Author: Kannada News

ದಕ್ಷಿಣ ಕನ್ನಡ :  ದಕ್ಷಿಣ ಕನ್ನಡ ಜಿಲ್ಲೆಯ 17 ಅಂಗನವಾಡಿ ಕಾರ್ಯಕರ್ತೆಯ, 79 ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 17 ಅಂಗನವಾಡಿ ಕಾರ್ಯಕರ್ತೆ ಹಾಗೂ 79 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ನೇಮಕ ಮಾಡಲು ಆದೇಶ ಹೊರಡಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಜನನ ಪ್ರಮಾಣ ಪತ್ರ, SSLC ಅಂಕಪಟ್ಟಿ.ಜಾತಿ ಪ್ರಮಾಣ ಪತ್ರ.-ತಹಶೀಲ್ದಾರರು/ಉಪತಹಶೀಲ್ದಾರರಿಂದ ಪಡೆದ 1 ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.ಕಾರ್ಯಕರ್ತೆ ಹುದ್ದೆಗೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ ಪಾಸ್‌.ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ, ಗರಿಷ್ಠ 9ನೇ ತರಗತಿ ಪಾಸ್ ಆಗಿರಬೇಕು. ಅರ್ಜಿ ಸಲ್ಲಿಸಲು https://www.anganwadirecruit.kar.nic.in/ ಈ ಲಿಂಕ್ ಕ್ಲಿಕ್ ಮಾಡಿ. https://kannadanewsnow.com/kannada/ibrahim-meet-sr-patil-congress/ https://kannadanewsnow.com/kannada/job-alert-sakala-kar-nic-in/ https://kannadanewsnow.com/kannada/orphan-girl-who-lived-begging-railway-station-today-runs-cafe/

Read More

ಬೆಂಗಳೂರು :  ಸಕಾಲ ಮಿಷನ್ ಕರ್ನಾಟಕ(Sakala Mission Karnataka) ದಲ್ಲಿ ರಾಜ್ಯ ಮಾಹಿತಿ ತಂತ್ರಜ್ಞಾನ ಸಲಹೆಗಾರ ಹುದ್ದೆಗಳು ಖಾಲಿ ಇದ್ದು,ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಫೆಬ್ರವರಿ 1 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ sakala.kar.nic.in ಗೆ ಭೇಟಿ ನೀಡಬಹುದಾಗಿದೆ.  ಫೆಬ್ರವರಿ 7ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ.  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ B.E (ಕಂಪ್ಯೂಟರ್​ ಸೈನ್ಸ್​​) ಅಥವಾ ಎಂ.ಟೆಕ್​ ಪೂರ್ಣಗೊಳಿಸಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ  1,40,937 ವೇತನ ನೀಡಲಾಗುತ್ತದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 1ಕ್ಕೆ ಗರಿಷ್ಠ 40 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1/02/2022 ಆಗಿದ್ದು,07/02/2022 ರಂದು ಸಂದರ್ಶನ ನಡೆಯಲಿದೆ. ಸಂದರ್ಶನ ನಡೆಯುವ ಸ್ಥಳ ಕೊಠಡಿ ಸಂಖ್ಯೆ- 104 ಮೊದಲನೇ ಮಹಡಿ ಗೇಟ್​-1 ಎಂ.ಎಸ್​.ಬಿಲ್ಡಿಂಗ್ ಬೆಂಗಳೂರು-560001 https://kannadanewsnow.com/kannada/bigg-news-modi-is-not-prime-minister-to-make-potatoes-and-onions-cheaper-%ca%bcpok%ca%bc-will-be-part-of-india-in-2-years/ https://kannadanewsnow.com/kannada/good-news-for-hovt-employes-retirment-age-pensikn-may-increase/

Read More

ಹುಬ್ಬಳ್ಳಿ: ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಸ್ಥಾನ ಕೈತಪ್ಪಿದ್ದಕ್ಕೆ ಗರಂ ಆಗಿರುವ ಹಿರಿಯ ನಾಯಕ ಸಿಎಂ ಇಬ್ರಾಹಿಂ  ಭಾನುವಾರ ನಗರದಲ್ಲಿ ಕಾಂಗ್ರೆಸ್​ ಪಕ್ಷದ ಪ್ರಮುಖ ನಾಯಕರಾದ ಎಸ್.ಆರ್.ಪಾಟೀಲ್  ಭೇಟಿಯಾಗಿ ಅಸಮಾಧಾನ ಹೊರ ಹಾಕಿದರು.  ಸಭೆಯ ಬಳಿಕ  ಸುದ್ದಿಗಾರರ ಜೊತೆ  ಮಾತನಾಡಿದ ಎಸ್​.ಆರ್.ಪಾಟೀಲ, ‘ಸಭೆಯಲ್ಲಿ ಇಬ್ರಾಹಿಂ ಅವರೊಂದಿಗೆ ಚರ್ಚಿಸಿದ ವಿಚಾರಗಳನ್ನು ಈಗ ಹೇಳುವುದಕ್ಕೆ ಆಗುವುದಿಲ್ಲ, ಸಮಯ ಸಂದರ್ಭ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದರು.  ನನಗೆ ಇಬ್ರಾಹಿಂ ಜೊತೆ ಮಾತನಾಡು ಎಂದು ಯಾರೂ ಕೂಡ ಹೇಳಿಲ್ಲ, ಪಕ್ಷದ ಹಿತದೃಷ್ಟಿಯಿಂದ ಮತ್ತು ಸ್ನೇಹಿತನ ನೋವನ್ನು ಆಲಿಸಲು ಬಂದಿದ್ದೇನೆ . ಇಬ್ರಾಹಿಂ ಅವರಿಗೆ ವಿಧಾನ ಪರಿಷತ್​ನ ವಿಪಕ್ಷ ನಾಯಕನಾಗಬೇಕೆನ್ನುವ ಆಸೆಯಿತ್ತು. ಅವರು ಪಕ್ಷದಲ್ಲಿಯೇ ಉಳಿದುಕೊಳ್ಳಬೇಕೆಂದು ಮನವಿ ಮಾಡಿದ್ದೇನೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು ಎನ್ನುವುದಷ್ಟೇ ನನ್ನ ಆದ್ಯತೆ ಎಂದರು. https://kannadanewsnow.com/kannada/free-petrol-service-iin-bengaluru/ https://kannadanewsnow.com/kannada/good-news-for-hovt-employes-retirment-age-pensikn-may-increase/ https://kannadanewsnow.com/kannada/basanagowda-patil-yathnal/

Read More

ವಿಜಯಪುರದಲ್ಲಿ:  ನಾನು ನಿರಾಣಿ,ಪರಾಣಿಗೆ ಅಂಜಿ ರಾಜಕಾರಣ ಮಾಡುವವನಲ್ಲ. ನಿರಾಣಿಯನ್ನು ಬಿಜೆಪಿಗೆ ತಂದು ಟಿಕೆಟ್ ಕೊಡಿಸಿದ್ದೇ ನಾನು ಎಂದು ಏಕವಚನದಲ್ಲಿ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಲೂಟಿ ಮಾಡಿರುವ ದುಡ್ಡಿದ್ದರೆ ಹೊಸ ಪಕ್ಷ ಮಾಡುತ್ತಿದ್ದವು. ಮೂಲತಃ ನಾವು ಬಿಜೆಪಿ ಕಟ್ಪಿದವರು. ನಮಗೇನು ಪಕ್ಷ ಬಿಟ್ಟು ಹೊಸ ಪಕ್ಷ ಕಟ್ಟುವ ಚಟವಿಲ್ಲ. ಲೂಟಿ ಮಾಡಿರುವ ದುಡ್ಡಿದ್ದರೆ ಹೊಸ ಪಕ್ಷ ಮಾಡುತ್ತಿದ್ದೆವು, ಎಂದು ಹೊಸ ಪಕ್ಷ ಕಟ್ಟುವ ಚರ್ಚೆ ವಿಚಾರಕ್ಕೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ಕಿಡಿಕಾರಿದ್ದಾರೆ. ನಾನು ನಿರಾಣಿ,ಪರಾಣಿಗೆ ಅಂಜಿ ರಾಜಕಾರಣ ಮಾಡುವವನಲ್ಲ. ನಿರಾಣಿಯನ್ನು ಬಿಜೆಪಿಗೆ ತಂದು ಟಿಕೆಟ್ ಕೊಡಿಸಿದ್ದೇ ನಾನು ಎಂದು ಏಕವಚನದಲ್ಲಿ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. https://kannadanewsnow.com/kannada/chennaveedra-kanavi-health-bulletin-sdm-hospital/ https://kannadanewsnow.com/kannada/good-news-for-railway-godown-workers-now-you-too-will-register-with-e-shram/ https://kannadanewsnow.com/kannada/pan-card-update-how-to-update-name-in-pan-card/

Read More

ಬೆಂಗಳೂರು : ಈಗಿನ ದುಬಾರಿ ದುನಿಯಾದಲ್ಲಿ ಯಾವುದರ ಬೆಲೆ ಕೇಳಿದ್ರೂ ತಲೆ ಗಿರ್ ಅನ್ನುತ್ತೆ. ಅದರಲ್ಲೂ ಡೀಸೆಲ್, ಪೆಟ್ರೋಲ್ ಬೆಲೆಯಂತೂ ಕೇಳಲೇಬೇಡಿ. ಆದರೆ ಇಲ್ಲೊಬ್ಬರು ಅಂಕಲ್ ಉಚಿತವಾಗಿ ಪೆಟ್ರೋಲ್ ನೀಡಿ ಸುದ್ದಿಯಲ್ಲಿದ್ದಾರೆ. ಹೌದು, ಸಿಲಿಕಾನ್ ಸಿಟಿಯಲ್ಲಿ 14 ವರ್ಷದಿಂದ ಫ್ರೀ ಪೆಟ್ರೋಲ್ ಕೊಡ್ತಿದ್ದಾರೆ ಈ ಅಂಕಲ್..ನಗರದಲ್ಲಿ ಪೆಟ್ರೋಲ್ ಅಂಕಲ್ ಎಂದೇ ಜನಪ್ರಿಯತೆ ಪಡೆದಿರುವ  ಅಂಕಲ್  ಮಹಮದ್ ಆರೀಫ್ ಸೇಠ್ ಉಚಿತವಾಗಿ ಪೆಟ್ರೋಲ್ ನೀಡುತ್ತಿದ್ದಾರೆ. 2008 ರಿಂದಲೇ ಇವರು ಉಚಿತವಾಗಿ ಪೆಟ್ರೋಲ್ ನೀಡುತ್ತಿದ್ದಾರಂತೆ. ಯಾಕೆ ಗೊತ್ತಾ..? ಒಮ್ಮೆ ಈ ಅಂಕಲ್ ನಮಾಜ್ ಮಾಡಿ ಬರುವ ಸಂದರ್ಭದಲ್ಲಿ ಗಾಡಿಯಲ್ಲಿ ಪೆಟ್ರೋಲ್ ಖಾಲಿ ಆಗಿತ್ತಂತೆ. ಇದರಿಂದ ಬಹಳ ತೊಂದರೆ ಅನುಭವಿಸಿದ್ದರಂತೆ. ಅಂದೇ ಪಣತೊಟ್ಟ ಅಂಕಲ್ ನಡು ರಸ್ತೆಯಲ್ಲಿ ಪೆಟ್ರೋಲ್ ಖಾಲಿಯಾಗಿ ನಾನು ಪಟ್ಟ ಪಾಡು ಯಾರಿಗೂ ಬರಬಾರದೆಂದು ಅಂದಿನಿಂದ ದಾರಿಯಲ್ಲಿ ಪೆಟ್ರೋಲ್ ನೀಡುವ ಕೆಲಸ ಶುರು ಮಾಡಿದ್ದಾರೆ. ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿವರೆಗೆ ಪೆಟ್ರೋಲ್  ಖಾಲಿಯಾಗಿ ಪರಿತಪಿಸುವವರಿಗೆ ಇವರು ಸಹಾಯ ಮಾಡುತ್ತಿದ್ದಾರೆ.  ಯಾರು ಕಷ್ಟದಲ್ಲಿ ಇರುತ್ತಾರೋ…

Read More

ಧಾರವಾಡ: ಕನ್ನಡದ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ ಆರೋಗ್ಯ ಸ್ಥಿತಿ ಮತ್ತಷ್ಟು  ಚಿಂತಾಜನಕವಾಗಿದೆ ಎಂದು ಧಾರವಾಡದ ಎಸ್​ಡಿಎಂ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಲಾಗಿದೆ. ಇಂದು ಜ.30 ( ಭಾನುವಾರ) ನೀಡಿರುವ ಧಾರವಾಡದ ಎಸ್​ಡಿಎಂ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ಪ್ರಕಾರ ನಾಡೋಜ ಚೆನ್ನವೀರ ಕಣವಿ ಆರೋಗ್ಯ ಸ್ಥಿತಿ ಮತ್ತಷ್ಟು  ಚಿಂತಾಜನಕವಾಗಿದೆ, ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರೆದಿದೆ ಎಂದು ಧಾರವಾಡದ ಎಸ್​ಡಿಎಂ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಲಾಗಿದೆ. ಕಣವಿಯವರ ಶ್ವಾಸಕೋಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದೆ. ಎದೆ ಭಾಗದಲ್ಲಿ ಹೆಚ್ಚಿನ ಸೋಂಕು ಹರಡಿರುವ ಕಾರಣ ಉಸಿರಾಡಲು ತೊಂದರೆಯಾಗುತ್ತಿದ್ದು, ಆರೋಗ್ಯ ಸ್ಥಿತಿ  ಚಿಂತಾಜನಕವಾಗಿದೆ. ಅಕ್ಯೂಟ್​ ರೆಸ್ಪಿರೇಟರಿ ಡಿಸ್ಟ್ರೆಸ್​ ಸಿಂಡ್ರೋಮ್​ನಿಂದ (ARDS) ಚೆನ್ನವೀರ ಕಣವಿ ಬಳಲುತ್ತಿದ್ದು, . ಕಳೆದ 2 ವಾರದಿಂದ ಎಸ್​ಡಿಎಂ ಆಸ್ಪತ್ರೆಯಲ್ಲಿ ಕಣವಿಗೆ ಚಿಕಿತ್ಸೆ ನೀಡಲಾಗುತ್ತಿದೆ. https://kannadanewsnow.com/kannada/%ca%bcaxis-bank%ca%bc-changes-interest-rates-%ca%bcfd-here-is-the-details-of-the-new-rates/ https://kannadanewsnow.com/kannada/job-alert-india-post-office/

Read More

 ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಎಸ್ ಎಸ್ ಎಲ್ ಸಿ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಭಾರತೀಯ ಅಂಚೆ ಇಲಾಖೆ(India Post Office) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 29 ಸ್ಟಾಫ್​ ಕಾರು ಚಾಲಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡ್ರೈವಿಂಗ್ ಲೈಟ್​ ಮತ್ತು ಹೆವಿ ಮೋಟಾರ್​ ವೆಹಿಕಲ್​ನಲ್ಲಿ ಕನಿಷ್ಠ 3 ವರ್ಷ ಅನುಭವ ಹೊಂದಿರಬೇಕು.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-27 ವರ್ಷದೊಳಗಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 19,900-63,200 ವೇತನ ನೀಡಲಾಗುತ್ತದೆ. ದಾಖಲಾತಿ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.  ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು,  ಮಾರ್ಚ್​ 15 ಅರ್ಜಿ ಸಲ್ಲಿಸಲು  ಕೊನೆಯ…

Read More

ಬೆಂಗಳೂರು : ಕಾಂಗ್ರೆಸ್ ನಾಯಕ ಕೆ.ಸಿ ಕೊಂಡಯ್ಯಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ಮಣಿಪಾಲ್  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ವಿಧಾನಪರಿಷತ್ ನ ಕಾಂಗ್ರೆಸ್  ಮಾಜಿ ಸದಸ್ಯ  ಕೆ.ಸಿ ಕೊಂಡಯ್ಯಗೆ ಇಂದು  ಲಘು ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.  ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. https://kannadanewsnow.com/kannada/rafael-nadal-wins-record-21st-grand-slam-title/

Read More

ಬೆಂಗಳೂರು : ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಜಾರಿಗೊಳಿಸಲಾಗಿದ್ದಂತ ನೈಟ್ ಕರ್ಪ್ಯೂವನ್ನು ( Night Curfew ) ರದ್ದುಪಡಿಸಲಾಗಿದ್ದು, (ಡಿ.31) ನಾಳೆಯಿಂದ ಜನರಿಗೆ ಬಿಗ್ ರಿಲೀಫ್ ಸಿಗಲಿದೆ. ಹೌದು. ಕೊರೋನಾ ನಿಯಂತ್ರಣಕ್ಕಾಗಿ (Corona Control) ರಾಜ್ಯಾಧ್ಯಂತ ಜಾರಿಗೊಳಿಸಲಾಗಿದ್ದಂತ ನೈಟ್ ಕರ್ಪ್ಯೂವನ್ನು ( Night Curfew ) ರದ್ದುಪಡಿಸಲಾಗಿದೆ. ಇದಲ್ಲದೇ ಹೋಟೆಲ್, ರೆಸ್ಟೋರೆಂಟ್, ಪಬ್ ಗಳಲ್ಲಿನ ಶೇ.50ರ ಮಿತಿಯನ್ನು ವಾಪಾಸ್ ಪಡೆಯಲಾಗಿದೆ. ಆದ್ರೇ ಸಿನಿಮಾ ಮಂದಿರಗಳಲ್ಲಿ ಶೇ.50ರ ಮಿತಿಯನ್ನು ಮುಂದುವರೆಸಲಾಗಿದೆ. ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆ ಹಲವು ವಲಯಗಳಿಗೆ ವಿಧಿಸಿದ್ದ ನಿರ್ಬಂಧಗಳು ಅನ್ ಲಾಕ್ (Unlock) ಆಗುತ್ತಿವೆ. ನಾಳೆಯಿಂದ ಕರುನಾಡು (Karnataka) ಪುಲ್ ಪ್ರೀಯಾಗಿರಲಿದೆ. ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರೋ ಕಾರಣದಿಂದಾಗಿ ಜನವರಿ 31ರಿಂದ ಜಾರಿಗೆ ಬರುವಂತೆ ರಾಜ್ಯಾಧ್ಯಂತ ನೈಟ್ ಕರ್ಪ್ಯೂ ಅನ್ನು ರದ್ದು ಪಡಿಸಲಾಗಿದೆ . ಇನ್ನೂ ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಮದುವೆಗೆ ಅವಕಾಶ, ಓಪನ್ ಸ್ಥಳದಲ್ಲಿ 300ಕ್ಕೆ ಅವಕಾಶ ನೀಡಲಾಗಿದೆ. ಕಚೇರಿ ಕೆಲಸದ ಶೇ.50ರ ಮಿತಿಯನ್ನು ವಾಪಾಸ್ ಪಡೆಯಲಾಗಿದೆ.…

Read More

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 28,264 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂದು ದೃಢಪಟ್ಟಿದ್ದು, ಕಿಲ್ಲರ್ ಕೊರೊನಾ ಸೋಂಕಿಗೆ  68   ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಇಂದು ಹೊಸದಾಗಿ 28,264  ಜನರಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ.,  ಬೆಂಗಳೂರಿನಲ್ಲಿ 11,938 ಕೇಸ್ ಸೇರಿದಂತೆ ರಾಜ್ಯಾಧ್ಯಂತ 28,264 ಜನರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಪಾಸಿಟಿವಿಟಿ ದರ ( Positivity Rate ) 16.38% ಕ್ಕೆ ಏರಿಕೆಯಾಗಿರೋದಾಗಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಕಿಲ್ಲರ್ ಕೊರೋನಾ ಅಟ್ಟಹಾಸವನ್ನೇ ಮೆರೆದಿದ್ದು, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 14  ಜನರು ಸೇರಿದಂತೆ ರಾಜ್ಯದಲ್ಲಿ 68  ಮಂದಿ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಸದ್ಯ 2,51,084 ಸಕ್ರಿಯ ಪ್ರಕರಣಗಳಿದೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 16.38% ರಷ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. https://kannadanewsnow.com/kannada/up-polls-2022-candidate-who-filed-nomination-ppe-kit-rejected/ https://kannadanewsnow.com/kannada/drugs-seezed-in-navadehali/ https://twitter.com/mla_sudhakar/status/1487785011751178240?ref_src=twsrc%5Egoogle%7Ctwcamp%5Eserp%7Ctwgr%5Etweet

Read More


best web service company