ಬೆಂಗಳೂರು : ಹಿಜಾಬ್ ಕೇಸರಿ ವಿವಾದ ಕೊನೆಗೊಳ್ಳುವುದು ಸರ್ಕಾರಕ್ಕೆ ಇಷ್ಟವಿಲ್ಲ ಎಂದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದರು. ಹಿಜಾಬ್-ಕೇಸರಿ ಶಾಲು ವಿವಾದ ಸದ್ದು ಮಾಡುತ್ತಿದ್ದು, ಪ್ರಕರಣ ಈಗ ಕೋರ್ಟಿನ ಮೆಟ್ಟಿಲೇರಿದೆ.ಈ ವಿವಾದದ ಕುರಿತು ಕಾಂಗ್ರೆಸ್ ನಾಯಕ ಮಾಜಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ಕೇಸರಿ ವಿವಾದ ಕೊನೆಗೊಳ್ಳುವುದು ಸರ್ಕಾರಕ್ಕೆ ಇಷ್ಟವಿಲ್ಲ, ಇದನ್ನು ಎಲ್ಲಾ ಕಡೆ ದೊಡ್ಡದಾಗಿ ಹಬ್ಬುವಂತೆ ಮಾಡಲಾಗುತ್ತಿದೆ. ಯಾಕೆಂದರೆ ಇನ್ನೊಂದು ವರ್ಷ ಕಳೆದರೆ ರಾಜ್ಯದಲ್ಲಿ ವಿಧಾನ ಸಬೆ ಚುನಾವಣೆ ನಡೆಯಲಿದ್ದು ಅಭಿವೃದ್ದಿ ಕಾರ್ಯಗಳ ಆಧಾರದಲ್ಲಿ ಮತ ಕೇಳಲು ಮುಖವಿಲ್ಲದ ಬಿಜೆಪಿ ಇಂಥ ವಿವಾದಗಳನ್ನು ಸೃಷ್ಟಿಸಿ ತನ್ನ ಬೇಳೆ ಬೇಯಿಸಿಕೊಳ್ಳುತ್ತದೆ ಎಂದು ಕಿಡಿಕಾರಿದರು.ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ವಿವಾದ ಬೃಹದಾಕಾರವಾಗಿ ಬೆಳೆಯಲು ಬಿಡಲಾಗಿದೆ ಎಂದರು. https://kannadanewsnow.com/kannada/relative-diclare-elderly-woman-dead-while-she-alive/ https://kannadanewsnow.com/kannada/state-cabinet-meeting-on-feb-9/ https://kannadanewsnow.com/kannada/udupi-accident-and-four-injury-news/
Author: Kannada News
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ ರಾಜ್ಯ ಸಚಿವ ಸಂಪುಟ ಸಭೆ ಫೆ.9 ರಂದು ನಿಗದಿಯಾಗಿದೆ. ಫೆಬ್ರವರಿ 9 ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ನಡೆಯಲಿರುವ ಪ್ರಮುಖ ಚರ್ಚೆಗಳು ಹಾಗೂ ಕೈಗೊಳ್ಳಬಹುದಾದ ಸಾಧ್ಯತೆ ಬಗ್ಗೆ ಕುತೂಹಲವಿದೆ. https://kannadanewsnow.com/kannada/air-india-recruitment-2022/ https://kannadanewsnow.com/kannada/big-news-covid-offline-application-exgratia-covid-cant-be-rejevted/ https://kannadanewsnow.com/kannada/modi-inaugrating-ramanujacharya-statue/
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಫೆಬ್ರವರಿ 5) ಹೈದರಾಬಾದ್ಗೆ ಭೇಟಿ ನೀಡಲಿದ್ದು, 16 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ. 5ರಂದು ಅನಾವರಣಗೊಳಿಸಲಿದ್ದಾರೆ. 11ನೇ ಶತಮಾನದ ಭಕ್ತಿ ಶಾಖೆಯ ಸಂತ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ ಪ್ರತಿಮೆಯನ್ನು ಮಾಡಲಾಗಿದೆ. ಫೆಬ್ರವರಿ 13ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಮಾನುಜಾಚಾರ್ಯರ 120 ಕೆಜಿ ಚಿನ್ನದ ದೇವರನ್ನು ಅನಾವರಣಗೊಳಿಸಲಿದ್ದಾರೆ. ಕೆ ಚಂದ್ರಶೇಖರ್ ರಾವ್ ಡೈನಾಮಿಕ್ ಫೌಂಟೇನ್ ಉದ್ಘಾಟಿಸುವರು. ಅನೇಕ ರಾಜಕೀಯ ನಾಯಕರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದಾರೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವುಗಳ ಸಂಯೋಜನೆಯ ‘ಪಂಚಧಾತು’ ಪ್ರತಿಮೆಯನ್ನು ನಿರ್ಮಿಸಲಾಗಿದೆ ಮತ್ತು ವಿಶ್ವದ ಅತಿ ಎತ್ತರದ ಲೋಹದ ಪ್ರತಿಮೆಗಳಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿ ಒಂದಾಗಿದೆ. ಇದನ್ನು 54 ಅಡಿ ಎತ್ತರದ ಬೇಸ್ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ. ಇದನ್ನು ‘ಭದ್ರ ವೇದಿಕೆ’ ಎಂದು ಹೆಸರಿಸಲಾಗಿದೆ. ಇದು ವೈದಿಕ ಡಿಜಿಟಲ್ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಪ್ರಾಚೀನ…
ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ ..ಏರ್ ಇಂಡಿಯಾದಲ್ಲಿ ಕಮಾಂಡರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಮಾಂಡರ್ ಮತ್ತು ಫಸ್ಟ್ ಆಫೀಸರ್/ ಸೀನಿಯರ್ ಫಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,. ವಾಕ್ ಇನ್ ಇಂಟರ್ವ್ಯೂ ಮೂಲಕ ವಿವಿಧ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸಾಗಿರಬೇಕು, ಸಂದರ್ಶನವು ಪ್ರತಿ ತಿಂಗಳು 14/15 ರಂದು ದೆಹಲಿಯಲ್ಲಿ ನಡೆಯಲಿದ್ದು, ಆಯ್ಕೆಯಾದವರಿಗೆ ದೆಹಲಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ನಲ್ಲಿ ಕೆಲಸ ನೀಡಲಾಗುತ್ತದೆ. ಏರ್ ಇಂಡಿಯಾ ನೇಮಕಾತಿ 2022 ಅಧಿಸೂಚನೆ ಮತ್ತು AAAL ನೇಮಕಾತಿ ಅರ್ಜಿ ನಮೂನೆಯು www.airindia.in ನಲ್ಲಿ ಲಭ್ಯವಿದೆ. https://kannadanewsnow.com/kannada/bhoopindar-singh-under-ed-custody/ https://kannadanewsnow.com/kannada/siddramyya-reaction-to-hijab-controversy/
ಬೆಂಗಳೂರು : ಹಿಜಾಬ್-ಕೇಸರಿ ವಿವಾದ ರಾಜ್ಯದಲ್ಲಿ ಭುಗಿಲೆದ್ದು, ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ. ಈ ವಿವಾದದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮಕ್ಕಳ ಸಮವಸ್ತ್ರ ವಿಚಾರದಲ್ಲಿ ತಲೆ ಹಾಕಲು ರಘುಪತಿ ಭಟ್ ಯಾರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ಸಮವಸ್ತ್ರ ವಿಷಯದಲ್ಲಿ ತಲೆ ಹಾಕಲು ಈ ರಘುಪತಿ ಭಟ್ ಯಾರು..? ಸರ್ಕಾರದ ಸಂಬಳ ಪಡೆಯುವ ಪ್ರಾಂಶುಪಾಲರು , ಭಟ್ ಹೇಳುವುದನ್ನು ಯಾಕೆ ಕೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಹಿಜಾಬ್ ಮತ್ತು ಕೇಸರಿ ವಸ್ತ್ರದ ನಡುವೆ ತಳುಕು ಹಾಕುವ ಪ್ರಮೇಯವೇ ಇಲ್ಲ. ಹಿಂದೂ ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಕೇಸರಿ ಶಾಲು ಹೊದ್ದು ಬರಲು ಆರಂಭಿಸಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಮಕ್ಕಳು ಶತಮಾನಗಳಿಂದ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. https://kannadanewsnow.com/kannada/corona-bulletin-karnataka-sudhakar-tweet/ https://kannadanewsnow.com/kannada/daiva-sankalpa-yojane-in-karnataka-says-shashikala-jolle/ https://kannadanewsnow.com/kannada/aadhaar-update-how-to-downlad-masked-aadhaar-card/
ಪಂಜಾಬ್: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಚರಂಜಿತ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿಯನ್ನು ಅವರನ್ನು ಜಲಂಧರ್ ನ್ಯಾಯಾಲಯವು ಫೆಬ್ರವರಿ 8 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕಳುಹಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಗುರುವಾರ ತಡರಾತ್ರಿ ಸಿಂಗ್ ಅವರನ್ನು ಬಂಧಿಸಿದ್ದಾರೆ. ಪಂಜಾಬ್ ಸಿಎಂ ಸೋದರಳಿಯನನ್ನು ಜಲಂಧರ್ನಲ್ಲಿರುವ ಏಜೆನ್ಸಿಯ ಕಚೇರಿಯಲ್ಲಿ ಹಲವಾರು ಗಂಟೆಗಳ ವಿಚಾರಣೆಯ ನಂತರ ಮನಿ ಲಾಂಡರಿಂಗ್ ಆಕ್ಟ್ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ. ಇನ್ನೂ, 10 ಕೋಟಿ ನಿವ್ವಳ ವಸೂಲಿ, 21 ಲಕ್ಷ ಮೌಲ್ಯದ ಚಿನ್ನ, 12 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ – ಎಲ್ಲವೂ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಮನೆಯಿಂದ ಪತ್ತೆಯಾಗಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿ, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯನನ್ನು ಜಾರಿ ನಿರ್ದೇಶನಾಲಯವು ದಿನವಿಡೀ ವಿಚಾರಣೆ ಯ ನಂತರ ಬಂಧಿಸಿದೆ. ಬಹುಕೋಟಿ ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ.…
ಬೆಂಗಳೂರು : ರಾಜ್ಯದ ದೇವಾಲಯಗಳ ಖಾಸಗೀಕರಣ ಕುರಿತು ಮುಜರಾಯಿ ಇಲಾಖೆ ಸಚಿವೆ ‘ಶಶಿಕಲಾ ಜೊಲ್ಲೆ’ ( Shashikala jolle ) ಪ್ರತಿಕ್ರಿಯೆ ನೀಡಿದದು, ದೇವಾಲಯಗಳನ್ನು ಖಾಸಗೀಕರಣ ಮಾಡುವುದಿಲ್ಲ ಬದಲಾಗಿ ದೈವ ಸಂಕಲ್ಪ ( Daiva sankalpa yojane ) ಹೆಸರಿನಲ್ಲಿ ರಾಜ್ಯದ ದೇವಾಲಯಗಳನ್ನು ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ದೇವಾಲಯಗಳನ್ನು ಖಾಸಗೀಕರಣ ಮಾಡುವುದಿಲ್ಲ ಬದಲಾಗಿ ದೈವ ಸಂಕಲ್ಪ ಹೆಸರಿನಲ್ಲಿ ರಾಜ್ಯದ ದೇವಾಲಯಗಳನ್ನು ಅಭಿವೃದ್ದಿ ಮಾಡುತ್ತೇವೆ ದಾನಿಗಳ ಸಹಾಯದಿಂದ ಅಭಿವೃದ್ಧಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಸಿ ಗ್ರೇಡ್ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುತ್ತಿದೆ. ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು. ದೈವ ಸಂಕಲ್ಪ ಯೋಜನೆ ಹೆಸರಿನಲ್ಲಿ ದೇವಾಲಯಗಳ ಅಭಿವೃದ್ದಿ ದೈವ ಸಂಕಲ್ಪ ಯೋಜನೆ ಹೆಸರಿನಲ್ಲಿ ದೇವಾಲಯಗಳ ಅಭಿವೃದ್ದಿ ಮಾಡುತ್ತೇವೆ. ಈ ಯೋಜನೆಯ ಮೊದಲ ಹಂತದ ಅಂದಾಜು ವೆಚ್ಚ 1140 ಕೋಟಿ ರೂಪಾಯಿಗಳಾಗಿವೆ. ಕುಕ್ಕೆ ಸುಬ್ರಹ್ಮಣ್ಯ, ಮಲೈಮಹದೇಶ್ವರ ದೇವಸ್ಥಾನಗಳ ರೀತಿ ಅಭಿವೃದ್ಧಿಯಾಗಬೇಕು. ರಾಜ್ಯದಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಇಂದು ಹೊಸದಾಗಿ 14,950 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂದು ದೃಢಪಟ್ಟಿದ್ದು, ಕಿಲ್ಲರ್ ಕೊರೊನಾ ಸೋಂಕಿಗೆ 53 ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಇಂದು ಹೊಸದಾಗಿ 14,950 ಜನರಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ., ಬೆಂಗಳೂರಿನಲ್ಲಿ 6,039 ಕೇಸ್ ಸೇರಿದಂತೆ ರಾಜ್ಯಾಧ್ಯಂತ 14,950 ಜನರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಪಾಸಿಟಿವಿಟಿ ದರ ( Positivity Rate ) 10.93% ಕ್ಕೆ ಇಳಿಕೆಯಾಗಿರೋದಾಗಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಕಿಲ್ಲರ್ ಕೊರೋನಾ ಅಟ್ಟಹಾಸವನ್ನೇ ಮೆರೆದಿದ್ದು, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 15 ಜನರು ಸೇರಿದಂತೆ ರಾಜ್ಯದಲ್ಲಿ 53 ಮಂದಿ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಸದ್ಯ 1,23,098 ಸಕ್ರಿಯ ಪ್ರಕರಣಗಳಿದೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 10.93 % ರಷ್ಟಿದೆ ಎಂದು…
ಉಡುಪಿ : ಉಡುಪಿಯಲ್ಲಿ ಭಾರೀ ವಿವಾದಕ್ಕೆ ಕಾರಣವಾದ ಹಿಜಾಬ್-ಕೇಸರಿಶಾಲು ಧರಿಸುವಿಕೆ ವಿಚಾರ ಇನ್ನೂ ಕೂಡ ಅಂತ್ಯಗೊಂಡಿಲ್ಲ. ದಿನದಿಂದ ದಿನಕ್ಕೆ ಈ ವಿವಾದ ಬೆಳೆಯತ್ತಲೇ ಇದೆ. ವಿವಾದದ ಹಿನ್ನೆಲೆ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನಾಳೆ (ಫೆ.5) ರಜೆ ಘೋಷಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಒಳಪ್ರವೇಶಿಸಲು ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿನಿಯರು ಇಂದು ಕೂಡ ಪ್ರತಿಭಟನೆ ನಡೆಸಿದರು. ವಿವಾದದ ಭುಗಿಲೆದ್ದ ಹಿನ್ನೆಲೆ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನಾಳೆ (ಫೆ.5) ರಜೆ ಘೋಷಿಸಲಾಗಿದೆ. ಸೋಮವಾರದಿಂದ ಮತ್ತೆ ಪ್ರತಿಭಟನೆ ಮುಂದುವರಿಯುವ ಸಾಧ್ಯತೆಯಿದೆ. ನಾಳೆ ಕಾಲೇಜಿಗೆ ಆಡಳಿತ ಮಂಡಳಿ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಮತ್ತೆ ಪ್ರತಿಭಟನೆ ಮುಂದುವರಿಯುವ ಸಾಧ್ಯತೆಯಿದೆ. https://kannadanewsnow.com/kannada/new-guidlince-of-karnataka/ https://kannadanewsnow.com/kannada/obavva-athma-rakshana-kale-yojane-state-govt-plan-cm-bommayi/
ಬೆಂಗಳೂರು : ಫೆ.7 ರಂದು ‘ಓಬವ್ವ ಆತ್ಮರಕ್ಷಣೆ ಕಲೆ’ ಯೋಜನೆಗೆ ‘ಸಿಎಂ ಬಸವರಾಜ ಬೊಮ್ಮಾಯಿ’ (Cm Bommai) ಚಾಲನೆ ನೀಡಲಿದ್ದಾರೆ. ಹೌದು, ರಾಜ್ಯ ಸರ್ಕಾರ ನೂತನವಾಗಿ ಪರಿಚಯಿಸುತ್ತಿರುವ ಓಬವ್ವ ಆತ್ಮರಕ್ಷಣೆ ಕಲೆ ಯೋಜನೆಗೆ ಫೆಬ್ರವರಿ 7 ರಂದು ಉದ್ಘಾಟನೆಯಾಗಲಿದೆ. ‘ಏನಿದು ಓಬವ್ವ ಆತ್ಮರಕ್ಷಣೆ ಕಲೆ’..? ಹೆಣ್ಣುಮಕ್ಕಳಿಗೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಕಲೆ ಬಗ್ಗೆ ಸರ್ಕಾರ ತರಬೇತಿ ನೀಡಲಿದೆ. ಮೊದಲು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಯೋಗಿಕವಾಗಿ 100 ವಸತಿ ಶಾಲೆಗಳಲ್ಲಿ ಕರಾಟೆ ತರಬೇತಿ ನೀಡಲಿದೆ . ಬ್ಲಾಕ್ ಬೆಲ್ಟ್ ಪಡೆದ ಮಹಿಳಾ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಸಾವಿರಕ್ಕೂ ಹೆಚ್ಚು ತರಬೇತುದಾರರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿದೆ. 1704 ಹಾಸ್ಟೆಲ್, ವಸತಿ ಶಾಲೆಗಳ 1.82 ಲಕ್ಷ ಹೆಣ್ಣುಮಕ್ಕಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, 625 ಹಾಸ್ಟೆಲ್ಗಳ 50 ಸಾವಿರ ಹೆಣ್ಣುಮಕ್ಕಳಿಗೆ ತರಬೇತಿ ನೀಡಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ 257 ಹಾಸ್ಟೆಲ್ಗಳ…