Author: Kannada News

ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಹಾಗೂ ಎಂಡಿ ಸೀಟ್​ಗಳ ಸಂಖ್ಯೆಯಲ್ಲಿ ಕಡಿತವಾಗಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಕಿಡಿಕಾರಿದರು. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಹಾಗೂ ಎಂಡಿ ಸೀಟ್​ಗಳ ಸಂಖ್ಯೆಯಲ್ಲಿ ಕಡಿತವಾಗಿದೆ, ಈ ಬಗ್ಗೆ ಮಾತನಾಡಲು ಸುಧಾಕರ್  ಅವರಿಗೆ ಕರೆ ಮಾಡಿದೆ. ಆದರೆ ಅವರು ಕರೆ ಸ್ವೀಕರಿಸಲಿಲ್ಲ ಎಂದರು. ಸಿಎಂ  ಬಸವರಾಜ ಬೊಮ್ಮಾಯಿ ಕೇವಲ 30 ಸೆಕೆಂಡ್​ನಲ್ಲಿ ಕೆಲಸ ಮಾಡಿಕೊಟ್ಟರು. ಇವರೇನೂ ಸಿಎಂಗಿಂತ್ಲೂ ದೊಡ್ಡವರಾ? ಬೊಮ್ಮಾಯಿ ಅವರನ್ನು ಭೇಟಿಯಾಗಿ, ನಮ್ಮ ಸಮಸ್ಯೆ ಹೇಳಿಕೊಂಡೆವು. ಅವರು ತಕ್ಷಣ ಸಮಸ್ಯೆಗೆ ಸ್ಪಂದಿಸಿದರು. ಆದರೆ ಸಚಿವ ಸುಧಾಕರ ವಿರುದ್ಧ ಕ್ರಮ ಜರುಗಿಸಬೇಕೆಂದು ನಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ ಎಂದರು. https://kannadanewsnow.com/kannada/south-westren-train-information-news/ https://kannadanewsnow.com/kannada/toying-traffic-rules-issue-in-bengaluru-stope-news/ https://kannadanewsnow.com/kannada/toying-traffic-rules-issue-in-bengaluru-stope-news/

Read More

ಶಿವಮೊಗ್ಗ :  ‘SSLC’ ಪಾಸಾದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್  ಇಲ್ಲಿದೆ.  ಅಂಗನವಾಡಿಯಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಲಾಗಿದೆ. ಶಿವಮೊಗ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 4 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 88 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇವೆ. 10ನೇ ತರಗತಿ, 4ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಫೆಬ್ರವರಿ 13ರ ಒಳಗೆ ಅರ್ಜಿ ಸಲ್ಲಿಸಬಹುದು.  ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ  SSLC ಉತ್ತೀರ್ಣ ಕಡ್ಡಾಯವಾಗಿದ್ದು,ಅಂಗನವಾಡಿ ಸಹಾಯಕಿ ಹುದ್ದೆಗೆ 4ನೇ ತರಗತಿ ಉತ್ತೀರ್ಣರಾಗಿರಬೇಕು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 13 ರ ಒಳಗೆ ಇಲಾಖೆಯ ವೆಬ್‌ಸೈಟ್‌ ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಿಳಾ…

Read More

ಮಂಡ್ಯ :  ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (KMF)ನ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (Manmul) ವಿಭಾಗದಲ್ಲಿ ಒಟ್ಟು 187 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 187 ಜೂನಿಯರ್ ಟೆಕ್ನಿಷಿಯನ್, ಎಕ್ಸ್​ಟೆನ್ಶನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್​ 2 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹುದ್ದೆಯ ವಿವರಗಳು ಸಹಾಯಕ ವ್ಯವಸ್ಥಾಪಕರು- 23 ಕಾನೂನು ಅಧಿಕಾರಿಗಳು- 1 ತಾಂತ್ರಿಕ ಅಧಿಕಾರಿಗಳು- 12 ಸ್ಟೋರ್ ಕೀಪರ್ / I.M ಅಧಿಕಾರಿ- 1 ಡೈರಿ ಮೇಲ್ವಿಚಾರಕ ಗ್ರೇಡ್-2 5 ಜೂನಿಯರ್ ಸಿಸ್ಟಮ್ ಆಪರೇಟರ್ 10 ಕೋ-ಆರ್ಡಿನೇಟರ್ (ರಕ್ಷಣೆ) 4 ಹೆಲ್ತ್​ ಪ್ರಾಸ್ಪೆಕ್ಟ್ಸ್​ 1 ನರ್ಸ್ 2 ಜೂನಿಯರ್ ತಂತ್ರಜ್ಞ – ಫಿಟ್ಟರ್ 9 ಜೂನಿಯರ್ ತಂತ್ರಜ್ಞ – ಬಾಯ್ಲರ್ 6 ಜೂನಿಯರ್ ಟೆಕ್ನಿಷಿಯನ್ – ಇನ್ಸ್ಟ್ರುಮೆಂಟ್ ಮೆಕ್ಯಾನಿಕ್…

Read More

ಜಾರ್ಖಂಡ್ :  ಅಕ್ರಮ ಗಣಿಗಾರಿಕೆಯ ಸಮಯದಲ್ಲಿ ಮೂರು ಕಲ್ಲಿದ್ದಲು ಗಣಿಗಳು ಕುಸಿದಿದ್ದು ಅನೇಕ ಜನರು ಸಿಲುಕಿರುವ ಘಟನೆ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ನಿರ್ಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ ಕಪಸಾರ ಹೊರಗುತ್ತಿಗೆ ಯೋಜನೆಯಲ್ಲಿ ಮೊದಲ ಘಟನೆ ಸಂಭವಿಸಿದರೆ, .  ಎರಡನೇ ಘಟನೆ ಸೋಮವಾರ ರಾತ್ರಿ ನಿರ್ಸಾದ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್‌ನ ಚಾಚ್  ವಿಕ್ಟೋರಿಯಾದಲ್ಲಿ ನಡೆದಿದ್ದರೆ, ಮೂರನೇ ಘಟನೆ ಮಂಗಳವಾರ ಬೆಳಿಗ್ಗೆ ಪಂಚೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಿನಾಥಪುರದ ಇಸಿಎಲ್‌ನ ಓಪನ್ ಕಾಸ್ಟ್ ಗಣಿಗಳಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೂರು ಗಣಿಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಎಲ್‌ನ ಗೋಪಿನಾಥಪುರ ಗಣಿಯಲ್ಲಿ ಮೂವರು ಸಿಕ್ಕಿಬಿದ್ದಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಸಿಎಲ್‌ನ ಕಪಾಸರಾ ಕೋಲಿಯರಿಯಲ್ಲಿ, ಮೂವರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. https://kannadanewsnow.com/kannada/tech-giant-google-gets-notice-from-delhi-high-court-do-you-know-the-reason/ https://kannadanewsnow.com/kannada/bigg-breaking-former-mp-and-congress-leader-h-b-patil-no-more/

Read More

ಬೆಂಗಳೂರು :   ರಾಜ್ಯದ  ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ( SCHOLARSHIP)  ಅರ್ಜಿ ಸಲ್ಲಿಸುವ ದಿನಾಂಕವನ್ನು 28:02:2022 ರವರೆಗೆ ವಿಸ್ತರಿಸಿ ಹಿಂದುಳಿದ ವರ್ಗಗಳ ಇಲಾಖೆ ಆದೇಶ ಹೊರಡಿಸಿದೆ.  ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2021-22 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ , ಶುಲ್ಕ ವಿನಾಯಿತಿ ಮತ್ತು ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ದಿನಾಂಕ 31:1:2022  ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ನಂತರ ವಿದ್ಯಾರ್ಥಿಗಳು, ಶೈಕ್ಷಣಿಕ ಸಂಸ್ಥೆಗಳ ಮನವಿ ಮೇರೆಗೆ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಮೂಲಕ  ಅರ್ಜಿ ಸಲ್ಲಿಸಲು 28:02:2022 (ಫೆ.28) ರವರೆಗೆ ವಿಸ್ತರಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳು https://ssp.postmatric.karnataka.gov.in/ ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು,…

Read More

ಬೆಂಗಳೂರು : ಕೇಂದ್ರ ಸರ್ಕಾರ  ‘ಜನಸ್ನೇಹಿ’ ಬಜೆಟ್ ಮಂಡಿಸಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು. ಇದು ಜನಸ್ನೇಹಿ ಬಜೆಟ್,  ಇದರಿಂದ ಎಲ್ಲರಿಗೂ ಸಹಾಯವಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಆತ್ಮನಿರ್ಭರ ಭಾರತವನ್ನಾಗಿ ಮಾಡುವಲ್ಲಿ ಇದು ಸಹಾಯಕವಾಗಿದೆ. ನಾನು ಪ್ರಧಾನಮಂತ್ರಿಗಳಿಗೆ ಹಾಗೂ ಹಣಕಾಸು ಸಚಿವರಿಗೆ ಇಂತಹ ದೂರದೃಷ್ಟಿಯ ಬಜೆಟ್ ಮಂಡಿಸಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ . ಯುವಕರಿಗೆ ಸಹಾಯವಾಗುವ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ ಅತ್ಯಂತ ಜನಸ್ನೇಹಿ ಬಜೆಟ್ ಇದಾಗಿದೆ ಎಂದರು. https://kannadanewsnow.com/kannada/santhoh-lad-reaction-to-budjet/ https://kannadanewsnow.com/kannada/strange-tradition-special-ritual-tombs-are-dug-corpses-are-removed-and-cleaned/ https://kannadanewsnow.com/kannada/jobs-in-anaganvadi/

Read More

ಬೆಂಗಳೂರು :  ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 60 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ನಾಲ್ಕು  ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ, 4ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್​ 2 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್​ಸೈಟ್ anganwadirecruit.kar.nic.in ಗೆ ಭೇಟಿ ನೀಡಬಹುದಾಗಿದೆ. https://kannadanewsnow.com/kannada/upsc-recruitment-2022-apply-various-posts-2/ https://kannadanewsnow.com/kannada/karnataka-covid19-update-today-14366-new-case/

Read More

ಧಾರವಾಡ :  ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೆ ಅನುಕೂಲ ಆಗಿಲ್ಲ , ಕೇಂದ್ರ ಬಜೆಟ್‍ನಲ್ಲಿ ನೀರಾವರಿಗೆ ವಿಶೇಷ ಒತ್ತನ್ನು ನೀಡಿಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು. ಕೇಂದ್ರ ಬಜೆಟ್ ವಿಚಾರವಾಗಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮೋದಿ ಅವರು ತಮ್ಮನ್ನೇ ಬೆಳೆಸಿಕೊಳ್ಳುತ್ತಿದ್ದಾರೆ. ಒಂದು ಸಾರಿ ಜನರ ಲೆಕ್ಕಾಚಾರದಲ್ಲಿ ನೋಡಿದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಸಾರ್ವಜನಿಕ ಹಿತದೃಷ್ಟಿಯಿಂದ ಕಾಂಗ್ರೆಸ್ ಕಾರ್ಯಕ್ರಮ ಮಾಡಿದೆ. ನೀರಾವರಿ ಯೋಜನೆಗಳಿಗಾಗಿ ಸಿದ್ದರಾಮಯ್ಯನವರ ಸರ್ಕಾರ 60 ಸಾವಿರ ಕೋಟಿ ಖರ್ಚು ಮಾಡಿದ ನಿದರ್ಶನ ಇದೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ನೀರಾವರಿಗೆ ವಿಶೇಷ ಒತ್ತು ಕೊಟ್ಟಿಲ್ಲ ಎಂದು ತಿಳಿಸಿದರು. ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೆ ಅನುಕೂಲ ಆಗಿಲ್ಲ , ಕೇಂದ್ರ ಬಜೆಟ್‍ನಲ್ಲಿ ನೀರಾವರಿಗೆ ವಿಶೇಷ ಒತ್ತನ್ನು ನೀಡಿಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು. https://kannadanewsnow.com/kannada/karnataka-covid19-update-today-14366-new-case/ https://kannadanewsnow.com/kannada/hosadurga-taluk-lakkihalli-va-arrest-by-acb/

Read More

ಚಿಕ್ಕಮಗಳೂರು :  ಈಗಾಗಲೇ NSP(NATIONAL SCHOLARSHIP PORTAL) ನಲ್ಲಿ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಕಡ್ಡಾಯವಾಗಿ SSP(STATE SCHOLARSHIP PORTAL) ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಅಲ್ಪಸಂಖ್ಯಾತರ ನಿಗಮ ಪ್ರಕಟಣೆ ಹೊರಡಿಸಿದೆ. 2021-22 ನೇ ಸಾಲಿನ ನ್ಯಾಷನಲ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನ (NSP) ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವಂತೆ ಪ್ರಾಂಶುಪಾಲರು ಕ್ರಮ ಕೈಗೊಳ್ಳಬೇಕಾಗಿ  ನಿಗಮ ಸೂಚನೆ ನೀಡಿದೆ. ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ಸಮುದಾಯದ ಜೈನರು, ಮುಸ್ಲಿಂ, ಕ್ರಿಶ್ವಿಯನ್, ಸಿಖ್, ಪಾರಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಡಿ. 30 ರವರೆಗೆ ಅವಕಾಶ ನೀಡಿತ್ತು, ಈಗಾಗಲೇ NSP(NATIONAL SCHOLARSHIP PORTAL) ನಲ್ಲಿ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಕಡ್ಡಾಯವಾಗಿ SSP(STATE SCHOLARSHIP PORTAL) ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಅಲ್ಪಸಂಖ್ಯಾತರ ನಿಗಮ ಪ್ರಕಟಣೆ ಹೊರಡಿಸಿದೆ. https://kannadanewsnow.com/kannada/breaking-news-covid-restriction-relaxation-in-mumbai-50-capacity-in-restaurants-and-theatres/ https://kannadanewsnow.com/kannada/corona-viruse-karnataka-health-bulletin/

Read More

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 14,366 ಜನರಿಗೆ ಕೊರೊನಾ ಸೋಂಕು ( Corona Positive ) ದೃಢಪಟ್ಟಿದ್ದು, ಕಿಲ್ಲರ್ ಕೊರೊನಾ ಸೋಂಕಿಗೆ 58 ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಟ್ವೀಟ್‌ ಮೂಲಕ ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, “ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 6,685 ಹೊಸ ಕೇಸ್ ಸೇರಿದಂತೆ ರಾಜ್ಯಾಧ್ಯಂತ ಇಂದು ಹೊಸದಾಗಿ 14,366 ಜನರಿಗೆ ಕೊರೋನಾ ಸೋಂಕು ಧೃಡವಾಗಿದೆ. ಹೀಗಾಗಿ ಪಾಸಿಟಿವಿಟಿ ದರ ( Positivity Rate ) 13.45% ಕ್ಕೆ ಇಳಿದಿದೆ ಎಂದಿದ್ದಾರೆ. ರಾಜ್ಯದಲ್ಲಿ ಕಿಲ್ಲರ್ ಕೊರೋನಾ ಅಟ್ಟಹಾಸವನ್ನೇ ಮೆರೆದಿದ್ದು, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 9 ಜನರು ಸೇರಿದಂತೆ ರಾಜ್ಯದಲ್ಲಿ 58 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸದ್ಯ 1,97,725 ಸಕ್ರಿಯ ಪ್ರಕರಣಗಳಿದೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 13.45%  % ರಷ್ಟಿದೆ. ◾ರಾಜ್ಯದಲ್ಲಿ ಹೊಸ ಪ್ರಕರಣಗಳು: 14,366 ◾ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 6,685 ◾ರಾಜ್ಯದಲ್ಲಿ ಧನಾತ್ಮಕತೆ ದರ: 13.45% ◾ಡಿಸ್ಚಾರ್ಜ್ʼಗಳು: 60,914…

Read More


best web service company