Author: Kannada News

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 33,337 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂದು ದೃಢಪಟ್ಟಿದ್ದು, ಕಿಲ್ಲರ್ ಕೊರೊನಾ ಸೋಂಕಿಗೆ 70   ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಇಂದು ಹೊಸದಾಗಿ 33,337 ಜನರಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ.,  ಬೆಂಗಳೂರಿನಲ್ಲಿ 16,586 ಕೇಸ್ ಸೇರಿದಂತೆ ರಾಜ್ಯಾಧ್ಯಂತ 33,337 ಜನರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಪಾಸಿಟಿವಿಟಿ ದರ ( Positivity Rate ) 19.37%  ಕ್ಕೆ ಏರಿಕೆಯಾಗಿರೋದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಕಿಲ್ಲರ್ ಕೊರೋನಾ ಅಟ್ಟಹಾಸವನ್ನೇ ಮೆರೆದಿದ್ದು, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 13  ಜನರು ಸೇರಿದಂತೆ ರಾಜ್ಯದಲ್ಲಿ 70  ಮಂದಿ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಸದ್ಯ 2,52,132 ಸಕ್ರಿಯ ಪ್ರಕರಣಗಳಿದೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 19.37%  ರಷ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. https://kannadanewsnow.com/kannada/gods-jeep-delivred-to-tumkuru-famer-house/ https://kannadanewsnow.com/kannada/good-news-for-jewellery-lovers-gold-and-silver-prices-fall-sharply-in-a-week/ https://twitter.com/mla_sudhakar/status/1487429568755503106?ref_src=twsrc%5Egoogle%7Ctwcamp%5Eserp%7Ctwgr%5Etweet

Read More

ತುಮಕೂರು :  ಮಹೀಂದ್ರಾ ಶೋ ರೂಂನಲ್ಲಿ ರೈತನಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ನಡೆದಿದೆ. ಹೌದು, ನಗರದ ಮಹೀಂದ್ರಾ ಅಂಡ್ ಮಹೀಂದ್ರಾ ಎಸ್ ಯುವಿ ಶೋರೂಂ(Mahindra and Mahindra SUV Showroom)ನಲ್ಲಿ ಮಾರಾಟ ಸಿಬ್ಬಂದಿ(Sales staff)ಯಿಂದ ರೈತರೊಬ್ಬರು ಅವಮಾನ(A farmer insulted)ಕ್ಕೊಳಗಾಗಿದ್ದರು. ಥೇಟ್ ಕನ್ನಡದ ಅಂಬರೀಷ್-ವಿಷ್ಣುವರ್ಧನ್ ಅಭಿನಯದ ದಿಗ್ಗಜರು ಸಿನಿಮಾದ ದೃಶ್ಯವೊಂದರ ಶೈಲಿಯಲ್ಲೇ ಈ ಘಟನೆ ನಡೆದಿತ್ತು.  ಇದೀಗ ರೈತನ ಮನೆಗೆ ಮಹೀಂದ್ರ ಗೂಡ್ಸ್ ವಾಹನ ಆಗಮಿಸಿದೆ. ಶುಕ್ರವಾರ ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಅಷ್ಟೇ ಅಲ್ಲದೇ ಈ ಕುರಿತು ಸ್ವತಃ ಆನಂದ್ ಮಹೀಂದ್ರ ಟ್ವೀಟ್​ ಮಾಡಿದ್ದಾರೆ.. ಈ ಬಗ್ಗೆ ರೈತ ಕೆಂಪೇಗೌಡರ ಸಂತಸ ಹಂಚಿಕೊಂಡಿದ್ದಾರೆ. ಹತ್ತು ರೂಪಾಯಿ ಕೊಡುವ ಯೋಗ್ಯತೆ ಇಲ್ಲ ಎಂದು ಅಲ್ಲಿನ  ಸಿಬ್ಬಂದಿಗಳಿಂದ ಕೆಂಪೇಗೌಡಗೆ ಅವಮಾನ ಆಗಿತ್ತು. ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ಹಣ ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು.…

Read More

ಧಾರವಾಡ: ಕನ್ನಡದ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ ಆರೋಗ್ಯ ಸ್ಥಿತಿ ಮತ್ತಷ್ಟು  ಚಿಂತಾಜನಕವಾಗಿದೆ ಎಂದು ಧಾರವಾಡದ ಎಸ್​ಡಿಎಂ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಲಾಗಿದೆ. ಕಣವಿಯವರ ಶ್ವಾಸಕೋಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದೆ. ಎದೆ ಭಾಗದಲ್ಲಿ ಹೆಚ್ಚಿನ ಸೋಂಕು ಹರಡಿರುವ ಕಾರಣ ಉಸಿರಾಡಲು ತೊಂದರೆಯಾಗುತ್ತಿದ್ದು, ಇದೀಗ ಆರೋಗ್ಯ ಸ್ಥಿತಿ ಮತ್ತಷ್ಟು  ಚಿಂತಾಜನಕವಾಗಿದೆ ,ಅವರ ಶ್ವಾಸಕೋಶ ಉಸಿರಾಟದ ಶಕ್ತಿ ಕಳೆದುಕೊಂಡಿದೆ ಎಂದು ಧಾರವಾಡದ ಎಸ್​ಡಿಎಂ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಲಾಗಿದೆ. ಅಕ್ಯೂಟ್​ ರೆಸ್ಪಿರೇಟರಿ ಡಿಸ್ಟ್ರೆಸ್​ ಸಿಂಡ್ರೋಮ್​ನಿಂದ (ARDS) ಚೆನ್ನವೀರ ಕಣವಿ ಬಳಲುತ್ತಿದ್ದಾರೆ. ಕಳೆದ 2 ವಾರದಿಂದ ಎಸ್​ಡಿಎಂ ಆಸ್ಪತ್ರೆಯಲ್ಲಿ ಕಣವಿಗೆ ಚಿಕಿತ್ಸೆ ನೀಡಲಾಗುತ್ತಿದೆ. https://kannadanewsnow.com/kannada/bigg-breaking-terrorists-rampage-in-jammu-and-kashmirs-anantnag-head-constable-killed/ https://kannadanewsnow.com/kannada/1000-made-in-india-drones-make-different-formations-as-part-of-the-beating-retreat-ceremony-at-vijay-chowk/

Read More

ಚಿಕ್ಕಮಗಳೂರು :  ಈಗಾಗಲೇ NSP(NATIONAL SCHOLARSHIP PORTAL) ನಲ್ಲಿ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಕಡ್ಡಾಯವಾಗಿ SSP(STATE SCHOLARSHIP PORTAL) ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಅಲ್ಪಸಂಖ್ಯಾತರ ನಿಗಮ ಪ್ರಕಟಣೆ ಹೊರಡಿಸಿದೆ. 2021-22 ನೇ ಸಾಲಿನ ನ್ಯಾಷನಲ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನ (NSP) ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವಂತೆ ಪ್ರಾಂಶುಪಾಲರು ಕ್ರಮ ಕೈಗೊಳ್ಳಬೇಕಾಗಿ  ನಿಗಮ ಸೂಚನೆ ನೀಡಿದೆ. ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ಸಮುದಾಯದ ಜೈನರು, ಮುಸ್ಲಿಂ, ಕ್ರಿಶ್ವಿಯನ್, ಸಿಖ್, ಪಾರಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಡಿ. 30 ರವರೆಗೆ ಅವಕಾಶ ನೀಡಿತ್ತು, ಈಗಾಗಲೇ NSP(NATIONAL SCHOLARSHIP PORTAL) ನಲ್ಲಿ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಕಡ್ಡಾಯವಾಗಿ SSP(STATE SCHOLARSHIP PORTAL) ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಅಲ್ಪಸಂಖ್ಯಾತರ ನಿಗಮ ಪ್ರಕಟಣೆ ಹೊರಡಿಸಿದೆ. https://kannadanewsnow.com/kannada/elon-musk-ill-give-you-%e2%82%b93-75-lakhs-quit-me-bro-elon-musk-request-with-the-young-man-do-you-know-what-vishya-is-after-all/ https://kannadanewsnow.com/kannada/rbi-recruitment-2022-good-news-to-degree-holders/ https://kannadanewsnow.com/kannada/breaking-news-delta-continues-to-dominate-coronas-third-wave-minister-sudhakar/

Read More

ಬೆಂಗಳೂರು :  ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳ ಪಾರ್ಥೀವ ಶರೀರದ ಅಂತ್ಯಕ್ರಿಯೆ ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿನ ನೀರಜ್ ಫಾರ್ಮ್ ಹೌಸ್ ನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದೆ. ವೀರಶೈವ ಆಗಮ ಪದ್ಧತಿಯಂತೆ ಬಿಲ್ವಪತ್ರೆ ಹಾಗೂ ವಿಭೂತಿ ಬಳಸಿ ಡಾ. ಸೌಂದರ್ಯ ಅಂತ್ಯಕ್ರಿಯೆ ನಡೆದಿದೆ.  ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು, ಡಾ ಸೌಂದರ್ಯ ಮಣ್ಣಲ್ಲಿ ಮಣ್ಣಾಗಿದ್ದಾರೆ. ಮೊಮ್ಮಗಳನ್ನು ನೆನೆದು ಯಡಿಯೂರಪ್ಪ ಸೇರಿದಂತೆ ಇಡೀ ಕುಟುಂಬ ಕಂಬನಿ ಮಿಡಿದಿದೆ.  ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿನ ನೀರಜ್ ಫಾರ್ಮ್ ಹೌಸ್ ನಲ್ಲಿ ರುದ್ರಮುನಿ ಸ್ವಾಮೀಜಿ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಲಾಗಿದೆ. ಸೌಂದರ್ಯ ಅಂತಿಮ ಸಂಸ್ಕಾರ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಡಾ.ನೀರಜ್​ ನಿವಾಸ ಕಲ್ಪವೃಕ್ಷದ ಬಳಿ ಪೊಲೀಸ್​ ಬಂದೋಬಸ್ತ್ ಒದಗಿಸಲಾಗಿತ್ತು. ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ 2 ನೇ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ(30 ) ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 30 ವರ್ಷದ ಸೌಂದರ್ಯ ಎಂಎಸ್‌…

Read More

ಕೆ ಎನ್ ಎನ್ ಡಿಜಿಟಲ್ ಡೆಸ್ಕ್  :  ಪದವೀಧರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ( ‘RBI’ ) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಮ್ಯಾನೇಜರ್, ಲೈಬ್ರರಿಯನ್, ಆರ್ಕಿಟೆಕ್ಟ್​, ಕಾನೂನು ಅಧಿಕಾರಿ ಹುದ್ದೆಗಳು ಖಾಲಿ ಇದ್ದು, ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಫೆಬ್ರವರಿ 4 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ www.rbi.org.in ಗೆ ಭೇಟಿ ನೀಡಬಹುದು. ಹುದ್ದೆಯ ವಿವರಗಳು ಕಾನೂನು ಅಧಿಕಾರಿ ಗ್ರೇಡ್​ ಬಿ-02 ಮ್ಯಾನೇಜರ್(ಸಿವಿಲ್)-06 ಲೈಬ್ರರಿ ಪ್ರೊಫೆಶನಲ್ ಗ್ರೇಡ್ ಎ-01 ಆರ್ಕಿಟೆಕ್ಟ್​​-01 ಫುಲ್​-ಟೈಂ ಕ್ಯುರೇಟರ್-01 ಮ್ಯಾನೇಜರ್(ಎಲೆಕ್ಟ್ರಿಕಲ್)-03 ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಪದವಿ ಪೂರ್ಣಗೊಳಿಸಿರಬೇಕು. ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ. ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ www.rbi.org.in ಗೆ ಭೇಟಿ ನೀಡಬಹುದು. https://kannadanewsnow.com/kannada/bigg-breaking-news-corna-viruse-update/ https://kannadanewsnow.com/kannada/bigg-breaking-state-govt-releases-new-guideline-for-corona-home-testing/ https://kannadanewsnow.com/kannada/rakshith-reaction-to-allegation-on-fight-in-hotel-bangaluru/

Read More

ಬೆಂಗಳೂರು: ಕನ್ನಡ ಕಿರುತೆರೆಯ ನಟ ರಕ್ಷಿತ್ ( Serial Actor Rakshith ) ತನ್ನ ಗ್ಯಾಂಗ್ ಜೊತೆಗೆ ಕುಡಿದ ಮತ್ತಿನಲ್ಲಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಕೆಂಗೇರಿಯಲ್ಲಿರುವಂತ ಜಿಂಜರ್ ಲೇಕ್ ವ್ಯೂವ್ ಹೋಟೆಲ್ ಗೆ ತೆರಳಿದ್ದಂತ ಖಾಸಗಿ ಮನರಂಜನಾ ವಾಹಿನಿಯ ಸೀರಿಯಲ್ ತಂಡ ಊಟದ ವಿಚಾರಕ್ಕಾಗಿ ಹೋಟೆಲ್ ನವರೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಈ ವಿಚಾರಕ್ಕಾಗಿ ಪೊಲೀಸರೊಂದಿಗೆ ಜಗಳ ಮಾಡಿದಂತ ಕಿರುತೆರೆ ನಟ ರಕ್ಷಿತ್, ರಂಜನ್, ರವಿಚಂದ್ರನ್, ಅಭಿಷೇಕ್, ರಾಕೇಶ್ ಕುಮಾರ್, ಅನುಷಾ ಸೇರಿದಂತೆ 7 ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿರೋದಾಗಿ ತಿಳಿದು ಬಂದಿದೆ. ಈ ಹಿನ್ನೆಲೆ ಈ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ನಟ ರಕ್ಷಿತ್ ನಾವು ಊಟ ಮಾಡಲು ಅಲ್ಲಿ ಹೋಗಿದ್ದು ಅಷ್ಟೇ, ಡ್ರಿಂಕ್ಸ್​ ಮಾಡಿರಲಿಲ್ಲ. ಕಾನೂನು ಓದಿರುವ ನಾನು ಪೊಲೀಸರ ಮೇಲೆ ಯಾಕೆ ಕೈ ಮಾಡಲಿ.  . ಅದರ ವಿಡಿಯೋ ನಮ್ಮ ಬಳಿ ಇದೆ . ಯಾವ FIR ದಾಖಲಾಗಿಲ್ಲ. ವೈದ್ಯಕೀಯ ಪರೀಕ್ಷೆನೂ…

Read More

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 31,198 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂದು ದೃಢಪಟ್ಟಿದ್ದು, ಕಿಲ್ಲರ್ ಕೊರೊನಾ ಸೋಂಕಿಗೆ 50  ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಇಂದು ಹೊಸದಾಗಿ 31,198 ಜನರಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ.,  ಬೆಂಗಳೂರಿನಲ್ಲಿ 15,199 ಕೇಸ್ ಸೇರಿದಂತೆ ರಾಜ್ಯಾಧ್ಯಂತ 31,198  ಜನರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಪಾಸಿಟಿವಿಟಿ ದರ ( Positivity Rate ) 20.91% ಕ್ಕೆ ಏರಿಕೆಯಾಗಿರೋದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಕಿಲ್ಲರ್ ಕೊರೋನಾ ಅಟ್ಟಹಾಸವನ್ನೇ ಮೆರೆದಿದ್ದು, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 8 ಜನರು ಸೇರಿದಂತೆ ರಾಜ್ಯದಲ್ಲಿ 50  ಮಂದಿ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಸದ್ಯ 2,88,767 ಸಕ್ರಿಯ ಪ್ರಕರಣಗಳಿದೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.20.91 ರಷ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. https://kannadanewsnow.com/kannada/omg-the-sultan-has-600-rolls-royces-with-7000-luxury-cars-kggataly-diamond-gold/ https://kannadanewsnow.com/kannada/karnataka-govt-issues-new-norms-to-disposal-of-at-home-covid-testing-kits/

Read More

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ‘SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು,  ಭಾರತೀಯ ರೈಲ್ವೇ ಈಶಾನ್ಯ ರೈಲ್ವೆ (NER) ಅಡಿಯಲ್ಲಿ 323 ‘ಗೇಟ್ ಮ್ಯಾನ್’ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ ಎಸ್ ಎಲ್ ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, 323 ‘ಗೇಟ್ ಮ್ಯಾನ್’ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆ.20 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವಾಗಿ 25 ಸಾವಿರ ನೀಡಲಾಗುತ್ತದೆ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಫೆಬ್ರವರಿ 2022 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ 65 ವರ್ಷದೊಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಬಹುದು. ಆಸಕ್ತ ಅಭ್ಯರ್ಥಿಗಳು https://ner.indianrailways.gov.in/view_section.jsp?lang=0&id=0,7,288,366,922 ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ https://ner.indianrailways.gov.in/uploads/files/1641877685439-ESM%202022.pdf ವೀಕ್ಷಿಸಬಹುದಾಗಿದೆ. https://kannadanewsnow.com/kannada/good-news-to-bangalore-cm-basavaraj-bommayi/ https://kannadanewsnow.com/kannada/meat-selling-ban-in-bengalore/ https://kannadanewsnow.com/kannada/scholarship-2021-22-obc-students/

Read More

ಚಿಕ್ಕಮಗಳೂರು  :   ರಾಜ್ಯದ  ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ( SCHOLARSHIP)  ಅರ್ಜಿ ಸಲ್ಲಿಸಲು ಜ.31 ಕೊನೆಯ ದಿನಾಂಕವಾಗಿದೆ.   ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2021-22 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ , ಶುಲ್ಕ ವಿನಾಯಿತಿ ಮತ್ತು ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ದಿನಾಂಕ 31:12:2021 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ನಂತರ ವಿದ್ಯಾರ್ಥಿಗಳು, ಶೈಕ್ಷಣಿಕ ಸಂಸ್ಥೆಗಳ ಮನವಿ ಮೇರೆಗೆ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಮೂಲಕ  ಅರ್ಜಿ ಸಲ್ಲಿಸಲು ಜನವರಿ 31, 2022 ರವರೆಗೆ ವಿಸ್ತರಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿತ್ತು.. ವಿದ್ಯಾರ್ಥಿಗಳು ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿಂದುಳಿದ ವರ್ಗಗಳ…

Read More


best web service company