಳಿಂದ ಭಾರತೀಯರನ್ನು ವಾಪಾಸ್ ಕರೆತರಲು ನಿರ್ಧರಿಸಲಾಗಿದೆ.
ಈಗಾಗಲೇ 2 ದಿನಗಳಿಂದ 12 ದೇಶಗಳಿಂದ 64 ವಿಮಾನ, 11 ಹಡಗುಗಳ ಮೂಲಕ ಅನಿವಾಸಿ ಭಾರತೀಯರನ್ನು ಕರೆತರಲಾಗುತ್ತಿದೆ. ಮಾಲ್ಡೀವ್ಸ್ನಲ್ಲಿರುವ ಭಾರತೀಯರನ್ನು ಸಮುದ್ರ ಸೇತು ಮೂಲಕ ಐಎನ್ಎಸ್ ಜಲಾಶ್ವ ಹಡಗಿನ ಮೂಲಕ ಕರೆತರಲಾಗುತ್ತಿದೆ. ದುಬೈ ಸಿಂಗಾಪುರ್, ಅಬುಧಾಬಿ ಮುಂತಾದ ದೇಶಗಳಿಂದ ಭಾರತೀಯರನ್ನು ಕರೆತರಲಾಗಿದೆ. ಮೇ 14ರವರೆಗೂ ಈ ರಕ್ಷಣಾ ಕಾರ್ಯಾಚರಣೆ ನಡೆಯಲಿದ್ದು, ಇದರ ಮುಂದುವರಿದ ಭಾಗವಾಗಿ ಮೇ15 ರಿಂದ 2ನೇ ಹಂತದ ವಂದೇ ಭಾರತ್ ಮಿಷನ್ ಶುರುವಾಗಲಿದೆ. 2ನೇ ಹಂತದಲ್ಲೂ 15 ಸಾವಿರ ಜನರನ್ನು ಕರೆತರಲು ತಯಾರಿ ನಡೆದಿದೆ. ಈ ಬಾರಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಜಕಿಸ್ತಾನ, ಖಜಕಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಾಗುತ್ತಿದ್ದು, ಸುಮಾರು 60 ಸಾವಿರ ಭಾರತೀಯರು ಭಾರತಕ್ಕೆ ಕರೆದೊಯ್ಯುವಂತೆ ಮನವಿ ಮಾಡಿದ್ದಾರೆ…
ಬೆಂಗಳೂರು : ರಾಜ್ಯ ಸರ್ಕಾರದಿಂದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಾಳೆಯಿಂದ ರಾಜ್ಯದ್ಯಂತ ಷರತ್ತುಗಳ ಮೇರೆಗೆ ಎಲ್ಲೆಡೆ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಈ ಕುರಿತಂತೆ ಅಬಕಾರಿ ಸಚಿವ ಎಚ್.ನಾಗೇಶ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಷರತ್ತುಗಳ ಮೇರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಈ ವೇಳೆ, ಎಲ್ಲೆಡೆ ಬಾರ್ ಗಳ ಮುಂದೆ ಎಣ್ಣೆ ಪ್ರಿಯರ ಉದ್ದುದ್ದ ಸಾಲುಗಳೇ ಕಂಡುಬಂದಿದ್ದವು. ಇದರೊಂದಿಗೆ ಕ್ಲಬ್ ಹಾಗೂ ಪಬ್ ಗಳ ಮಾಲೀಕರ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮಗೂ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಾಳೆಯಿಂದ ಎಲ್ಲ ಕ್ಲಬ್, ಪಬ್ ಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಈ ಕ್ಲಬ್, ಪಬ್ ಸೇರಿದಂತೆ ಎಲ್ಲೆಡೆ ಮದ್ಯವನ್ನು ಎಂಆರ್ ಪಿ ದರದಲ್ಲಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದರೊಂದಿಗೆ ಪಾರ್ಸಲ್ ವ್ಯವಸ್ಥೆಗಷ್ಟೇ ಅನುಮತಿ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇತರೇ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ….
ಬೆಂಗಳೂರು : ರಾಜ್ಯ ಸರ್ಕಾರದಿಂದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಾಳೆಯಿಂದ ರಾಜ್ಯದ್ಯಂತ ಷರತ್ತುಗಳ ಮೇರೆಗೆ ಎಲ್ಲೆಡೆ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಈ ಕುರಿತಂತೆ ಅಬಕಾರಿ ಸಚಿವ ಎಚ್.ನಾಗೇಶ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಷರತ್ತುಗಳ ಮೇರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಈ ವೇಳೆ, ಎಲ್ಲೆಡೆ ಬಾರ್ ಗಳ ಮುಂದೆ ಎಣ್ಣೆ ಪ್ರಿಯರ ಉದ್ದುದ್ದ ಸಾಲುಗಳೇ ಕಂಡುಬಂದಿದ್ದವು. ಇದರೊಂದಿಗೆ ಕ್ಲಬ್ ಹಾಗೂ ಪಬ್ ಗಳ ಮಾಲೀಕರ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮಗೂ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಾಳೆಯಿಂದ ಎಲ್ಲ ಕ್ಲಬ್, ಪಬ್ ಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಈ ಕ್ಲಬ್, ಪಬ್ ಸೇರಿದಂತೆ ಎಲ್ಲೆಡೆ ಮದ್ಯವನ್ನು ಎಂಆರ್ ಪಿ ದರದಲ್ಲಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದರೊಂದಿಗೆ ಪಾರ್ಸಲ್ ವ್ಯವಸ್ಥೆಗಷ್ಟೇ ಅನುಮತಿ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇತರೇ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ….
ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಶೀಘ್ರದಲ್ಲೇ ಹೃದ್ರೋಗ ಮತ್ತು ನರರೋಗ ವಿಭಾಗ ಆರಂಭವಾಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗ ಪ್ರಾರಂಭವಾಗಿ 10ವರ್ಷಗಳಾದರೂ ಹೃದ್ರೋಗ ಮತ್ತು ನರರೋಗ ವಿಭಾಗ ಇದುವರೆಗೆ ಪ್ರಾರಂಭವಾಗಿಲ್ಲ. ಇದೀಗ ಮೆಗ್ಗಾನ್ ಆಸ್ಪತ್ರೆಯ 3ಜನ ಹೃದ್ರೋಗ ತಜ್ಞರು ಮತ್ತು ಒಬ್ಬ ನರರೋಗ ತಜ್ಞರ ಸೇವೆಯನ್ನು ಪಡೆದುಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ಮತ್ತು ನರರೋಗ ವಿಭಾಗದ ಒಪಿಡಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವಿಭಾಗಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದ್ದಾರೆ. ಹುಟ್ಟಿನಿಂದಲೇ ಕಿವುಡುತನ ಇರುವ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲು ಮತ್ತು ವಾಕ್ಶ್ರವಣ ಕೇಂದ್ರದಲ್ಲಿ ಬಿಎಸ್ಸಿ ತರಗತಿಗಳನ್ನು ಆರಂಭಿಸಲು 4.84ಕೋಟಿ ರೂ. ಬಿಡುಗಡೆಯಾಗಿದ್ದು, ಒಂದು ವಾರದೊಳಗೆ ಇದರ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸಲಾಗಿದೆ ಎಂದರು.
ಇನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಕಾರ್ಡ್ ಎಂದು ನಿರ್ಬಂಧವಿಲ್ಲ. ಒಂದು ಕುಟುಂಬದ ಅರ್ಹ ಸದಸ್ಯರೆಲ್ಲರೂ ಜಾಬ್ ಕಾರ್ಡ್ಗೆ ಅರ್ಜಿ ಸಲ್ಲಿಸಿದರೆ ಕಾರ್ಡ್ ನೀಡಲಾಗುವುದು ಎಂದರು. ಇದೀಗ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಜನರು ಉದ್ಯೋಗಕ್ಕಾಗಿ ಮುಂದೆ ಬರುತ್ತಿದ್ದು, 15ದಿನಗಳ ಒಳಗಾಗಿ ಕೂಲಿ ಮೊತ್ತವನ್ನು ಪಾವತಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು…
ನವದೆಹಲಿ : ಮಾರಕ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ದೇಶದಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ಆನ್-ಆಫ್ ಸ್ವಿಚ್ ಅಲ್ಲ. ಈಗಾಗಲೇ ಲಕ್ಷಾಂತರ ಮಂದಿ ತೊಂದರೆಗೆ ಸಿಲುಕಿದ್ದು, ಮೇ.17ರ ಬಳಿಕ ಮುಂದೇನು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಇಂದು ಡಿಜಿಟಲ್ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಲಾಕ್ಡೌನ್ ಜಾರಿಯಲ್ಲಿರುವುದರಿಂದ ಉದ್ಯೋಗವಿಲ್ಲದೆ, ಹಣವಿಲ್ಲದೆ, ಊಟವಿಲ್ಲದೆ ಲಕ್ಷಾಂತರ ಮಂದಿ ತೊಂದರೆಗೀಡಾಗಿದ್ದಾರೆ. ಇಂತಹವರ ನೆರವಿಗೆ ಕೇಂದ್ರ ಸರ್ಕಾರ ಕೂಡಲೇ ಮುಂದಾಗಬೇಕಿದೆ. ಅದಕ್ಕಾಗಿ 65 ಸಾವಿರ ಕೋಟಿ ರೂ. ಅಗತ್ಯವಿದೆ. ಬಡವರು, ವಲಸಿಗರು, ಕೂಲಿ ಕಾರ್ಮಿಕರಿಗೆ ತುರ್ತಾಗಿ ನೆರವು ನೀಡಲು ಕೂಡಲೇ ಕೇಂದ್ರ ಸರ್ಕಾರ ಈ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿದ್ದು, ಮುಂದೆ ಇದರ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ದೇಶಿಯ ವಸ್ತುಗಳ ಬಳಕೆ ಹೆಚ್ಚು ಮಾಡುವುದರಿಂದ ದೇಶದ ಆರ್ಥಿಕತೆ ಸದೃಢವಾಗಲಿದೆ. ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಗಮನ ಹರಿಸಬೇಕೆಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರ ರೆಡ್, ಆರೇಂಜ್, ಗ್ರೀನ್ ಝೋನ್ ಗಳನ್ನು ನಿರ್ಧರಿಸುವುದು ಬೇಡ. ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ನಿರ್ಧರಿಸಲಿ. ಕೇಂದ್ರ ಸರ್ಕಾರ ಕೊರೋನಾ ಪರಿಸ್ಥಿತಿಯನ್ನು ಜಿಲ್ಲೆಗಳ ಮಟ್ಟದಲ್ಲೇ ನಿಭಾಯಿಸಬೇಕು. ಪ್ರಧಾನ ಮಂತ್ರಿಗಳ ಕಚೇರಿಯಿಂದ ಕೊರೊನಾ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ಮುಖ್ಯಮಂತ್ರಿಗಳ ಮೇಲೆ, ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಮೇಲೆ ಭರವಸೆ ಇಡಬೇಕು. ಇಲ್ಲದಿದ್ದರೆ ಕೊರೊನಾ ವಿರುದ್ಧ ಹೋರಾಟದಲ್ಲಿ ಸೋಲಲಿದ್ದೇವೆ ಎಂದರು. ಇನ್ನು ಕೇಂದ್ರ ಸರ್ಕಾರ ಲಾಕ್ಡೌನ್ ತೆರವುಗೊಳಿಸಿದ ಬಳಿಕ ಏನು ಮಾಡಬೇಕು ಎಂಬ ಯೋಜನೆ ರೂಪಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೇರಿ ಮುಂದಿನ ಕ್ರಮಗಳೇನು ಎಂಬ ಬಗ್ಗೆ ನಿರ್ಧರಿಸಬೇಕು. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಗಳು ಪಾರದರ್ಶಕವಾಗಿರಬೇಕು. ಆದರೆ ಸದ್ಯ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳನ್ನು ಪರಿಗಣಿಸುತ್ತಿಲ್ಲ ಎಂದು ಕಿಡಿಕಾರಿದರು. ಇನ್ನು ಆರೋಗ್ಯ ಸೇತು ಅ್ಯಪ್ ವಿಚಾರದಲ್ಲಿ ಪಾರದರ್ಶಕತೆ ಇರಬೇಕು. ಆ್ಯಪ್ ಅನ್ನು ಹ್ಯಾಕ್ ಮಾಡುವ ಸಾಧ್ಯತೆಗಳು ಈಗಾಗಲೇ ಸ್ಪಷ್ಟವಾಗಿವೆ. ಸಿಂಗಾಪುರ್ ದಲ್ಲೂ ಆ್ಯಪ್ ಬಳಸಲಾಗುತ್ತಿದೆ. ಭಾರತ ಅದೇ ಮಾದರಿಯಲ್ಲಿ ಪಾರದರ್ಶಕವಾಗಿರಬೇಕು ಎಂದು ಹೇಳಿದರು….
ನವದೆಹಲಿ : ಲಾಕ್ ಡೌನ್ ಸಡಿಲಿಕೆ ಮಾಡಿದ ಬಳಿಕ ದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಮದ್ಯ ಖರೀದಿಸಲು ಮದ್ಯಪ್ರಿಯರು ಗಂಟೆಗಟ್ಟಲೇ ಕ್ಯೂ ನಲ್ಲಿ ನಿಲ್ಲುತ್ತಿದ್ದಾರೆ. ಹೀಗಾಗಿ ಸಮಾಜದಲ್ಲಿ ಕೊರೋನಾ ಹರಡದಂತೆ ನೋಡಿಕೊಳ್ಳಲು ಹಾಗೂ ಸಾಮಾಜಿಕ ಅಂತರದ ಹಿತದೃಷ್ಟಿಯಿಂದ ಎಲ್ಲಾ ರಾಜ್ಯಗಳು ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡುವ ಬದಲು ಹೋಂ ಡೆಲಿವರಿ ಮಾಡುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಕುರಿತಂತೆ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿದರು. ಅಲ್ಲದೇ, ಸುಪ್ರೀಂಕೋರ್ಟ್ ಈ ಬಗ್ಗೆ ಯಾವುದೇ ಆದೇಶ ನೀಡುವುದಿಲ್ಲ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ನಿಯಮ ಪಾಲಿಸಲು ಆಯಾ ರಾಜ್ಯಗಳು ಗ್ರಾಹಕರ ಮನೆ ಬಾಗಿಲಿಗೆ ಮದ್ಯ ಪೂರೈಸುವುದು ಒಳಿತು ಎಂದು ಅಭಿಪ್ರಾಯಪಟ್ಟಿದೆ….
"We will not pass any order but the states should consider indirect sale/home delivery of liquor to maintain social distancing norms and standards", Justice Ashok Bhushan, heading the bench said. https://t.co/qCb6B9NMx0
ಬೆಂಗಳೂರು : ಒಂದೆಡೆ ದೇಶಾದ್ಯಂತ ಮಾರಕ ಕೊರೊನಾ ಸೋಂಕು ಆತಂಕ ಸೃಷ್ಟಿಸಿದ್ದು, ಮತ್ತೊಂದೆಡೆ ಲಾಕ್ ಡೌನ್ ನಿಂದ ನೌಕರರು, ಕೂಲಿಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏತನ್ಮಧ್ಯೆ, ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರು, ಹೂ ಬೆಳೆಗಾರರು, ಟ್ಯಾಕ್ಸಿ ಆಟೋ ಚಾಲಕರಿಗೆ ಪರಿಹಾರ ಧನ ನೀಡಿದ್ದಾರೆ. ಆದರೆ, ಕೆಲ ನೌಕರರು ತೊಂದರೆಯಲ್ಲಿದ್ದಾರೆ. ಈ ನೌಕರರಿಗೆ ಏಪ್ರಿಲ್ ತಿಂಗಳ ವೇತನ ಸಿಕ್ಕಿಲ್ಲ. ಹೀಗಾಗಿ ವೇತನ ಕಡಿತ ಮಾಡಿದವರಿಗೆ ಸರ್ಕಾರ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಉದ್ಯಮವಾಗಿರಲಿ ಅಥವಾ ಕೈಗಾರಿಕೆಗಳಾಗಿರಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ನೌಕರರಿಗೆ ಸಂಪೂರ್ಣ ವೇತನವನ್ನು ಮಾಲೀಕರು ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಪಾವತಿ ಮಾಡಬೇಕೆಂದು ಆದೇಶ ಹೊರಡಿಸಿದೆ. ಒಂದು ವೇಳೆ ವೇತನ ನೀಡದಿದ್ದರೆ ಯಾವ ಕಾರಣಕ್ಕಾಗಿ ವೇತನ ಕಡಿತ ಮಾಡಲಾಗಿದೆ ಅಥವಾ ನೀಡಿಲ್ಲ ಎಂದು ಮಾಲೀಕರು ವಿವರಣೆ ನೀಡುವಂತೆ ಕೋರಿ ರಾಜ್ಯ ಸರ್ಕಾರ ಶೋಕಾಸ್ ನೊಟೀಸ್ ಜಾರಿ ಮಾಡಲಿದೆ. ಆದರೆ ಈ ನಿಯಮ ತಿಂಗಳಿಗೆ 21 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ನೌಕರರಿಗೆ ಮತ್ತು ನ್ಯಾಯಾಲಯದಿಂದ ಕೆಲಸಗಾರರು ಎಂದು ಘೋಷಿಸಲ್ಪಟ್ಟ ನೌಕರರಿಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಇನ್ನು ವೇತನ ಕಡಿತ ಮಾಡಿದ್ದರೆ ಅಥವಾ ಮಾಲೀಕರು ಸಂಬಳ ನೀಡದಿದ್ದರೆ ನೌಕರರು www.dasoha2020.comನಡಿ ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ. ತಮ್ಮಲ್ಲಿ ಹಣವಿಲ್ಲ, ಜೀವನ ನಿರ್ವಹಣೆಗೆ ಕಷ್ಟವಾಗುತ್ತದೆ ಎಂದು ನೌಕರರು ಸಾಬೀತುಪಡಿಸಬೇಕು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ…
ನವದೆಹಲಿ : ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ಇಂದು ಮುಂಜಾನೆ ಸಂಭವಿಸಿದ ಗೂಡ್ಸ್ ರೈಲು ದುರಂತಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆ ಸಂಭವಿಸಿದ ಗೂಡ್ಸ್ ರೈಲು ದುರಂತದಲ್ಲಿ ಮಧ್ಯಪ್ರದೇಶ ಮೂಲದ 16 ಮಂದಿ ವಲಸೆ ಕಾರ್ಮಿಕರು ಬಲಿಯಾದ ಸುದ್ದಿ ಕೇಳಿ ನನಗೆ ಆಘಾತವಾಯಿತು. ವಲಸೆ ಕಾರ್ಮಿಕರ ಆತ್ಮಕ್ಕೆ ಶಾಂತಿಸಿಗಲಿ, ಈ ಪ್ರಕರಣದಿಂದ ನಮಗೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ..
मालगाड़ी से कुचले जाने से मजदूर भाई-बहनों के मारे जाने की ख़बर से स्तब्ध हूं। हमें अपने राष्ट्र निर्माणकर्ताओं के साथ किये जा रहे व्यवहार पर शर्म आनी चाहिए। मारे गए लोगों के परिवारों के प्रति संवेदना व्यक्त करता हूं और घायलों के शीघ्र स्वस्थ होने की प्रार्थना करता हूं।
ಹೈದರಾಬಾದ್ : ದೇಶಾದ್ಯಂತ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಏತನ್ಮಧ್ಯೆ, ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 54 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1887ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಆಂಧ್ರಪ್ರದೇಶದ ನೋಡಲ್ ಅಧಿಕಾರಿಹೆಲ್ತ್ ಬುಲೆಟಿನ್ ವರದಿ ನೀಡಿದ್ದು, ಒಂದೇ ದಿನದಲ್ಲಿ 54 ಮಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಮೂರು ಮಂದಿ ಬಲಿಯಾಗಿದ್ದಾರೆ. ಒಟ್ಟಾರೆ, ಈವರೆಗೆ 1887 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಸೋಂಕಿನಿಂದ ಬಳಲುತ್ತಿದ್ದ 842 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ…
54 new positive cases&3 deaths reported in Andhra Pradesh in last 24 hours, taking the total number of positive cases to 1887. Total discharged are 842 till date. Death toll rise to 41: State #COVID19 Nodal Officer pic.twitter.com/EiIzJddIH3
ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತಲ್ಲಣ ಸೃಷ್ಟಿಸಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಇಂದು ಮತ್ತೆ ಬರೋಬರಿ 45 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕು ಪೀಡಿತರ ಸಂಖ್ಯೆ 750 ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ರಾಜ್ಯದಲ್ಲಿ ಬರೋಬರಿ 45 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. ಒಂದೇ ದಿನ ಇಷ್ಟು ಏಕಾಏಕಿ ಸೋಂಕಿತರ ಸಂಖ್ಯೆ ಕಂಡುಬಂದಿರುವುದು ಇದೇ ಮೊದಲು ಎಂದು ಅಂದಾಜಿಸಲಾಗಿದೆ. ಇನ್ನು ಸೋಂಕಿತರ ಪೈಕಿ ಭಟ್ಕಳದಲ್ಲಿ-12, ಬೆಳಗಾವಿ ಜಿಲ್ಲೆಯಲ್ಲಿ 11, ದಾವಣಗೆರೆ ಜಿಲ್ಲೆಯಲ್ಲಿ 14 ಬೆಂಗಳೂರಿನಲ್ಲಿ 7, ಬಳ್ಳಾರಿಯ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇಂದು ಸೋಂಕು ಪತ್ತೆಯಾಗಿರುವ 45 ಮಂದಿಯ ಪೈಕಿ 24 ಮಂದಿ ಮಹಿಳೆಯರಾಗಿದ್ದು, ಐದು ತಿಂಗಳ ಹಸುಗೂಸಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ನು ಬೆಳಗಾವಿಯ ಹಿರೇಬಾಗೇವಾಡಿಯ 128 ಸಂಖ್ಯೆಯ ರೋಗಿಯಿಂದ ಪಕ್ಕದ ಮನೆಯವರಿಗೆ ಸೋಂಕು ತಗುಲಿದೆ. ಇನ್ನು ಇಂದು ಸೋಂಕು ಪತ್ತೆಯಾದವರ ಪೈಕಿ 10 ಮಂದಿಗೆ ತಬ್ಲೀಘ್ ನಂಟು ಇದೆ ಎಂಬುದು ಸೋಂಕಿತರ ಟ್ರಾವಲ್ ಹಿಸ್ಟರಿ ಮೂಲಕ ಬಯಲಾಗಿದೆ. ಇನ್ನು ರಾಜ್ಯದಲ್ಲಿ ಸೋಂಕು ಪತ್ತೆಯಾಗಿರುವ 750 ಮಂದಿಯಲ್ಲಿ 371 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿಗೆ ತುತ್ತಾಗಿದ್ದ 30 ಮಂದಿ ಡೆಡ್ಲಿ ಕೊರೊನಾಗೆ ಬಲಿಯಾಗಿದ್ದಾರೆ….
45 new #COVID19 positive cases have been reported from 5 PM yesterday to 12 noon today. Total number of positive cases in the state stand at 750, this includes 30 deaths & 371 discharges: Health Department, Karnataka pic.twitter.com/IAdM9qYQsc
ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತಲ್ಲಣ ಸೃಷ್ಟಿಸಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಇಂದು ಮತ್ತೆ ಬರೋಬರಿ 45 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕು ಪೀಡಿತರ ಸಂಖ್ಯೆ 750 ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ರಾಜ್ಯದಲ್ಲಿ ಬರೋಬರಿ 45 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. ಒಂದೇ ದಿನ ಇಷ್ಟು ಏಕಾಏಕಿ ಸೋಂಕಿತರ ಸಂಖ್ಯೆ ಕಂಡುಬಂದಿರುವುದು ಇದೇ ಮೊದಲು ಎಂದು ಅಂದಾಜಿಸಲಾಗಿದೆ. ಇನ್ನು ಸೋಂಕಿತರ ಪೈಕಿ ಭಟ್ಕಳದಲ್ಲಿ-12, ಬೆಳಗಾವಿ ಜಿಲ್ಲೆಯಲ್ಲಿ 11, ದಾವಣಗೆರೆ ಜಿಲ್ಲೆಯಲ್ಲಿ 14 ಬೆಂಗಳೂರಿನಲ್ಲಿ 7, ಬಳ್ಳಾರಿಯ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ…
ನವದೆಹಲಿ : ಪಂಜಾಬ್ ನಲ್ಲಿ ದುರ್ಘಟನೆ ಸಂಭವಿಸಿದೆ. ಭಾರತೀಯ ವಾಯುಪಡೆಗೆ ಸೇರಿದ ಮಿಗ್ -29 ವಿಮಾನ ಇಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ಪೈಲೆಟ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಂಜಾಬ್ ನ ಹೋಶಿಯಾರ್ ಪುರ ಸಮೀಪದ ಆದಮ್ ಪುರದಲ್ಲಿ ಇಂದು ಬೆಳಗ್ಗೆ ಭಾರತೀಯ ವಾಯುಪಡೆಯ ಯುದ್ದ ವಿಮಾನ ಎಂದಿನಂತೆ ಹಾರಾಟ ನಡೆಸಿತ್ತು. ಈ ವೇಳೆ, ಏಕಾಏಕಿ ವಿಮಾನ ಪತನಗೊಂಡಿದ್ದು, ಅದೃಷ್ಟವಶಾತ್ ಅದರಲ್ಲಿದ್ದ ಪೈಲೆಟ್ ಗಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕ ನಿರ್ಮಾಣವಾಗಿದ್ದು, ಭಾರತೀಯ ವಾಯುಪಡೆ ಘಟನೆ ಹಿನ್ನೆಲೆಯಲ್ಲಿ ಮಾಹಿತಿ ಕಲೆಹಾಕುತ್ತಿದೆ.
ಮುಂಬೈ : ಮಹಾರಾಷ್ಟ್ರದ ಔರಂಗಬಾದ್ ಬಳಿ ರೈಲ್ವೆ ಹಳಿ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ 17 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಏತನ್ಮಧ್ಯೆ, ದುರಂತದಲ್ಲಿ ಮೃತಪಟ್ಟ ದುರ್ದೈವಿಗಳ ಕುಟುಂಬಕ್ಕೆ ಮಹಾರಾಷ್ಟ್ರ ಸರ್ಕಾರ ತಲಾ 5 ಲಕ್ಷ ರೂ.ಪರಿಹಾರ ಘೋಷಿಸಿದೆ.
ಘಟನೆ ಕುರಿತಂತೆ ಆಘಾತ ವ್ಯಕ್ತಪಡಿಸಿರುವ ಸಿಎಂ ಉದ್ಧವ್ ಠಾಕ್ರೆ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಇನ್ನು ಮಧ್ಯಪ್ರದೇಶದ ವಲಸೆ ಕಾರ್ಮಿಕರು ನಡೆದುಕೊಂಡೇ ತಮ್ಮ ಊರು ತಲುಪಲು ನಿರ್ಧರಿಸಿ ರೈಲು ಹಳಿ ಮೇಲೆ ಸಾಗುತ್ತಿದ್ದರು. ನಡೆದು ನಡೆದು ಸುಸ್ತಾಗಿದ್ದ ಪರಿಣಾಮ ಕಳೆದ ರಾತ್ರಿ ರೈಲು ಹಳಿಯ ಮೇಲೆ ಮಲಗಿದ್ದರು. ಇಂದು ಮುಂಜಾನೆ ಔರಂಗಬಾದ್ ಗೆ ತೆರಳುತ್ತಿದ್ದ ಗೂಡ್ಸ್ ರೈಲು ಹಳಿ ಮೇಲೆ ಮಲಗಿದ್ದವರ ಮೇಲೆ ಹರಿದು 17 ಮಂದಿ ಬಲಿಯಾಗಿದ್ದಾರೆ. ಇದೇ ವೇಳೆ, ಘನಟೆಯಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಕೂಡ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಇದೇ ವೇಳೆ, ಘಟನೆ ಸಂಬಂಧ ತನಿಖೆಗೂ ರೈಲ್ವೆ ಇಲಾಖೆ ಆದೇಶಿಸಿದೆ…
Rs 5 lakhs each has been announced as ex gratia to families of the deceased in Karmad (Aurangabad) train accident: Maharashtra Chief Minister's Office pic.twitter.com/GweBlaYF0W
ಬೆಂಗಳೂರು : ಸಿಲಿಕಾನ್ ಸಿಟಿಯ ಪಾದರಾಯನಪುರದಲ್ಲಿ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪ್ರದೇಶವನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಆದರೆ, ಇಲ್ಲಿನ ನಿವಾಸಿಗಳು ಮಾತ್ರ ಯಾವುದೇ ಭೀತಿಯಿಲ್ಲದೇ, ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ಸಂಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾದರಾಯನಪುರದಲ್ಲಿ ಮತ್ತೆ ಸೀಲ್ ಡೌನ್ ಮಾಡಲಾಗಿದೆ.
ಪಾದರಾಯನಪುರದಲ್ಲಿ ಇಂದು ಬೆಳಗ್ಗೆ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಿವಾಸಿಗಳು, ವಾಹನಗಳ ಸಂಚಾರವಿತ್ತು. ಅಗತ್ಯ ವಸ್ತುಗಳ ಖರೀದಿ ನೆಪವೊಡ್ಡಿ ನಿವಾಸಿಗಳು ಕ್ಯಾರೆ ಅನ್ನದೇ ರಸ್ತೆಗಿಳಿದಿದ್ದರು. ಹೀಗಾಗಿ ಸ್ಥಳೀಯರನ್ನು ಪ್ರಶ್ನಿಸಿದಾಗ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು. ಅಲ್ಲದೇ, ರಸ್ತೆಗಳನ್ನು ಮುಚ್ಚಲು ಹಾಕಿದ್ದ ಬೋರ್ಡ್ ಗಳು ಶೀಟ್ ಗಳನ್ನೇ ಪಕ್ಕಕ್ಕೆ ಸರಿಸಿ ನಿವಾಸಿಗಳು ಡೋಂಟ್ ಕೇರ್ ಎಂಬಂತೆ ವರ್ತಿಸಿದ್ದರು. ಇದರೊಂದಿಗೆ ಪಾದರಾಯನಪುರದಲ್ಲಿ ಈ ಹಿಂದೆ ಪುಂಡಾಟ ನಡೆಸಿದ್ದ ವ್ಯಕ್ತಿಯೊಬ್ಬನ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇನ್ನು ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪಾದರಾಯನಪುರ ಏರಿಯಾವನ್ನು ಕಂಪ್ಲೀಟ್ ಸೀಲ್ ಡೌನ್ ಮಾಡಿದ್ದಾರೆ. ಸ್ಥಳದಲ್ಲಿ ಬ್ಯಾರಿ ಕೇಡ್ ಗಳನ್ನು ಹಾಕಿ ತೆರೆದಿದ್ದ ರಸ್ತೆಗಳನ್ನು ಕ್ಲೋಸ್ ಮಾಡಿದ್ದಾರೆ. ಅಲ್ಲದೇ, ಸ್ಥಳದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಿದ್ದು, ಮತ್ತೊಂದು ಕೆಎಸ್ ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಗರುಡಪಡೆ ಇಡೀ ಏರಿಯಾದಲ್ಲಿ ಗಸ್ತು ತಿರುಗುತ್ತಿದೆ….
ಭೋಪಾಲ್ : ಮಹಾರಾಷ್ಟ್ರದ ಔರಂಗಬಾದ್ ಬಳಿ ರೈಲ್ವೆ ಹಳಿ ಮೇಲೆ ಮಲಗಿದ್ದ ಮಧ್ಯಪ್ರದೇಶದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು ದುರ್ಘಟನೆ ಸಂಭವಿಸಿದೆ. ದುರಂತದಲ್ಲಿ ಸಾವನ್ನಪ್ಪಿದ ದುರ್ದೈವಿಗಳ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಲಾಕ್ಡೌನ್ನಿಂದ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಮಧ್ಯಪ್ರದೇಶದ ಕಾರ್ಮಿಕರು ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ನಡೆದು ನಡೆದು ಸುಸ್ತಾಗಿದ್ದ ಕಾರ್ಮಿಕರು ವಿಶ್ರಾಂತಿಗಾಗಿ ಕಳೆದ ರಾತ್ರಿ ರೈಲು ಹಳಿಯ ಮೇಲೆ ಮಲಗಿದ್ದರು. ಆರೆ, ಇಂದು ಮುಂಜಾನೆ 5 ಗಂಟೆ ವೇಳೆಗೆ ಜಾಲ್ನಾದಿಂದ ಔರಂಗಾಬಾದ್ನತ್ತ ತೆರಳುತ್ತಿದ್ದ ಗೂಡ್ಸ್ ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದಿದ್ದು, ಪರಿಣಾಮ 17 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಐವರ ಸ್ಥಿತಿ ಚಿಂತಾಜನಕವಾಗಿದೆ.
ಜಾಲ್ನಾದಿಂದ 170 ಕಿ.ಮೀ. ದೂರದ ಭುವಸಾಲ್ಗೆ ನಡೆದುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕರು ಇನ್ನು 45 ಕಿ.ಮೀ. ನಡೆದರೆ ಊರು ಸೇರುತ್ತಿದ್ದರು. ಆದರೆ, ಅಷ್ಟರಲ್ಲೇ ಗೂಡ್ಸ್ ರೈಲು ರೂಪದಲ್ಲಿ ಬಂದಿರುವ ಜವರಾಯ 17 ಮಂದಿಯ ಪ್ರಾಣವನ್ನು ಬಲಿಪಡೆದಿದ್ದಾನೆ. ಘಟನೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ. ದುರಂತದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ರೈಲ್ವೆ ಇಲಾಖೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ಇಂದು ಮುಂಜಾನೆ, ಗೂಡ್ಸ್ ರೈಲಿನ ಹಳಿಯ ಮೇಲೆ ಜನರು ಮಲಗಿರುವುದು ರೈಲಿನ ಲೋಕೋ ಪೈಲಟ್ ಗಮನಕ್ಕೆ ಬಂದಿತ್ತು. ತಕ್ಷಣ ಅವರು ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗದೆ ರೈಲು ಜನರ ಮೇಲೆ ಹರಿದಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ…
ನವದೆಹಲಿ : ಲಾಕ್ ಡೌನ್ ನಿಂದ ವಿದೇಶಗಳಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇಂದು ಮಾಲೆಯಿಂದ ಐಎನ್ಎಸ್ ಜಲಾಶ್ವ ಹಡಗು ಹೊರಡಲಿದೆ. ನಿನ್ನೆಯೇ ಮಾಲೆ ಬಂದರು ತಲುಪಿದ್ದ ಐಎನ್ಎಸ್ ಜಲಾಶ್ವ ಸಮುದ್ರ ಸೇತು ಮೂಲಕ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಯುಎಇ ಮತ್ತು ಮಾಲ್ಡೀವ್ಸ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ನೌಕಾಸೇನೆಯ ಐಎನ್ಎಸ್ ಜಲಾಶ್ವ, ಐಎನ್ಎಸ್ ಮಗಾರ್, ಐಎನ್ಎಸ್ ಶಾರ್ದೂಲ್ ಹಡಗುಗಳನ್ನು ಕಳುಹಿಸಲಾಗಿದೆ. ನಿನ್ನೆಯಿಂದಲೇ ಮಾಲೆಯಲ್ಲಿ ಭಾರತೀಯರ ಆರೋಗ್ಯ ತಪಾಸಣೆ ಕಾರ್ಯ ನಡೆದಿದೆ. ಸದ್ಯದಲ್ಲೇ ಮಾಲೆಯಿಂದ ಐಎನ್ಎಸ್ ಜಲಾಶ್ವ ಹೊರಡಲಿದ್ದು, ಮುಂಬೈ ಬಂದರು ತಲುಪಲಿದೆ. ಬಳಿಕ ಅಲ್ಲಿ ಮತ್ತೆ ಆರೋಗ್ಯ ತಪಾಸಣೆ ನಡೆಸಿ ಅನಂತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಇನ್ನು ಮೇ 7ರಿಂದ 14ರವರೆಗೆ 64 ವಿಮಾನಗಳ ಮೂಲಕ 14,800 ಜನರನ್ನು ಕರೆತರಲು ನಿರ್ಧರಿಸಲಾಗಿದೆ. ಮೊದಲ ವಿಮಾನ ನಿನ್ನೆ ಅಬುದಾಬಿಯಿಂದ ಕೇರಳದ ಕೊಚ್ಚಿಗೆ ತಲುಪಿದ್ದು, 181 ಪ್ರಯಾಣಿಕರು ಬಂದಿಳಿದಿದ್ದಾರೆ. ಇನ್ನು ಯುಎಇ, ಅಮೆರಿಕ, ಇಂಗ್ಲೆಂಡ್, ಮಲೇಷ್ಯಾ, ಸಿಂಗಾಪುರ್, ಫಿಲಿಪ್ಪೀನ್ಸ್, ಸೌದಿ ಅರೇಬಿಯ, ಕತಾರ್, ಬಾಂಗ್ಲಾದೇಶ, ಬಹ್ರೇನ್, ಕುವೈತ್ ಮತ್ತಿತರ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ತಾಯ್ನಾಡಿದೆ ವಾಪಾಸ್ ಕರೆತರಲಾಗುತ್ತಿದೆ…
#WATCH Preparations begin on INS Jalashwa to receive Indian nationals who will be evacuated from Maldives under operation. Passengers to board the ship shortly. #SamudraSetu. pic.twitter.com/BmQqmol05E
ಬೆಂಗಳೂರು : ಪಾದರಾಯನಪುರದಲ್ಲಿ ಮಾರಕ ಕೊರೊನಾ ಸೋಂಕು ಮತ್ತಷ್ಟು ಆತಂಕ ತಂದೊಡ್ಡಿದೆ. ಪಾದರಾಯನಪುರದಲ್ಲಿ ಈ ಹಿಂದೆ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದ ಪುಂಡರ ಪೈಕಿ ಒಬ್ಬನ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಡೀ ಪ್ರದೇಶದಲ್ಲಿ ಮತ್ತಷ್ಟು ಭೀತಿ ಎದುರಾಗಿದೆ.
ಪಾದರಾಯನಪುರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲು ತೆರಳಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಇಲ್ಲಿನ ಸ್ಥಳೀಯರು ಹಲ್ಲೆಗೆ ಮುಂದಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 120ಕ್ಕೂ ಹೆಚ್ಚು ಜನರನ್ನು ಬಂಧಿಸಿ ರಾಮನಗರ ಜೈಲಿನಲ್ಲಿ ಇಡಲಾಗಿತ್ತು. ಆದರೆ, ಬಂಧಿತರಲ್ಲೂ ಕೆಲವರಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಅವರನ್ನು ಮತ್ತೆ ಬೆಂಗಳೂರಿನ ಹಜ್ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಇದೇ ವೇಳೆ, ಪಾದರಾಯನಪುರವನ್ನು ಸೀಲ್ ಡೌನ್ ಮಾಡಲಾಗಿತ್ತು. ಆ ಬಳಿಕ ಪಾದರಾಯನಪುರದಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಸದ್ಯ ಈಗ ಮತ್ತೆ ಪಾದರಾಯನಪುರದಲ್ಲೇ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿನ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ…
ನವದೆಹಲಿ : ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ನಡೆದ ರೈಲು ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸುವುದಾಗಿ ಪ್ರಧಾನಿ ಅಭಯ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ನಡೆದ ರೈಲು ದುರಂತದಲ್ಲಿ ವಲಸೆ ಕಾರ್ಮಿಕರ ಪ್ರಾಣಕ್ಕೆ ಹಾನಿಯಾಗಿದ್ದು ತೀವ್ರ ಸಂಕಟ ತರಿಸಿದೆ. ಘಟನೆ ಕುರಿತಂತೆ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದು, ಅಗತ್ಯವಿರುವ ಎಲ್ಲ ಸಹಕಾರ ಒದಗಿಸುತ್ತಿರುವುದಾಗಿ” ತಿಳಿಸಿದ್ದಾರೆ.
Extremely anguished by the loss of lives due to the rail accident in Aurangabad, Maharashtra. Have spoken to Railway Minister Shri Piyush Goyal and he is closely monitoring the situation. All possible assistance required is being provided.
ಇನ್ನು ಘಟನೆಗೆ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಕೂಡ ವಿಷಾಧ ವ್ಯಕ್ತಪಡಿಸಿದ್ದಾರೆ. “ಘಟನಾ ಹಿನ್ನೆಲೆಯಲ್ಲಿ ಪರಿಹಾರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಘಟನೆ ಸಂಬಂಧ ವಿಚಾರಣೆಗೆ ಆದೇಶಿಸಲಾಗಿದೆ. ದುರ್ಘಟನೆಯಲ್ಲಿ ಬಲಿಯಾದ ದುರ್ದೈವಿಗಳಿಗೆ ಶಾಂತಿ ಸಿಗಲಿದೆಂದು ಪ್ರಾರ್ಥನೆ ಸಲ್ಲಿಸುವುದಾಗಿ” ತಿಳಿಸಿದ್ದಾರೆ….
आज 5:22 AM पर नांदेड़ डिवीजन के बदनापुर व करमाड स्टेशन के बीच सोये हुए श्रमिकों के मालगाड़ी के नीचे आने का दुखद समाचार मिला।
राहत कार्य जारी है, व इन्क्वायरी के आदेश दिये गए हैं। दिवंगत आत्माओं की शांति हेतु ईश्वर से प्रार्थना करता हूँ। https://t.co/NnOmPNfATU
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲೂ ಸೋಂಕು ಬೆಂಬಿಡದೇ ಕಾಡುತ್ತಿದೆ. ಏತನ್ಮಧ್ಯೆ, ಬೆಂಗಳೂರು ಪಾಲಿಗೆ ಮೇ ತಿಂಗಳು ಕಂಟಕವಾಗಲಿದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದು, ಇನ್ನಷ್ಟು ಭೀತಿ ತಂದೊಡ್ಡಿದೆ. ಮುಂದಿನ ವಾರ ಬೆಂಗಳೂರಿನಲ್ಲಿ ಮತ್ತಷ್ಟು ಕೊರೊನಾ ಹೆಚ್ಚಳವಾಗಲಿದ್ದು, ಮೇ ಅಂತ್ಯಕ್ಕೆ 5 ಸಾವಿರ ಪ್ರಕರಣ ಪತ್ತೆಯಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಸಡಿಲಿಕೆ ಆಗಿದ್ದು, ಮುಂದಿನ ವಾರ ಬೆಂಗಳೂರಿನಲ್ಲಿ ಹೈ ರಿಸ್ಕ್ ಎದುರಾಗಲಿದೆ ಅಂತ ತಜ್ಞರು ಸೂಚಿಸಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಕೊರೊನಾ ಕಂಟ್ರೋಲ್ಗೆ ‘ಪ್ಲಾನ್ ಬಿ’ ರೆಡಿ ಮಾಡುವಂತೆ ಸಲಹೆ ನೀಡಿದ್ದಾರೆ. ವಿದೇಶಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವವರ ಮೇಲೆ ಹದ್ದಿನ ಕಣ್ಣು ಇಡಲು ಸೂಚಿಸಲಾಗಿದೆ. ಮೊದಲಿಗೆ ಎಲ್ಲಾ ವಾರ್ಡ್ ಗಳಲ್ಲಿ ಮತ್ತಷ್ಟು ತಂಡ ರಚನೆ ಮಾಡಬೇಕು. ಗ್ರೀನ್ ಝೋನ್ ಅಂತ ನಿರ್ಲಕ್ಷ್ಯವಹಿಸಬಾರದು. ನಿರಂತರ ಹೆಲ್ತ್ ಸ್ಕ್ರೀನಿಂಗ್ ಇರಲಿ ಎಂದು ಸಲಹೆ ನೀಡಿದ್ದಾರೆ. ಇದರೊಂದಿಗೆ ಮುಖ್ಯವಾಗಿ ಸಿಸಿಟಿವಿ ಅಳವಡಿಸಿ, ಸಿಕ್ಕಸಿಕ್ಕಲ್ಲಿ ಉಗುಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಜೊತೆಗೆ ಸ್ವಚ್ಛ ಬೆಂಗಳೂರಿನತ್ತ ಗಮನ ಹರಿಸಿ ಅಂತ ಸಲಹೆ ನೀಡಿದ್ದಾರೆ. ಬಿಬಿಎಂಪಿ ವಿಪತ್ತು ನಿರ್ವಹಣ ಕೋಶ ಸದ್ಬಳಕೆ ಮಾಡಿ ಕಾರ್ಮಿಕರು, ದುರ್ಬಲರು, ಗರ್ಭಿಣಿಯರು, ವಯಸ್ಸಾದವರ ಡೇಟಾ ಬೇಸ್ ರೆಡಿ ಇಟ್ಟುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಬೆಂಗಳೂರು ಜಿಲ್ಲಾಡಳಿತಕ್ಕೂ ಹೊರ ಜಿಲ್ಲೆಯಿಂದ ಬರುವವರ ಕೈಗೆ ಸೀಲ್ ಹಾಕಿ, ಹೋಮ್ ಕ್ವಾರಂಟೈನ್ ಮಾಡುವಂತೆ ಸೂಚಿಸಲಾಗಿದೆ….
ಕೊಚ್ಚಿ : ಲಾಕ್ ಡೌನ್ ನಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಕಳೆದ ರಾತ್ರಿ ಅಬುದಾಬಿಯಿಂದ ಕೇರಳಕ್ಕೆ 181 ಪ್ರಯಾಣಿಕರು ಬಂದಿಳಿದ್ದಾರೆ. ಇವರೆಲ್ಲರ ತಪಾಸಣೆ ವೇಳೆ ಐವರಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದಿದೆ. ಹೀಗಾಗಿ ಐವರನ್ನು ಐಸೋಲೇಷನ್ ವಾರ್ಡ್ ಗೆ ಕಳುಹಿಸಲಾಗಿದೆ.
ಕಳೆದ ರಾತ್ರಿ ಅಬುದಾಬಿಯಿಂದ ಬಂದ ವಿಮಾನದಲ್ಲಿ ಬಂದಿಳಿದ 181 ಪ್ರಯಾಣಿಕರಿಗೆ ವಿಮಾನನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಯಿತು. ಈ ವೇಳೆ, ಐವರಲ್ಲಿ ಸೋಂಕಿನ ಲಕ್ಷ ಕಂಡುಬಂದಿದೆ. ಅವರನ್ನು ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡ್ ಗೆ ರವಾನಿಸಲಾಗಿದೆ. ಇದೇ ವೇಳೆ, ಬಂದಿಳಿದ ಪ್ರಯಾಣಿಕರ ಪೈಕಿ ಓರ್ವ ಪ್ರಯಾಣಿಕ ಅಸ್ವಸ್ಥಗೊಂಡಿದ್ದು, ಅವರನ್ನು ಎರ್ನಾಕುಲಂನ ಜಿಲ್ಲಾಡಳಿತ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.
Kerala: Out of the 181 people, who were brought to Cochin International airport last night, from Abu Dhabi, 5 people were taken to isolation ward of District Hospital Aluva after they were found to have symptoms of #COVID19, during thermal screening. https://t.co/Ut29SzsxqE
ಬೆಂಗಳೂರು : ಮಾರಕ ಕೊರೊನಾ ಸೋಂಕು ಎಲ್ಲೆಡೆ ತಲ್ಲಣ ಸೃಷ್ಟಿಸಿದ್ದು, ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಏತನ್ಮಧ್ಯೆ ವಿದೇಶದಲ್ಲಿ ನೆಲೆಸಿರುವ ಸುಮಾರು 7 ಸಾವಿರ ಕನ್ನಡಿಗರು ತಾಯ್ನಾಡಿಗೆ ವಾಪಾಸಾಗುತ್ತಿದ್ದು, ಅವರಿಗೆ 14 ದಿನ ಕ್ವಾರಂಟೈನ್ ನಲ್ಲಿರಸಲಾಗುತ್ತಿದೆ. ಇದಕ್ಕಾಗಿ ಅವರು ಸ್ಟಾರ್ ಹೊಟೇಲ್ ಗಳಲ್ಲಿ ವ್ಯವಸ್ಥೆ ಕಲ್ಪಿಸಿದ್ದು, ಬಿಬಿಎಂಪಿ ವತಿಯಿಂದ ಇಂತಿಷ್ಟು ದರ ನಿಗದಿ ಪಡಿಸಲಾಗಿದೆ.
ಕೊರೋನ ಭೀತಿ ಹಿನ್ನೆಲೆ ವಿದೇಶದಿಂದ ಬರುವವರು ಕ್ವಾರಂಟೈನ್ನಲ್ಲಿರಲು ಫೈವ್ ಸ್ಟಾರ್, ತ್ರಿ ಸ್ಟಾರ್ ಹೊಟೇಲ್ಗಳನ್ನು ಆರಿಸಿಕೊಳ್ಳಬೇಕಿದ್ದು, ಅದರ ಬಾಡಿಗೆಯನ್ನು ಅವರೇ ಪಾವತಿಸಬೇಕಾಗಿದೆ. ವಿದೇಶದಲ್ಲಿರುವ 7 ಸಾವಿರ ಮಂದಿಯನ್ನು ಏರ್ ಲಿಫ್ಟ್ ಮಾಡಲು ತೀರ್ಮಾನಿಸಲಾಗಿದ್ದು, ಮೇ 8ರಂದು ಆಗಮಿಸಲಿರುವ ವಿಮಾನದಲ್ಲಿ ಸುಮಾರು 300 ಕನ್ನಡಿಗರು ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ರಾಜ್ಯಕ್ಕೆ ಬರುವವರು 14 ದಿನ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅವರಿಗೆ ತ್ರಿ ಸ್ಟಾರ್, ಫೈವ್ ಸ್ಟಾರ್ ಹೊಟೇಲ್ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.
ಕ್ವಾರಂಟೈನ್ ಕ್ಯಾಂಪಸ್ಗೆ ಒಳಪಡುವ ಹೊಟೇಲ್ಗಳಲ್ಲಿನ ಮುಂಜಾಗ್ರಕಾ ಕ್ರಮಗಳ ಕುರಿತಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಪರಶೀಲಿಸಿ ದೃಢೀಕರಿಸಬೇಕು. ಅಲ್ಲಿನ ಸಿಬ್ಬಂದಿ ಸುರಕ್ಷಿತವಾಗಿರಿಸಲು ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಿರಬೇಕು, ಸ್ವಚ್ಛತೆ ಕಾಪಾಡುವುದು ಕಡ್ಡಾಯವಾಗಿದ್ದು, ಸೇವೆ ಕಲ್ಪಿಸುವ ವೇಳೆ ಸಿಬ್ಬಂದಿಗೆ ರಕ್ಷಣಾತ್ಮಕ ಸಾಧನಗಳನ್ನು ಒದಗಿಸಬೇಕೆಂದು ಸೂಚಿಸಲಾಗಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಹೋಟೆಲ್ಗಳಿಗೆ 1200 ರೂ., ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಗೆ ಬರುವ ಹೋಟೆಲ್ಗಳಿಗೆ 900 ರೂ., ಪುರಸಭೆ ವ್ಯಾಪ್ತಿಯನ್ನು ಒಳಗೊಂಡ ರಾಜ್ಯದ ಇತರೆ ಪ್ರದೇಶಗಳಲ್ಲಿರುವ ಹೋಟೆಲ್ಗಳಿಗೆ 750 ರೂ. ದರ ನಿಗದಿ ಮಾಡಲಾಗಿದೆ…
ಬೆಂಗಳೂರು : ಸಿಲಿಕಾನ್ ಸಿಟಿಯ ಶಿವಾಜಿನಗರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಪತ್ತೆಯಾದ ರೋಗಿ ಸಂಖ್ಯೆ693ನಿಂದ ಹೊಸ ತಲೆ ನೋವು ಶುರುವಾಗಿದೆ. ಈ ಸೋಂಕಿತನ ಸಂಪರ್ಕದಲ್ಲಿದ್ದ ನಾಲ್ವರಿಗೆ ಕೊರೊನಾ ಸೋಂಕು ತಗುಲಿದ್ದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಇವರೆಲ್ಲ ಅಸ್ಸಾಂ, ಮಣಿಪುರ ಮೂಲದವರಾಗಿದ್ದು, ಶಿವಾಜಿನಗರದ ಗಲ್ಲಿಗಲ್ಲಿಗಳಲ್ಲಿ ಸಂಚರಿಸಿದ್ದಾರೆ. ಇವರ ಟ್ರಾವಲ್ ಹಿಸ್ಟರಿ ಆರೋಗ್ಯ ಅಧಿಕಾರಿಗಳಿಗೆ ಹೊಸ ತಲೆನೋವಾಗಿದೆ.
ಹೌಸ್ ಕೀಪರ್ ಆಗಿದ್ದ ರೋಗಿ ನಂಬರ್ 653ನಿಂದ ನಾಲ್ವರಿಗೆ ಸೋಂಕು ತಗುಲಿದೆ. ಈತನಿಂದ ನಾಲ್ವರು ರೂಂಮೇಟ್ಸ್ಗೆ ಕೊರೊನಾ ತಗುಲಿದ್ದು, ಈತ 13 ಜನರೊಂದಿಗೆ ರೂಂ ಶೇರ್ ಮಾಡಿದ್ದ. 13 ಜನರ ಪೈಕಿ ನಾಲ್ವರಿಗೆ ಸೋಂಕು ದೃಢವಾಗಿದೆ. ಇಂದು ಉಳಿದ 9 ಮಂದಿ ರಿಪೋರ್ಟ್ ಹೊರಬೀಳಲಿದೆ. ಹೌಸ್ಕೀಪರ್ ನ ಸ್ನೇಹಿತರೆಲ್ಲಾ ಬೇರೆ ಬೇರೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಆರೋಗ್ಯ ಇಲಾಖೆಗೆ ಈ ನಾಲ್ವರಿಂದ ದೊಡ್ಡ ತಲೆ ನೋವು ಶುರುವಾಗಿದೆ. ಮೊದಲ ಸೋಂಕಿತನಿಗೆ 19 ವರ್ಷವಾಗಿದ್ದು, ಜ್ಯುವೆಲ್ಲರಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನೂ ಎರಡನೇ ಸೋಂಕಿತನಿಗೆ 22 ವರ್ಷವಾಗಿದ್ದು, ಮಟನ್ ವ್ಯಾಪಾರಿಯಾಗಿದ್ದ. 25 ವರ್ಷದ ಮೂರನೇ ಸೋಂಕಿತ ಹೋಟೆಲ್ಗೆ ತರಕಾರಿ ಹಾಕುವ ಕೆಲಸ ಮಾಡುತ್ತಿದ್ದನು. ಇನ್ನೂ ನಾಲ್ಕನೇ ಸೋಂಕಿತನಿಗೆ 40 ವರ್ಷವಾಗಿದ್ದು, ಇವರು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಸೋಂಕಿತ ನಾಲ್ವರು ಫ್ರೀ ಊಟಕ್ಕಾಗಿ ಇಡೀ ಶಿವಾಜಿನಗರದ ಮೂಲೆ ಮೂಲೆ ಸುತ್ತಿದ್ದರು. ಅದರಲ್ಲೂ ನಾಲ್ವರು ಸೋಂಕಿತರಲ್ಲಿ ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನಿಂದ ಟೆನ್ಶನ್ ಹೆಚ್ಚಾಗಿದೆ. ಲಾಕ್ಡೌನ್ ಇದ್ದರೂ ಭಾನುವಾರವಾಗುತ್ತಿದ್ದಂತೆ ಮಟನ್ಗಾಗಿ ಗ್ರಾಹಕರ ಕ್ಯೂ ನಿಂತುಕೊಳ್ಳುತ್ತಿದ್ದರು. ಅಲ್ಲದೇ ಎಲ್ಲಾ ದಿನವೂ ಈ ಸೋಂಕಿತ ಗ್ರಾಹಕರಿಗೆ ಮಟನ್ ಹಂಚಿದ್ದ. ಹೀಗಾಗಿ ತೀವ್ರ ಆತಂಕ ಮನೆಮಾಡಿದೆ…
ನವದೆಹಲಿ : ಕೊರೊನಾ ಸೋಂಕು ಹಿನ್ನಲೆಯಲ್ಲಿ ವಿಶ್ವದ ಬಲಾಢ್ಯ ರಾಷ್ಟ್ರಗಳು ತತ್ತರಿಸಿ ಹೋಗಿದ್ದು, ಸೋಂಕು ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಏತನ್ಮಧ್ಯೆ, ವಿವಿಧ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ವಂದೇ ಬಾರತ್ ಮಿಷನ್ ಹೆಸರಿನಲ್ಲಿ ಈ ರಕ್ಷಣಾ ಕಾರ್ಯ ಇನ್ನು ಒಂದು ವಾರ ಮುಂದುವರೆಯಲಿದೆ. ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ಲಕ್ಷಾಂತರ ಅನಿವಾಸಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದ್ದು, ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಲಾಗಿದೆ. ಅಬುಧಾಬಿಯಿಂದ ಹೊರಟ ಮೊದಲ ವಿಮಾನ ನಿನ್ನೆ ರಾತ್ರಿ ಕೇರಳದ ಕೋಝಿಕೋಡ್ಗೆ ತಲುಪಿದೆ.
ಭಾರತದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ಅಬುಧಾಬಿಯಿಂದ 177 ಪ್ರಯಾಣಿಕರು ಮತ್ತು 4 ಶಿಶುಗಳೊಂದಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ ಕಳೆದ ರಾತ್ರಿ 10 ಗಂಟೆಗೆ ಕೊಚ್ಚಿ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಬಂದಿಳಿದಿದೆ. ಹಾಗೇ ದುಬೈನಿಂದ ಹೊರಟಿದ್ದ ಮತ್ತೊಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಕೂಡ ಕೇರಳದ ಕೋಝಿಕೋಡ್ಗೆ ತಲುಪಿದೆ. ಭಾರತಕ್ಕೆ ಬಂದಿಳಿದ ಎಲ್ಲ 363 ಅನಿವಾಸಿ ಭಾರತೀಯರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸಲಾಗುವುದು. ಎಲ್ಲ ಅನಿವಾಸಿಗಳಿಗೂ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದ್ದು, ಮುಂಜಾಗ್ರತಾ ಕ್ರಮ ವಹಿಸಲಾಗಿದೆ…
Kerala: Out of the 181 people, who were brought to Cochin International airport last night, from Abu Dhabi, 5 people were taken to isolation ward of District Hospital Aluva after they were found to have symptoms of #COVID19, during thermal screening. https://t.co/Ut29SzsxqE
ಬೆಂಗಳೂರು : ನೆರೆಯ ರಾಜ್ಯ ಆಂಧ್ರಪ್ರದೇಶದ ವೈಜಾಗ್ ನಲ್ಲಿ ಸಂಭವಿಸಿರುವ ಭೀಕರ ವಿಷಾನಿಲ ಸೋರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕೈಗಾರಿಕೆ ಆರಂಭಿಸುವ ಮುನ್ನ ಸುರಕ್ಷತಾ ಕ್ರಮಗಳನ್ನು ಖಾತರಿ ಪಡಿಸುವಂತೆ ಕೈಗಾರಿಕಾ ಘಟಕಗಳ ವ್ಯವಸ್ಥಾಪಕರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ, “ವಿಶಾಖಪಟ್ಟಣದ ವಿಷಾನಿಲ ಸೋರಿಕೆಯ ದುರಂತ ಘಟನೆ ದುರದೃಷ್ಟಕರ ಎಂದಿರುವ ಸಿಎಂ ಬಿಎಸ್ವೈ ಇಂತಹ ಘಟನೆ ಎಲ್ಲಿಯೂ ಮರುಕಳಿಸಬಾರದು. ಈ ಹಿನ್ನೆಲೆಯಲ್ಲಿ, ಎರಡು ತಿಂಗಳ ನಂತರ ತಮ್ಮ ಕೈಗಾರಿಕೆಗಳನ್ನು ಆರಂಭಿಸುತ್ತಿರುವ ವ್ಯವಸ್ಥಾಪಕರು, ಈ ದುರಂತದ ಘಟನೆಯನ್ನು ಎಚ್ಚರಿಕೆಯ ಪಾಠವಾಗಿ ತೆಗೆದುಕೊಳ್ಳಬೇಕು. ಹಾಗಾಗಿ, ಎಲ್ಲ ಸುರಕ್ಷಿತ ಮುಂಜಾಗರೂಕತಾ ಕ್ರಮಗಳನ್ನು ಖಾತರಿಪಡಿಸಿಕೊಂಡ ಮೇಲೆ ಉತ್ಪಾದನೆ ಆರಂಭಿಸಬೇಕೆಂದು” ವಿನಂತಿಸಿದ್ದಾರೆ….
2/2 ಹಾಗಾಗಿ, ಎಲ್ಲಾ ಸುರಕ್ಷಿತ ಮುಂಜಾಗ್ರತಾ ಕ್ರಮಗಳನ್ನು ಖಾತರಿಪಡಿಸಿಕೊಂಡ ನಂತರವೇ ಉತ್ಪಾದನೆ ಆರಂಭಿಸಬೇಕೆಂದು ಕೋರುತ್ತೇನೆ.#VizagGasLeaks
ನವದೆಹಲಿ : ಲಾಕ್ ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ಗ್ರೀನ್ ಝೋನ್ ನಲ್ಲಿರುವ ಪ್ರದೇಶಗಳಲ್ಲಿ ಹಲವು ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಇದರ ಬೆನ್ನಲ್ಲೇ ಹಸಿರುವಲಯದಲ್ಲಿ ಮಾತ್ರ ಕೆಲವು ಷರತ್ತುಗಳ ಅನ್ವಯ ದೇಶೀಯ ವಿಮಾನಗಳ ಸೇವೆ ಪುನರಾರಂಭಗೊಳ್ಳುವ ಸಾಧ್ಯತೆ ಇದೆ.
ಈ ಕುರಿತು ಖಾಸಗಿ ಮಾಧ್ಯಮವೊಂದಕ್ಕೆ ನಾಗರಿಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ತಿಳಿಸಿದ್ದು, ಮೇ.17 ರಂದು ಲಾಕ್ ಡೌನ್ ಮುಗಿದ ಬಳಿಕ ಕೊರೊನಾ ಸೋಂಕು ಪರಿಸ್ಥಿತಿ ಕುರಿತು ಅವಲೋಕಿಸಿ ಸ್ಥಳೀಯವಾಗಿಯೇ ವಿಮಾನ ಸೇವೆ ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಎಲ್ಲ ವಾಣಿಜ್ಯ ವಿಮಾನಯಾನ ಸಂಸ್ಥೆಗಳೊಂದಿಗೆ ಸರ್ಕಾರ ಮಾತುಕತೆ ನಡೆಸಿದೆ. ವಿಮಾನ ಸೇವೆಗಳು ಯಾವಾಗ ಬೇಕಾದರೂ ಆರಂಭವಾಗಬಹುದು. ಪ್ರಾಥಮಿಕ ಹಂತದಲ್ಲಿ ಸ್ಥಳೀಯವಾಗಿ ವಿಮಾನ ಸೇವೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾದ 64 ವಿಮಾನಗಳ ವ್ಯವಸ್ಥೆ ಮಾಡಲಾಗಿದೆ. 1.9 ಲಕ್ಷ ನಾಗರಿಕರನ್ನು ಭಾರತಕ್ಕೆ ಕರೆತರುವ ಬಹುದೊಡ್ಡ ಕಾರ್ಯಾಚರಣೆ ನಡೆಯುತ್ತಿದೆ. ವಿಮಾನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ಸರ್ಕಾರ ಚರ್ಚೆ ನಡೆಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಮಾನದಲ್ಲಿ ಒಂದು ಆಸನ ತೆಗೆಯಲು ಹಾಗೂ ವಿಮಾನ ಪ್ರಯಾಣ ದರವನ್ನು ಹೆಚ್ಚಿಸುವ ಸಲಹೆಯನ್ನು ವಿಮಾನಯಾನ ಸಂಸ್ಥೆಗಳು ನೀಡಿವೆ. ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕೈಗೊಳ್ಳಲು ವಿಮಾನಯಾನ ಸಂಸ್ಥೆಗಳು ಹಾಗೂ ಸಚಿವಾಲಯ ಕೆಲಸ ಮಾಡಲು ತೀರ್ಮಾನಿಸಿವೆ. ಆದರೆ, ಪ್ರಯಾಣಿಕರ ಮೇಲೆ ಹೆಚ್ಚಿನ ದರ ವಿಧಿಸದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವಾಲಯ ಸೂಚನೆ ನೀಡಿದೆ. ಆದರೆ, ಈ ಬಗ್ಗೆ ಇನ್ನು ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದರು…
ನವದೆಹಲಿ : ವಿದೇಶದಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಐಎನ್ಎಸ್ ಜಲಾಶ್ವ ಹಡಗು ಮಾಲ್ಡೀವ್ಸ್ ನ ಮಾಲೆ ಬಂದರು ತಲುಪಿದ್ದು, ಸಮುದ್ರ ಸೇತು ಮೂಲಕ ಭಾರತೀಯರ ರಕ್ಷಣಾ ಕಾರ್ಯಾಚರಣೆ ಶುರುವಾಗಲಿದೆ.
ಯುಎಇ ಮತ್ತು ಮಾಲ್ಡೀವ್ಸ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತದಿಂದ ನೌಕಾಸೇನೆಯ 3 ಹಡಗುಗಳನ್ನು ರವಾನಿಸಲಾಗಿದೆ. ಅನಿವಾಸಿ ಭಾರತೀಯರನ್ನು ಕರೆತರಲು ಇಂದು ಮುಂಬೈ ಬಂದರಿನಿಂದ ಐಎನ್ಎಸ್ ಜಲಾಶ್ವ, ಐಎನ್ಎಸ್ ಮಗಾರ್, ಐಎನ್ಎಸ್ ಶಾರ್ದೂಲ್ ಹಡಗುಗಳನ್ನು ಕಳುಹಿಸಲಾಗಿದೆ. ಮುಂಬೈನಿಂದ ಐಎನ್ಎಸ್ ಜಲಾಶ್ವ ಮತ್ತು ಐಎನ್ಎಸ್ ಮಗಾರ್ ಹಡಗುಗಳು ಸೋಮವಾರ ರಾತ್ರಿ ಮಾಲ್ಡೀವ್ಸ್ನತ್ತ ಪ್ರಯಾಣಿಸಿದ್ದವು. ಈಗ ಮಾಲ್ಡೀವ್ಸ್ನ ಮಾಲೆ ಬಂದರನ್ನು ತಲುಪಿರುವ ಈ ಹಡಗು ಸುಮಾರು 750 ಭಾರತೀಯರನ್ನು ಕೊಚ್ಚಿಗೆ ಕರೆತರಲಿದೆ. ಇಂದು ಮೊದಲ ಹಂತದಲ್ಲಿ ಮಾಲ್ಡೀವ್ಸ್ನಲ್ಲಿರುವ ಭಾರತೀಯರನ್ನು ವೈದ್ಯಕೀಯ ತಪಾಸಣೆ ನಡೆಸಿ, ಕರೆತರಲಾಗುವುದು. ಅಲ್ಲಿಂದ ಜನರನ್ನು ತಪಾಸಣೆ ನಡೆಸಿ, ಅವರವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 7ರಿಂದ 14ರವರೆಗೆ 64 ವಿಮಾನಗಳ ಮೂಲಕ 14,800 ಜನರನ್ನು ಕರೆತರಲು ನಿರ್ಧರಿಸಲಾಗಿದೆ. ಮೊದಲ ವಿಮಾನ ಇಂದು ಅಭುದಾಬಿಯಿಂದ ಕೇರಳದ ಕೊಚ್ಚಿಗೆ ಹೊರಡಲಿದ್ದು, 209 ಪ್ರಯಾಣಿಕರನ್ನು ಕರೆತರಲಾಗುವುದು. ಯುಎಇ, ಅಮೆರಿಕ, ಇಂಗ್ಲೆಂಡ್, ಮಲೇಷ್ಯಾ, ಸಿಂಗಾಪುರ್, ಫಿಲಿಪ್ಪೀನ್ಸ್, ಸೌದಿ ಅರೇಬಿಯ, ಕತಾರ್, ಬಾಂಗ್ಲಾದೇಶ, ಬಹ್ರೇನ್, ಕುವೈತ್ ಮತ್ತಿತರ ದೇಶಗಳಿಂದ ಭಾರತದ ನಾನಾ ರಾಜ್ಯಗಳಿಗೆ ವಿಮಾನದಲ್ಲಿ ಅನಿವಾಸಿ ಭಾರತೀಯರನ್ನು ಕರೆತರಲಾಗುತ್ತಿದೆ….
ಬೆಂಗಳೂರು : ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದ್ದ ಆಂದ್ರಪ್ರದೇಶ ಮೂಲದ ಜಾಲವನ್ನು ಬಯಲು ಮಾಡಿದ್ದು, ಆರೋಪಿಗಳ ವಿರುದ್ಧ 8 ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ನಿಷೇಧಿಸುತ್ತಿದ್ದ ಬೀಜಗಳನ್ನು ರಾಜ್ಯದ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೊಂದು ಮಾಫಿಯಾದಂತೆ ಆಗಿದ್ದು, ಆಂಧ್ರ ಮೂಲದವರೇ ಇದರಲ್ಲಿ ತೊಡಗಿದ್ದರು. ಇದನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಿದ್ದು, ಎಲ್ಲರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ ಇತ್ಯಾದಿ ಕಳಪೆ ಬೀಜಗಳನ್ನು ವಶಕ್ಕೆ ಪಡೆಯಲಾಗಿದೆ. ಅಂದಾಜು 10 ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ಬೀಜಗಳನ್ನು ವಶಕ್ಕೆ ಪಡೆದು 8 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಈ ವರ್ಷ ರೈತರು ಕಳಪೆ ಬೀಜದ ಬಗ್ಗೆ ಆತಂಕಕ್ಕೆ ಒಳಗಾಗುವ ಅಗತ್ಯತೆ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ತಾವು ಎಲ್ಲಾ 30 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ರೈತರ ಸಮಸ್ಯೆ ಆಲಿಸಿ ಸಿಎಂಗೆ ರೈತರ ನೆರವಿಗೆ ಬರುವಂತೆ ವರದಿ ರೂಪದಲ್ಲಿ ಮನವಿ ಮಾಡಿದ್ದೆ. ಇದಕ್ಕೆ ಸಂಬಂಧಿಸಿ ಸಿಎಂ ನಿನ್ನೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಮುಖ್ಯವಾಗಿ ಹೂ ಬೆಳೆಗಾರರಿಗೆ ಸಿಎಂ ನೆರವಿಗೆ ಬಂದಿದ್ದಾರೆ ಎಂದರು….
ವೈಜಾಗ್ : ಆಂಧ್ರಪ್ರದೇಶದ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣಕ್ಷಣಕ್ಕೂ ಆತಂಕ ಹೆಚ್ಚುತ್ತಿದೆ. ಇನ್ನು ಈ ದುರ್ಘಟನೆಗೆ ಅಪಾಯಕಾರಿ ಸ್ಟೆರಿನ್ ಟ್ಯಾಂಕ್ ನಿರ್ವಹಣೆಯಲ್ಲಿನ ಲೋಪವೇ ಕಾರಣ ಎಂದು ಎಲ್.ಜಿ.ಪಾಲಿಮರ್ಸ್ ಕಂಪನಿಯ ಎಂ.ಡಿ.ಮೋಹನ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ವಿಷಾನಿಲ ಸೋರಿಕೆಯಿಂದಾಗಿ ದುರ್ಘಟನೆ ಸಂಭವಿಸಿದೆ. ಕಾರ್ಖಾನೆಯಲ್ಲಿ 2400 ಟನ್ ಸಾಮರ್ಥ್ಯದ ಟ್ಯಾಂಕ್ ಇದ್ದು, ಈ ಪೈಕಿ 1800 ಟನ್ ಮಾತ್ರ ಸ್ಟೆರಿನ್ ಕೆಮಿಕಲ್ ಸಂಗ್ರಹವಿತ್ತು ಎಂದು ಮಾಹಿತಿ ನೀಡಿದರು.
ಇನ್ನು ಈ ಸ್ಟೆರಿನ್ ಗ್ಯಾಸ್ ಅತ್ಯಂತ ಅಪಾಯಕಾರಿಯಾಗಿದ್ದು, ಜೀವಿಯ ಮೆದುಳಿಗೆ ಹಾನಿ ಉಂಟು ಮಾಡುತ್ತದೆ. ಇದು ಗಾಳಿಯೊಂದಿಗೆ ಸೇರಿದ ಕೂಡಲೇ ಅದನ್ನು ಸೇವಿಸುವ ಜೀವಿಯ ಶ್ವಾಸಕೋಶದಲ್ಲಿ ಊತ ಕಾಣಿಸಿಕೊಳ್ಳುತ್ತದೆ ಇದರೊಂದಿಗೆ ಹೃದಯ ಸಮಸ್ಯೆ ಕೂಡ ಒಟ್ಟಿಗೆ ಉಂಟಾಗುತ್ತದೆ. ಉಸಿರಾಟದ ಸಮಸ್ಯೆಯಿಂದಾಗಿ ಪ್ರಾಣಕ್ಕೆ ಸಂಚಕಾರ ಬರಲಿದೆ. ಮಕ್ಕಳು, ವಯಸ್ಸಾದವರ ಆರೋಗ್ಯದ ಮೇಲೆ ಇದು ಭೀಕರ ದುಷ್ಪರಿಣಾಮ ಉಂಟು ಮಾಡಲಿದೆ. ಇನ್ನು ಸುತ್ತಲಿನ ಗ್ರಾಮಗಳ ಗ್ರಾಮಸ್ಥರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ.
ಏತನ್ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಾಂಗ್ರೆಸ್ ನ ಕಾರ್ಯಕರ್ತರು ಹಾಗೂ ಪಕ್ಷದ ಕಾರ್ಯಕರ್ತರಿಗೆ, ದುರ್ಘಟನೆಯಿಂದಾಗಿ ಸಂಕಷ್ಟದಲ್ಲಿದ್ದವರಿಗೆ ಅಗತ್ಯ ನನೆರವು ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ, ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಿಗೆ ಸಂತಾಪ ಸೂಚಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವೇ ಗುಣಮುಖರಾಗಲೆಂದು ಆಶಿದ್ದಾರೆ…
I’m shocked to hear about the #VizagGasLeak . I urge our Congress workers & leaders in the area to provide all necessary support & assistance to those affected. My condolences to the families of those who have perished. I pray that those hospitalised make a speedy recovery.
ಮುಂಬೈ : ರಾಷ್ಟ್ರಾದ್ಯಂತ ಮಾರಕ ಕೊರೊನಾ ವೈರಸ್ ಆತಂಕ ತಂದೊಡ್ಡಿದೆ. ಮಹಾರಾಷ್ಟ್ರದಲ್ಲಿ ಮಾರಕ ಸೋಂಕು ಭೀತಿ ಸೃಷ್ಟಿಸಿದ್ದು, ಸೋಂಕು ನಿಯಂತ್ರಣಕ್ಕೆ ಸವಾಲಾಗಿ ಪರಿಣಮಿಸಿದೆ. ಏತನ್ಮಧ್ಯೆ, ವಾಣಜ್ಯ ನಗರಿ ಮುಂಬೈನಲ್ಲಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಈಗ ಮುಂಬೈ ಪೊಲೀಸರಿಗೂ ಸೋಂಕು ಭೀತಿ ತಟ್ಟಿದೆ.
ಇಂದು ಮುಂಬೈನ 250ಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕಮೀಷನರ್ ಪರಮ್ ಬೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಸೋಂಕು ಪೀಡಿತ ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕಿನ ಲಕ್ಷಣ ಕಡಿಮೆ ಪ್ರಮಾಣದಲ್ಲಿದ್ದು, ಎಲ್ಲರಿಗೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಸೋಂಕಿತರ ಪೈಕಿ ಯಾರನ್ನು ಐಸಿಯು ನಲ್ಲಿ ಇರಿಸಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ…
About 250 police personnel have tested positive for #COVID19 in Mumbai. The number of symptomatic cases is very low and none of them are in ICU: Mumbai Commissioner of Police Param Bir Singh pic.twitter.com/helaFZtWf4
ದಾವಣಗೆರೆ : ರಾಜ್ಯದ್ಯಂತ ಮಾರಕ ಕೊರೊನಾ ವೈರಸ್ ತಲ್ಲಣ ಸೃಷ್ಟಿಸಿದ್ದು, ಇಂದು ರಾಜ್ಯದಲ್ಲಿ ಮತ್ತೆ 8 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 701ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಇಂದು ಮತ್ತೆ ಒಬ್ಬ ಮಹಿಳೆ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.
ದಾವಣಗೆರೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 53 ವರ್ಷದ ಮಹಿಳೆಯಲ್ಲಿ ಕೊರೊನಾ ಲಕ್ಷಣ ಕಂಡುಬಂದಿತ್ತು. ವೈದ್ಯಕೀಯ ತಪಾಸಣೆ ವೇಳೆ ಆಕೆಯಲ್ಲಿ ಸೋಂಕು ದೃಢಪಟ್ಟಿತ್ತು. ಕೋವಿ-್ಜ19 ವೇಶಂಟ್ ನಂಬರ್ 694 ಸಂಖ್ಯೆಯ ಈ ಮಹಿಳೆ ಮೊದಲೇ ಅಧಿಕ ರಕ್ತದೊತ್ತಡ ಹಾಗೂ ಶುಗರ್ ನಿಂದ ಬಳಲುತ್ತಿದ್ದರು. ಇನ್ನು ಅವರಲ್ಲಿ ಸೋಂಕು ದೃಢಪಟ್ಟ ಬಳಿಕ ಈ ಕಾಯಿಲೆಗಳು ಮತ್ತಷ್ಟು ಉಲ್ಬಣಿಸಿತ್ತು. ಚಿಕಿತ್ಸೆ ಫಲಿಸದೇ ಇಂದು ಮಹಿಳೆ ಆಸ್ಪತ್ರೆಯಲ್ಲೇ ಅಸುನೀಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಿಲ್ಲರ್ ಕೊರೊನಾಗೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ….
ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತಲ್ಲಣ ಸೃಷ್ಟಿಸಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಇಂದು ಮತ್ತೆ 8 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕು ಪೀಡಿತರ ಸಂಖ್ಯೆ 701ಕ್ಕೆ ಏರಿಕೆಯಾಗಿದೆ. ಈ ನಡುವೆ, ದಾವಣಗೆರೆಯಲ್ಲಿ ಮತ್ತೊಬ್ಬ ಮಹಿಳೆ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.
ಈ ಕುರಿತಂತೆ ರಾಜ್ಯ ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ರಾಜ್ಯದಲ್ಲಿ 8 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 701ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಮಹಾಮಾರಿಗೆ ದಾವಣಗೆರೆಯಲ್ಲಿ ಮಹಿಳೆಯೊಬ್ಬರು ಬಲಿಯಾಗಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಇನ್ನು ಇಂದು ಪತ್ತೆಯಾಗಿರುವ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ ದಾವಣಗೆರೆಯಲ್ಲಿ 3, ಕಲಬುರಗಿಯಲ್ಲಿ 3, ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ವಿಶಾಖಪಟ್ಟಣಂ : ಆಂಧ್ರಪ್ರದೇಶದ ವೈಜಾಗ್ ನಲ್ಲಿ ಎಲ್.ಜಿ.ಪಾಲಿಮರ್ಸ್ ಕಂಪನಿಯಲ್ಲಿ ವಿಷಾನಿಲ ಸೋರಿಕೆ ಮಹಾದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಸುಮಾರು 800 ಮಂದಿ ಅಸ್ವಸ್ಥರಾಗಿದ್ದಾರೆ. ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಕರೆ ಮಾಡಿ ವಿಷಾನಿಲ ದುರಂತದ ಕುರಿತು ಮಾಹಿತಿ ಸಂಗ್ರಹಿಸಿದ್ದ ಪ್ರಧಾನಿ ಮೋದಿ, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ಇನ್ನು ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದು, ಈ ಸಭೆಯಲ್ಲಿ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಪಾಲ್ಗೊಂಡು ಮುಂದಿನ ಕ್ರಮದ ಕುರಿತು ಚರ್ಚೆ ನಡೆಸಿದರು.
#VizagGasLeak: Prime Minister Narendra Modi called for a meeting of the NDMA (National Disaster Management Authority), in wake of the situation in Visakhapatnam (Andhra Pradesh). Union Defence Minister Rajnath Singh and Union Home Minister Amit Shah also present. pic.twitter.com/riFiBKnFMY
ಇನ್ನು ಏತನ್ಮಧ್ಯೆ, ಆಂಧ್ರಪ್ರದೇಶದ ಕೈಗಾರಿಕಾ ಸಚಿವ ಎಂ.ಜಿ.ರೆಡ್ಡಿ, ಘಟನೆ ಕುರಿತು ಮಾಹಿತಿ ನೀಡಿದ್ದು, ವಿಷಾನಿಲ ದುರ್ಘಟನೆಗೆ ಎಲ್.ಜಿ.ಪಾಲಿಮರ್ಸ್ ಕಂಪನಿಯೇ ಹೊಣೆಯಾಗಿದೆ. ಕಂಪನಿಯ ಮಾಲೀಕರು ಎಷ್ಟರಮಟ್ಟಿಗೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ವಹಿಸಿದ್ದರೆಂದು ತಿಳಿಸಬೇಕಿದೆ.ಅಷ್ಟಾಗಿ ಹಾನಿಕಾರವಲ್ಲದ ಅನಿಲ ದ್ರವ ರೂಪದಲ್ಲಿ ಬಳಸಲಾಗುತ್ತಿತ್ತು, ಆದರೆ, ಸ್ವಲಂಪ ಪ್ರಮಾಣದ ವಿಷಾನಿಲ ಗಾಳಿಗೆ ಸೇರಿದ್ದು, ಇಡೀ ಪ್ರದೇಶದ ವಾತಾವರಣದಲ್ಲಿ ಸೇರಿದೆ. ಇದು ಸುತ್ತಮುತ್ತಲಿನ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಇನ್ನು ಘಟನಾ ಹಿನ್ನೆಲೆಯಲ್ಲಿ ಕಾರ್ಖಾನೆ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Company managing this has to be responsible for #VizagGasLeak mishap. They'll have to come & explain us exactly what all protocols were followed, and what all were not followed. Accordingly, criminal action will be taken against them: Andhra Pradesh Industries Minister MG Reddy https://t.co/tQDKwckBEj
ನ್ಯೂಸ್ ಡೆಸ್ಕ್ : ವಿಶ್ವದ ವಿವಿಧ ರಾಷ್ಟ್ರಗಳಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಸೌದಿ ಅರೇಬಿಯಾದಲ್ಲೂ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ಲಾಕ್ ಡೌನ್ ವಿಧಿಸಲಾಗಿದೆ. ಒಂದು ವೇಳೆ, ಇಲ್ಲಿ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ನೀಡುವುದಾಗಿ ಅಲ್ಲಿನ ಆಂತರಿಕ ಸಚಿವಾಲಯ ತಿಳಿಸಿದೆ. ಸೌದಿ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಅಲ್ಲಿನ ರಾಜಾಡಳಿತ ಕಠಿಣ ಶಿಕ್ಷೆ ನೀಡಲು ಮುಂದಾಗಿದೆ.
ಕೊರೊನಾ ನೀತಿ ನಿಯಮಗಳನ್ನು ಉಲ್ಲಂಘಿಸುವ ಖಾಸಗಿ ಕಂಪನಿಗಳು ಹಾಗೂ ಅದರ ನೌಕರರಿಗೆ 1000 ಸೌದಿ ರಿಯಾಲ್ ನಿಂದ 1 ಲಕ್ಷ ಸೌದಿ ರಿಯಾಲ್ ವರೆಗೆ ದಂಡ ವಿಧಿಸಲಾಗುತ್ತದೆ. ಇನ್ನು ಈ ಭಾರಿ ಮೊತ್ತದ ದಂಡದೊಂದಿಗೆ ಜೈಲು ಶಿಕ್ಷೆಯನ್ನೂ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದರೊಂದಿಗೆ ಯಾರಿಗಾದರೂ ಉದ್ದೇಶಪೂರ್ವಕವಾಗಿ ಕೊರೊನಾ ವೈರಸ್ ಹರಡಿದರೆ ಅಂತಹವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ. ಅಂತಹವರಿಗೆ 5 ವರ್ಷ ಜೈಲುಶಿಕ್ಷೆ ಹಾಗೂ 5 ಲಕ್ಷ ರಿಯಾಲ್ಸ್ ದಂಡ ವಿಧಿಸುವುದಾಗಿ ಘೋಷಿಸಲಾಗಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್-19 ವಿರುದ್ಧ ಸುಳ್ಳು ಸುದ್ದಿ ಹರಡಿದರೆ 1 ಲಕ್ಷ ರಿಯಾಲ್ಸ್ ನಿಂದ 10 ಲಕ್ಷ ರಿಯಾಲ್ಸ್ ವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ, ಹೊರ ದೇಶದವರು ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ, ಅಂತಹವರನ್ನು ಗಡಿಪಾರು ಮಾಡಲಾಗುವುದು ಹಾಗೂ ಮತ್ತೊಮ್ಮೆ ದೇಶ ಪ್ರವೇಶಿಸದಂತೆ ನಿರ್ಬಂಧ ಹೇರುವುದಾಗಿ ಖಡಕ್ ಸೂಚನೆ ನೀಡಲಾಗಿದೆ…
ನವದೆಹಲಿ : ವಿಶಾಖಪಟ್ಟಣಂ ಹೊರವಲಯದ ಎಲ್ ಜಿ ಪಾಲಿಮರ್ಸ್ ಕಂಪನಿಯಲ್ಲಿ ವಿಷಾನಿಲ ಸೋರಿಕೆಯಿಂದಾಗಿ 9 ಮಂದಿ ಬಲಿಯಾಗಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಗ್ರಾಮದ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ಆತಂಕ ಮನೆಮಾಡಿದೆ. ಸುತ್ತಮುತ್ತಲ ಗ್ರಾಮಸ್ಥರಲ್ಲಿ ಗಂಟಲು ಹಾಗೂ ಚರ್ಮದ ಸಮಸ್ಯೆ ಕಾಣಿಸಿಕೊಂಡಿದ್ದು, ಈವರೆಗೆ ಸುಮಾರು ಒಂದೂವರೆ ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಇದೇ ವೇಳೆ 800 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ದುರ್ಘಟನೆಯಿಂದಾಗಿ 5 ಸಾವಿರ ಮಂದಿ ಅಸ್ವಸ್ಥರಾಗಿದ್ದಾರೆಂದು ಹೇಳಲಾಗುತ್ತಿದೆ. ಇದೇ ವೇಳೆ, ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಯಾರೂ ಕೆರೆ, ಬೋರ್ ವೆಲ್ ಸೇರಿದಂತೆ ಇತರೇ ಮೂಲಗಳಿಂದ ನೀರು ಸೇವಿಸದಂತೆ ಸೂಚಿಸಲಾಗಿದೆ. ಇದೇ ವೇಳೆ, ವಿಶಾಖಪಟ್ಟಣಂನಲ್ಲೂ ಭಾರಿ ಆತಂಕ ಮನೆಮಾಡಿದ್ದು, ನಾಗರಿಕರಿಗೆ ಯಾರೂ ಮನೆಗಳಿಂದ ಹೊರಬರಬೇಡಿ, ಮೂಗು ಹಾಗೂ ಬಾಯಿಗೆ ಒದ್ದೆ ಬಟ್ಟೆಗಳನ್ನು ಕಟ್ಟಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದೇ ವೇಳೆ, ಕೊರೊನಾ ಹಿನ್ನೆಲೆಯಲ್ಲಿ ವಲಸೆಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ವಿಶಾಖಪಟ್ಟಣಂ ಮಾರ್ಗದ ಸಂಚಾರವನ್ನು ಬದಲಿಸಲಾಗಿದೆ.
ಏತನ್ಮಧ್ಯೆ, ದುರ್ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಖೇಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ, 300ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಅಸ್ವಸ್ಥರಾಗಿದ್ದು, ಅವರೆಲ್ಲ ಶೀಘ್ರ ಗುಣಮುಖರಾಗಲೆಂದು ಆಶಿಸಿದ್ದಾರೆ.
Saddened by the news of gas leak in a plant near Visakhapatnam which has claimed several lives. My condolences to the families of the victims. I pray for the recovery of the injured and the safety of all: President Ram Nath Kovind. #VizagGasLeakpic.twitter.com/Q2JwKSF0HB
ಇನ್ನು ಇದೇ ವೇಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ವಿಶಾಖಪಟ್ಟಣಂ ವಿಷಾನಿಲ ಸೋರಿಕೆ ದುರ್ಘಟನೆಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ, ಅಸ್ವಸ್ಥರು ಶೀಘ್ರ ಗುಣಮುಖರಾಗಲೆಂದು ಆಶಿಸಿದ್ದಾರೆ. ಅಲ್ಲದೇ, ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಅಗತ್ಯ ಆರೋಗ್ಯ ಕ್ರಮಗಳನ್ನು ಪಾಲಿಸಿ ಜಿಲ್ಲಾಡಳಿತಕ್ಕೆ ಅಗತ್ಯ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
Deeply pained to hear about tragic #VIzagGasLeak. My deepest condolences to families of deceased, I pray for the well being of all. I urge party workers to provide all possible relief in coordination with administration, following health protocols: BJP Chief JP Nadda. (File pic) pic.twitter.com/BJEjY0FtT1
ವಿಶಾಖಪಟ್ಟಣಂ : ಇಲ್ಲಿನ ಆರ್.ಆರ್.ವೆಂಕಟಪುರಂ ಬಳಿಯ ಎಲ್.ಜಿ.ಪಾಲಿಮರ್ಸ್ ಕಂಪನಿಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಈವರಗೆ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ದುರ್ಘಟನೆಯಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿರುವ 20ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು 150ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಘಟನೆ ಕುರಿತಂತೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಕರೆ ಮಾಡಿದ ಪ್ರಧಾನಿ ಮೋದಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ಪರಿಸ್ಥಿತಿ ನಿಭಾಯಿಸಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಡಿಜಿಪಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಸ್ಥಳಕ್ಕೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತಂತೆ ತನಿಖೆಗೆ ಆದೇಶ ನೀಡಿದ್ದಾರೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಗ್ರಾಮಸ್ಥರು ಮಲಗಿದ್ದ ವೇಳೆ ಉಸಿರಾಟದ ಸಮಸ್ಯೆ ಏಕಾಏಕಿ ಕಾಣಿಸಿಕೊಂಡಿದೆ. ಕೂಡಲೇ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮೈಕ್ ಮೂಲಕ ವಿಷಾನಿಲ ಸೋರಿಕೆ ಕುರಿತಂತೆ ಗ್ರಾಮಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣವೇ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಾನಿಲ ಸೋರಿಕೆಯಾಗಿರುವ ಸುತ್ತಲ 5 ಕಿ.ಮೀ ವ್ಯಾಪ್ತಿಯ ಗ್ರಾಮಸ್ಥರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಸುಮಾರು 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಂದ್ ಮಾಡಲಾಗಿದೆ. ಇನ್ನು ಸ್ಥಳದಲ್ಲಿ ಎನ್ ಡಿಎಂಎ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಘಟನೆಯಿಂದಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ತೀವ್ರ ಆತಂಕ ಮನೆಮಾಡಿದೆ. ಇನ್ನು ಕಾರ್ಖಾನೆಯ ಮಾಲೀಕರ ಬೇಜವಾಬ್ದಾರಿಯಿಂದಲೇ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ….
ನವದೆಹಲಿ : ಆಹಾರ ಪದಾರ್ಥ ಡೆಲಿವರಿ ಮಾಡುತ್ತಿದ್ದ ಝೋಮ್ಯಾಟೋ ಕಂಪನಿ ಲಾಕ್ ಡೌನ್ ಹಿನ್ನೆಲೆಯಲ್ಲಿ ದಿನಸಿ ಪದಾರ್ಥಗಳನ್ನು ಗ್ರಾಹಕರಿಗೆ ಪೂರೈಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮದ್ಯಕ್ಕೆ ಭರಿ ಡಿಮ್ಯಾಂಡ್ ಇರುವುದರಿಂದ ಮದ್ಯವನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸಲು ನಿರ್ಧರಿಸಿದೆ.
ಸುಮಾರು 40 ದಿನಗಳ ಕಾಲ ಲಾಕ್ ಡೌನ್ ಇದ್ದ ಕಾರಣ ಮದ್ಯ ಸಿಗದೇ ಎಣ್ಣೆಪ್ರಿಯರು ತತ್ತರಿಸಿದ್ದರು, ಕಳೆದ ಎರಡು ದಿನಗಳಿಂದ ಲಾಕ್ ಡೌನ್ ಸಡಿಲಿಕೆ ಮಾಡಿದ ಬಳಿಕ ಮದ್ಯ ಮಾರಾಟಕ್ಕೆ ಅವಕಾಶ ದೊರೆತಿದೆ. ಮದ್ಯ ಮಾರಾಟದ ಕುರಿತು ಕೇಂದ್ರ ಸರ್ಕಾರ ಘೋಷಿಸುತ್ತಿದ್ದಂತೆ ಗ್ರಾಹಕರು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು. ಹೀಗಾಗಿ ಝೋಮ್ಯಾಟೋ ಕಂಪನಿ ಮದ್ಯವನ್ನು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡುವ ಬಗ್ಗೆ ನಿರ್ಧರಿಸಿದ್ದು, ಇದಕ್ಕೆ ಇನ್ನು ಸರ್ಕಾರದ ಅನುಮತಿ ಸಿಗಬೇಕಿದೆ.
ದೇಶದ ಬಹುತೇಕ ನಗರಗಳಲ್ಲಿ ನೂರಾರು ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ಉದ್ದದ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ. ಮಹಿಳೆಯರು ಸಹ ಸಾಲಿನಲ್ಲಿ ನಿಂತು ಮದ್ಯ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಬಹುತೇಕ ಕಡೆ ಗಲಾಟೆ ಹೆಚ್ಚುತ್ತಿದೆ. ಇದೆಲ್ಲದರ ಮದ್ಯೆ ದೆಹಲಿಯಲ್ಲಿ ಕೊರೊನಾ ವಿಶೇಷ ಶುಲ್ಕವೆಂದು ಪ್ರತಿ ಬಾಟಲಿ ಮೇಲೆ ಶೇ.70ರಷ್ಟು ದರವನ್ನು ಹೆಚ್ಚಿಸಲಾಗಿದೆ. ಕೊರೊನಾ ಹಾಟ್ಸ್ಪಾಟ್ ಆಗಿರುವ ಮುಂಬೈನಲ್ಲಿ ಬಾರ್ಗಳನ್ನು ತೆರೆದ ಎರಡೇ ದಿನಗಳಲ್ಲಿ ಮತ್ತೆ ಮುಚ್ಚಲಾಗಿದೆ. ಮದ್ಯವನ್ನು ಹೋಮ್ ಡೆಲಿವರಿ ಮಾಡಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಈ ಕುರಿತು ಕೈಗಾರಿಕಾ ವಿಭಾಗ ಹಾಗೂ ಅಂತರಾಷ್ಟ್ರೀಯ ಸ್ಪಿರಿಟ್ಸ್ ಆ್ಯಂಡ್ ವೈನ್ಸ್ ಅಸೋಷಿಯೇಶನ್ ಆಫ್ ಇಂಡಿಯಾ ಲಾಬಿ ನಡೆಸುತ್ತಲೇ ಇವೆ. ಕಡಿಮೆ ಸೋಂಕು ಹೊಂದಿರುವ ಪ್ರದೇಶಗಳಲ್ಲಿ ಮದ್ಯ ವಿತರಿಸಲು ಝೊಮ್ಯಾಟೊ ಪ್ಲ್ಯಾನ್ ಮಾಡಿದ್ದು, ಈ ಕುರಿತು ಝೊಮ್ಯಾಟೊ ಸಿಇಒ ಮೋಹಿತ್ ಗುಪ್ತಾ ಅವರು ಐಎಸ್ಡಬ್ಲ್ಯೂಎಐಗೆ ಪತ್ರ ಬರೆದಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ನವದೆಹಲಿ : ಕೊರೊನಾ ವೈರಸ್ ಮಹಾಮಾರಿಗೆ ಪ್ಲಾಸ್ಮಾ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗಿದ್ದು, ದೆಹಲಿ ಸೇರಿದಂತೆ ವಿವಿಧೆಡೆ ಈಗಾಗಲೇ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ಕೊಡಲಾಗುತ್ತಿದೆ. ಏತನ್ಮಧ್ಯೆ, ಕೊರೋನಾಗೆ ಪ್ಲಾಸ್ಮಾ ಮಾದರಿಯ ಚಿಕಿತ್ಸೆಗೆಂದು ದೇಶದಾದ್ಯಂತ 21 ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಕ್ಲಿನಿಕಲ್ ಚಿಕಿತ್ಸಾ ಪ್ರಯೋಗ ಆರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮುಂದಾಗಿದೆ.
ಕೊರೋನಾದಿಂದ ಬಾದಿತರಾಗಿ ನಂತರ ಗುಣಮುಖರಾದ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಪಡೆದು, ಅದನ್ನು ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗಿಗೆ ನೀಡಲಾಗುತ್ತಿದ್ದು, ಈ ಪ್ರಯೋಗ ಭಾರತದಲ್ಲಿ ಯಶಸ್ವಿಯೂ ಆಗಿದೆ. ಹೀಗಾಗಿ ದೇಶದಾದ್ಯಂತ ಹಲವು ಕಡೆಗಳಲ್ಲಿ ಪ್ಲಾಸ್ಮಾ ಕ್ಲಿನಿಕಲ್ ಚಿಕಿತ್ಸಾ ಪ್ರಯೋಗ ಆರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಿದ್ದವಾಗಿದ್ದು, ಯೋಜನೆಯನ್ನೂ ರೂಪಿಸಿದೆ. ಈಗಾಗಲೇ 21 ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಕ್ಲಿನಿಕಲ್ ಚಿಕಿತ್ಸಾ ಪ್ರಯೋಗ ಆರಂಭಿಸಲು ಗುರುತಿಸಲಾಗಿದೆ.
ಈ ಪೈಕಿ ಮಹಾರಾಷ್ಟ್ರದ 5 , ಗುಜರಾತಿನ 4, ರಾಜಸ್ಥಾನ, ಮಧ್ಯಪ್ರದೇಶ ಉತ್ತರ ಪ್ರದೇಶದಲ್ಲಿ ತಲಾ 2. ಕರ್ನಾಟಕ, ಪಂಜಾಬ್, ತೆಲಂಗಾಣ, ಚಂಡೀಘಡದಲ್ಲಿ ತಲಾ 1 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಆರಂಭಿಸಲು ನಿರ್ಧರಿಸಲಾಗಿದೆ….
ಬಾಗಲಕೋಟೆ: ರಾಜ್ಯದ್ಯಂತ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ಬಾಗಲಕೋಟೆಯಲ್ಲೇ ಹೆಚ್ಚು ಆತಂಕ ಮನೆಮಾಡಿದೆ. ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದಲ್ಲಿ ಗರ್ಭಿಣಿಯೊಬ್ಬರಿಂದ 12 ಮಂದಿಗೆ ಸೋಂಕು ತಗುಲಿದ್ದು ದೃಢಪ್ಟಟಿದೆ. ಏತನ್ಮಧ್ಯೆ, ಗರ್ಭಿಣಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಮಂದಿಯನ್ನು ವೈದ್ಯಕೀಯ ತಪಾಸಣೆ ನಡೆಸಿದ್ದು, ಅವರ ವೈದ್ಯಕೀಯ ವರದಿ ನೆಗೆಟಿವ್ ಬಂದಿದ್ದು, ಕೊಂಚ ನಿರಾಳರಾಗಿದ್ದಾರೆ.
ನಿನ್ನೆ ಬಾಗಲಕೋಟೆಯ 12 ಮಂದಿಯಲ್ಲಿ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಆದರೆ, ಗರ್ಭಿಣಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಜನರಿಗೆ ಸೋಂಕು ತಗುಲಿಲ್ಲ ಎಂಬುವುದು ವರದಿಯಲ್ಲಿ ಬಂದಿದೆ. ಜಿಲ್ಲಾಡಳಿತ ಇಂದು ಗ್ರಾಮದ 45 ಜನರ ಗಂಟಲು ದ್ರವ ಪರೀಕ್ಷೆ ವರದಿ ನಿರೀಕ್ಷೆಯಲ್ಲಿದೆ. ಹೀಗಾಗಿ ಡಾಣಕಶಿರೂರು ಗ್ರಾಮದಲ್ಲಿ ಭೀತಿ ಎದುರಾಗಿದೆ. ನಿನ್ನೆ ಪತ್ತೆಯಾದ 12 ಮಂದಿಯ ಮಾಹಿತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಲೆಹಾಕುತ್ತಿದ್ದು, ಈ 12 ಮಂದಿಯ ಪ್ರಾಥಮಿಕ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ನಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಇನ್ನು ಗರ್ಭಿಣಿಯ ಸಂಪರ್ಕಕ್ಕೆ ಬಂದಿದ್ದ 125ಕ್ಕೂ ಹೆಚ್ಚು ಜನರನ್ನು ಚಿಕ್ಕಮುಚ್ಚಳಗುಡ್ಡ ಗ್ರಾಮದ ಬಳಿಯ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ…..
ನವದೆಹಲಿ : ಭಾರತ ಸೇರಿದಂತೆ ಇತರೇ ರಾಷ್ಟ್ರಗಳು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಭಾರತ ವಿಶ್ವದ ಹಿತದಲ್ಲಿ ಕೆಲಸ ಮಾಡುತ್ತಿದ್ದು, ಸಮಯದ ಜೊತೆಗೆ ನಾವು ಬದಲಾಗಬೇಕಿದೆ. ಈ ಸಂಕಷ್ಟದ ದಿನಗಳಿಂದ ಆದಷ್ಟು ಬೇಗ ಹೊರಬರುವ ವಿಶ್ವಾಸವಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರೂ ಸಹಾಯ ಮಾಡಿ ಎಂದು ದೇಶದ ಜನತೆಗೆ ಪ್ರಧಾನಿ ಮೋದಿ ಕರೆನೀಡಿದ್ದಾರೆ.
ಬುದ್ದ ಪೂರ್ಣಿಮೆ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಭಗವಾನ್ ಬುದ್ದನ ಅನುಯಾಯಿಗಳಿಗೆ ಶುಭಕೋರಿದರು. ಸಮಯದ ಜೊತೆಗೆ ನಾವು ಬದಲಾಗಬೇಕೆಂದು ಪ್ರಧಾನಿ ಕರೆನೀಡಿದರು. ದೇಶದ ಜನತೆಯನ್ನು ಭೇಟಿಯಾಗುವುದಕ್ಕೆ ಪರಿಸ್ಥಿತಿ ಅವಕಾಶ ನೀಡುತ್ತಿಲ್ಲ. 2015-18ರಲ್ಲಿ ದೆಹಲಿ, ಕೊಲಂಬೋ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ವಿಶ್ವ ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ಬುದ್ಧನ ವಿಚಾರಗಳು ಈ ಸಂಕಷ್ಟದಲ್ಲಿ ಪ್ರಸ್ತುತವಾಗಿದೆ. ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವವರ ಅಗತ್ಯವಿದೆ. ಬುದ್ದನ ಅನುಯಾಯಿಗಳು ಮಾನವೀಯತೆಯಿಂದ ಸೇವೆ ಮಾಡುವವರು. ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ನನ್ನ ಅಭಿನಂದನೆ. ಈ ಸಂಕಷ್ಟದ ಪರಿಸ್ಥಿತಿಯನ್ನು ನಾವು ಸಾಂಘಿಕವಾಗಿ ಎದುರಿಸುತ್ತಿದ್ದೇವೆ. ಭಾರತದ ಸಂಸ್ಕೃತಿ ಯಾವಾಗಲೂ ಹೊಸ ದಾರಿ ತೋರಿಸಿದೆ. ಸಮಯ ಬದಲಾಯ್ತು, ಸ್ಥಿತಿ ಬದಲಾಯ್ತು, ಸಾಮಾಜಿಕ ವ್ಯವಸ್ಥೆ ಬದಲಾಯ್ತು. ಆದರೆ, ಬುದ್ದ ಯಾವುದೋ ಒಂದು ಪರಿಸ್ಥಿತಿಗೆ ಸೀಮಿತವಾಗಿಲ್ಲ, ಬುದ್ಧನ ಸಂದೇಶ ನಮ್ಮ ಜೀವನದಲ್ಲಿ ನಿರಂತರವಾಗಿ ಮುಂದುವರೆದಿದೆ. ಭಾರತ ವಿಶ್ವದ ಹಿತದಲ್ಲಿ ಕೆಲಸ ಮಾಡುತ್ತಿದೆ. ಭಾರತದ ಸಂಸ್ಕೃತಿ ಯಾವಾಗಲೂ ವಿಶ್ವಕ್ಕೆ ಮಾರ್ಗದರ್ಶಿ. ನಮ್ಮ ಕೆಲಸ ಸೇವೆಯ ಮನೋಭಾವದಿಂದ ಕೂಡಿರಬೇಕು. ಎಲ್ಲರೂ ಸೇರಿ ಹೋರಾಡಿದರೆ ಸಂಕಷ್ಟದಿಂದ ಪಾರಾಗಬಹುದು. ಬುದ್ದ ಹೆಸರು ಮಾತ್ರವಲ್ಲ, ಪವಿತ್ರ ವಿಚಾರ ಎಂದು ಹೇಳಿದರು.
ಇನ್ನು ಕಠಿಣ ಸ್ಥಿತಿಯಲ್ಲೂ ಜಯ ಗಳಿಸಬೇಕಾಗಿದೆ. ಸುಸ್ತಾಗಿ ನಿಲ್ಲುವುದರಿಂದ ಅದು ಯಶಸ್ಸನ್ನು ತಡೆಯುತ್ತದೆ. ಬುದ್ದ ನಾಲ್ಕು ಸತ್ಯಗಳನ್ನು ಹೇಳಿದ್ದಾರೆ. ದಯೆ, ಕರುಣೆ, ಸುಖ-ದುಃಖ ಅವುಗಳನ್ನು ಹೇಗೆದೆಯೋ ಅದನ್ನು ಹಾಗೇ ಪಾಲಿಸಬೇಕೆಂದು ಬುದ್ದ ಹೇಳಿದ್ದಾರೆ. ಕೊರೊನಾದಿಂದ ವಿಶ್ವದಲ್ಲಿ ಹತಾಶೆ ಮೂಡಿದೆ. ಹೀಗಾಗಿ ಎಷ್ಟು ಸಾಧ್ಯವಾಗುತ್ತದೆಯೇ ಅಷ್ಟು ಸಹಾಯ ಮಾಡಿ ಎಂದು ಪ್ರಧಾನಿ ಕರೆನೀಡಿದರು. ಭಾರತದ ಪ್ರಗತಿ ಯಾವಾಗಲೂ ಜಾಗತಿಕ ಪ್ರಗತಿಗೆ ಸಹಕಾರಿಯಾಗಿದೆ. ಈ ಸಂದರ್ಭದಲ್ಲಿ ಕೆಲವರು 24 ಗಂಟೆ ಕೆಲಸ ಮಾಡುತ್ತಿದ್ದಾರೆ. ದೇಶದ ಜನರ ಕಷ್ಟ ಕಡಿಮೆ ಮಾಡಲು ಪ್ರಯತ್ನಿಸಬೇಕೆಂದು ಪ್ರಧಾನಿ ದೇಶವಾಸಿಗಳಿಗೆ ಕರೆನೀಡಿದ್ದಾರೆ….
Buddha is the symbol of both realization and self realization of India. With this self realization India is working in the interest of the humanity and the world, and will continue to do so: Prime Minister Narendra Modi pic.twitter.com/HfW7kyIKcw
ನವದೆಹಲಿ : ಭಾರತ ಸೇರಿದಂತೆ ಇತರೇ ರಾಷ್ಟ್ರಗಳು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಭಾರತ ವಿಶ್ವದ ಹಿತದಲ್ಲಿ ಕೆಲಸ ಮಾಡುತ್ತಿದ್ದು, ಸಮಯದ ಜೊತೆಗೆ ನಾವು ಬದಲಾಗಬೇಕಿದೆ. ಈ ಸಂಕಷ್ಟದ ದಿನಗಳಿಂದ ಆದಷ್ಟು ಬೇಗ ಹೊರಬರುವ ವಿಶ್ವಾಸವಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರೂ ಸಹಾಯ ಮಾಡಿ ಎಂದು ದೇಶದ ಜನತೆಗೆ ಪ್ರಧಾನಿ ಮೋದಿ ಕರೆನೀಡಿದ್ದಾರೆ.
ಬುದ್ದ ಪೂರ್ಣಿಮೆ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಭಗವಾನ್ ಬುದ್ದನ ಅನುಯಾಯಿಗಳಿಗೆ ಶುಭಕೋರಿದರು. ಸಮಯದ ಜೊತೆಗೆ ನಾವು ಬದಲಾಗಬೇಕೆಂದು ಪ್ರಧಾನಿ ಕರೆನೀಡಿದರು. ದೇಶದ ಜನತೆಯನ್ನು ಭೇಟಿಯಾಗುವುದಕ್ಕೆ ಪರಿಸ್ಥಿತಿ ಅವಕಾಶ ನೀಡುತ್ತಿಲ್ಲ. ವಿಶ್ವ ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2015-18ರಲ್ಲಿ ದೆಹಲಿ, ಕೊಲಂಬೋ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ಈ ಸಮಯದಲ್ಲಿ ಬುದ್ಧನ ವಿಚಾರಗಳು ಈ ಸಂಕಷ್ಟದಲ್ಲಿ ಪ್ರಸ್ತುತವಾಗಿದೆ. ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವವರ ಅಗತ್ಯವಿದೆ. ಬುದ್ದನ ಅನುಯಾಯಿಗಳು ಮಾನವೀಯತೆಯಿಂದ ಸೇವೆ ಮಾಡುವವರು. ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ನನ್ನ ಅಭಿನಂದನೆ. ಈ ಸಂಕಷ್ಟದ ಪರಿಸ್ಥಿತಿಯನ್ನು ನಾವು ಸಾಂಘಿಕವಾಗಿ ಎದುರಿಸುತ್ತಿದ್ದೇವೆ. ಭಾರತದ ಸಂಸ್ಕೃತಿ ಯಾವಾಗಲೂ ಹೊಸ ದಾರಿ ತೋರಿಸಿದೆ. ಸಮಯ ಬದಲಾಯ್ತು, ಸ್ಥಿತಿ ಬದಲಾಯ್ತು, ಸಾಮಾಜಿಕ ವ್ಯವಸ್ಥೆ ಬದಲಾಯ್ತು. ಆದರೆ, ಬುದ್ದ ಯಾವುದೋ ಒಂದು ಪರಿಸ್ಥಿತಿಗೆ ಸೀಮಿತವಾಗಿಲ್ಲ, ಬುದ್ಧನ ಸಂದೇಶ ನಮ್ಮ ಜೀವನದಲ್ಲಿ ನಿರಂತರವಾಗಿ ಮುಂದುವರೆದಿದೆ. ಭಾರತ ವಿಶ್ವದ ಹಿತದಲ್ಲಿ ಕೆಲಸ ಮಾಡುತ್ತಿದೆ. ಭಾರತದ ಸಂಸ್ಕೃತಿ ಯಾವಾಗಲೂ ವಿಶ್ವಕ್ಕೆ ಮಾರ್ಗದರ್ಶಿ. ನಮ್ಮ ಕೆಲಸ ಸೇವೆಯ ಮನೋಭಾವದಿಂದ ಕೂಡಿರಬೇಕು. ಎಲ್ಲರೂ ಸೇರಿ ಹೋರಾಡಿದರೆ ಸಂಕಷ್ಟದಿಂದ ಪಾರಾಗಬಹುದು. ಬುದ್ದ ಹೆಸರು ಮಾತ್ರವಲ್ಲ, ಪವಿತ್ರ ವಿಚಾರ ಎಂದು ಹೇಳಿದರು.
ಇನ್ನು ಕಠಿಣ ಸ್ಥಿತಿಯಲ್ಲೂ ಜಯ ಗಳಿಸಬೇಕಾಗಿದೆ. ಸುಸ್ತಾಗಿ ನಿಲ್ಲುವುದರಿಂದ ಅದು ಬುದ್ದ ನಾಲ್ಕು ಸತ್ಯಗಳನ್ನು ಹೇಳಿದ್ದಾರೆ. ದಯೆ, ಕರುಣೆ, ಸುಖ-ದುಃಖ ಅವುಗಳನ್ನು ಹೇಗೆದೆಯೋ ಅದನ್ನು ಹಾಗೇ ಪಾಲಿಸಬೇಕೆಂದು ಬುದ್ದ ಹೇಳಿದ್ದಾರೆ. ಕೊರೊನಾದಿಂದ ವಿಶ್ವದಲ್ಲಿ ಹತಾಶೆ ಮೂಡಿದೆ. ಹೀಗಾಗಿ ಎಷ್ಟು ಸಾಧ್ಯವಾಗುತ್ತದೆಯೇ ಅಷ್ಟು ಸಹಾಯ ಮಾಡಿ ಎಂದು ಪ್ರಧಾನಿ ಕರೆನೀಡಿದರು. ಭಾರತದ ಪ್ರಗತಿ ಯಾವಾಗಲೂ ಜಾಗತಿಕ ಪ್ರಗತಿಗೆ ಸಹಕಾರಿಯಾಗಿದೆ. ಈ ಸಂದರ್ಭದಲ್ಲಿ ಕೆಲವರು 24 ಗಂಟೆ ಕೆಲಸ ಮಾಡುತ್ತಿದ್ದಾರೆ. ದೇಶದ ಜನರ ಕಷ್ಟ ಕಡಿಮೆ ಮಾಡಲು ಪ್ರಯತ್ನಿಸಬೇಕೆಂದು ಪ್ರಧಾನಿ ದೇಶವಾಸಿಗಳಿಗೆ ಕರೆನೀಡಿದ್ದಾರೆ….
ಅಹಮದಾಬಾದ್ : ಮಾರಕ ಕೊರೊನಾ ಸೋಂಕು ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 53 ಸಾವಿರ ಗಡಿದಾಟಿದೆ. ಏತನ್ಮಧ್ಯೆ, ಅಹಮದಾಬಾದ್ನ ಸಬರಮತಿ ಕೇಂದ್ರ ಕಾರಾಗೃಹಕ್ಕೂ ಮಹಾಮಾರಿ ಕೊರೋನಾ ವೈರಸ್ ತಟ್ಟಿದೆ. ಜೈಲಿನ 11 ಕೈದಿಗಳಿಗೆ ಮತ್ತು ಮೂವರು ಜೈಲು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಜೈಲಿನ ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳು ಸೇರಿದಂತೆ ಸೋಂಕಿತ 11 ಕೈದಿಗಳಲ್ಲಿ ಯಾರೂ ಇತರೆ ಕೈದಿಗಳ ಸಂಪರ್ಕಕ್ಕೆ ಬಂದಿಲ್ಲ. ಏಕೆಂದರೆ ಅವರು ಈಗಾಗಲೇ ಕ್ವಾರಂಟೈನಲ್ಲಿದ್ದಾರೆ ಎಂದು ಸಬರಮತಿ ಜೈಲಿನ ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ ವಿ ರಾಣಾ ತಿಳಿಸಿದ್ದಾರೆ. ಇನ್ನು ಜೈಲಿನಲ್ಲಿ ಹೊಸದಾಗಿ ಇಬ್ಬರು ಹವಾಲ್ದಾರ್ ಗಳು ಮತ್ತು ಜೈಲು ಸಹಾಯಕ ಸೇರಿದಂತೆ ಮೂವರಿಗೆ ಕೊರೋನಾ ವೈರಸ್ ತಗುಲಿದೆ. ಕಳೆದ ವಾರ ಇಬ್ಬರು ಕೈದಿಗೆಳಿಗೆ ಪಾಸಿಟಿವ್ ಬಂದಿತ್ತು. ಇನ್ನು ಇತ್ತೀಚಿಗೆ ಪೆರೋಲ್ ಮುಗಿಸಿ ಜೈಲಿಗೆ ಮರಳಿದ ಐವರು ಅಪರಾಧಿಗಳಿಗೆ ಕೊರೋನಾ ಪಾಸಿಟಿವ್ ದೃಢುಪಟ್ಟಿದೆ. ಇದುವರೆಗೆ ಒಟ್ಟ 11 ಕೈದಿಗಳಿದೆ ಸೋಂಕು ತಗುಲಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ…
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಏತನ್ಮಧ್ಯೆ, ಮಂಗಮ್ಮನಪಾಳ್ಯದಲ್ಲಿ ಕಳೆದ ಕೆಲ ದಿನಗಳ ಅವಧಿಯಲ್ಲಿ ಮೂರು ಪ್ರಕರಣಗಳು ವರದಿಯಾಗಿದ್ದು, ಏರಿಯಾದಲ್ಲಿ ಆತಂಕ ಎದುರಾಗಿದೆ. ಮೊದಲಿಗೆ ಸೋಂಕು ದೃಢಪಟ್ಟಿದ್ದ ಕೂಲಿಕಾರ್ಮಿಕನ ಪತ್ನಿ ಹಾಗೂ ಪುತ್ರನಿಗೆ ಸೋಂಕು ದೃಢಪಟ್ಟಿದೆ. ಆದರೆ, ಪುತ್ರಿಗೆ ವರದಿ ನೆಗೆಟಿವ್ ಬಂದಿದೆ.
ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕ ರೋಗಿ ಸಂಖ್ಯೆ 654 ಗೆ ಸೋಂಕು ತಗುಲಿದ್ದು, ದೃಢವಾಗ್ತಿದ್ದಂತೆ ಆತನ ಕುಟುಂಬಸ್ಥರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಾರ್ಮಿಕನ ಪುತ್ರ ಮತ್ತು ಪತ್ನಿಗೆ ಸೋಂಕು ತಗುಲಿದೆ. ಆದ್ರೆ ಅವರ ಜೊತೆಯಲ್ಲಿದ್ದ ಪುತ್ರಿಯ ವರದಿ ನೆಗೆಟಿವ್ ಬಂದಿದೆ. ಈ ಕಾರ್ಮಿಕನ ಪುತ್ರ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡುತ್ತಿದ್ದವರಲ್ಲಿ ಆತಂಕ ಮನೆಮಾಡಿದೆ. ಇನ್ನು ಆರೋಗ್ಯ ಇಲಾಖೆಗೆ ಡೆಲಿವರಿ ಬಾಯ್ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡುತ್ತಿದ್ದು, ಆತನ ಜೊತೆ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕದಲ್ಲಿದ್ದ ಎಲ್ಲರನ್ನು ಪತ್ತೆ ಹಚ್ಚಲಾಗುತ್ತಿದೆ. ಈವರೆಗೆ ಸುಮಾರು 35 ಮಂದಿಯನ್ನು ಗುರುತಿಸಿ ಕ್ವಾರಂಟೈನ್ ಮಾಡಿದ್ದು, ಎಲ್ಲರ ರಕ್ತದ ಸ್ಯಾಂಪಲ್ ಹಾಗೂ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿದೆ…
ಬಾಗಲಕೋಟೆ : ರಾಜ್ಯದ್ಯಂತ ಇಂದು 19 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ಬಾಗಲಕೋಟೆ ಜಿಲ್ಲೆಯಲ್ಲಿ 13 ಮಂದಿಯಲ್ಲಿ ಸೋಂಕಿತರಿದ್ದಾರೆ. ಈ ಹಿನ್ನಲೆಯಲ್ಲಿ ಬದಾಮಿ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗರ್ಭಿಣಿಯೊಬ್ಬರಿಂದಲೇ 12 ಮಂದಿಗೆ ಸೋಂಕು ತಗುಲಿದ್ದು, ಈ ನಿಟ್ಟಿನಲ್ಲಿ ಇಡೀ ಗ್ರಾಮದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಸೇರಿದಂತೆ ಬಾದಾಮಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಇನ್ನು ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿಯೂ ಕೊರೊನಾ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಎಚ್ಚರ ವಹಿಸುವಂತೆ ಸೂಚನೆ ನೀಡಿ, ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಜಿಲ್ಲಾಧಿಕಾರಿಗಳು, ಬದಾಮಿ ತಹಶೀಲ್ದಾರ್, ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಇನ್ನು ಬದಾಮಿ ಕ್ಷೇತ್ರದಲ್ಲಿ ಜನತೆ ಮನೆಗಳಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಕೆ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಮನವಿ ಮಾಡಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ…
ಬೆಂಗಳೂರು : ರಾಜ್ಯದಲ್ಲಿ ಇಂದು ಮತ್ತೆ 19 ಮಂದಿಯಲ್ಲಿ ಕೊರೊನಾ ಸೋಂಕು ಪಾಟಿಸಿವ್ ಬಂದಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ. ಈ ಪೈಕಿ ಬೆಂಗಳೂರಿನಲ್ಲೇ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆ, ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿ 25 ವರ್ಷದ ಯುವಕ ಹಾಗೂ 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇವರಿಬ್ಬರೂ ಪೇಷಂಟ್ 654 ಸೋಂಕಿತರ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಇಬ್ಬರು ಸೋಂಕಿತರನ್ನು ಕ್ವಾರೆಂಟೈನ್ ನಲ್ಲಿಡಲಾಗಿತ್ತು. ವೈದ್ಯಕೀಯ ವರದಿ ಬಂದಿದ್ದು, ಇದರಲ್ಲಿ ಸೋಂಕು ಪಾಸಿಟಿವ್ ಬಂದಿದೆ. ಇನ್ನು ಬೆಂಗಳೂರಿನಲ್ಲಿ ಲಾಕ್ಡೌನ್ ಸಡಿಲಗೊಂಡಿದ್ದು, ಹಲವು ಕಚೇರಿಗಳು, ಕಾರ್ಖಾನೆಗಳು ಓಪನ್ ಆಗಿವೆ. ಆದರೆ, ಕೋವಿಡ್ 19 ಸೋಂಕು ದಿನೇ ದಿನೇ ಹರಡುತ್ತಿರುವ ಕಾರಣ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ, ನಿಯಮ ಉಲ್ಲಂಘಿಸಿದರೆ 200 ರೂ. ದಂಡ ವಿಧಿಸಲಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ಮೂರು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಮತ್ತೆ ಮಂಗಮ್ಮನಪಾಳ್ಯ, ಶಿವಾಜಿನಗರ, ಬಿಟಿಎಂ ಲೇಔಟ್ ಗಳನ್ನು ರೆಡ್ ಝೋನ್ ವ್ಯಾಪ್ತಿಗೆ ಸೇರಿಸಲಾಗಿತ್ತು. ಅಲ್ಲದೇ ಶಿವಾಜಿನಗರದಲ್ಲಿ ಸೋಂಕಿತ ತಂಗಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ..
ಚನ್ನೈ : ದೆಹಲಿ, ಆಂಧ್ರಪ್ರದೇಶ, ಕರ್ನಾಟಕ ಸರ್ಕಾರಗಳ ಬೆನ್ನಲ್ಲೇ ಇದೀಗ ತಮಿಳುನಾಡು ಸರ್ಕಾರ ಕೂಡ ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ತಮಿಳುನಾಡಿನ ಕೊರೊನಾ ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಇನ್ನು ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ. ಮೇ.7ರ ಬಳಿಕ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಇದರ ಬೆನ್ನಲ್ಲೇ ಅಲ್ಲಿನ ಸರ್ಕಾರ ಮದ್ಯಪ್ರಿಯರ ಜೇಬಿಗೆ ಶಾಕ್ ನೀಡಿದೆ.
ತಮಿಳುನಾಡು ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿದ್ದು, ಭಾರತದಲ್ಲಿ ಸಿದ್ದಪಡಿಸಿದ ವಿದೇಶಿ ಮದ್ಯವನ್ನು ಶೇ.15 ರಷ್ಟು ಹೆಚ್ಚಳ ಮಾಡಲಾಗಿದೆ. ಇನ್ನು ಸಾಮಾನ್ಯ ಬ್ರಾಂಡ್ ಗಳ ದರವನ್ನು 10 ರೂ. ಏರಿಕೆ ಮಾಡಲಾಗಿದೆ. ಇದರೊಂದಿಗೆ 180 ಮಿಲ್ ಲೀಟರ್ ಬಾಟಲ್ ನ ಪ್ರಿಮಿಯಂ ಮದ್ಯಕ್ಕೆ 20 ರೂ. ದರ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ದೆಹಲಿ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಸರ್ಕಾರಗಳು ಕೊರೊನಾ ಪರಿಸ್ಥಿತಿಯಿಂದಾಗಿ ಎದುರಾಗಿರುವ ಆರ್ಥಿಕ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಮದ್ಯದ ದರ ಏರಿಕೆ ಮಾಡಿವೆ. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕೂಡ ಈ ಕ್ರಮಕ್ಕೆ ನಿರ್ಧಾರ ಕೈಗೊಂಡಿದೆ…
Tamil Nadu govt has announced hike of 15% Excise Duty on Indian Made Foreign Liquor, hike of Rs 10 on normal brands&hike of Rs 20 on premium brands per 180 ml bottle.State govt had already ordered opening of state-run liquor shops from May 7,except in #COVID19 containment zones
ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಗ್ಯಾಂಗ್ ರೇಪ್ ಗೆ ಸಂಚು ರೂಪಿಸಿದ್ದ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಘಟನೆ ಹಿನ್ನೆಲೆಯಲ್ಲಿ ದೆಹಲಿಯ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.
ದಕ್ಷಿಣ ದೆಹಲಿಯ ನೂರಾರು ಯುವಕರು ‘ಬಾಯ್ಸ್ ಲಾಕರ್ ರೂಮ್’ ಎಂಬ ಇನ್ಸ್ಟಾಗ್ರಾಮ್ ಚಾಟ್ ಗ್ರೂಪ್ ನಲ್ಲಿ ಗ್ಯಾಂಗ್ ರೇಪ್ ಗೆ ಪ್ರೇರೇಪಿಸುವ ನಿಟ್ಟಿನಲ್ಲಿ ಚಾಟ್ ಮಾಡಿದ್ದರು. ರೇಪ್ ಮಾಡಲು ಉತ್ತೇಜನ ನೀಡುವಂತಹ ಫೋಟೋಗಳನ್ನು ಶೇರ್ ಮಾಡಿದ್ದರು. ಇನ್ನು ಆ ಗ್ರೂಪ್ ನಲ್ಲಿದ್ದವರು ಎಲ್ಲರೂ 10 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಾಗಿದ್ದರೆಂಬುದು ಗಮನಾರ್ಹ. ಈ ಕುರಿತು ಮಾಹಿತಿ ಆಧರಿಸಿ ವಿಚಾರಣೆ ನಡೆಸಿದ ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ಓರ್ವ ನನ್ನು ವಶಕ್ಕೆ ಪಡೆದಿದ್ದರು. ಆತನ ಹೇಳಿಕೆ ಆಧರಿಸಿ ಮತ್ತೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರೊಂದಿಗೆ ಇನ್ನು 21 ಮಂದಿಯನ್ನು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ. ಈ ಚಾಟ್ ಗ್ರೂಪ್ ನಲ್ಲಿದ್ದವರೆಲ್ಲ 17 ರಿಂದ 18 ವರ್ಷದವರಾಗಿದ್ದು, ಟ್ವೀಟರ್ ಬಳಕೆದಾರರೊಬ್ಬರು ಈ ಚಾಟ್ ಗ್ರೂಪ್ ನಲ್ಲಿ ಅತ್ಯಾಚಾರ ನಡೆಸಲು ಪ್ರೇರೇಪಿಸಿದ್ದರೆಂದು ಹೇಳಲಾಗಿದೆ. ಇದನ್ನು ಪತ್ತೆ ಹಚ್ಚಿರುವ ದೆಹಲಿಯ ಸೈಬರ್ ಕ್ರೈಮ್ ಸೆಲ್ ಪೊಲೀಸರು ಐಟಿ ಕಾಯ್ದೆಯಡಿ ಬಾಲಕರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆ ‘ಬಾಯ್ಸ್ ಲಾಕರ್ ರೂಮ್’ ಇನ್ಸ್ಟಾಗ್ರಾಂ ಚಾಟ್ ಗ್ರೂಪಿನ ಒಂದು ಸ್ಕ್ರೀನ್ಶಾಟ್ ವೈರಲ್ ಆಗಿತ್ತು. ಅದರಲ್ಲಿ ‘ನಾವು ಅವಳನ್ನು ಸುಲಭವಾಗಿ ಅತ್ಯಾಚಾರ ಮಾಡಬಹುದು’, ‘ನೀವು ಹೇಳಿದಾಗ ಬರುತ್ತೇನೆ. ನಾವು ಅವಳನ್ನು ಸಾಮೂಹಿಕ ಅತ್ಯಾಚಾರ ಮಾಡಬಹುದು’ ಎಂಬಿತ್ಯಾದಿ ನೇರವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಪ್ರೇರೇಪಿಸುವಂತಹ ಸಂಭಾಷಣೆಗಳಿದ್ದವು. ಸ್ಕ್ರೀನ್ಶಾಟ್ ವೈರಲ್ ಆಗುತ್ತಿದ್ದಂತೆ ಪಾತಕಿಗಳು ‘ಬಾಸ್ ಲಾಕರ್ ರೂಮ್ 2.0’ ಎಂದು ಗ್ರೂಪ್ ಹೆಸರನ್ನು ಬದಲಿಸಿಕೊಂಡು ಹಳೆಯ ಚಾಳಿ ಮುಂದುವರೆಸಿದ್ದರು ಎಂದು ತಿಳಿದುಬಂದಿದೆ…
ರಾಮನಗರ : ರಾಮನಗರ ಜಿಲ್ಲೆಯಾದ್ಯಂತ ಯಾವುದೇ ಕೊರೊನಾ ಸೋಂಕು ಪ್ರಕರಣ ವರದಿಯಾಗಿಲ್ಲ. ಹೀಗಾಗಿ ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಸಣ್ಣ ಹೊಟೇಲ್ ಉದ್ಯಮ ನಡೆಸುತ್ತಿರುವವರು ಸಂಕಷ್ಟಕ್ಕೆ ತುತ್ತಾಗಿದ್ದು, ಅವರಿಗೆ ಹೊಟೇಲ್ ತೆರೆಯಲು ಅನುಮತಿ ನೀಡಬೇಕೆಂದು ಸಂಸದ ಡಿ.ಕೆ.ಸುರೇಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಡಿ.ಕೆ.ಸುರೇಶ್, ರಾಮನಗರ ಜಿಲ್ಲೆಯಲ್ಲಿರುವ ಸಣ್ಣಪುಟ್ಟ ಹೋಟೆಲ್ಗಳನ್ನು ಬಂದ್ ಮಾಡಲಾಗಿದ್ದು, ಸಾಮಾನ್ಯ ಜನರಿಗೆ ಹಾಗೂ ಉದ್ಯಮ ನಡೆಸುತ್ತಿರುವವರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ದಿನನಿತ್ಯ ನೂರಾರು ಜನರು ತಮ್ಮ ಕೆಲಸಕಾರ್ಯಗಳಿಗೆ ನಗರ ಪ್ರದೇಶಕ್ಕೆ ಆಗಮಿಸುತ್ತಾರೆ. ಆದರೆ, ಅವರಿಗೆ ನಗರ ಪ್ರದೇಶದಲ್ಲಿ ತಿನ್ನೋಕೆ ಆಹಾರ ಸಿಗುತ್ತಿಲ್ಲ. ಇದರ ಜೊತೆಗೆ ಉದ್ಯಮ ನಡೆಸುತ್ತಿರುವವರು ಸಾಲ ಮಾಡಿಕೊಂಡು ಉದ್ಯಮಕ್ಕೆ ಕೈಹಾಕಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ವ್ಯಾಪಾರ ವಹಿವಾಟಿಲ್ಲದ ಕಾರಣ ಎಲ್ಲರೂ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪನವರು ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿ ತ್ವರಿತವಾಗಿ ಜಿಲ್ಲೆಯಲ್ಲಿ ಹೋಟೆಲ್ಗಳ ಪ್ರಾರಂಭಕ್ಕೆ ಸೂಚನೆ ಕೊಡಬೇಕು. ಇದರಿಂದಾಗಿ ಉದ್ಯಮ ನಡೆಸುತ್ತಿರುವವರಿಗೆ ಹಾಗೂ ಸಾಮಾನ್ಯ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ” ಎಂದು ಒತ್ತಾಯಿಸಿದ್ದಾರೆ….
ಬೆಂಗಳೂರು : ಸದ್ಯದ ಆರ್ಥಿಕ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಲು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಹಾಗೂ ಬಜೆಟ್ ಮರುಪರಿಶೀಲನೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಅವರು ತಾವು ಶ್ರಮಿಕರ ಪರವಾಗಿ ಕೈಗೊಂಡ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷ ಅಭಿನಂದಿಸುತ್ತದೆ. ವಿಶೇಷ ಬಜೆಟ್ ಅಧಿವೇಶನ ಕರೆಯಬೇಕೆಂದು ಮನವಿ ಮಾಡುತ್ತೇವೆ. ಬಜೆಟ್ ಮರುಪರಿಶೀಲನೆ ಮಾಡುವ ಅಗತ್ಯವಿದ್ದು, ಎಲ್ಲ ವರ್ಗದ ಜನರಿಗೆ ಸಹಾಯ ಮಾಡಬೇಕು. ವೃತ್ತಿಪರರಿಗೆ, ವೃತ್ತಿಯನ್ನು ಉಳಿಸಿಕೊಂಡು ಬಂದಿರುವವರಿಗೆ, ಕಾರ್ಮಿಕರು, ವೈದ್ಯರು, ಚಾಲಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಸಹಾಯ ಮಾಡುವ ಅಗತ್ಯವಿದೆ. ಇದಕ್ಕಾಗಿ ತಾವು ಸಂಪೂರ್ಣ ಸಹಕಾರ ನೀಡುತ್ತೇವೆ, ಹೀಗಾಗಿ ಕೂಡಲೇ ಬಜೆಟ್ ಮರುಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ…
ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸುವುದೇನೆಂದರೆ, ಈಗಿನ ಆರ್ಥಿಕ ಸಂಕಷ್ಟ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಲು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಹಾಗೂ ಬಜೆಟ್ ಮರುಪರಿಶೀಲನೆ ಮಾಡಬೇಕು. pic.twitter.com/IJmf062SNe