KNN Desk – Kannada News Now


State

ಕೊಪ್ಪಳ : ರಾಜ್ಯ ಸರ್ಕಾರ ಬಡವರಿಗೆ ಅನುಕೂಲವಾಗಲೆಂದು ಜನತೆಗೆ ಉಚಿತ ಅಕ್ಕಿ ನೀಡುತ್ತಿದೆ. ಸದ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತವಾಗಿ ಅಕ್ಕಿಯನ್ನು ಪೂರೈಸುತ್ತಿದೆ. ಆದರೆ. ಕೊಪ್ಪಳದಲ್ಲಿ ಈ ಅಕ್ಕಿಯನ್ನು ಅಧಿಕಾರಿಗಳು ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಘಟನೆ ನಡೆದಿದೆ. 

ಮೇ 6ರಂದು ಮುಂಜಾನೆ 5 ಗಂಟೆ ಸುಮಾರಿಗೆ ಗದಗ ನಗರ ಠಾಣೆ ಪೊಲೀಸರು ಹುಬ್ಬಳ್ಳಿಗೆ ಹೊರಟಿದ್ದ ಲಾರಿಯೊಂದನ್ನು ಕಳಸಾಪುರ ರಿಂಗ್ ರಸ್ತೆಯಲ್ಲಿ ತಡೆದಿದ್ದರು. ಲಾರಿ ಚಾಲಕ ಸೋಮಲಿಂಗಪ್ಪ ಶಿರೂರನ್ನು ವಿಚಾರಿಸಿದಾಗ ಕೊಪ್ಪಳದ ಜವಾಹರ ರಸ್ತೆಯಲ್ಲಿರುವ ಕಿರಣ್ ಟ್ರೇಡರ್ಸ್‌ನಿಂದ ಹುಬ್ಬಳ್ಳಿಯ ಬಾಲಾಜಿ ಟ್ರೇಡರ್ಸ್‌ಗೆ ಸುಮಾರು 600 ಚೀಲ ಅಂದರೆ 7.35 ಲಕ್ಷ ರೂಪಾಯಿ ಮೌಲ್ಯದ 300 ಕ್ವಿಂಟಾಲ್ ಅಕ್ಕಿಯನ್ನು ಸಾಗಿಸುತ್ತಿರುವುದು ಬಯಲಿಗೆ ಬಂದಿದೆ. ಈ ಕುರಿತು ವಿಚಾರಣೆ ನೆಪದಲ್ಲಿ ಪ್ರಕರಣ ದಾಖಲಿಸಲು ವಿಳಂಬ ಮಾಡಿರುವ ಪೊಲೀಸ್ ಅಧಿಕಾರಿಗಳು ಸಂಜೆ ಹೊತ್ತಿಗೆ ಲಾರಿ ಚಾಲಕ ಸೋಮಲಿಂಗಪ್ಪ ಶಿರೂರು ಹಾಗೂ ಕೊಪ್ಪಳದ ಕಿರಣ್ ಟ್ರೇಡರ್ಸ್‌ನ ಅಬ್ದುಲ್ ರೆಹಮಾನ್ ಮುನ್ಷಿಯನ್ನು ಬಂಧಿಸಿ  ನ್ಯಾಯಾಂಗ ವಶಕ್ಕೆ ನೀಡಿ ಎಫ್ಐಆರ್ ದಾಖಲಿಸಿದ್ದಾರೆ.

ಏತನ್ಮಧ್ಯೆ, ಭಾರಿ ಪ್ರಮಾಣದ ಅಕ್ಕಿಯನ್ನು ಅಧಿಕಾರಿಗಳ ಸಹಕಾರವಿಲ್ಲದೇ, ಪಡಿತರ ಕೇಂದ್ರದಿಂದ ಖಾಸಗಿ ವ್ಯಕ್ತಿಗಳ ಗೋಡೌನ್ ಗೆ ಸಾಗಿಸಿದ್ದಾರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ತನಿಖೆಯ ಬಳಿಕ ಸತ್ಯ ಬಹಿರಂಗವಾಗಲಿದೆ…


State

ಬೆಂಗಳೂರು : ಮೇ.17 ರ ಬಳಿಕ ಲಾಕ್ ಡೌನ್ ವಿಸ್ತರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ಈ ಭಾಷಣದ ಬಗ್ಗೆ ನನಗೇನು ನಿರೀಕ್ಷೆ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರಧಾನಿ ಮೋದಿ 6 ವರ್ಷಗಳಿಂದ ಭಾಷಣವನ್ನೇ ಮಾಡುತ್ತಿದ್ದಾರೆ. ಮೋದಿ ಮಾಮೂಲಿ ಭಾಷಣ ಮಾಡುತ್ತಾರೆ. ಜನರು ಮರುಳಾಗುತ್ತಾರೆ ಅಷ್ಟೆ. ಪಿಎಂ ಕೇರ್​  ಫಂಡ್ ಬಗ್ಗೆ ಮಾಹಿತಿ ಕೊಡುವುದಿಲ್ಲ ಎಂದು ಹೇಳುತ್ತಾರೆ. ಇದು ಮೋದಿ ಅವರ ಆಡಳಿತ ಎಂದರು. ಅಲ್ಲದೇ, ಮೋದಿ ಅವರ ಭಾಷಣ ಕೇಳೋಕೆ ಚೆಂದ. ಅದನ್ನ ಕೇಳಿಕೊಂಡು ಸುಮ್ಮನೆ ಇರಬೇಕಷ್ಟೆ‌. ಕಳೆದ 6 ವರ್ಷಗಳಿಂದ ಅದನ್ನು ಕೇಳುತ್ತಲೇ ಇದ್ದೇವೆ.  ಮೋದಿ ಮಾತುಗಳನ್ನಷ್ಟು ಆಡುತ್ತಾರೆ, ಕೆಲಸವನ್ನೇನು ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು…State

ಬೆಂಗಳೂರು : ಲಾಕ್ ಡೌನ್ ಸಡಿಲಿಕೆ ಕುರಿತು ಕೇಂದ್ರ ಸರ್ಕಾರ ದಿನಕ್ಕೊಂದು ನಿರ್ಧಾರ ಕೈಗೊಳ್ಳುವ ಮೂಲಕ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ,  “ಕೇಂದ್ರ ಸರ್ಕಾರ ಕೋವಿಡ್-19 ವಿರುದ್ಧ ಏನು ಕ್ರಮ ಕೈಗೊಂಡಿತ್ತೋ ಆ ಕ್ರಮಕ್ಕೆ ಜನ ಸಾಮಾನ್ಯರು ಸ್ಪಂದಿಸಿದ್ದಾರೆ. ಆದರೆ, ಪ್ರಾರಂಭಿಕ ಹಂತದಲ್ಲಿ ಸರ್ಕಾರ ಲಾಕ್‌ಡೌನ್ ಬಗ್ಗೆ ತೋರಿಸಿದ ವೇಗ ಹಂತ ಹಂತವಾಗಿ ಕಡಿಮೆಯಾಗಿದೆ.  ಲಾಕ್ ಡೌನ್ ಸಡಿಲಿಕೆ ಮಾಡುವಾಗ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಿಲ್ಲ. ಬದಲಾಗಿ ಪ್ರತಿ ದಿನ ಒಂದೊಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಜನರಲ್ಲಿ ಹಲವಾರು ಗೊಂದಲಗಳನ್ನ ಹುಟ್ಟು ಹಾಕಿದರು ಎಂದರು,

ಇನ್ನು ರಾಜ್ಯ ಸರ್ಕಾರ  ಯಾವುದೇ ಪ್ಯಾಕೇಜ್ ಘೋಷಣೆ ಮಾಡಲಿ. ಆ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿಯಬಾರದು. ಆದರೆ, ಬಿಎಸ್ ಯಡಿಯೂರಪ್ಪ ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಹೂ ಮಾರಾಟ ಮಾಡುವವರು, ವಿಶ್ವ ಕರ್ಮ, ರಸ್ತೆ ಕಾರ್ಮಿಕರು ಹೀಗೆ ವಿವಿಧ ವರ್ಗದ 50 ಲಕ್ಷ ಜನ ಇರಬಹುದು. ಈ 50 ಲಕ್ಷ ಕುಟುಂಬಕ್ಕೆ ತಲಾ 5 ಸಾವಿರ ಕೊಟ್ಟರೂ 2.5 ಸಾವಿರ ಕೋಟಿ ಖರ್ಚಾಗುತ್ತದೆ. ಇನ್ನೂ ಕಟ್ಟಡ ಕಾರ್ಮಿಕರೇ ರಾಜ್ಯದಲ್ಲಿ 21 ಲಕ್ಷ ಜನರಿದ್ದಾರೆ, ಕಾರ್ಮಿಕ ಪರಿಹಾರ ನಿಧಿಯಲ್ಲೇ ಹಣ ಇದೆ. ಆದರೆ, ಈ ಹಣವನ್ನು ಕಾರ್ಮಿಕರ ಒಳಿತಿಗೆ ಬಳಸಲು ರಾಜ್ಯ ಸರ್ಕಾರಕ್ಕೆ ಮನಸ್ಸಿಲ್ಲ ಎಂದು ಹರಿಹಾಯ್ದರು…India

ನವದೆಹಲಿ : ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 2 ದಿನಗಳ ಹಿಂದೆ ಡಾ.ಮನ್ ಮೋಹನ್ ಸಿಂಗ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಕಾರಣ ಅವರನ್ನು ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿತ್ತು. 

87 ವರ್ಷದ ಮನ್ ಮೋಹನ್ ಸಿಂಗ್ ಅವರಿಗೆ ಭಾನುವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಪರಿಣಾಮ ಏಮ್ಸ್ ಗೆ ದಾಖಲು ಮಾಡಿ, ಎದೆರೋಗಿಗಳ ವಿಭಾಗದಲ್ಲಿ ನಿಗಾದಲ್ಲಿ ಇರಿಸಲಾಗಿತ್ತು. ತೀವ್ರ ನಿಗಾ ವಹಿಸಿದ ವೈದ್ಯರು ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿ ಇಂದು ಡಿಸ್ಚಾರ್ಜ್ ಮಾಡಿದ್ದಾರೆ. 2009ನೇ ಇಸವಿಯಲ್ಲಿ ಮನಮೋಹನ್ ಸಿಂಗ್ ಹೃದಯದ ಯಶಸ್ವಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು….State

ಬೆಂಗಳೂರು : ದೇಶದಲ್ಲಿ ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವುದಕ್ಕೆ ತಬ್ಲಿಘಿಗಳೇ ಕಾರಣ ಎಂದು ಹೇಳುತ್ತಿರುವುದು ಸರಿಯಲ್ಲ. ಇದು ಆರ್.ಎಸ್.ಎಸ್ ಹುನ್ನಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೋವಿಡ್ 19 ಮಹಾಮಾರಿ ರೋಗವನ್ನು ಮೊದಲೇ ದಿನದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಜನವರಿ 30 ರಂದು ಕೊರೋನಾ ವೈರಸ್‌ ಕೇರಳದಲ್ಲಿ ಪತ್ತೆಯಾಗಿತ್ತು. ಹೀಗಾಗಿ ದೇಶದಲ್ಲಿ ಈ ಸೋಂಕು ಹರಡದಂತೆ ತಡೆಯಲು ಜನವರಿ, ಫೆಬ್ರವರಿ ಸೇರಿದಂತೆ ಎರಡು ತಿಂಗಳ ಸಮಯಾವಕಾಶ ಇತ್ತು. ಆದರೆ, ಲಾಕ್ ಡೌನ್ ಮಾಡಿದ್ದು ಮಾರ್ಚ್ ಕೊನೆ ವಾರದಲ್ಲಿ.ಅದಕ್ಕೂ ಮೊದಲು ಸಿದ್ದತೆಗಳನ್ನ ಮಾಡಲು ಸಾಕಷ್ಟು ಸಮಯವಿತ್ತು. ಆಗ ಯಾವ ಸರ್ಕಾರಗಳೂ ಏನೂ ಮಾಡಲಿಲ್ಲ. ಕೇಂದ್ರ ಸರ್ಕಾರ ನರೇಂದ್ರ ಮೋದಿ ಅವರ ವಿದೇಶಿ ವಿಮಾನಯಾನ ಬಂದ್ ಮಾಡಿದ್ರೆ ಈ ಸಮಸ್ಯೆ ಇರುತ್ತಿರಲಿಲ್ಲ. ಇಷ್ಟು ದೊಡ್ಡ ಮಟ್ಟದಲ್ಲಿ ರೋಗ ಹಬ್ಬುತ್ತಿರಲಿಲ್ಲ ಎಂದು ಹರಿಹಾಯ್ದರು.

ಇನ್ನು ದೇಶದಾದ್ಯಂತ ಕೊರೊನಾ ವೈರಸ್ ಹೆಚ್ಚಾಗಲು ತಬ್ಲಿಘಿಗಳೇ ಕಾರಣ ಎಂದು ರಾಜಕೀಯ ಮಾಡಲಾಗುತ್ತಿದೆ. ಆದರೆ, ಇಟಲಿ, ಅಮೇರಿಕಾ, ಸ್ಪೇನ್ ನಲ್ಲಿ ಯಾವ ತಬ್ಲಿಘಿಗಳಿದ್ದಾರೆ,  ಅಸಲಿಗೆ ತಬ್ಲಿಘಿಗಳಿಗೆ ಸಭೆ ಮಾಡಲು ಲೈಸೆನ್ಸ್ ಕೊಟ್ಟವರು ಯಾರು ಎಂದು ಪ್ರಶ್ನಿಸಿದರಲ್ಲದೇ,  ಪೊಲೀಸ್ ಮತ್ತು ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟು ಈಗ ಗೂಬೆ ಕೂರಿಸುವುದು ಎಷ್ಟು ಸರಿ.. ಇವೆಲ್ಲಾ ಆರ್‌ಎಸ್‌ಎಸ್‌ ನವರ ಹುನ್ನಾರ ಎಂದು ಆಕ್ರೋಶ ಹೊರಹಾಕಿದರು.

ಇನ್ನು ಈವರೆಗೆ 35 ಸಾವಿರ ಕೋಟಿ ಹಣ ಪಿಎಂ ಫಂಡ್ ಗೆ ಬಂದಿದೆ. ಕರ್ನಾಟಕದಿಂದ ಮೂರು ಸಾವಿರ ಕೋಟಿ ಹಣ ಹೋಗಿದೆ. ಈ ಹಣವನ್ನು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಕೊಡುವುದಕ್ಕೆ ಆಗುವುದಿಲ್ಲವಾ ಎಂದು ಕಿಡಿಕಾರಿದರು. ನರೇಂದ್ರ ಮೋದಿ ಕೋವಿಡ್ ಪ್ಯಾಕೇಜ್ ಎಂದು ಯಾವ ರಾಜ್ಯಕ್ಕೂ ಒಂದು ರೂಪಾಯಿ ಹಣ ನೀಡಿಲ್ಲ. ಆದರೆ, ದೀಪ ಹಚ್ಚಿ, ಚಪ್ಪಾಳೆ ಹೊಡಿರಿ ಅಂತಾರೆ. ಇದ್ರಿಂದ ಬಡವರ ಕಷ್ಟ ನೀಗುತ್ತಾ ಎಂದು ಪ್ರಶ್ನಿಸಿದರು. ಮಾರ್ಚ್ 24 ರಂದು ಲಾಕ್‌ಡೌನ್ ಮಾಡಿದ್ದರೂ ಸಹ ವಲಸೆ ಕಾರ್ಮಿಕರನ್ನು ಅವರವರ ಮನೆಗೆ ಕಳುಹಿಸಲು ಯಾವುದೇ ಸಿದ್ದತೆ ಮಾಡಿಕೊಂಡಿರಲಿಲ್ಲ. ಇದರಿಂದ ವಲಸೆ ಕಾರ್ಮಿಕರು ಸಾಕಷ್ಟು ಪರದಾಡಿದ್ದಾರೆ. ಈಗ 5.05 ಲಕ್ಷ ವಲಸೆ ಕಾರ್ಮಿಕರು ಆನ್‌ಲೈನ್‌ ನಲ್ಲಿ ಅಪ್ಲೈ ಮಾಡಿದ್ದಾರೆ. ಆದರೆ, 60 ಸಾವಿರ ಮಂದಿಗೆ ಪರ್ಮಿಷನ್ ಕೊಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಹಾಗಾದರೆ ಉಳಿದವರ ಕಥೆ ಎಂದು ಪ್ರಶ್ನಿಸಿದರಲ್ಲದೇ, ಎಲ್ಲಾ ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರವರ ರಾಜ್ಯಗಳಿಗೆ ಕಳುಹಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು…State

ಬೆಂಗಳೂರು : ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆಯನ್ನು ತಿದ್ದುಪಡಿ ಮಾಡಲು ಮುಂದಾಗಿದ್ದು, ಈ ಮೂಲಕ ರೈತರ ಮತ್ತು ಕಾರ್ಮಿಕರನ್ನು ಸಮಾಧಿ ಮಾಡುವ ಕೆಲಸಕ್ಕೆ ಕೈ ಹಾಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಸುದ್ದಿಗೋಷ್ಟಿ ನಡೆಸಿದ ಡಿ.ಕೆ.ಶಿವಕುಮಾರ್,ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿದೆ. ಆ ಮೂಲಕ ಕಾರ್ಖಾನೆ ಉದ್ಯಮಿಗಳಿಗೆ ಲಾಭ ಮಾಡಿಕೊಡಲು ಹೊರಟಿದ್ದು, ರೈತರ-ಕಾರ್ಮಿಕರ ಸಮಾಧಿ ಮಾಡಲು ಮುಂದಾಗಿದೆ. ಸರ್ಕಾರ ಎಲ್ಲಾ ವರ್ಗದ ಜನರನ್ನ ಸರಿಸಮನಾಗಿ ನೋಡುವಲ್ಲಿ ವಿಫಲವಾಗಿದೆ. ಮೇಲ್ವರ್ಗದ ಜನರ ಮಾತು ಕೇಳಿಕೊಂಡು ಬಿಜೆಪಿ ನಾಯಕರು ಸರ್ಕಾರ ನಡೆಸುತ್ತಿದ್ದಾರೆ. ಆದರೆ, ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ನೂತನ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದ್ದೇವೆ, ರೈತರ ಮತ್ತು ಕಾರ್ಮಿಕರ ಪರ ಕಾಂಗ್ರೆಸ್‌ ಪಕ್ಷ ನಿಲ್ಲಲಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ….Bangalore State

ಬೆಂಗಳೂರು :  ಸಿಲಿಕಾನ್ ಸಿಟಿಯ ಪಾದರಾಯನಪುರದಲ್ಲಿ ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹೀಗಿದ್ದರೂ ಇಲ್ಲಿನ ನಿವಾಸಿಗಳು ಮಾತ್ರ ಲಾಕ್ ಡೌನ್, ಸೀಲ್ ಡೌನ್ ಗೆ ಕ್ಯಾರೆ ಅನ್ನುತ್ತಿಲ್ಲ. ಏತನ್ಮಧ್ಯೆ, ಪಾದರಾಯನಪುರದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿದೆಯಾ ಎಂಬ ಆತಂಕ ಬಿಬಿಎಂಪಿ ಅಧಿಕಾರಿಗಳಿಗೆ ಎದುರಾಗಿದೆ. 

ಕ್ಲಸ್ಟರ್ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ  ಒಂದು ತಿಂಗಳ ಹಿಂದೆಯೇ ಪಾದರಾಯನಪುರ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಆದರೂ ಇಲ್ಲಿ 47 ಕೊರೊನಾ ಪ್ರಕರಣಗಳು ಧೃಡಪಟ್ಟಿವೆ. ಈ ಪೈಕಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 16 ಮಂದಿ ಹಾಗೂ 11 ಮಂದಿ ದ್ವಿತೀಯ ಸಂಪರ್ಕ ಹೊಂದಿದವರು ಎಂದು ವರದಿಯಾಗಿದೆ. ಅಲ್ಲದೆ, ರ‍್ಯಾಂಡಮ್‌ ಪರೀಕ್ಷೆಯಲ್ಲಿ 7 ಮಂದಿಗೆ ಧೃಡಪಟ್ಟಿದೆ. ಇನ್ನೂ 12 ಮಂದಿ ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದ್ದರೆ, ಉಳಿದ ಒಬ್ಬರು ಫೀವರ್‌ ಕ್ಲಿನಿಕ್‌ಗೆ ತೆರಳಿದ್ದವರಿಗೂ ಸೋಂಕು ದೃಢಪಟ್ಟಿದೆ. ಇನ್ನು ಪಾದರಾಯನಪುರದ  ಒಟ್ಟು 216 ಜನರ ದ್ರವ ಪರೀಕ್ಷೆ ನಡೆಸಿ ಟೆಸ್ಟ್‌ಗೆ ಕಳಿಸಲಾಗಿದ್ದು, ಈ ಪೈಕಿ 7 ಮಂದಿಯಲ್ಲಿ ಕೊರೊನಾ ಧೃಡಪಟ್ಟಿದೆ. ಇನ್ನೂ ಹಲವರ ವರದಿ ಬರಬೇಕಿದ್ದು ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಸೋಂಕು ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದ್ದು, ಈ ಪ್ರದೇಶದಲ್ಲಿ ರ‍್ಯಾಂಡಮ್‌ ಪರೀಕ್ಷೆಯನ್ನು ನಡೆಸಲಾಗುತ್ತಿದೆ….State

ನವದೆಹಲಿ :  ದೇಶದಲ್ಲಿ ಮಾರಕ ಕೊರೊನಾ ವೈರಸ್ ತಲ್ಲಣ ಸೃಷ್ಟಿಸಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಮೇ.17 ರ ಬಳಿಕ  ಲಾಕ್ ಡೌನ್ ವಿಸ್ತರಿಸಬೇಕೇ ಅಥವಾ ಆರ್ಥಿಕತೆ ದೃಷ್ಟಿಯಿಂದ ಮತ್ತಷ್ಟು ಸಡಿಲಿಕೆ ಮಾಡಲಾಗುತ್ತದೆಯಾ ಎಂಬಿತ್ಯಾದಿ ವಿಚಾರಗಳ ಕುರಿತು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.

ನಿನ್ನೆ ಮಧ್ಯಾಹ್ನ 3 ಗಂಟೆಯಿಂದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸುದೀರ್ಘ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಆಯಾ ರಾಜ್ಯಗಳಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿದ್ದರು. ಅಲ್ಲದೇ, ವಲಯವಾರು ವರದಿ ನೀಡುವಂತೆಯೂ ಸೂಚನೆ ನೀಡಿದ್ದರು. ಈ ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ವೇಳೆ ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕ ಸಿಎಂ ಯಡಿಯೂರಪ್ಪ ಅವರು ಸದ್ಯಕ್ಕೆ ರೈಲು ಸಂಚಾರಕ್ಕೆ ಅನುಮತಿ ನೀಡದಿರುವುದು ಒಳಿತು ಎಂಬ ಸಲಹೆ ನೀಡಿದ್ದರು. ಇದರೊಂದಿಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯಗಳ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದ್ದು, ಅದಕ್ಕಾಗಿ ರೆಡ್ ಝೋನ್, ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಲಾಕ್ ಡೌನ್ ಮತ್ತಷ್ಟು ಸಡಿಲಗೊಳಿಸಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವಂತೆಯೂ ಎಲ್ಲ ರಾಜ್ಯಗಳ ಸಿಎಂ ಮನವಿ ಮಾಡಿದ್ದರು. ಇದೇ ವೇಳೆ, ಕೆಲ ರಾಜ್ಯಗಳು ವಿಶೇಷ ಪ್ಯಾಕೇಜ್ ಘೋಷಿಸುವಂತೆಯೂ ಮನವಿ ಮಾಡಿದ್ದಾರೆ.

ಏತನ್ಮಧ್ಯೆ, ಎಲ್ಲ ರಾಜ್ಯಗಳ ಮಾಹಿತಿ ಕಲೆಹಾಕಿರುವ ಪ್ರಧಾನಿ ಮೋದಿ ಮೇ.17ರ ಬಳಿಕ ಮುಂದೆ ಏನು ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಮಹತ್ವದ  ನಿರ್ಧಾರ ಪ್ರಕಟಿಸಲಿದ್ದಾರೆ….

 State

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು,ಆತಂಕ ಮುಂದುವರೆದಿದೆ. . ರಾಜ್ಯದಲ್ಲಿ ಇಂದು 42 ಮಂದಿಯಲ್ಲಿ ಕೊರೊನಾ ಸೋಂಕು ರಾಜ್ಯದಲ್ಲಿ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ. 

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 42 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 904 ಕ್ಕೆ ಏರಿಕೆಯಾಗಿರುವುದಾಗಿ ತಿಳಿದು ಬಂದಿದೆ. ಇನ್ನು ಬಾಗಲಕೋಟೆಯಲ್ಲಿ 15, ಹಾಸನ-5, ಯಾದಗಿರಿ-2, ಧಾರವಾಡ- 9 ಬೀದರ್-2,  ಬೆಂಗಳೂರು-3, ಚಿಕ್ಕಬಳ್ಳಾಪುರ-1, ದಕ್ಷಿಣ ಕನ್ನಡ-2, ಕಲಬುರಗಿ-1, ಬಳ್ಳಾರಿ-1 , ಉಡುಪಿ- ಇಬ್ಬರಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಇನ್ನೂ ಕಿಲ್ಲರ್ ಕೊರೋನಾಗೆ ಇದುವರೆಗೆ  ರಾಜ್ಯದಲ್ಲಿ 31 ಜನರು ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.  ಹಾಸನ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಸೋಂಕು ಪತ್ತೆಯಾಗದ ಕಾರಣ ಗ್ರೀನ್ ಝೋನ್ ನಲ್ಲಿತ್ತು. ಆದರೆ, ಮುಂಬೈನಿಂದ ಬಂದ ಒಂದೇ ಕುಟುಂಬದ ಐವರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ಇಬ್ಬರು ಮಕ್ಕಳು ಸೇರಿದ್ದಾರೆ. ಬಾಗಲಕೋಟೆಯಲ್ಲಿ ಒಂದೇ ದಿನ 15 ಮಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಆತಂಕ ಎದುರಾಗಿದೆ.

ಇನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಕಂಟಕವಾಗಿದ್ದ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ ಇದೀಗ ಉಡುಪಿ ಜಿಲ್ಲೆಗೂ ಮಾರಕವಾಗಿದೆ. ಇಂದು ಪತ್ತೆಯಾದ 42 ಮಂದಿ ಸೋಂಕಿತರ ಪೈಕಿ ಅಹಮಾದಾಬಾದ್ ನಿಂದ ಬಂದವರ ಲಿಂಕ್ ನಿಂದ 25 ಮಂದಿಗೆ ಸೋಂಕು ತಗುಲಿದೆ. ಇನ್ನು ಸೋಂಕಿತರ ಪೈಕಿ 6 ಮಂದಿಗೆ ಮುಂಬೈ ಲಿಂಕ್ ಇದೆ….

 

 State

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು,ಆತಂಕ ಮುಂದುವರೆದಿದೆ. . ರಾಜ್ಯದಲ್ಲಿ ಇಂದು 42 ಮಂದಿಯಲ್ಲಿ ಕೊರೊನಾ ಸೋಂಕು ರಾಜ್ಯದಲ್ಲಿ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ. 

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 42 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 904 ಕ್ಕೆ ಏರಿಕೆಯಾಗಿರುವುದಾಗಿ ತಿಳಿದು ಬಂದಿದೆ. ಇನ್ನು ಬಾಗಲಕೋಟೆಯಲ್ಲಿ 15, ಹಾಸನ-5, ಯಾದಗಿರಿ-2, ಧಾರವಾಡ- 9 ಬೀದರ್-2,  ಬೆಂಗಳೂರು-3, ಚಿಕ್ಕಬಳ್ಳಾಪುರ-1, ದಕ್ಷಿಣ ಕನ್ನಡ- ಇಬ್ಬರಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಇನ್ನೂ ಕಿಲ್ಲರ್ ಕೊರೋನಾಗೆ ಇದುವರೆಗೆ  ರಾಜ್ಯದಲ್ಲಿ 31 ಜನರು ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.  ಹಾಸನ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಸೋಂಕು ಪತ್ತೆಯಾಗದ ಕಾರಣ ಗ್ರೀನ್ ಝೋನ್ ನಲ್ಲಿತ್ತು. ಆದರೆ, ಮುಂಬೈನಿಂದ ಬಂದ ಒಂದೇ ಕುಟುಂಬದ ಐವರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ಇಬ್ಬರು ಮಕ್ಕಳು ಸೇರಿದ್ದಾರೆ.

 

 

error: Content is protected !!