Author: kannadanewslive

ಮೈಸೂರು : ಚಿರತೆ ಸೆರೆಗೆ ವಿಶೇಷ ‘ಟಾಸ್ಕ್ ಪೋರ್ಸ್’ ರಚನೆ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಮೈಸೂರಿನಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾದ ಘಟನೆ ಕುರಿತು ಮಾತನಾಡಿ, ಚಿರತೆ ಸೆರೆಗೆ ವಿಶೇಷ ಟಾಸ್ಕ್ ಪೋರ್ಸ್ ರಚನೆ ಮಾಡಲಾಗಿದೆ, ಸ್ಥಳಕ್ಕೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಚಿರತೆ ದಾಳಿಗೆ ಬಲಿಯಾದವರಿಗೆ ನೀಡುವ ಪರಿಹಾರ ಹೆಚ್ಚಿಸಿದ್ದೇವೆರಾತ್ರಿ ವೇಳೆ ಹೊರಗಡೆ ಬರುವಾಗ ಎಚ್ಚರ ವಹಿಸಿ, ಇನ್ನೊಂದು ಬಲಿ ಆಗುವುದಕ್ಕೆ ಬಿಡಲ್ಲ ಎಂದರು.ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಜಯಂತ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ಈತ ನಿನ್ನೆ ನಾಪತ್ತೆಯಾಗಿದ್ದನು. ಆದರೆ ಇಂದು ಗ್ರಾಮದ ಹೊರವಲಯದಲ್ಲಿ ರುಂಡವಿಲ್ಲದೆ ಬಾಲಕನ ಶವ ಪತ್ತೆಯಾಗಿದೆ. ರಾತ್ರಿ ಬಾಲಕನನ್ನು ಚಿರತೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. https://kannadanewsnow.com/kannada/mportant-information-for-farmers-training-workshop-on-fodder-crops-tomorrow-at-shimoga/ https://kannadanewsnow.com/kannada/these-5-unhealthy-habits-prevent-you-from-losing-weight/

Read More

ಶಿವಮೊಗ್ಗ : ನಾಳೆ ಶಿವಮೊಗ್ಗದಲ್ಲಿ ಮೇವಿನ ಬೆಳೆಗಳ ಬಗ್ಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ರೈತರು ಭಾಗವಹಿಸಬಹುದಾಗಿದೆ. ಜ.23ರಂದು ನಾಳೆ ಶಿವಮೊಗ್ಗದ ವಿನೋಬನಗರದಲ್ಲಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆಯಡಿ ರೈತರು/ನಿರುದ್ಯೋಗಿ ಯುವಕರಿಗೆ ಮೇವಿನ ಬೆಳೆಗಳ ಕುರಿತು ತರಬೇತಿ ಕಾರ್ಯಕ್ರಮ ಜ.23ರಂದು ನಾಳೆ ಶಿವಮೊಗ್ಗದ ವಿನೋಬನಗರದಲ್ಲಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದೆ. ಈ ತರಬೇತಿಯಲ್ಲಿ, ಹಸಿರು ಮೇವಿನ ಬೆಳೆಗಳ ಕೃಷಿ ಕ್ರಮಗಳು, ಮೇವು ಬೀಜಗಳ ಸಂಸ್ಕರಣೆ ಮತ್ತು ಮೇವು ತಳಿಗಳ ಪ್ರಸರಣಕ್ಕೆ ಭೇಟಿ – ಪ್ರಾಯೋಗಿಕ ತರಬೇತಿ, ಹುಲ್ಲುಹಾಸು ನಿರ್ವಹಣೆಯ ಅಗತ್ಯತೆಯ ಬಗ್ಗೆ ವಿವಿಧ ವಿಷಯಗಳನ್ನು ವಿವರಿಸಲಾಗುತ್ತದೆ. ಆಸಕ್ತರು ದಯವಿಟ್ಟು ತಮ್ಮ ಹೆಸರನ್ನು ಸಹ ಪ್ರಾಧ್ಯಾಪಕರಾದ ಡಾ.ಆರ್.ಜಯಶ್ರೀ ಮತ್ತು ಆರ್.ಎ.ಗೆ ಕಳುಹಿಸಿ ನೊಂದಣಿ ಮಾಡಿಸುವಂತೆ ಕೆ.ಆರ್.ವಿಕಾಸ್ ಯೋಜನಾ ಸಂಯೋಜಕರು, ಅನಿಮಲ್ ಜೆನೆಟಿಕ್ಸ್ ಮತ್ತು ಬ್ರೀಡಿಂಗ್ ಸೈನ್ಸ್ ವಿಭಾಗ, ಪಶುವೈದ್ಯಕೀಯ ಕಾಲೇಜು, ವಿನೋಬನಗರ ಇವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ .ನಂ. 9916918909/8310384135 ಸಂಪರ್ಕಿಸಬಹುದಾಗಿದೆ. ಸಾಂದರ್ಭಿಕ ಚಿತ್ರ https://kannadanewsnow.com/kannada/bommayi-responded-to-siddaramaiahs-statement/ https://kannadanewsnow.com/kannada/if-congress-comes-to-power-all-sections-of-people-will-come-to-power-will-do-justice-to-all-dk-shivakumar/

Read More

ಬೆಂಗಳೂರು :ವಿಧಾನಸಭೆ ಚುನಾವಣೆ ಸಮೀಪ ಬೆನ್ನಲ್ಲೇ ವಿಪಕ್ಷಗಳ ಪರಸ್ಪರ ವಾಕ್ಸಮರ ಮುಂದುವರೆದಿದೆ. ಸಿಎಂ ಬೊಮ್ಮಾಯಿ ಮನೆ ಹಾಳಾಗ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ನಾವು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಟೀಕಿಸಿದ್ದೆವೆ, ನಾವು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ಆದರೆ ಸಿದ್ದರಾಮಯ್ಯ ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ. ಇದು ಒಳ್ಳೆಯ ಸಂಸ್ಕ್ರತಿ ಅಲ್ಲ ಎಂದು ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಕೊಟ್ಟ ಮಾತಿಗೆ ತಪ್ಪಿದರೆ ರಾಜಕೀಯ ನಿವೃತ್ತಿ ಘೋಷಿಸುವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಕೊನೆಗೆ ಅದೇ ಸ್ಥಿತಿ ಬರುತ್ತೆ, ರಾಜಕೀಯ ನಿವೃತ್ತಿನೇ ಪಡೆಯಬೇಕು ಎಂದು ಟಾಂಗ್ ನೀಡಿದ್ದಾರೆ. https://kannadanewsnow.com/kannada/golden-opportunity-for-job-seekers-direct-interview-for-various-posts-on-january-25-in-kalaburagi/ https://kannadanewsnow.com/kannada/if-congress-comes-to-power-all-sections-of-people-will-come-to-power-will-do-justice-to-all-dk-shivakumar/

Read More

ಕಲಬುರಗಿ : ಕಲಬುರಗಿ ನಗರದ ಸರ್ಕಾರಿ ಐಟಿಐ ಕಾಲೇಜಿನ ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಜನವರಿ 25 ರಂದು 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ನೇರ ಸಂದರ್ಶನದಲ್ಲಿ ಭಾಗವಹಿಸುವ ಕಂಪನಿಗಳ ವಿವರ ಇಂತಿದೆ. ಫ್ಲಿಪ್ಕಾರ್ಟ್ದಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಹುದ್ದೆಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಬೈಕ್ ಹಾಗೂ ಡಿ.ಎಲ್. ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಶ್ರೀ ಶಿವಾ ಎಂಟರ್ಪ್ರೈಸಸ್ (ಏರ್ಟೆಲ್ ಪೇಮೆಂಟ್ ಬ್ಯಾಂಕ್)ದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ (ಬಯೋಡೆಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಸಂದರ್ಶನದಲ್ಲ್ಲಿ ಭಾಗವಹಿಸಬೇಕು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ…

Read More

ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆದಾಳಿಗೆ 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.ಈ ಬೆನ್ನಲ್ಲೇ ಮೈಸೂರಿನಲ್ಲಿ ಹುಲಿ ದಾಳಿಗೆ ಯುವಕನೋರ್ವ ಮೃತಪಟ್ಟಿದ್ದಾನೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಹಾಡಿಯಲ್ಲಿ ವೃಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಮಂಜು ಅಲಿಯಾಸ್ ಬೆಟ್ಟದ ಹುಲಿ (18) ಮೃತಪಟ್ಟಿದ್ದಾರೆ. ಸೌದೆ ತರಲು ಹೋಗಿದ್ದಾಗ ಹುಲಿ ದಾಳಿ ನಡೆಸಿದೆ. ಸೌದೆ ತರಲು ಕಾಡಿಗೆ ಗುಂಪೊಂದು ಹೋಗಿದ್ದು, ಈ ವೇಳೆ ಮಂಜು ಮೇಲೆ ಹುಲಿ ಎರಗಿದೆ. ಉಳಿದವರು ಅಲ್ಲಿಂದ ಓಡಿಹೋಗಿದ್ದಾರೆ ಎಂದು ತಿಳಿದು ಬಂದಿದೆ. ಚಿರತೆ ದಾಳಿಗೆ ಬಾಲಕ ಸಾವು   ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ  ಜಯಂತ್ ಮೃತ ಬಾಲಕ. ಈತ ನಿನ್ನೆ ನಾಪತ್ತೆಯಾಗಿದ್ದನು. ಆದರೆ ಇಂದು ಗ್ರಾಮದ ಹೊರವಲಯದಲ್ಲಿ ರುಂಡವಿಲ್ಲದೆ ಬಾಲಕನ ಶವ ಪತ್ತೆಯಾಗಿದೆ. ರಾತ್ರಿ ಬಾಲಕನನ್ನು ಚಿರತೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. https://kannadanewsnow.com/kannada/application-invitation-for-20-days-special-art-training/ https://kannadanewsnow.com/kannada/mass-shooting-california-more-than-10-people-died-and-16-people-injured/

Read More

ಚಿಕ್ಕಮಗಳೂರು :  ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸುಳ್ಳು ರಾಮಯ್ಯ ಎಂದರೆ ಸರಿಯಾಗುತ್ತದೆ, ನಾನು ಇಟ್ಟಿರುವ ಹೊಸ ಹೆಸರು ಸುಳ್ಳು ರಾಮಯ್ಯ ಎಂದು ಸಿಟಿ ರವಿ ವ್ಯಂಗ್ಯವಾಡಿದ್ದಾರೆ.  ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ಶಾಸಕ ಸಿ ಟಿ ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು. ಸಿದ್ದರಾಮಯ್ಯರನ್ನು ಸುಳ್ಳು ರಾಮಯ್ಯ ಎಂದು ಕರೆದರೆ ಸೂಕ್ತವಾಗುತ್ತದೆ. ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ, ಅದಕ್ಕೆ ಹಾಗಂತ ಹೆಸರು ಇಟ್ಟಿದ್ದೇನೆ ಎಂದು ಕಿಡಿಕಾರಿದರು. ಕಾಂಗ್ರೆಸ್ ನವರು ಲೂಟಿ ಮಾಡಲು ಜೆಸಿಬಿ ಹಿಡಿದು ಕೂತಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಟಿ ರವಿ ಸಿಎಂ ಮನೆ ಹಾಳಾಗ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದ ಸಿಟಿ ರವಿ ರಾಜಸ್ಥಾನ, ಹಿಮಾಚಲ ಪ್ರದೇಶ,  ಛತ್ತೀಸಗಡದಲ್ಲಿ ಕಾಂಗ್ರೆಸ್ ಬಂದಿದೆ ಹಿಮಾಚಲ ಪ್ರದೇಶದಲ್ಲಿ ತೈಲ ಬೆಲೆ ಯಾಕೆ ಇಳಿಸಿಲ್ಲ ಎಂದು ಕಿಡಿಕಾರಿದರು. ಮೋದಿ ಮಾಡೋಕು ಮುಂಚೆ  ಹೇಳೋಲ್ಲ, ಮೋದಿ ಕೊಟ್ಟು ಮಾತನಾಡುತ್ತಾರೆ. ಕೊಟ್ಟ ಮಾತಿಗೆ ಮೋದಿ ತಪ್ಪೋದಿಲ್ಲ…

Read More

ಬೆಂಗಳೂರು : 2022-23ನೇ ಸಾಲಿನ ಆಯೋಗದ ಶಿಫಾರಸಿನಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ 5 ಕಲೆಗಳಿಗೆ ಜಿಲ್ಲಾ ಮಟ್ಟದಲ್ಲಿ ನುರಿತ ಕಲಾ ಗುರುಗಳಿಂದ 20 ದಿನಗಳ ಕಾಲ ತರಬೇತಿ ನೀಡಲಾಗುವುದು. ತರಬೇತಿ ಪಡೆಯಲು ಬಯಸುವ ವಿದ್ಯಾರ್ಥಿಗಳು ಜನವರಿ 25, 2023 ರೊಳಗೆ ತಮ್ಮ ಸ್ವಯಂ ಲಿಖಿತ ಅರ್ಜಿಗಳನ್ನು ಸಲ್ಲಿಸಬಹುದು. ಕಲಿಯುವವರಿಗೆ ಪ್ರತಿ ದಿನಕ್ಕೆ 300 ರೂ. ರೂ. ಶಿಷ್ಯ ವೇತನ ನೀಡಲಾಗುತ್ತದೆ. ಕಲಿಯುವವರು ಕಡ್ಡಾಯವಾಗಿ 20 ದಿನಗಳ ತರಬೇತಿಯಲ್ಲಿ ಭಾಗವಹಿಸಬೇಕು. ಕಲಿಕೆಯ ಅವಧಿ ಮುಗಿದ ನಂತರ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಮತ್ತು ಪ್ರದರ್ಶನ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-29560059 ಅನ್ನು ಸಂಪರ್ಕಿಸಬಹುದು ಎಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/rs-1-14-crore-seized-for-carrying-undocumented-cash-in-hubballi-one-arrested/ https://kannadanewsnow.com/kannada/state-govt-gives-green-signal-for-republic-day-celebrations-at-idga-maidan-chamarajpet/

Read More

ಬೆಂಗಳೂರು : ನಗರದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಪಿ.ಸಿ ಮೋಹನ್ ಮಾಹಿತಿ ನೀಡಿದ್ದು, ನಗರದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸರ್ಕಾರ ಅನುಮತಿ ನೀಡಿದೆ ಎಂದಿದ್ದಾರೆ. ಇದೇ ಜ.26 ರಂದು ಸರ್ಕಾರದಿಂದಲೇ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಮಾಡುತ್ತೇವೆ, ಸರ್ಕಾರ ಒಪ್ಪಿಗೆ ನೀಡಿದ್ದು, ಅದ್ದೂರಿಯಾಗಿ ಆಚರಿಸಲು ಸಿದ್ದತೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ್ ಅವರಿಗೂ ಸರ್ಕಾರ ಸಿದ್ದತೆ ನಡೆಸುವಂತೆ ಸೂಚನೆ ನೀಡಿದೆ. ಸರ್ಕಾರದ ಕಾರ್ಯಕ್ರಮ ಹಿನ್ನೆಲೆ ಜನಪ್ರತಿನಿಧಿಗಳಿಗೆ ಸರ್ಕಾರವೇ ಆಹ್ವಾನ ನೀಡಲಿದೆ. ಈ ಬಗ್ಗೆ ರೂಪುರೇಷೆ ಸಿದ್ದತೆಗೆ ಜಿಲ್ಲಾಧಿಕಾರಿಗೆ ಒಂದು ದಿನ ಕಾಲಾವಕಾಶ ನೀಡಲಾಗುತ್ತದೆ, ನಾನು ಕೂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸುವೆ ಎಂದರು. ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ವಿವಾದ ಕುರಿತು ಇಂದು(22) ಹಿಂದೂಪರ ಸಂಘಟನೆಗಳು ಮತ್ತು ಚಾಮರಾಜಪೇಟೆ ನಾಗರೀಕ ಒಕ್ಕೂಟದಿಂದ ಜ.…

Read More

ಬೆಂಗಳೂರು :  ಕಾಂಗ್ರೆಸ್ ನವರು ಲೂಟಿ ಮಾಡಲು ಜೆಸಿಬಿ ಹಿಡಿದು ಕೂತಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಟಿ ರವಿ ಸಿಎಂ ಮನೆ ಹಾಳಾಗ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದ ಸಿಟಿ ರವಿ ರಾಜಸ್ಥಾನ, ಹಿಮಾಚಲ ಪ್ರದೇಶ,  ಛತ್ತೀಸಗಡದಲ್ಲಿ ಕಾಂಗ್ರೆಸ್ ಬಂದಿದೆ ಹಿಮಾಚಲ ಪ್ರದೇಶದಲ್ಲಿ ತೈಲ ಬೆಲೆ ಯಾಕೆ ಇಳಿಸಿಲ್ಲ ಎಂದು ಕಿಡಿಕಾರಿದರು. ಮೋದಿ ಮಾಡೋಕು ಮುಂಚೆ  ಹೇಳೋಲ್ಲ, ಮೋದಿ ಕೊಟ್ಟು ಮಾತನಾಡುತ್ತಾರೆ. ಕೊಟ್ಟ ಮಾತಿಗೆ ಮೋದಿ ತಪ್ಪೋದಿಲ್ಲ ಎಂದು ಸಿ.ಟಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಅಧಿಕಾರಕ್ಕೆ ಬಂದು ಲೂಟಿ ಮಾಡಲು ಕಾಂಗ್ರೆಸ್ ನವರು  ಜೆಸಿಬಿ ಹಿಡಿದು ಕೂತಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ. https://kannadanewsnow.com/kannada/former-cm-hd-kumaraswamy-lashes-out-at-siddaramaiah-for-speaking-lightly-on-pancharatna-rath-yatra/ https://kannadanewsnow.com/kannada/kas-officer-suresh-kumar-suspended-for-alleged-irregularities-in-ganga-kalyana-scheme-in-ambedkar-nigam/

Read More

ಕಲಬುರ್ಗಿ: ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಗೆ ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ. ಜನವರಿ 23 ರಂದು ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿದೆ. ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಜ.18 ರಂದು ಸಿಐಡಿ ಅಧಿಕಾರಿಗಳ ಬಂಧಿಸಿಲು ಹೋದ ವೇಳೆಯಲ್ಲಿ ತಪ್ಪಿಸಿಕೊಂಡಿದ್ದನು. ತುಮಕೂರು ಪೊಲೀಸ್ ಠಾಣೆಯಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗೋದಕ್ಕೆ ಸತತವಾಗಿ ಗೈರಾಗಿದ್ದರು. ಕಲಬುರ್ಗಿಯ ಅಕ್ಕಮಹಾದೇವಿ ಕಾಲೋನಿಯಲ್ಲಿರುವಂತ ನಿವಾಸಕ್ಕೆ ರುದ್ರಗೌಡ ಪಾಟೀಲ್ ಅವರನ್ನು ಬಂಧಿಸೋದಕ್ಕೆ ಸಿಐಡಿ ಪಿಎಸ್ಐ ಆನಂದ್ ತೆರಳಿದ್ದರು.ಈ ವೇಳೆ ಸಿಐಡಿ ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದನು. ಸಿಐಡಿ ಪೊಲೀಸರು ಬರುತ್ತಿದ್ದಂತೆ ರುದ್ರಗೌಡ ಪಾಟೀಲ್ ಪೊಲೀಸರನ್ನೇ ತಳ್ಳಿ ತಪ್ಪಿಸಿಕೊಂಡು ಪರಾರಿಯಾಗಿದ್ದನು. https://kannadanewsnow.com/kannada/good-news-for-job-seekers-udyoga-mela-organized-in-shimoga-on-january-24/ https://kannadanewsnow.com/kannada/good-news-for-farmers-applications-invited-for-irrigation-facility-under-ganga-kalyan-yojana/

Read More