Author: kannadanewslive

ಬೆಂಗಳೂರು : ಅಂಗವಿಕಲರಿಗೆ ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೆ ತಂದ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮನೆಯಿಂದಲೇ ಮತದಾನ ಪ್ರಕ್ರಿಯೆ ನಿನ್ನೆಗೆ ಮುಕ್ತಾಯವಾಗಿದೆ. ಏ.29 ರಿಂದ ಮೇ 6 ವರೆಗೆ ಮತದಾನ ಮಾಡಲು ಅವಕಾಶ ನೀಡಲಾಗಿದ್ದು, ಈ ಬಾರಿ ಶೇಕಡ 94.77 ರಷ್ಟು ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 80,250 ಮಂದಿ 80 ವರ್ಷ ಮೇಲ್ಪಟ್ಟ ಹಾಗೂ 19,279 ಮಂದಿ ವಿಶೇಷ ಚೇತನರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು. ಈ ಪೈಕಿ 75,690 ( ಶೇ.94.32) ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ ಚಲಾಯಿಸಿದ್ದು, ವಿಶೇಷ ಚೇತನರ ಪೈಕಿ 18,636 (96.66) ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಮೇ 10ರಂದು ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ.ಮೇ.8ರಂದು ನಾಳೆ ಸಂಜೆ…

Read More

ದಾವಣಗೆರೆ : ನೀತಿ ಸಂಹಿತೆ ಉಲ್ಲಂಘನೆ  ಹಿನ್ನೆಲೆ  ಹೊನ್ನಾಳಿ  ಶಾಸಕ ರೇಣುಕಾಚಾರ್ಯ  ಸೇರಿ ಆರು ಜನರ ವಿರುದ್ಧ ದೂರು ದಾಖಲಾಗಿದೆ. ನಿನ್ನೆ ರಾತ್ರಿ ಅವಧಿ ಮುಗಿದರೂ ಪ್ರಚಾರ ನಡೆಸಿದ ಆರೋಪದ ಹಿನ್ನೆಲೆ ಶಾಸಕ ರೇಣುಕಾಚಾರ್ಯ ಸೇರಿ ಆರು ಜನರ ವಿರುದ್ಧ ದೂರು ದಾಖಲಾಗಿದೆ. ನ್ಯಾಮತಿ ತಾಲೂಕಿನ ಚಟ್ನಳ್ಳಿಯಲ್ಲಿ ರೇಣುಕಾಚಾರ್ಯ ನಿನ್ನೆ ಅವಧಿ ಮೀರಿ ಪ್ರಚಾರ ನಡೆಸಿದ್ದಾರೆ ಎನ್ನಲಾಗಿದ್ದು, ಚುನಾವಣಾಧಿಕಾರಿಗಳು ಆರು ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ‘ಪಂಚರತ್ನ’ ಯೋಜನೆ ಭರವಸೆ ಈಡೇರಿಸದಿದ್ದರೆ ‘JDS’ ಪಕ್ಷ ವಿಸರ್ಜನೆ : ಮಾಜಿ ಸಿಎಂ ‘HDK’ ಘೋಷಣೆ ಮೈಸೂರು: ಪಂಚರತ್ನ ಯೋಜನೆ ಭರವಸೆ ಈಡೇರಿಸದಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ( H.D Kumaraswamy) ಘೋಷಣೆ ಮಾಡಿದ್ದಾರೆ. ಪಿರಿಯಾಪಟ್ಟಣದಲ್ಲಿ ಶನಿವಾರ ನಿನ್ನೆ ನಡೆ ಬಹಿರಂಗ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಪರ ಮತ ಯಾಚಿಸಿ ಮಾತನಾಡಿದರು. ಪಂಚರತ್ನ ಯೋಜನೆ ಭರವಸೆ ಈಡೇರಿಸದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ…

Read More

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಮೇ 10ರಂದು ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ. ಮೇ.8ರಂದು ನಾಳೆ ಸಂಜೆ 6 ಗಂಟೆಗೆ ರಾಜ್ಯಾಧ್ಯಂತ ಅಭ್ಯರ್ಥಿಗಳ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದೆ. ಮೇ.8ರ ಸಂಜೆ 6ಗಂಟೆಯ ಬಳಿಕ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಬೇಕಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ.ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅವರು, ಮೇ.8ರಂದು ಸಂಜೆ 6 ಗಂಟೆಗೆ ರಾಜ್ಯಾಧ್ಯಂತ ಅಭ್ಯರ್ಥಿಗಳ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದೆ. ಮೇ.8ರ ಸಂಜೆ 6ಗಂಟೆಯ ಬಳಿಕ ಮನೆ ಮನೆಗೆ ಭೇಟಿ ನೀಡಿ, ಮತಯಾಚನೆ ಮಾಡಬೇಕಿದೆ ಎಂದರು. ಮೇ 9, 10 ರಂದು ಬಸ್ ಸಂಚಾರದಲ್ಲಿ ವ್ಯತ್ಯಯ ಕರ್ನಾಟಕ ವಿಧಾನಸಭಾ ಚುನಾವಣೆಯ ( Karnataka Assembly Election 2023 )…

Read More

ಮೈಸೂರು: ಪಂಚರತ್ನ ಯೋಜನೆ ಭರವಸೆ ಈಡೇರಿಸದಿದ್ದರೆ ಜೆಡಿಎಸ್  ಪಕ್ಷ ವಿಸರ್ಜನೆ ಮಾಡುವುದಾಗಿ  ಮಾಜಿ ಸಿಎಂ ಕುಮಾರಸ್ವಾಮಿ ( H.D Kumaraswamy) ಘೋಷಣೆ ಮಾಡಿದ್ದಾರೆ.  ಪಿರಿಯಾಪಟ್ಟಣದಲ್ಲಿ ಶನಿವಾರ ನಿನ್ನೆ ನಡೆ ಬಹಿರಂಗ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಪರ ಮತ ಯಾಚಿಸಿ ಮಾತನಾಡಿದರು. ಪಂಚರತ್ನ ಯೋಜನೆ ಭರವಸೆ ಈಡೇರಿಸದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ತರುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು. ಜೆಡಿಎಸ್ ಸರ್ಕಾರ  ಅಧಿಕಾರಕ್ಕೆ ಬಂದ್ರೆ ಮುಂದಿನ ಐದು ವರ್ಷಗಳಲ್ಲಿ ಸೋರಿಕೆ ತಡೆಗಟ್ಟಿ ಎರಡೂವರೆ ಲಕ್ಷ ಕೋಟಿ ರೂ. ಸಂಗ್ರಹಿಸಿ ಪಂಚರತ್ನ ಯೋಜನೆಗಳಿಗೆ ಬಂಡವಾಳ ಹೂಡುತ್ತೇನೆ ಎಂದರು. ಜನರ ಹಿತಕ್ಕಾಗಿ ಪಂಚರತ್ನ ಯೋಜನೆ ಜಾರಿಗೆ ತಂದಿದ್ದೇನೆ, ಇದರಿಂದ ಬಡರಿಗೆ ಜನರಿಗೆ ಸಹಾಯವಾಗಲಿದೆ ಎಂದರು. ಜೆ.ಪಿ ನಡ್ಡಾ ರೋಡ್ ಶೋ ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ವಿಜಯನಗರ ಜಿಲ್ಲೆಯ…

Read More

ಶಿವಮೊಗ್ಗ: ‘ಚುನಾವಣಾ ಕರ್ತವ್ಯ’ಕ್ಕೆ ಗೈರಾದ ಶಾಸಕ ‘ಕುಮಾರ್ ಬಂಗಾರಪ್ಪ’ ಮಾಜಿ ಆಪ್ತ ಸಹಾಯಕ ಉಮೇಶ್ ರನ್ನು ಅಮಾನತು ಮಾಡಲಾಗಿದೆ. ಅನಾರೋಗ್ಯದ ನೆಪವೊಡ್ಡಿ ಗೈರಾಧ ಕುಮಾರ ಬಂಗಾರಪ್ಪ ಅವರ ಮಾಜಿ ಆಪ್ತ ಸಹಾಯಕ ಉಮೇಶ್ ಗೌಡ ಅವರನ್ನು ಜಿಪಂ ಸಿಇಒ ಅಮಾನತು ಮಾಡಿದ್ದಾರೆ.ಕುಮಾರ್ ಬಂಗಾರಪ್ಪ ಪರವಾಗಿ ಚುನಾವಣಾ ಪ್ರಚಾರ ಮಾಡುವ ಉದ್ದೇಶದಿಂದ ಉಮೇಶ್ ವೈದ್ಯಕೀಯ ರಜೆ ಪಡೆದಿದ್ದಾರೆ ಎಂದು ಜಿಪಂ ಸಿಇಓ ಅವರಿಗೆ ದೂರು ಬಂದಿತ್ತು. ಉಮೇಶ್ ಸಲ್ಲಿಸಿದ್ದ ಸಮಾಣ ಪತ್ರದ ನೈಜತೆ ಬಗ್ಗೆ ಪರಿಶೀಲಿಸುವಂತೆ ಮೆಗ್ಗಾನ್ ಆಸ್ಪತ್ರೆ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್ ಅವರಿಗೆ ಜಿಪಂ ಸಿಇಓ ಸೂಚನೆ ನೀಡಿದ್ದರು. ಉಮೇಶ್ ಆರೋಗ್ಯ ಪರೀಕ್ಷಿಸಿ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲ ಎಂದು ವರದಿ ನೀಡಿದ್ದರು. ಕೂಡಲೇ ಕೆಲಸಕ್ಕೆ ಹಾಜರಾಗುವಂತೆ 5.24ರಂದು ಜಿಪಂ ಸಿಇಒ ಸೂಚನೆ ನೀಡಿದ್ದರೂ ಉಮೇಶ್ ಹಾಜರಾಗಿರಲಿಲ್ಲ, ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ದೂರು ಬಂದ ಹಿನ್ನೆಲೆಯಲ್ಲಿ ಎರಡನೇ ದಾರಿಗೆ ಅವರ ಆರೋಗ್ಯ ಪರೀಕ್ಷೆ. ಮಾಡಲಾಗಿತ್ತು. ಈ…

Read More

ಮಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಮೇ 9, 11ರಂದು ವಿಟಿಯು ಪರೀಕ್ಷೆ (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆ) ನಡೆಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುವ ಹಿಂದಿನ (ಮೇ 9) ಮತ್ತು ಮುಂದಿನ (ಮೇ11) ದಿನಗಳಂದು ಪರೀಕ್ಷೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಮತದಾನಕ್ಕೆ ತೆರಳಲು ಮತ್ತು ವಾಪಸ್ಸಾಗಲು ಅನುಕೂಲ ವಾಗುವಂತೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ವಿವಿ ತಿಳಿಸಿದೆ. ವಿಟಿಯು ಸಿಬ್ಬಂದಿಗೆ ಚುನಾವಣಾ ಕಾರ್ಯ ನಿಗದಿಯಾದ ಹಿನ್ನೆಲೆಯಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ಮೇ 8ರ ನಂತರ ಮೇ 12ಕ್ಕೆ ಪರೀಕ್ಷೆ ನಡೆಯಲಿದೆ. ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಇಂದು ‘NEET’ ಪರೀಕ್ಷೆ : ವಿದ್ಯಾರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ  ಬೆಂಗಳೂರು : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ದೇಶಾದ್ಯಂತ ಇಂದು ಭಾನುವಾರ ನೀಟ್ ಪರೀಕ್ಷೆ ನಡೆಯಲಿದ್ದು, ರಾಜ್ಯದಲ್ಲಿ 1.34 ಲಕ್ಷ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ.ಭಾನುವಾರ ಮಧ್ಯಾಹ್ನ 2 ರಿಂದ…

Read More

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಗೆ ಆಗಮಿಸಿರುವ ಜೆಪಿ ನಡ್ಡಾ 1 ಕಿಮೀ ರೋಡ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. ನಂತರ 1 :15 ಕ್ಕೆ ಬಳ್ಳಾರಿಯಲ್ಲಿ 1 ಕಿಮೀ ರೋಡ್ ಶೋ ನಡೆಸಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ನಂತರ ಸಂಜೆ 3:30 ರ ಸುಮಾರಿಗೆ ವಿಜಯನಗರ ಜಿಲ್ಲೆಯ ಕೂಡ್ಲಿಗಿಗೆ ಆಗಮಿಸುವ ನಡ್ಡಾ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ನಾಯುಕರಿಗೆ ಟಕ್ಕರ್ ನೀಡಲು ಕಾಂಗ್ರೆಸ್ ಕೂಡ ಇಂದು ಭರ್ಜರಿ ಪ್ರಚಾರ ನಡೆಸಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ನಗರದಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಪ್ರಿಯಾಂಕ ರೋಡ್ ಶೋ ನಡೆಸಿದರೆ ರಾಹುಲ್ ಸಾರ್ವಜನಿಕ ಸಮಾವೇಶದ ಮೂಲಕ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.ಬೆಂಗಳೂರಿನ ವಿವಿದೆಡೆ ಪ್ರಿಯಾಂಕಾ ಗಾಂಧಿ…

Read More

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಮುಂದಿನ 3-4 ದಿನ  ಹಲವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಐಎಂಡಿ (IMD) ಆಲಿಕಲ್ಲು ಮಳೆ ಮತ್ತು ಭಾರಿ ಮಳೆಯ ಎಚ್ಚರಿಕೆ ನೀಡಿದೆ. ಮೇ 7 ರಂದು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ಮೇ 7 ಮತ್ತು 8 ರಂದು ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕೇರಳ ಮತ್ತು ಪುದುಚೇರಿಯಲ್ಲಿ ಮೇ 7 ರಿಂದ 10 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ. ಕರ್ನಾಟಕದಲ್ಲಿ ಮಳೆ ಬಂಗಾಳಕೊಲ್ಲಿಯಲ್ಲಿ ‘ಮೋಚಾ’ ಚಂಡಮಾರುತ ಸೃಷ್ಟಿಯಾದ ಹಿನ್ನೆಲೆ ಮುಂದಿನ ಮೇ 13ರವರೆಗೆ ಭಾರೀ ಮಳೆಯಾಗಲಿದೆ ( rain ) ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ದಕ್ಷಿಣ ಒಳನಾಡು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ. ಮೇ 6 ಹಾಗೂ 7 ರಂದು ಅತಿ…

Read More

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ‘ಮೋಚಾ’ ಚಂಡಮಾರುತ ಸೃಷ್ಟಿಯಾದ ಹಿನ್ನೆಲೆ ಮುಂದಿನ ಮೇ 13ರವರೆಗೆ ಭಾರೀ ಮಳೆಯಾಗಲಿದೆ ( rain ) ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಒಳನಾಡು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ. ಮೇ 6 ಹಾಗೂ 7 ರಂದು ಅತಿ ಹೆಚ್ಚಾಗಿ ರಾಯಚೂರು ಜಿಲ್ಲೆಯ ರಾಯಚೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯಾಗಲಿದೆ. ಹಾಗೂ ಕೊಡಗು ಹಾಗೂ ಹಾಸನದ ದಕ್ಷಿಣ ಭಾಗಗಳಲ್ಲಿ ಮಳೆಯಾಗಲಿದೆ. ಮೇ 8 ಹಾಗೂ 9 ರಂದು ಮಂಡ್ಯ, ದೊಡ್ಡಬಳ್ಳಾಪುರ, ಮೈಸೂರು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ, ಹಾವೇರಿ, ಉಡುಪಿ, ಬೆಂಗಳೂರು ನಗರ,ಕಲಬುರಗಿ, ರಾಯಚೂರು, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಉತ್ತರ ಕನ್ನಡ, ರಾಯಚೂರು, ಚಿತ್ರದುರ್ಗ, ಕೊಪ್ಪಳ, ಗದಗ, ಚಿತ್ರದುರ್ಗ, ತುಮಕೂರು, ಕೋಲಾರದಲ್ಲಿ ಮಳೆಯಾಗಲಿದೆ. ಮೇ 10ರಂದು ದಾವಣಗೆರೆ, , ಕೊಡಗಿನಲ್ಲಿ ಮಾತ್ರ ಭಾರೀ ಮಳೆ ಬೀಳಲಿದ್ದು, ಮೇ 12. 13ರಂದು ಹಾಸನ, ಬಾಗಲಕೋಟೆಯ ದಕ್ಷಿಣ, ಮಂಡ್ಯದ…

Read More

ಬೆಂಗಳೂರು: ಮೇ.10ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಅಂದು ಚುನಾವಣಾ ಕರ್ತವ್ಯಕ್ಕೆ ಪೊಲೀಸ್ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳನ್ನು ಒಂದು ದಿನ ಮೊದಲೇ ಮತಕೇಂದ್ರಕ್ಕೆ ಕೊಂಡೊಯ್ಯಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಬಸ್ ಗಳನ್ನು ನಿಯೋಜಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮೇ.9, 10ರಂದು ಸಾರಿಗೆ ಬಸ್ ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತಂತೆ ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿಸಿ ಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಅಂದು ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಪರ್ಯಾಯ ಸಂಚಾರದ ವ್ಯವಸ್ಥೆಗೂ ಮನವಿ ಮಾಡಿದೆ. ಮೇ.9, 10ರಂದು BMTC ಬಸ್ ಗಳ ಸಂಚಾರ ವ್ಯತ್ಯಯ ಬೆಂಗಳೂರು: ವಿಧಾನಸಭಾ ಚುನಾವಣೆಗೆ ( Karnataka Assembly Election ) ಮತದಾನದ ಕಾರಣದಿಂದಾಗಿ ನಗರದಲ್ಲಿ ಪೊಲೀಸ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆ ಕೇಂದ್ರಕ್ಕೆ ಕರೆದೊಯ್ಯಲು ಬಿಎಂಟಿಸಿ ಬಸ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ…

Read More