Author: Kannada News

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ‘ಸಿಹಿ ಗೆಣಸು‘ (Sweet potato) ಒಂದು ಜಾತಿಯ ಗೆಡ್ದೆ. ಇದು ದಕ್ಷಿಣ ಅಮೇರಿಕಾ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ. ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದಂತೆ. 1) ಸಿಹಿಗೆಣಸು ದೇಹಕ್ಕೆ ಬೇಕಾದ ಬಿ6, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನಿಶಿಯಂ  ನೀಡುತ್ತದೆ. 2) ಸಿಹಿಗೆಣಸಿನಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹಾ ಇದ್ದು ಹಲವು ತೊಂದರೆಗಳಿಂದ ಚಳಿಗಾಲದಲ್ಲಿ  ರಕ್ಷಣೆ ನೀಡುತ್ತದೆ 3) ಸಿಹಿಗೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.ಶೀತ ಮತ್ತು ಜ್ವರದ ಸೊಂಕು ಹರಡುವುದನ್ನು ತಡೆಗಟ್ಟುತ್ತದೆ. 4) ಇದರಲ್ಲಿರುವ ವಿಟಮಿನ್ ಸಿ ಜೀವಸತ್ವವು ಮೂಳೆ ಮತ್ತು ಹಲ್ಲಿನ ರಚನೆ, ಜೀರ್ಣಕ್ರಿಯೆ ಮತ್ತು ರಕ್ತ ಕಣ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ  5) ಇದರಲ್ಲಿರುವ ಬಿಟಾ-ಕೆರೊಟಿನ್ ಅಂಶ ಮಧುಮೇಹವನ್ನು ನಿಯಂತ್ರಿಸುತ್ತದೆ. ಇದರ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ. 7) ಮಾರಣಾಂತಿಕವಾಗಿ ಕಾಯಿಲೆ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ.…

Read More

ಕೊಪ್ಪ :  ಈಗಾಗಲೇ NSP(NATIONAL SCHOLARSHIP PORTAL) ನಲ್ಲಿ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಕಡ್ಡಾಯವಾಗಿ SSP(STATE SCHOLARSHIP PORTAL) ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಅಲ್ಪಸಂಖ್ಯಾತರ ನಿಗಮ ಪ್ರಕಟಣೆ ಹೊರಡಿಸಿದೆ. 2021-22 ನೇ ಸಾಲಿನ ನ್ಯಾಷನಲ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನ (NSP) ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವಂತೆ ಪ್ರಾಂಶುಪಾಲರು ಕ್ರಮ ಕೈಗೊಳ್ಳಬೇಕಾಗಿ  ನಿಗಮ ಸೂಚನೆ ನೀಡಿದೆ. ಇನ್ನೂ, ಅಲ್ಪಸಂಖ್ಯಾತ ಸಮುದಾಯದ ( minority Students ) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು  15/12/2021ರ ವರೆಗೆ ವಿಸ್ತರಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ. ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ಸಮುದಾಯದ ಜೈನರು, ಮುಸ್ಲಿಂ, ಕ್ರಿಶ್ವಿಯನ್, ಸಿಖ್, ಪಾರಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನವೆಂಬರ್ 30 ರವರೆಗೆ ಅವಕಾಶ ನೀಡಿತ್ತು, ವಿದ್ಯಾರ್ಥಿಗಳು ಹಾಗೂ ಪೋಷಕರ ಮನವಿ ಮೇರೆಗೆ ಇದೀಗ ಡಿಸೆಂಬರ್ 15 ರ ವರೆಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿ…

Read More

ಬೆಂಗಳೂರು :   ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ  ವಿಳಂಬ ವಿಚಾರ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ. ಹೌದು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ  ತಡವಾಗಿದ್ದಕ್ಕೆ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ.  ಕರ್ನಾಟಕ ರಾಜ್ಯ ಚುನಾವಣಾ ಆಯೋಗದಿಂದ ರಿಟ್ ಅರ್ಜಿ ಸಲ್ಲಿಸಲಾಗಿದೆ. ಸಂವಿಧಾನದಡಿ ಚುನಾವಣೆಯನ್ನು ಮುಂದೂಡುವಂತಿಲ್ಲ. ಈ ಹಿಂದಿನಂತೆ ಜಿಲ್ಲಾ ಪಂಚಾಯತ್,‌ ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಚುನಾವಣೆ ನಡೆಸಬೇಕು. ಜಿಲ್ಲಾ ಪಂಚಾಯತ್,‌ ತಾಲೂಕು ಪಂಚಾಯತ್ ಚುನಾವಣೆ ನಡೆಸುವುದಕ್ಕೆ ಆಯೋಗ ಮನವಿ ಮಾಡಿದೆ. https://kannadanewsnow.com/kannada/supreme-court-action-to-state-govt-knn/ https://kannadanewsnow.com/kannada/job-fair-in-chickmagalore-knn-desk/

Read More

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  200 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್​ ಫರ್ನಾಂಡಿಸ್ ಗೆ ಸಂಕಷ್ಟ ಎದುರಾಗಿದ್ದು,. ಡಿಸೆಂಬರ್​ 8ರಂದು ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್​ಗೆ ನೋಟಿಸ್​ ನೀಡಲಾಗಿದೆ.  ಪ್ರಕರಣದ ಕಿಂಗ್​ ಪಿನ್​ ಸುಕೇಶ್​ ಚಂದ್ರಶೇಖರ್ ಜೊತೆಯಿರುವ ಫೋಟೋಗಳು ಲೀಕ್​ ಆಗಿವೆ. ಇದರಿಂದ ಪ್ರಕರಣಕ್ಕೆ ಮತ್ತಷ್ಟು ಸಾಕ್ಷ್ಯ ಸಿಕ್ಕಂತಾಗಿದೆ. ಹೀಗಾಗಿ, ಡಿಸೆಂಬರ್​ 8ರಂದು ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್​ಗೆ ನೋಟಿಸ್​ ನೀಡಲಾಗಿದೆ.  ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್​ ಚಂದ್ರಶೇಖರ್​ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಜಾಕ್ವೆಲಿನ್​ ಫರ್ನಾಂಡಿಸ್​ ​ಮೇಲೂ ಅನುಮಾನ ಮೂಡಿತ್ತು. ಈಗ ಇಬ್ಬರೂ ಜೊತೆಯಿರುವ ಫೋಟೋ ಲೀಕ್​​ ಆಗಿದ್ದು, ನಟಿಗೆ ಸಂಕಷ್ಟ ಎದುರಾಗಿದ್ದು, . ಡಿಸೆಂಬರ್​ 8ರಂದು ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್​ಗೆ ನೋಟಿಸ್​ ನೀಡಲಾಗಿದೆ. ದುಬೈಗೆ ತೆರಳುತ್ತಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮುಂಬೈ ಏರ್ ಪೋರ್ಟ್ ನಲ್ಲಿ ಅಧಿಕಾರಿಗಳು ನಿನ್ನೆ ತಡೆ ನೀಡಿದ್ದರು. ಲುಕೌಟ್…

Read More

ಡಿಜಿಟಲ್ ಡೆಸ್ಕ್ :   ಕ್ರೂರಿ ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡದ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ನಿಮಗೇನು ಮನುಷ್ಯತ್ವ ಇಲ್ಲವೇನು ಎಂದು ಪ್ರಶ್ನಿಸಿದೆ. ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ತೋರುತ್ತಿರುವ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೋಮವಾರ ತರಾಟೆ ತೆಗೆದುಕೊಂಡಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನ ಸರ್ಕಾರಗಳ ವಿರುದ್ಧ ಕೋರ್ಟ್ ಗರಂ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅಡಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ 50,000 ರೂಪಾಯಿ ಪಾವತಿಸಲು ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್‌ನಲ್ಲಿ ಅನುಮೋದನೆ ನೀಡಿತ್ತು, ಸೋಮವಾರ ಕೊವಿಡ್-19 ಮೃತರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ತೋರುತ್ತಿರುವ ವಿಳಂಬ ಧೋರಣೆ ಕುರಿತು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ಹಾಗೂ ನ್ಯಾ ಬಿವಿ ನಾಗರತ್ನ ನೇತೃತ್ವದ ಪೀಠ ವಿಚಾರಣೆ ನಡೆಸಿತು. ರಾಜ್ಯದಲ್ಲಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿನಿಂದ ಬಲಿಯಾಗಿದ್ದಾರೆ, ಆದರೆ ಇದುವರೆಗೆ 37,000 ಜನರು…

Read More

ಚಿಕ್ಕಮಗಳೂರು :   ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ. ಚಿಕ್ಕಮಗಳೂರು ಮತ್ತು ಉದ್ಯೋಗದಾತ ಸಂಸ್ಥೆ ಇವರ ಸಹಯೋಗದೊಂದಿಗೆ ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಡಿಸೆಂಬರ್ 18 ರಂದು ಬೃಹತ್ ಉದ್ಯೋಗ ( job fair)  ಮೇಳವನ್ನು ಆಯೋಜಿಸಲಾಗಿದೆ.  SSLC.PUC.ITI.DIPLOMA. BA.Bcom.Bsc.BBM.BCA.BE.MBA.Mcom.MSC.MCA.MSW .ಹಾಗೂ ಇನ್ನಿತರ ಯಾವುದೇ  ಉನ್ನತ ಪದವಿ ಪಡೆದಿರುವ ಉದ್ಯೋಗಾಕಾಂಕ್ಷಿ ಯುವಕ/ ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನದೊಂದಿಗೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಬೃಹತ್ ಉದ್ಯೋಗ ಮೇಳವನ್ನು ಡಿಸೆಂಬರ್ ಮಾಹೆಯಲ್ಲಿ ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದೆ.ಈ ಉದ್ಯೋಗ ಮೇಳದಲ್ಲಿ 40 ಕ್ಕೂ  ಹೆಚ್ಚು ಪ್ರತಿಷ್ಟಿತ ಕಂಪನಿಗಳು ಭಾಗವಹಿಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಚಿಸುವವರು  ಸದಾವಕಾಶವನ್ನು ಉಪಯೋಗಿಸಿಕೊಳ್ಳಲು ತಮ್ಮ ವ್ಯೆಯಕ್ತಿಕ ಮಾಹಿತಿಯನ್ನು (Resume) ಈ ಕೆಳಕಂಡ ವಾಟ್ಸಪ್ ನಂಬರ್ ಗೆ ಕಳುಹಿಸಲು ಪ್ರಕಟಣೆ ತಿಳಿಸಿದೆ.  9108522407. 7892052879 https://kannadanewsnow.com/kannada/minority-scholarship-appply-here-knn-desk/ https://kannadanewsnow.com/kannada/omicron-viruse-in-maharatra/

Read More

ಡಿಜಿಟಲ್ ಡೆಸ್ಕ್ :  ಮಹಾರಾಷ್ಟ್ರದಲ್ಲಿ  ಒಮಿಕ್ರಾನ್ ವೈರಸ್ ಸ್ಪೋಟವಾಗಿದ್ದು, ಮುಂಬೈನಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್ ಸೋಂಕು ಧೃಡವಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 10 ಕ್ಕೇರಿದೆ. ಹೌದು, ಮುಂಬೈನಲ್ಲಿ ಮತ್ತೆ ಇಬ್ಬರಿಗೆ ಒಮಿಕ್ರಾನ್ ಸೋಂಕು ತಗುಲಿದ್ದು, ಈ ಮೂಲಕ ಭಾರತದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 23 ಕ್ಕೇರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತದಲ್ಲಿ ಹೊಸ ಕೊರೊನಾ ರೂಪಾಂತರಿ ( OMICRON VIRUSE) ದೇಶದ ಜನರನ್ನು ಬೆಚ್ಚಿ ಬೀಳಿಸಿದ್ದು, ಮಾಹಿತಿಗಳ ಪ್ರಕಾರ 23  ಮಂದಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ಧೃಡವಾಗಿದೆ. ಹೌದು, ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 2, ಗುಜರಾತ್ ನಲ್ಲಿ 1, ಮುಂಬೈನಲ್ಲಿ 10, ದೆಹಲಿಯಲ್ಲಿ 1 ಮತ್ತು ರಾಜಸ್ಥಾನದಲ್ಲಿ 9 ಕೇಸ್ ಗಳು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 23 ಕ್ಕೇರಿದೆ ಎಂಬ ಮಾಹಿತಿ ಲಭ್ಯವಾಗಿದೆ. https://kannadanewsnow.com/kannada/minority-scholarship-appply-here-knn-desk/ https://kannadanewsnow.com/kannada/hd-kumaraswamy-speech-on-mlc-election-bjp-support/

Read More

ಕೊಪ್ಪ  : 2021-22 ನೇ ಸಾಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು  15/12/2021 ಕೊನೆಯ ದಿನಾಂಕವಾಗಿದ್ದು.  ಇನ್ನೂ ಕೂಡ ಅರ್ಜಿ ಸಲ್ಲಿಸದೇ ಇರುವ ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ನಿಗಮ ಪ್ರಕಟಣೆ ಹೊರಡಿಸಿದೆ.  ಇನ್ನೂ,  ಮನೆಯಿಂದ ಕಾಲೇಜಿಗೆ 6 ಕಿ. ಮೀ ದೂರವಿದ್ದು ಸರ್ಕಾರಿ ಹಾಸ್ಟೆಲ್ ನಲ್ಲಿ ಪ್ರವೇಶ ಪಡೆಯದೇ ಇರುವ ಕಾಲೇಜು ವಿದ್ಯಾರ್ಥಿಗಳು ದಿನಾಂಕ 30/12/2021 ರ ಒಳಗೆ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಈಗಾಗಲೇ NSP(ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್) ನಲ್ಲಿ ಅರ್ಜಿ ಸಲ್ಲಿಸಿರುವ ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ SSP( ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್) ನಲ್ಲಿ ಅರ್ಜಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ನಿಗಮ ಪ್ರಕಟಣೆ ಹೊರಡಿಸಿದ್ದು, ಈ ಬಗ್ಗೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ಹೊರಡಿಸಿದೆ. https://kannadanewsnow.com/kannada/shocking-news-covid-positivity-rate-increases-in-13-districts-on-omicron-back-tooltip-information/ https://kannadanewsnow.com/kannada/russian-president-receives-warm-welcome-do-you-know-what-pm-modi-said-about-the-russia-india-relationship/

Read More

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ( Omicron Variant ) ಸೋಂಕು ದೃಢಪಟ್ಟ ನಂತ್ರ, ಮುಂಜಾಗ್ರತಾ ಕ್ರಮವಾಗಿ ಮಾಲ್ ಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಕಠಿಣ ನಿಮಯ ಜಾರಿಗೊಳಿಸಲಾಗಿದೆ. ಹೌದು, ಈ ಬಗ್ಗೆ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ  ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ( Omicron Variant ) ಸೋಂಕು ದೃಢಪಟ್ಟ ನಂತ್ರ, ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಂದು ಶಾಪಿಂಗ್ ಮಾಲ್, ಥಿಯೇಟರ್ ಪ್ರವೇಶಿಸಬೇಕೆಂದರೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿದೆ ಎಂದು ಆಧಿಕೃತ ಆದೇಶ ಹೊರಡಿಸಿದ್ದಾರೆ.  ಕೋವಿಡ್-19 ಎರಡು ಡೋಸ್ ಲಸಿಕೆ ( Covid19 Vaccine ) ಪಡೆದವರಿಗೆ ಮಾತ್ರವೇ ಮಾಲ್ ಒಳ ಪ್ರವೇಶಿಸೋದಕ್ಕೆ ಅವಕಾಶ ನೀಡಲಾಗುತ್ತಿದೆ. ಹೌದು.. ಬೆಂಗಳೂರಿನಲ್ಲಿ ಈಗ ಒಮಿಕ್ರಾನ್ ಭೀತಿ ಆರಂಭಗೊಂಡಿದ್ದು, ಎಲ್ಲೆಲ್ಲೂ ಕೋವಿಡ್-19 ಹೊಸ ರೂಪಾಂತರಿ ತಡೆಯ ಕ್ರಮವನ್ನು ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಮಾಲ್ ಗಳಿಗೆ ಪ್ರವೇಶಿಸೋದಕ್ಕೆ ಲಸಿಕೆ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಮಾಲ್ ಗಳ ( Mall ) ಪ್ರವೇಶ ದ್ವಾರದಲ್ಲಿ ನಾಮಫಲಕ ಕೂಡ…

Read More

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ಕರಿಬೇವು ತನ್ನ ಸುಗಂಧಪೂರಿತ ಎಲೆಗಳಿಂದಾಗಿ ಬಹು ಪ್ರಾಮುಖ್ಯ ಪಡೆದಿದೆ. ಎಲೆಗಳನ್ನು ಹಲವಾರು ಬಗೆಯ ಅಡಿಗೆಯ ಕೆಲಸಗಳಲ್ಲಿ ಉಪಯೋಗಿಸುವುದು ಎಲ್ಲರಿಗೂ ತಿಳಿದಿದೆ. ಎಲೆಗಳನ್ನು ಆಮಶಂಕೆ. ಅತಿಸಾರ, ವಾಂತಿ ಮುಂತಾದವನ್ನು ನಿಲ್ಲಿಸಲು ಉಪಯೋಗಿಸುವುದಲ್ಲದೆ ತರೆಚು ಗಾಯಗಳಿಗೂ ಬೊಕ್ಕೆಗಳಿಗೂ ಹಚ್ಚಲು ಬಳಸುತ್ತಾರೆ. ಬೇರು ಮತ್ತು ತೊಗಟೆಗಳನ್ನು ಶಕ್ತಿವರ್ಧಕ, ಜೀರ್ಣಕಾರಿ ಹಾಗೂ ವಾತದ  ಔಷಧಿಗಳಾಗಿ ಉಪಯೋಗಿಸುತ್ತಾರೆ.  ಈ ಲೇಖನದಲ್ಲಿ ಕರಿಬೇವವನ್ನು ಅಡುಗೆಯಲ್ಲಿ ಬಳಸುವುದರಿಂದ ಯಾವೆಲ್ಲಾ ಅನುಕೂಲಗಳಿವೆ. ಎಂಬುದನ್ನು ತಿಳಿಸಿಕೊಡುತ್ತೇವೆ. 1) ಆಯುರ್ವೇದಿಕ್  ಔಷಧದಲ್ಲಿಯೂ ಸಹ ಔಷಧೀಯ ವಸ್ತುವಾಗಿ ಬಳಸಲಾಗುತ್ತದೆ. ಈ ಎಲೆಗಳ ಗುಣಲಕ್ಷಣಗಳು ಸಕ್ಕರೆ ಕಾಯಿಲೆ ನಿರೋಧಕವಾಗ ಆಂಟಿ ಆಕ್ಸಿಡೆಂಟ್ ಆಗಿ,[ ಸೂಕ್ಷ್ಮಾಣು ನಿರೋಧಕವಾಗಿ, ಊತ ನಿರೋಧಕವಾಗಿ ಕೆಲಸ ಮಾಡುತ್ತದೆ. 2) ಕೂದಲು ಆರೋಗ್ಯಪೂರ್ಣವಾಗಿ ಮತ್ತು ಸೊಂಪಾಗಿ ಬೆಳೆಯುವಲ್ಲಿ ಕರಿಬೇವಿನ ಎಲೆಗಳು ಸಹಾಯಕಾರಿ ಎಂಬುದಾಗಿಯೂ ಕಂಡುಬಂದಿದೆ. ಇವುಗಳು ಕಬ್ಬಿಣದ ಅಂಶವನ್ನು ಸಹ ಒಳಗೊಂಡಿದೆ. ಸಾಂಬಾರು ಪದಾರ್ಥಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಬಳಸಲ್ಪಡುವುದಾದರೂ, ಕರಿಬೇವಿನ ಮರದ ಎಲೆಗಳನ್ನು ರುಚಿಯನ್ನು ಹೆಚ್ಚಿಸಲು ಇತರ…

Read More


best web service company