Author: kannadanewslive

ಶಿವಮೊಗ್ಗ : ಶಿವಮೊಗ್ಗದ ತ್ಯಾವರೆಚಟ್ನಹಳ್ಳಿ ವಿ ವಿ ಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ಕಾರಣ ಕೆಳಕಂಡ ಪ್ರದೇಶದಲ್ಲಿ ಮಾ.28 ರ ಬೆಳಿಗ್ಗೆ 09-30 ರಿಂದ ಸಂಜೆ 05-00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕುವೆಂಪುನಗರ, ಎನ್.ಇ.ಎಸ್. ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಬಡಾವಣೆ, ಇಂದಿರಾಗಾಂಧಿ ಬಡಾವಣೆ, ಜ್ಯೋತಿನಗರ, ಜೆ.ಎನ್.ಎನ್.ಸಿ.ಕಾಲೇಜು, ಪರ್ಪೇಕ್ಟ್ ಅಲಾಯಿ ಪ್ಯಾಕ್ಟರಿ, ರೆಡ್ಡಿ ಬಡಾವಣೆ, ಶಾಂತಿನಗರ, ಹೊನ್ನಾಳಿರಸ್ತೆ, ತ್ಯಾವರೆಚಟ್ನಹಳ್ಳಿ, ಯು.ಜಿ.ಡಿ., ಶೇಷಾದ್ರಿಪುರಂ, ಲಕ್ಷ್ಮೀ ವೆಂಕಂಟೇಶ್ವರ ಸಾಮಿಲ್, ತ್ರೀಮೂರ್ತಿನಗರ, ನವುಲೆ, ಅಶ್ವಥ್ನಗರ, ಎಲ್.ಬಿ.ಎಸ್.ನಗರ, ಕೀರ್ತಿನಗರ, ಬಸವೇಶ್ವರನಗರ, ಕೃಷಿನಗರ, ದಡ್ಡರಹಳ್ಳಿ, ತರಳಬಾಳು ಬಡಾವಣೆ, ಸೇವಾಲಾಲ್ನಗರ, ಡಾಲರ್ಸ್ ಕಾಲೋನಿ, ಪವನಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ವಿಶ್ವರಂಗಭೂಮಿ ರಂಗೋತ್ಸವ-2023 ಶಿವಮೊಗ್ಗ : ಶಿವಮೊಗ್ಗ ರಂಗಾಯಣವು ರಂಗಭೂಮಿ ದಿನಾಚರಣೆಯ ಪ್ರಯುಕ್ತ ಮಾ.27 ರಂದು ಶಿವಮೊಗ್ಗ ನಗರದ ಸುವರ್ಣ ಸಾಂಸ್ಕತಿಕ ಭವನದಲ್ಲಿ ಸಂಜೆ 06 ಗಂಟೆಗೆ ಪೂರ್ವರಂಗದಲ್ಲಿ ರೆಪರ್ಟರಿ ಕಲಾವಿದರಿಂದ ರಂಗಸಂಗೀತ ಕಾರ್ಯಕ್ರಮ ನಡೆಯಲಿದೆ. ರಂಗಾಯಣ ಶಿವಮೊಗ್ಗವು…

Read More

ಬೆಂಗಳೂರು : ಇಂದು ಬಸವೇಶ್ವರ ಹಾಗೂ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಾಗಿದೆ. ಇದು ಕರ್ನಾಟಕ ವಿಧಾನಸಭೆಗೆ ವಿಶೇಷ ದಿನ ಎಂದು ಕೇಂದ್ರ ಸಚಿವ ಅಮಿತ್ ಶಾ  ( Amith Sha ) ಹೇಳಿದ್ದಾರೆ. ಇಂದು 2 ನೇ ದಿನದ ಬೆಂಗಳೂರು ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾದ ಅಮಿತ್ ಶಾ ನಂತರ ಮಾತನಾಡಿದ್ದಾರೆ. ಇಂದು ಮಹನೀಯರಾದ ಬಸವೇಶ್ವರ ಹಾಗೂ ಕೆಂಪೇಗೌಡರ ಪ್ರತಿಮೆ ಅನಾವರಣವಾಗಿದೆ. ಕರ್ನಾಟಕದ ವಿಧಾನಸಭೆಗೆ ಇದು ವಿಶೇಷ ದಿನ. ಮಹಾಪುರುಷರು ಜಗತ್ತಿಗೆ ಮಹಾನ್ ಸಂದೇಶ ರವಾನಿಸಿದ್ದಾರೆ. ಉತ್ತಮ ಆಡಳಿತಗಾರ ಕೆಂಪೇಗೌಡರು ಹಾಗೂ ಮಹನೀಯರಾದ ಬಸವೇಶ್ವರರು ನಾಡಿಗೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ಪ್ರತಿಮೆ ಅನಾವರಣ ಮಾಡಿದ್ದು, ಬಹಳ ಸಂತೋಷವಾಗಿದೆ. ಭಾರತದಲ್ಲೇ ಪ್ರಜಾಪ್ರಭುತ್ವ ಹುಟ್ಟಿದ್ದು ಎಂಬ ಸಂದೇಶ ಸಾರಲಾಗಿದೆ. ಇದು ಕರ್ನಾಟಕ ವಿಧಾನಸಭೆಗೆ ವಿಶೇಷ ದಿನ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಇಂದು ವಿಧಾನಸೌಧದ ಮುಂಭಾಗ ಬಸವೇಶ್ವರ, ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ್ದಾರೆ. ವಿಧಾನಸಭೆ ಚುನಾವಣೆ ಬೆನ್ನಲ್ಲೇ…

Read More

ಬೆಂಗಳೂರು : ನಾಳೆ ಸಂಜೆ 5:30 ಕ್ಕೆ ರೇಸ್ ಕೋರ್ಸ್ ರಸ್ತೆಗೆ ನಟ ಅಂಬರೀಷ್ ಹೆಸರು ನಾಮಕರಣ ಮಾಡಲಾಗುತ್ತದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್ ಹೇಳಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಭಾ.ಮ ಹರೀಶ್ ನಾಳೆ ಸಂಜೆ 5:30 ಕ್ಕೆ ಸಿಎಂ ಬೊಮ್ಮಾಯಿ ಅವರು ರೇಸ್ ಕೋರ್ಸ್ ರಸ್ತೆಗೆ ನಟ ಅಂಬರೀಷ್ ಹೆಸರು ನಾಮಕರಣ ಮಾಡಲಿದ್ದಾರೆ. ಬಳಿಕ ನಟ ಅಂಬರೀಷ್ ಸ್ಮಾರಕವನ್ನು ಸಿಎಂ ಬೊಮ್ಮಾಯಿ ಲೋಕಾರ್ಪಣೆಗೊಳಿಸಲಿದ್ದಾರೆ, ಇದು ನಮ್ಮೆಲ್ಲರಿಗೆ ಬಹಳ ಸಂತೋಷದ ವಿಷಯ ಎಂದು ಎಂದು ಭಾ.ಮ ಹರೀಶ್ ಹೇಳಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅಂಬರೀಶ್ ಅವರ ಹೆಸರನ್ನು ರೇಸ್ ಕೋರ್ಸ್ ರಸ್ತೆಗೆ ಇಡುವಂತೆ ಸರಕಾರಕ್ಕೆ ಮನವಿ ಮಾಡಿತ್ತು. ಮಂಡಳಿಯ ಮನವಿಗೆ ಸ್ಪಂದಿಸಿರುವ ಸರಕಾರ ಇದೇ ವಾರದಲ್ಲೇ ಹೆಸರು ಇಡುವ ಒಪ್ಪಿಗೆ ಕೂಡ ನೀಡಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್ ಇತ್ತೀಚೆಗೆ ತಿಳಿಸಿದ್ದರು. ಈ ಮೂಲಕ ಹಲವು ದಿನಗಳ ಅಭಿಮಾನಿಗಳ ಬೇಡಿಕೆ…

Read More

ಬೆಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿಯನ್ನು ಮರುಸ್ಥಾಪಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ ಒಬಿಸಿ ಪಟ್ಟಿಯಲ್ಲಿ 2 ಬಿ ವರ್ಗದ ಅಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಡಿಕೆಶಿ ಖಂಡಿಸಿದ್ದಾರೆ. ಅಲ್ಪಸಂಖ್ಯಾತರ ಹಕ್ಕು , ಅವರ ಶೇಕಡ ನಾಲ್ಕನ್ನು ರದ್ದುಪಡಿಸಿ ಇತರ ಸಮುದಾಯಗಳಿಗೆ ಕೊಡುವುದನ್ನು ನಾವು ಬಯಸೋಲ್ಲ, ಅಲ್ಪಸಂಖ್ಯಾತ ಸಮಯದಾಯದ ಸದಸ್ಯರು ನಮ್ಮ ಸಹೋದರರು ಹಾಗೂ ಕುಟುಂಬದವರಿದ್ದಂತೆ ಮುಂದಿನ 45 ದಿನದಲ್ಲಿ ಅಧಿಕಾರಕ್ಕೆ ಬರುತ್ತೇವೆ, ಅಧಿಕಾರಕ್ಕೆ ಬಂದು ಮುಸ್ಲಿಮರ ಮೀಸಲಾತಿಯನ್ನು ಮರುಸ್ಥಾಪಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.  420 ಬೊಮ್ಮಾಯಿ ಸರ್ಕಾರ 420 ಬೊಮ್ಮಾಯಿ ಸರ್ಕಾರದಿಂದ ಮೀಸಲಾತಿ ವಿಚಾರದಲ್ಲಿ ರಾಜ್ಯದ ಜನರಿಗೆ ವಂಚನೆ ಮಾಡಿದೆ. ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆಯಾಗಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಡಗು ಸೋಲಿನ ಸುಳಿಗೆ…

Read More

ಮೈಸೂರು : ‘ಜೆಡಿಎಸ್’ ಅಧಿಕಾರಕ್ಕೆ ಬಂದ್ರೆ ರಾಜ್ಯದ ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಮೈಸೂರು ತಾಲೂಕಿನ ಉತ್ತನಹಳ್ಳಿ ಬಳಿ ಜೆಡಿಎಸ್ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾತನಾಡಿದರು.‘ಜೆಡಿಎಸ್’ ಅಧಿಕಾರಕ್ಕೆ ಬಂದ್ರೆ ರಾಜ್ಯದ ಜನರ ಆರೋಗ್ಯ ವೆಚ್ಚವನ್ನ ನಾವೇ ಭರಿಸುತ್ತೇವೆ, ಈ ಬಗ್ಗೆ ಕೂಡ ನಿರ್ಧರಿಸಲಾಗಿದೆ ಎಂದು ಮಾಜಿ ಸಿಎಂ ಘೋಷಣೆ ಮಾಡಿದ್ದಾರೆ. ಅದೇ ರೀತಿ ಕಿಡ್ನಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮಾಡುತ್ತೇವೆ, ಬಡವರ ಮಕ್ಕಳಿಗೆ ಶ್ರೀಮಂತರ ಮಕ್ಕಳ ಹಾಗೆ ಸಮಾನವಾದ ಶಿಕ್ಷಣ ನೀಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ದಿನದಿಂದ ದಿನಕ್ಕೆ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಬಿಜೆಪಿ ಸರ್ಕಾರ ಜನರಿಗೆ ಏನೂ ಮಾಡಿಲ್ಲ ಎಂದು ಕಿಡಿಕಾರಿದರು. 90 ದಿನ ಪಂಚರತ್ನ ಯಾತ್ರೆ ನಡೆದಿದೆ. ಈ ಬಾರಿ ಜೆಡಿಎಸ್ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರಲಿದೆ ಎಂದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ…

Read More

ಮೈಸೂರು : ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರು ತಾಲೂಕಿನ ಉತ್ತನಹಳ್ಳಿ ಬಳಿ ಜೆಡಿಎಸ್ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾತನಾಡಿದರು. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ, ನನ್ನ ರಾಜಕೀಯ ಬೆಳವಣಿಗೆಗೆ ಮಂಡ್ಯ, ಮೈಸೂರು ಜನ ಕಾರಣ. ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ರೈತರೊಬ್ಬರು ನನಗೆ ಮನವಿ ಸಲ್ಲಿಸಿದ್ದರು. ಮುಂದಿನ ದಿನಗಳಲ್ಲಿ ರೈತರ ಮಕ್ಕಳಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ ಎಂದು ಹೇಳಿದರು. ನನ್ನ ಆರೋಗ್ಯ ಲೆಕ್ಕಿಸದೇ ಪಂಚರತ್ನ ಯಾತ್ರೆ ಮಾಡಿದ್ದೇನೆ, 120 ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ, ಇದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.ಪಂಚರತ್ನ ಯಾತ್ರೆ ನಮ್ಮ ಸ್ವಾರ್ಥಕ್ಕಾಗಿ ಮಾಡಿದ್ದಲ್ಲ, ಇದು ನಿಮ್ಮ ಕಾರ್ಯಕ್ರಮ. ಹಗಲು ರಾತ್ರಿ ನಿದ್ದೆ ಇಲ್ಲದೇ…

Read More

ಬೆಂಗಳೂರು : ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಇಂದು ವಿಧಾನಸೌಧದ ಮುಂಭಾಗ ಬಸವೇಶ್ವರ, ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ್ದಾರೆ. ವಿಧಾನಸಭೆ ಚುನಾವಣೆ ಬೆನ್ನಲ್ಲೇ ರಾಜ್ಯಕ್ಕೆ ಕೇಂದ್ರ ನಾಯಕರ ಭೇಟಿ ಜೋರಾಗಿದೆ. ಮತ್ತೆ ಕೇಂದ್ರ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದು, ಬಸವೇಶ್ವರ, ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಪ್ರತಿಮೆ ಅನಾವರಣಗೊಳಿಸಿದ್ದಾರೆ.ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ, ಪೇಜಾವರ ಶ್ರೀ, ನಿರ್ಮಲಾನಂದನಾಥ ಶ್ರೀ ಮತ್ತಿತರರಿದ್ದರು. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ʼ 103 ಅಡಿ ಎತ್ತರದ ಹುತಾತ್ಮರ ಸ್ಮಾರಕ ಲೋಕಾರ್ಪಣೆ ಮಾಡಿದ ಅಮಿತ್ ಶಾ ಬೀದರ್ : ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಸಿದ್ಧತೆ ಭರದಿಂದ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯಕ್ಕೆ ಇಂದು ಚುನಾವಣಾ ಚಾಣಕ್ಯ ಅಮಿತ್ ಶಾ ಭೇಟಿ ನೀಡಿದ್ದು, ಬಸವಕಲ್ಯಾಣದಲ್ಲಿ ಹುತಾತ್ಮರ ಸ್ಮಾರಕ ಲೋಕಾರ್ಪಣೆ ಮಾಡಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಮಾರ್ಚ್ 25ರಂದು ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ಕೊಟ್ಟಿದ್ದರು. ಇದೀಗ ಇಂದು ಮತ್ತೆ ನಾವಣಾ ಚಾಣಕ್ಯ…

Read More

ಬೆಂಗಳೂರು ಗ್ರಾಮಾಂತರ ಜಿಲ್ಲೆ :  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯ ವತಿಯಿಂದ ಟೈಲರಿಂಗ್/ ಫ್ಯಾಶನ್ ಡಿಸೈನಿಂಗ್ ಕುರಿತ 30 ದಿನಗಳ ಉಚಿತ ತರಬೇತಿಯನ್ನು ಮಾರ್ಚ್ 27 ರಿಂದ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವತಿಯರು ಮಾರ್ಚ್ 27 ರಂದು ನಡೆಯಲಿರುವ ಸಂದರ್ಶನದಲ್ಲಿ ನೇರವಾಗಿ ಭಾಗವಹಿಸಬಹುದು. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ರೇಷನ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ ಹೊಂದಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿಯ ಅವಧಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಆಸಕ್ತರು ತರಬೇತಿಗೆ ಹಾಜರಾಗಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ…

Read More

ಮೈಸೂರು : ನನ್ನ ಆರೋಗ್ಯ ಲೆಕ್ಕಿಸದೇ ಪಂಚರತ್ನ ಯಾತ್ರೆ ಮಾಡಿದ್ದೇನೆ, 120 ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ, ಇದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಮೈಸೂರು ತಾಲೂಕಿನ  ಉತ್ತನಹಳ್ಳಿ  ಬಳಿ ಜೆಡಿಎಸ್ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾತನಾಡಿದರು. ಪಂಚರತ್ನ ಯಾತ್ರೆ ನಮ್ಮ ಸ್ವಾರ್ಥಕ್ಕಾಗಿ ಮಾಡಿದ್ದಲ್ಲ, ಇದು ನಿಮ್ಮ ಕಾರ್ಯಕ್ರಮ. ಹಗಲು ರಾತ್ರಿ ನಿದ್ದೆ ಇಲ್ಲದೇ ನಾವು 90 ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ, ಈ ಕಾರ್ಯಕ್ರಮ ಇಡೀ ರಾಜ್ಯಕ್ಕೆ ತಲುಪಬೇಕು ಎಂದು ಕುಮಾರಸ್ವಾಮಿ ಹೇಳಿದರು.ನನ್ನ ಆರೋಗ್ಯ ಲೆಕ್ಕಿಸದೇ ಪಂಚರತ್ನ ಯಾತ್ರೆ ಮಾಡಿದ್ದೇನೆ, 120 ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ, ಇದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಇನ್ನೂ, ಮಾಜಿ ಪ್ರಧಾನಿ ಹೆಚ್ .ಡಿ ದೇವೇಗೌಡರ ಭಾಷಣದ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ, ಹಾಗೂ ಹೆಚ್ ಡಿ ರೇವಣ್ಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ…

Read More

ವಿಜಯಪುರ : ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯರನ್ನ ಸಿಎಂ ಮಾಡಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ   ಯತ್ನಾಳ್  ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯರನ್ನ ಸಿಎಂ ಮಾಡಲ್ಲ , ಸಿದ್ದರಾಮಯ್ಯ ಸಮುದಾಯದವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲಿಸಬೇಡಿ ಎಂದು ಮನವಿ ಮಾಡಿದರು. ನಾಳೆ ಒಬ್ಬ ಗೂಂಡಾನನ್ನು ಮುಖ್ಯಮಂತ್ರಿ ಮಾಡಿದ್ರೆ ನಾವು, ನೀವು ಸಾಯುತ್ತೇವೆ. ಅತಿಯಾದ ಮುಸ್ಲಿಂ ತುಷ್ಟೀಕರಣ ಸಿದ್ದರಾಮಯ್ಯರ ಈ ಸ್ಥಿತಿಗೆ ಕಾರಣ. ಸಿದ್ದರಾಮಯ್ಯ ಸಮುದಾಯದವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲಿಸಬೇಡಿ ಎಂದು ಹೇಳಿದರು. ವರುಣಾ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಸುಲಭದ ಕೆಲಸ ಏನಲ್ಲ, ಜನರು ಓಟು ಹಾಕೋಲ್ಲ ಎಂದರು. ದೇವೇಗೌಡ ಭಾಷಣದ ವೇಳೆ ಭಾವುಕರಾಗಿ ಕಣ್ಣೀರಿಟ್ಟ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ ಮೈಸೂರು : ಮಾಜಿ ಪ್ರಧಾನಿ ಹೆಚ್ .ಡಿ ದೇವೇಗೌಡರ ಭಾಷಣದ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ, ಹಾಗೂ ಹೆಚ್ ಡಿ ರೇವಣ್ಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.ಮೈಸೂರು ತಾಲೂಕಿನ ಉತ್ತರಹಳ್ಳಿ ಬಳಿ ಜೆಡಿಎಸ್ ಪಂಚರತ್ನ…

Read More


best web service company