Author: kannadanewslive

ಬೆಂಗಳೂರು : ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ದಿ: 27.01.2023 & 28.01.2023 ರಂದು ವಿಜ್ಞಾನ ಮೇಳ ಆಯೋಜಿಸಲಾಗಿದ್ದು, ಇಂದು ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ( ಕ್ರೈಸ್ ) 830 ವಸತಿ ಶಾಲೆಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವ್ಯಾಪ್ತಿಯ 326 ಶಾಲೆಗಳು ಸೇರಿದಂತೆ ಒಟ್ಟು 1156 ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಠಿಕೋನ, ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು, ಮತ್ತು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ರಾಜ್ಯ ಮಟ್ಟದ ವಿಜ್ಞಾನ ಮೇಳವನ್ನು(Science Exhibition) ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ದಿ: 27.01.2023 & 28.01.2023 ರಂದು ಆಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ, ವಿದ್ಯಾರ್ಥಿಗಳ ಸುಪ್ತಚೇತನದಲ್ಲಿರುವ ವೈಜ್ಞಾನಿಕ ಮನೋಭವಾವನೆ, ಪ್ರತಿಭೆಯನ್ನು ಪ್ರೋತ್ಸಾಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಚಿವರುಗಳು, ಶಾಸಕರುಗಳು, ಸಂಸದರು…

Read More

ಬೆಂಗಳೂರು : ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಅಂಬುಲೆನ್ಸ್ನಲ್ಲಿ ತೆರಳುತ್ತಿರುವ ವೇಳೆ ಅಪಘಾತ ಸಂಭವಿಸಿ ರೋಗಿ ಮೃತಪಟ್ಟರೆ ವಿಮಾ ಕಂಪನಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ತರದ ಆದೇಶ ಹೊರಡಿಸಿದೆ.  ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ತರದ ಆದೇಶ ಹೊರಡಿಸಿದೆ. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಅಂಬುಲೆನ್ಸ್ನಲ್ಲಿ ತೆರಳುತ್ತಿರುವ ವೇಳೆ ಅಪಘಾತ ಸಂಭವಿಸಿ ರೋಗಿ ಸಾವನ್ನಪ್ಪಿದ್ದರೆ ವಿಮಾ ಕಂಪನಿ ಪರಿಹಾರ ನೀಡಬೇಕು, ಆ ಪರಿಹಾರದ ಹಣವನ್ನು ಮೃತನ ಕುಟುಂಬದವರಿಗೆ ನೀಡಬೇಕು  ಎಂದು ವಿಮಾ ಕಂಪನಿಗೆ ಹೈಕೋರ್ಟ್ ಆದೇಶಿಸಿದೆ ಏನಿದು ಘಟನೆ ಚಿಕ್ಕಮಗಳೂರಿನ ಕಬ್ಬಿನಹಳ್ಳಿ ಗ್ರಾಮದ ನಿವಾಸಿ ರವಿ ಎಂಬುವವರು  ಜಾಂಡೀಸ್ ಕಾಯಿಲೆಗೆ ತುತ್ತಾಗಿದ್ದರು. ಈ ಹಿನ್ನೆಲೆ ಚಿಕಿತ್ಸೆ ಕೊಡಿಸಲು ಅವರನ್ನು 2010ರ ಏ.13ರಂದು ಹೆಚ್ಚಿನ  ಮಂಗಳೂರು ಆಸ್ಪತ್ರೆಗೆ ದಾಖಲಿಸಲು ಅಂಬ್ಯುಲೆನ್ಸ್ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಅಂಬ್ಯುಲೆನ್ಸ್  ಪಲ್ಟಿ ಹೊಡೆದಿತ್ತು.  ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರವಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಎಂಎಸಿಟಿ, ಮೃತನ ಕುಟುಂಬದವರಿಗೆ ವಾರ್ಷಿಕ…

Read More

ಚಿಕ್ಕಮಗಳೂರು : ಬೈಕ್ ನಲ್ಲಿ ಹೋಗುತ್ತಿದ್ದವರ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ಮತ್ತಿಕಟ್ಟೆ ರಸ್ತೆಯಲ್ಲಿ ನಡೆದಿದೆ. ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ್ದು, ಬೈಕ್ ಸವಾರರರಾದ ದಿಲೀಪ್ ಮತ್ತು ಆಶಾ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರು ತಡರಾತ್ರಿ ಹೀರೋ ಹೊಂಡಾ ಬೈಕ್ ನಲ್ಲಿ ಮತ್ತಿಗಟ್ಟೆ ಸಮೀಪದ ಕಲ್ಯಾಣ ಗದ್ದೆಗೆ ತೆರಳುತ್ತಿದ್ದಾಗ ಕಾಡುಕೋಣ ಧಿಡೀರ್ ದಾಳಿ ನಡೆಸಿದೆ. ಗಾಯಾಳುಗಳನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. https://kannadanewsnow.com/kannada/actress-jamuna-no-more/ https://kannadanewsnow.com/kannada/parents-beware-increase-in-measles-in-vijayapur-district-administration-warns/

Read More

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : 60-70ರ ದಶಕದಲ್ಲಿ ಟಾಪ್ ಹೀರೋಯಿನ್ ಆಗಿದ್ದ ಹಿರಿಯ ನಟಿ ಜಮುನಾ ವಿಧಿವಶರಾಗಿದ್ದಾರೆ. ಜಮುನಾ ಅವರಿಗೆ 86 ವರ್ಷ ವಯಸ್ಸಾಗಿತ್ತು, ವರದಿಗಳ ಪ್ರಕಾರ, ಜಮುನಾ ಇಂದು ತನ್ನ ನಿವಾಸದಲ್ಲಿ ಕೊನೆಯುಸಿರೆಳೆದರು. ಜಮುನಾ ಅವರಿಗೆ ಪುತ್ರ ವಂಶಿ ಜುಲೂರಿ ಮತ್ತು ಮಗಳು ಶ್ರವಂತಿ ಇದ್ದಾರೆ. ಅವರ ಪತಿ ಜುಲೂರಿ ರಮಣ ರಾವ್ ಪ್ರಾಧ್ಯಾಪಕರಾಗಿದ್ದರು ಮತ್ತು ಅವರು 2014 ರಲ್ಲಿ ನಿಧನರಾಗಿದ್ದರು. ಜಮುನಾ ಎನ್ಟಿಆರ್, ಎಎನ್ಆರ್, ಕೃಷ್ಣ, ಶೋಭನ್ ಬಾಬು ಮತ್ತು ಇತರ ಅನೇಕ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಅವರು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನೂರಾರು ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಾಜಕೀಯದಲ್ಲೂ ಭಾಗಿಯಾಗಿದ್ದ ಜಮುನಾ ಅವರು 1980 ರಲ್ಲಿ ಕಾಂಗ್ರೆಸ್ ಸೇರಿದರು.ಮತ್ತು 1989. ರಲ್ಲಿ ರಾಜಮಂಡ್ರಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಜಮುನಾ ತೆಲುಗು ಆರ್ಟಿಸ್ಟ್ ಅಸೋಸಿಯೇಷನ್ ಸ್ಥಾಪಿಸಿದ್ದಾರೆ ಮತ್ತು ಕಳೆದ 25 ವರ್ಷಗಳಿಂದ ಅದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. https://kannadanewsnow.com/kannada/australian-open-sania-bopanna-lose-6-7-2-6/ https://kannadanewsnow.com/kannada/in-the-name-of-psi-sarasa-sallapa-dokha-for-50-women-hubli-based-fraudster-arrested/

Read More

ಬೆಂಗಳೂರು : ಮೊಟ್ಟೆ ಅಂದ್ರೆ ಯಾರಿಗೆ ಇಷ್ಟ ಹೇಳಿ.. ಅದರಲ್ಲೂ ಮೊಟ್ಟೆಯಿಂದ ತಯಾರಿಸಬಹುದಾದ ಅಮ್ಲೇಟ್, ಮೊಟ್ಟೆ ಕರ್ರಿ, ಎಗ್ ಬುರ್ಜಿ, ಎಗ್ ರೋಲ್, ಹೀಗೆ ಹೇಳ್ತಿದ್ರೆ ಬಾಯಲ್ಲಿ ನೀರೂರಿಸುವುದು ಗ್ಯಾರಂಟಿ..ಆದ್ರೆ ಇದೀಗ ಮೊಟ್ಟೆ ಪ್ರಿಯರಿಗೆ ಶಾಕ್ ಎದುರಾಗುವಂತಹ ಮಟ್ಟಕ್ಕೆ ಶರವೇಗದಲ್ಲಿ ಮೊಟ್ಟೆಯ ಬೆಲೆ ಏರಿಕೆಯಾಗುತ್ತಿದೆ. ಮೊಟ್ಟೆ ಬೆಲೆ ಏರಿಕೆಯತ್ತ ಸಾಗುತ್ತಿದ್ದು, ಸದ್ಯ ರಿಟೇಲ್ ಶಾಪ್ನಲ್ಲಿ ಒಂದು ಮೊಟ್ಟೆಗೆ 7 ರೂಪಾಯಿಗೆ ತಲುಪಿದೆ. ಕೋಳಿಗಳಿಗೆ  ನೀಡುವ ಆಹಾರದ  ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ  ಆಗಿದೆ ಎನ್ನಲಾಗಿದೆ. ಅದರಲ್ಲೂ ಬೆಂಗಳೂರಿನ ನಗರದಲ್ಲಿ ಮೊಟ್ಟೆಯ ಬೆಲೆ ಭಾರೀ ಏರಿಕೆಯಾಗುತ್ತಿದೆ. ಜನರಿಗೆ ತಿಂಗಳನಲ್ಲಿ ದರ ಕಡಿಮೆಯಾಗಿತ್ತು. ದಿನದಿಂದ ದಿನಕ್ಕೆ ಐಟಿಸಿಟಿ ಬೆಂಗಳೂರಿನಲ್ಲಿ ಬೆಲೆ ಹೆಚ್ಚಳದಿಂದಾಗಿ ಜನ ಮೊಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.ಕೋಳಿಗಳಿಗೆ ನೀಡುವ ಆಹಾರ ಹಾಗೂ ಮೊಟ್ಟೆಗಳ ರವಾನೆಗೆ ತಗುಲುವ ವೆಚ್ಚದಿಂದಾಗಿ ಗ್ರಾಹಕರಿಗೆ ದರಗಳ ಏರಿಕೆ ಬಿಸಿ ತಟ್ಟಿದೆ. ಜನವರಿಯಲ್ಲಿ 100 ಮೊಟ್ಟೆಗಳ ಬ್ಯಾಚ್ಗೆ ಸರಾಸರಿ 568.86 ರೂಪಾಯಿ ಇದೆ. ಆದರೆ 2022 ರಲ್ಲಿ…

Read More

ಬೆಳಗಾವಿ  : ‘ಪಿಎಸ್ಐ’ ಹೆಸರಲ್ಲಿ ಖದೀಮನೋರ್ವ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು ಮಹಿಳೆಯರ ಜೊತೆ ಆನ್ ಲೈನ್ ನಲ್ಲೇ ಸರಪ ಸಲ್ಲಾಪ ನಡೆಸಿ ವಂಚನೆ ಎಸಗಿದ ಘಟನೆ  ನಗರದಲ್ಲಿ  ಬೆಳಕಿಗೆ ಬಂದಿದೆ. ‘ಪಿಎಸ್ಐ’ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು 50 ಜನ ಮಹಿಳೆಯರಿಗೆ ವಂಚಿಸಲಾಗಿದೆ. ಹುಬ್ಬಳ್ಳಿ ಮೂಲದ  ವಿಜಯ ಕುಮಾರ್ ಬರಲಿ(28) ಎಂಬಾತನನ್ನು ಪೊಲೀಸರು ಹೆಡೆ ಮುರಿಕಟ್ಟಿದ್ದಾರೆ. ಆರೋಪಿ ವಿಜಯ ಕುಮಾರ್ ಬರಲಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಕಂಬಾರ್ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದನು. ಅಲ್ಲದೇ ಈ ನಕಲಿ ಖಾತೆಗೆ 1.20 ಲಕ್ಷ ಫಾಲೋವರ್ಸ್ ಗಳನ್ನು ಕೂಡ ಹೊಂದಿದ್ದ ಈ ಖತರ್ನಾಕ್ ಆರೋಪಿ. ಹೀಗೆ ನಕಲಿ ಖಾತೆ ಸೃಷ್ಟಿಸಿ ಬರೋಬ್ಬರಿ 50 ಮಹಿಳೆಯರಿಗೆ ಆಮಿಷವೊಡ್ಡಿ ನಾಲ್ಕು ಲಕ್ಷ ರೂಪಾಯಿ ಹಣ ವಂಚನೆ ಮಾಡಿದ್ದನು ಎನ್ನಲಾಗಿದೆ. ಈತ ನಕಲಿ ಖಾತೆಯನ್ನು ತೆರೆದು ಯುವತಿಯರನ್ನು ಪುಸಲಾಯಿಸಿ, ಆನ್ ಲೈನ್ ಚಾಟಿಂಗ್ ಮೂಲಕ ಸರಸ ಸಲ್ಲಾಪ ನಡೆಸಿ…

Read More

ಬೆಂಗಳೂರು : ಗೊರಕೆ ನಿಲ್ಲಿಸುವ ಟೋಪಿಗಳನ್ನು ಮಾರಾಟ ಮಾಡಿದರೆ ಹೆಚ್ಚು ಕಮಿಷನ್ ನೀಡುವುದಾಗಿ ಹೇಳಿಜನರಿಗೆ ಟೋಪಿ ಹಾಕಿ ಯಾಮಾರಿಸುತ್ತಿದ್ದ ಗ್ಯಾಂಗ್ ಒಂದು ಅಂದರ್ ಆಗಿದೆ. ಚೈನ್ ಲಿಂಕ್ ಕಂಪನಿಯೊಂದರ ಮುಖ್ಯಸ್ಥ ಸೇರಿದಂತೆ ನಾಲ್ವರನ್ನು ಹೈಗೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರದ ಮುಂಬೈ ನಗರದ ಸುನೀಲ್ ಜೋಶಿ, ಬೆಂಗಳೂರಿನ ಶೇಖ್ ಸಾದಿಕ್ ಆಲಿ, ಎನ್.ಯೋಗೇಶ್ ಹಾಗೂ ಪ್ರಮೋದ್ ಗೋಪಿನಾಥ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಖದೀಮರು ತನ್ನ ಏಜೆಂಟ್ಗಳ ಸಭೆ ಕರೆದು ಸಾರ್ವಜನಿಕರಿಂದ ಮಾಗ್ನೆಟಿಕ್ ಅಂಶವಿರುವ ಮ್ಯಾಜಿಕ್ ಟೋಪಿ ಎಂದು. ಸುಳ್ಳು ಪ್ರಚಾರ ನಡೆಸಿ ಕಿಟ್ಗಳನ್ನು ಚೈನ್ ಲಿಂಕ್ ಹೆಸರಿನ ಕಂಪನಿ ಮಾರಾಟ ಮಾಡುತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಕೂಡಲೇ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.ತಲೆಗೆ ಮ್ಯಾಗ್ನೆಟಿಕ್ ಅಂಶವಿರುವ ಟೋಪಿ ಹಾಕಿಕೊಂಡರೆ ನಿದ್ರೆ ಮಾಡುವಾಗ ಗೊರಕೆ ಬರುವುದಿಲ್ಲ. ಸುಖವಾಗಿ ನಿದ್ರೆ ಮಾಡಬಹುದು ಎಂದು ಪ್ರಚಾರ ನಡೆಸಿ 25 ಸಾವಿರಕ್ಕೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಮಿಲ್ಲರ್ ರಸ್ತೆಯ ಅಂಬೇಡ್ಕರ್ ಭವನದಲ್ಲಿ…

Read More

ಬೆಂಗಳೂರು : ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ನಿರ್ಮಾಪಕ ಪ್ರಕಾಶ್ ನ ನ್ನು ಅಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಶಬಾಷ್ ಬಡ್ಡಿ ಮಗನೇ ಸಿನಿಮಾದ ನಿರ್ಮಾಪಕ ಪ್ರಕಾಶ್ ಬಂಧನವಾಗಿದೆ.. ಇದೀಗ ವಂಚನೆ ಕೇಸ್ ನಲ್ಲಿ ನಿರ್ಮಾಪಕನ ಬಂಧನವಾಗಿದೆ. ಕೆಎಂಎಫ್ ನಲ್ಲಿ 20 ಲಕ್ಷಕ್ಕೆ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಚಿಕ್ಕಬಳ್ಳಾಪುರ ಮೂಲದ ಚರಣ್ ಎಂಬುವವರಿಂದ ಮುಂಗಡವಾಗಿ 10 ಲಕ್ಷ ಹಣ ಪಡೆದಿದ್ದರು. ಕಳೆದ ಡಿಸೆಂಬರ್ ನಲ್ಲಿ  ಕೆಎಂಎಫ್ ನಲ್ಲಿ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆ ನಡೆದಿತ್ತು. ಕೆಎಂಎಫ್ ನಿರ್ದೇಶಕರ ಸರ್ಕಾರಿ ಲಾಂಛನ ನಕಲು ಮಾಡಿ ಈತ ಹುದ್ದೆಯ ಆದೇಶದ ಪ್ರತಿ ನೀಡುತ್ತಿದ್ದನು. ಸದ್ಯ ಚರಣ್ ನೀಡಿದ ದೂರಿನ ಮೇರೆಗೆ ಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/if-a-couple-makes-such-a-mistake-in-the-family-the-family-will-be-ruined-wake-up-as-soon-as-possible/ https://kannadanewsnow.com/kannada/congress-prajadhwani-samavesh-today-in-jds-stronghold-mandya/

Read More

ಬೆಂಗಳೂರು :  ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ನಿರ್ಮಾಪಕ ಪ್ರಕಾಶ್ ನ ನ್ನು ಅಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.  ನಟ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ  ಶಬಾಷ್ ಬಡ್ಡಿ ಮಗನೇ  ಸಿನಿಮಾದ ನಿರ್ಮಾಪಕ ಪ್ರಕಾಶ್ ಬಂಧನವಾಗಿದೆ.. ಇದೀಗ ವಂಚನೆ ಕೇಸ್ ನಲ್ಲಿ ನಿರ್ಮಾಪಕನ ಬಂಧನವಾಗಿದೆ. ಕೆಎಂಎಫ್ ನಲ್ಲಿ 20 ಲಕ್ಷಕ್ಕೆ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಚಿಕ್ಕಬಳ್ಳಾಪುರ ಮೂಲದ ಚರಣ್ ಎಂಬುವವರಿಂದ ಮುಂಗಡವಾಗಿ 10 ಲಕ್ಷ ಹಣ ಪಡೆದಿದ್ದರು. ಕಳೆದ ಡಿಸೆಂಬರ್ ನಲ್ಲಿ ಕೆಎಂಎಫ್ ನಲ್ಲಿ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆ ನಡೆದಿತ್ತು. ಕೆಎಂಎಫ್  ನಿರ್ದೇಶಕರ ಸರ್ಕಾರಿ ಲಾಂಛನ ನಕಲು ಮಾಡಿ ಈತ ಹುದ್ದೆಯ ಆದೇಶದ ಪ್ರತಿ ನೀಡುತ್ತಿದ್ದನು. ಸದ್ಯ ಚರಣ್ ನೀಡಿದ ದೂರಿನ ಮೇರೆಗೆ ಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/hampi-utsav-from-today-cm-bommai-to-launch-at-530-pm/ https://kannadanewsnow.com/kannada/congress-prajadhwani-samavesh-today-in-jds-stronghold-mandya/

Read More

ಮಂಡ್ಯ : ಜೆಡಿಎಸ್ ನ ಭದ್ರಕೋಟೆ ಮಂಡ್ಯದಲ್ಲಿ ಕಾಂಗ್ರೆಸ್ ಚುನಾವಣಾ ರಣಕಹಳೆ ಮೊಳಗಿಸಲಿದೆ. ಹೌದು, ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಇಂದು ಮಂಡ್ಯದತ್ತ ಸಾಗಲಿದೆ. ಮಂಡ್ಯದಲ್ಲಿ ಇಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು, ಮಂಡ್ಯದಲ್ಲಿ ಗೆಲ್ಲಲು ಕಾಂಗ್ರೆಸ್ ಭರ್ಜರಿ ಸಮಾವೇಶ ನಡೆಸಲಿದೆ. ಯಾತ್ರೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ರಣದೀಪ್ ಸುರ್ಜೆವಾಲಾ, ಬಿ.ಕೆ ಹರಿಪ್ರಸಾದ್, ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಚೆಲುವರಾಯಸ್ವಾಮಿ ಸೇರಿ ಹಲವರು ಭಾಗಿಯಾಗಲಿದ್ದಾರೆ. ಜೆಡಿಎಸ್ ನ ಭದ್ರಕೋಟೆ ಎನಿಸಿರುವ ಮಂಡ್ಯಕ್ಕೆ ನುಗ್ಗಿ ಕಾಂಗ್ರೆಸ್ ಇಂದು ಭರ್ಜರಿ ಸಮಾವೇಶ ನಡೆಸಲಿದೆ. ಸಮಾವೇಶದಲ್ಲಿ ಸಿದ್ದರಾಮಯ್ಯ, ಡಿಕೆಶಿ, ಸುರ್ಜೆವಾಲಾ ಮಂಡ್ಯ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಹಲವು ಕೊಡುಗೆಗಳ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ. https://kannadanewsnow.com/kannada/nighttime-nitrate-radical-production-in-china-and-india-could-be-silent-killers-study/ https://kannadanewsnow.com/kannada/hampi-utsav-from-today-cm-bommai-to-launch-at-530-pm/

Read More