Author: kannadanewslive

ಬೆಂಗಳೂರು : ಶೀಘ್ರದಲ್ಲಿಯೇ 2000 ಪ್ರೌಢಶಾಲಾ ಶಿಕ್ಷಕರು ಹಾಗೂ 750 ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕ್ರಮವಹಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ನಿನ್ನೆ ನಡೆದ 74 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಚಿವ ನಾಗೇಶ್ ಧ್ವಜಾರೋಹಣ ಮಾಡಿ ನಂತರ ಮಾತನಾಡಿದರು. ಶೀಘ್ರದಲ್ಲಿಯೇ 2000 ಪ್ರೌಢಶಾಲಾ ಶಿಕ್ಷಕರು ಹಾಗೂ 750 ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕ್ರಮವಹಿಸಲಾಗುತ್ತದೆ ಎಂದರು. ರಾಜ್ಯದಲ್ಲಿ ಎಲ್ಲೆಲ್ಲಿ ಶಿಕ್ಷಕರ ಕೊರತೆ ಇದೆಯೋ ಅಂತಹ ಎಲ್ಲ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ..ಎಲ್ಲ ಶಾಲೆಗಳಲ್ಲಿ ಹೆಚ್ಚು ವರ್ಷಗಳ ಕಾಲ ಅನುಭವ ಇರುವಂತಹ ಶಿಕ್ಷಕರನ್ನು ಅತಿಥಿ ಶಿಕ್ಷಕರಾಗಿ ನಿಯೋಜನೆ ಮಾಡಿಕೊಳ್ಳಲಾಗುತ್ತದೆ ಎಂದರು. ನಿನ್ನೆ ಕೊಡಗಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷರಾದ…

Read More

ನವದೆಹಲಿ : ಬ್ಯಾಂಕ್ ಯೂನಿಯನ್ಸ್ ಜನವರಿ 30 ರಿಂದ ಎರಡು ದಿನಗಳ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ. ಶುಕ್ರವಾರ ಒಕ್ಕೂಟಗಳೊಂದಿಗೆ ಮತ್ತೊಂದು ಸುತ್ತಿನ ಸಂಧಾನ ಸಭೆ ನಡೆಯಲಿದ್ದು, ಆಗ ಬ್ಯಾಂಕ್ ಮುಷ್ಕರದ ಬಗ್ಗೆ ಫೈನಲ್ ಆಗಲಿದೆ. ಜನವರಿ 30-31 ರಂದು 2 ದಿನ ಮುಷ್ಕರ ನಡೆಯಲಿದೆ ಎನ್ನಲಾಗಿದ್ದು, ಇನ್ನೂ ಕೂಡ ನಿರ್ಧಾರ ಅಂತಿಮವಾಗಿಲ್ಲ.ಸುಮಾರು 42 ಕೋಟಿ ಖಾತೆದಾರರನ್ನು ಹೊಂದಿರುವ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಷ್ಕರದಿಂದಾಗಿ ತನ್ನ ಶಾಖೆಗಳಲ್ಲಿ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ. “ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮುಷ್ಕರದ ನೋಟಿಸ್ ನೀಡಿದೆ ಎಂದು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಹೇಳಿದೆ. ಯುಎಫ್ಬಿಯುನ ಘಟಕ ಒಕ್ಕೂಟಗಳಾದ AIBEA, AIBOC, NCBE, AIBOA, BEFI, INBEF and INBOC ಸದಸ್ಯರು ತಮ್ಮ ಬೇಡಿಕೆಗಳನ್ನು ಬೆಂಬಲಿಸಿ 2023 ರ ಜನವರಿ 30 ಮತ್ತು 31 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ…

Read More

ಬೆಂಗಳೂರು : 74ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ನಿನ್ನೆ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮ ಪುರಸ್ಕೃತರನ್ನ ಘೋಷಿಸಿದ್ದು, ಮಾಜಿ ಸಿಎಂ ಎಸ್. ಎಂ ಕೃಷ್ಣರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಕುರಿತು ಎಸ್ ಎಂ ಕೃಷ್ಣ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿಯವರಿಗೆ ಹಾಗೂ ಗೃಹ ಸಚಿವರಿಗೆ ಋಣಿಯಾಗಿದ್ದೇನೆ, ನನಗೆ ಬಹಳ ಸಂತೋಷವಾಗಿದೆ, ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. ನಾನು ರಾಜಕೀಯ ನಿವೃತ್ತಿ ಜೀವನ ಆರಂಭ ಮಾಡುತ್ತಿರುವ ಘಟ್ಟದಲ್ಲಿ ನನಗೆ ಈ ಪ್ರಶಸ್ತಿ ಬಂದಿರುವುದು ಬಯಸದೇ ಬಂದ ಭಾಗ್ಯವಾಗಿದೆ. ಪದ್ಮ ವಿಭೂಷಣ ಘೋಷಣೆಯಾಗಿರುವುದಕ್ಕೆ ಬಹಳ ಸಂತೋಷ ಆಗಿದೆ. . ಈ ಪ್ರಶಸ್ತಿಯನ್ನು ಕಳೆದ 6 ದಶಕದಲ್ಲಿ ನನಗೆ ಬೆಂಬಲಿಸಿದ 7 ಕೋಟಿ ಕನ್ನಡಿಗರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು. ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮ ಪುರಸ್ಕೃತರನ್ನ ಘೋಷಿಸಿದ್ದು ಕನ್ನಡಿಗರಾದ ಸುಧಾ ಮೂರ್ತಿ, ಎಸ್. ಎಂ ಕೃಷ್ಣ, ಎಸ್.ಎಲ್ ಬೈರಲ್, ಉಮ್ಮಥಾಟ್ ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯ, ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿ ವೆಂಕಟಪ್ಪ ಸೇರಿ 106 ಸಾಧಕರು ಸೇರಿದ್ದಾರೆ.…

Read More

ಬೆಂಗಳೂರು : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು 2022-23ನೇ ಸಾಲಿನ “ಆಧಾರ” ಯೋಜನೆಯಡಿ 1.00 ಲಕ್ಷ ರೂ. ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದರಲ್ಲಿ 50% ಸಬ್ಸಿಡಿಯನ್ನು ಇಲಾಖೆಯು ಭರಿಸಲಿದ್ದು, ಈ ಹಿಂದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಎಲ್ಲಾ ವಿಕಲಚೇತರು ಹಾಗೂ ಅರ್ಹ ವಿಕಲಚೇತನರು ಕೆಳಕಂಡ ಅಗತ್ಯ ದಾಖಲಾತಿಗಳೊಂದಿಗೆ 2023ರ ಫೆಬ್ರವರಿ 04 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಜಿಲ್ಲೆಯಲ್ಲಿ ಕೆಲವು ವಿಕಲಚೇತನರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿರುವುದು ಕಂಡು ಬಂದಿರುತ್ತದೆ. ಆದರೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ವಿಲೇ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗುತ್ತಿರುವ ಹಾಗೂ ಆರ್ಥಿಕ ವರ್ಷ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ವಿಲೇ ಮಾಡಲು ಸಮಯದ ಅಭಾವವಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಭೌತಿಕವಾಗಿ (ಆಫ್‌ಲೈನ್) ವಿಲೇ ಮಾಡಲಾಗುವುದು. ಫಲಾನುಭವಿಗಳಿಗೆ ಇರಬೇಕಾದ ಅರ್ಹತೆಗಳು : ಫಲಾನುಭವಿಗೆ ಶೇ.40 ಅಥವಾ ಅದಕ್ಕಿಂತ ಹೆಚ್ಚು ಅಂಗವಿಕಲತೆ ಇರತಕ್ಕದ್ದು, ಅರ್ಜಿದಾರರ…

Read More

ಮೈಸೂರು :  ಮೈಸೂರಿನ ಭಾಗದ ಸಾರ್ವಜನಿಕರಿಗೆ ಭೀತಿಯನ್ನುಂಟು ಮಾಡಿದ್ದ, ನರಭಕ್ಷಕ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿದು, ಸಾರ್ವಜನಿಕರ ನೆಮ್ಮದಿಗೆ ಕಾರಣರಾದ ಅರಣ್ಯ ಅಧಿಕಾರಿಗಳ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.  ರಾಜ್ಯದಲ್ಲಿ ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಚಿರತೆ ಕಾರ್ಯಪಡೆಯನ್ನು ರಚಿಸಿ, ಇಂದೇ ಸರಕಾರಿ ಆದೇಶ ಹೊರಡಿಸಲಾಗುವುದು. . ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿದು, ಸಾರ್ವಜನಿಕರ ನೆಮ್ಮದಿಗೆ ಕಾರಣರಾದ ಅರಣ್ಯ ಅಧಿಕಾರಿಗಳ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. https://twitter.com/BSBommai/status/1618514043446374401 https://kannadanewsnow.com/kannada/backward-category-students-note-last-date-for-applying-for-pupil-scholarship-is-31-jan/

Read More

ಬೆಂಗಳೂರು : ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2022-23 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಈ ಹಿಂದೆ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ವಿದ್ಯಾರ್ಥಿಗಳ ಹಿತದೃಷ್ಟಿ ಹಿನ್ನೆಲೆ ಅರ್ಜಿ ಸಲ್ಲಿಸುವ ಅವಧಿಯನ್ನು 31:01:2023 ರವರೆಗೆ ವಿಸ್ತರಿಸಿ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಲಾಗಿದೆ. ಜ.31 ರವರೆಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೆಟ್ರಿಕ್-ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಮತ್ತು ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್ ವಿಳಾಸ ಹಾಗೂ ಹೆಚ್ಚಿನ ಮಾಹಿತಿಗಾಗಿ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಸಂಬಂಧಿಸಿದ ಹಾಗೂ ಸರ್ಕಾರಿ…

Read More

ಚಾಮರಾಜನಗರ : ತಮ್ಮನ್ನು ತಾವು ಮಾರಿಕೊಂಡು ಸಚಿವ ಸುಧಾಕರ್ ಹೋದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ಚಾಮರಾಜನಗರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿ ಸಚಿವ ಸುಧಾಕರ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಸುಳ್ಳಿನ ಸಾಮ್ರಾಟ ಸುಧಾಕರ್ ಆಲಿಬಾಬಾ ಮತ್ತು 40 ಜನ ಕಳ್ಳರ ತಂಡದ ಸದಸ್ಯ, ತನ್ನನ್ನು ತಾನು ಮಾರುಕೊಂಡು ನಮ್ಮ ಪಕ್ಷ ಬಿಟ್ಟು ಹೋದ ಅಸಾಮಿ ಈತ ಎಂದಿದ್ದಾರೆ. ಸಚಿವ ಸುಧಾಕರ್ ಹಾಗೂ ಸುರೇಶ್ ಕುಮಾರ್ ಚಾಮರಾಜನರ ಆಕ್ಸಿಜನ್ ದುರಂತದಲ್ಲಿ 36 ಜನರು ಸತ್ತರೂ, ಮೂರೇ ಜನ ಸತ್ತಿದ್ದು ಎಂದು ಹೇಳಿದವರು. ಹೆಣದ ಮೇಲೆ ರಾಜಕೀಯ ಮಾಡುವ ದುಷ್ಟರು ಇವರು ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ಇವರ ಮನೆ ಹಾಳಾಗ ಎಲ್ಲದಕ್ಕೂ ಜಿಎಸ್ ಟಿ ಹೇರಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಬಿಜೆಪಿಯವರು ಎಲ್ಲದಕ್ಕೂ ಜಿಎಸ್ಟಿ ಹೇರಿದ್ದಾರೆ, ಬಡವರ ರಕ್ತ ಹೀರುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಯವರು ಎಲ್ಲದರ ಬೆಲೆ…

Read More

ಚಿತ್ರದುರ್ಗ : ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರುದ್ರಮ್ಮನಹಳ್ಳಿ ಬಳಿ ನಡೆದಿದೆ. ಮೃತರನ್ನು ಹಿರಿಯಮ್ಮನಹಳ್ಳಿ ನಿವಾಸಿ ಓಬಯ್ಯ(52) ಎಂದು ಗುರುತಿಸಲಾಗಿದೆ. ಹಾಗೂ ಮೃತರ ಪುತ್ರಿ ಹಾಗೂ ಮೊಮ್ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/sacred-portals-of-badrinath-in-uttarakhand-to-open-on-april-27/ https://kannadanewsnow.com/kannada/tomorrow-there-will-be-power-outage-in-these-areas-of-shimoga-district-power-cut/

Read More

ಬೆಂಗಳೂರು   : ಸ್ಯಾಂಟ್ರೋ ರವಿಯ ವಿರುದ್ಧ ಪತ್ನಿಯ ದೂರಿನ ಹೊರತಾಗಿ ಸರ್ಕಾರ ಅಕ್ರಮ ವರ್ಗಾವಣೆ ಕುರಿತಾಗಿ ಪ್ರಕರಣ ದಾಖಲಿಸಲಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ಸಿಐಡಿ ಅಧಿಕಾರಿಗಳಿಗೆ PSI ಹಗರಣದ ಆರೋಪಿ 76 ಲಕ್ಷ ನೀಡಿರುವ ಸಂಗತಿ ಹೊರಹಾಕಿದರೂ ನ್ಯಾಯಾಂಗ ತನಿಖೆಗೆ ವಹಿಸಲಿಲ್ಲ ಸಿಎಂ ಬೊಮ್ಮಾಯಿ, ಅವರು “ಭ್ರಷ್ಟಾಚಾರದ ಮಹಾಪೋಷಕ” ಅಲ್ಲದೆ ಇನ್ನೇನು? ಸ್ಯಾಂಟ್ರೋ ರವಿಯ ವಿರುದ್ಧ ಪತ್ನಿಯ ದೂರಿನ ಹೊರತಾಗಿ ಸರ್ಕಾರ ಅಕ್ರಮ ವರ್ಗಾವಣೆ ಕುರಿತಾಗಿ ಪ್ರಕರಣ ದಾಖಲಿಸಲಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ಬಿಜೆಪಿ ಕಚ್ಚಾಟವು ಅಕ್ಷರಶಃ ಬೀದಿ ಕಾಳಗವಾಗಿ ಪರಿಣಮಿಸಿದೆ. ಹಾಸನದಲ್ಲಿ ಬಿಜೆಪಿ ಮುಖಂಡ ಬಿಜೆಪಿ ಕಾರ್ಯಕರ್ತನನ್ನೇ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಅದೇನೋ ಚಪ್ಪಲಿ, ಸಭೆ ಎನ್ನುತ್ತಿದ್ದ ಕಟೀಲ್ ಅವರೇ, ನಿಮ್ಮವರು ಹಾದಿ ಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿರುವುದೋ ಅಥವಾ ಮುದ್ದಾಡಿಕೊಳ್ಳುತ್ತಿರುವುದೋ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. https://twitter.com/INCKarnataka/status/1618596144061501444 https://kannadanewsnow.com/kannada/j-bjp-chanakya-amit-shah-arrival-in-the-state-on-28-amith-shah/ https://kannadanewsnow.com/kannada/tomorrow-there-will-be-power-outage-in-these-areas-of-shimoga-district-power-cut/

Read More

ಶಿವಮೊಗ್ಗ: ವಿವಿಧ ವಿದ್ಯುತ್ ಕಾಮಗಾರಿ ನಿರ್ವಹಣೆ ಹಿನ್ನಲೆಯಲ್ಲಿ, ಜನವರಿ 27 ಮತ್ತು 28ರಂದು ಶಿವಮೊಗ್ಗ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮೆಸ್ಕಾಂ ( MESCOM ) ಮಾಹಿತಿ ನೀಡಿದ್ದು, ನಗರ ಉಪವಿಭಾಗ-2 ರ ಘಟಕ-5 ಮತ್ತು 6 ರ ವ್ಯಾಪ್ತಿಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಕೆಲಸ ಇರುವ ಕಾರಣ ಎಂಎಫ್-2 ಗೋಪಿಶೆಟ್ಟಿಕೊಪ್ಪ 11 ಕೆವಿ ಮಾರ್ಗದಲ್ಲಿ ಜ.27 ರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಇಲಿಯಾಜ್ ನಗರ, ತುಂಗಾನಗರ, ಮಲ್ಲಿಕಾರ್ಜುನ ಬಡಾವಣೆ, ಗೋಪಿಶೆಟ್ಟಿಕೊಪ್ಪ, ಖಾಜಿನ ನಗರ, 100 ಅಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ( Power Cut ) ಎಂದಿದೆ. ಇನ್ನೂ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-5 ರಲ್ಲಿ ಜ.28 ರಂದು ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್…

Read More