Author: Kannada News

ಕೊಪ್ಪ  : ಪ್ರಸಕ್ತ 2021-22 ಶೈಕ್ಷಣಿಕ ಅವಧಿಯಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಹಾಗೂ ಪಾರ್ಸಿ ವಿದ್ಯಾರ್ಥಿಗಳಿಂದ ‘ವಿದ್ಯಾಸಿರಿ’ ಸೌಲಭ್ಯಕ್ಕಾಗಿ ಸೇವಾ ಸಿಂಧು ಸಂತ್ರಾಂಶದ ಮೂಲಕ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವಾಗಿರಬೇಕು ಹಾಗೂ ವ್ಯಾಸಂಗ ಮಾಡುತ್ತಿರುವ ಕಾಲೇಜಿನಿಂದ ಕನಿಷ್ಠ ಐದು ಕಿ.ಮೀ ದೂರದವರಾಗಿರಬೇಕು. ಆದರೆ ವಿದ್ಯಾರ್ಥಿಯ ಸ್ವಂತ ಸ್ಥಳ ನಗರ, ಪಟ್ಟಣ ಆಗಿದ್ದು, ಅವರು ಬೇರೆ ನಗರ-ಪಟ್ಟಣದಲ್ಲಿರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಅಂತವರು ಈ ಸೌಲಭ್ಯಕ್ಕೆ ಅರ್ಹರಿರುತ್ತಾರೆ( ಒಂದೇ ನಗರದ ವ್ಯಾಪ್ತಿಯಲ್ಲಿ ಇರುವವರು ಅರ್ಹರಿರುವುದಿಲ್ಲ). ರಾಜ್ಯ ಸರ್ಕಾರದ ನಿರ್ದೇಶನದಂತೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ ಎಂದು ಅಲ್ಪಸಂಖ್ಯಾತರ ನಿಗಮ ಪ್ರಕಟಣೆ ಹೊರಡಿಸಿದೆ.ಈಗಾಗಲೇ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಕೂಡ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ನಿಗಮ ಸೂಚನೆ ನೀಡಿದೆ. ಈ ಹಿಂದೆ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಕಂಪನಿಯೊಂದರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿರುವ ಎಂಜಿ ರಸ್ತೆಯಲ್ಲಿರುವ  ಸ್ಕೈನೆಟ್ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಆದಾಯ ತೆರಿಗೆ ವಂಚನೆ ಹಿನ್ನೆಲೆ ಈ ದಾಳಿ ನಡೆದಿದೆ ಎನ್ನಲಾಗಿದೆ. ದೆಹಲಿ ವಲಯದ ಐವರು ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ದಾಳಿ ನಡೆಸಿದ್ದು,   ಮಾತ್ರವಲ್ಲದೇ ಲಕ್ನೋ,  ಸೇರಿದಂತೆ  30 ಕಡೆ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಖನೌ, ಮೈನ್ ಪುರಿ, ಕೋಲ್ಕತ್ತಾ , ಮೌನಗರ, ಬೆಂಗಳೂರು, ಎನ್ ಸಿ ಆರ್ ಸೇರಿದಂತೆ 30 ಕಡೆ  ಅಧಿಕಾರಿಗಳು ದಾಳಿ ನಡೆಸಿದ್ದಾರೆ. https://kannadanewsnow.com/kannada/bmtc-invite-free-bus-pass-application-for-woment-garments-worker/ https://kannadanewsnow.com/kannada/omikron-spreads-at-least-3-times-faster-than-delta-take-regulatory-action-central-government-warns/  

Read More

ಬೆಂಗಳೂರು :   ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 295  ಜನರಿಗೆ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ 295   ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಇಂದು 290  ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸದ್ಯ 7074  ಸಕ್ರಿಯ ಪ್ರಕರಣಗಳಿದೆ. ಪಾಸಿಟಿವಿಟಿ ದರ ಶೇ.0.39 ರಷ್ಟಿದೆ. ಇದುವರೆಗೆ 38,295  ಜನರು ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 3002944  ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 204  ಜನರಿಗೆ ಸೋಂಕು ತಗುಲಿದ್ದು,. 171   ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 5691 ಸಕ್ರಿಯ ಪ್ರಕರಣಗಳಿದೆ. ಬೆಂಗಳೂರು ನಗರ 204, ಮೈಸೂರು 10 ಹಾಗೂ ಉತ್ತರ ಕನ್ನಡದಲ್ಲಿ 30 ಹೊಸ ಪ್ರಕರಣ ವರದಿಯಾಗಿದೆ. https://kannadanewsnow.com/kannada/soon-aplication-start-on-powra-karmika-post/ https://kannadanewsnow.com/kannada/india-beat-india-trophy-dream-asian-champions-trophy-hockey/ https://kannadanewsnow.com/kannada/aadhaar-voter-card-link-do-you-know-how-to-link-aadhaar-to-your-voter-id-follow-this-simple-process/  

Read More

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :   ಸರ್ಕಾರವು ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಏಕಾಏಕಿ ಮಂಡಿಸಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ವಿಧೇಯಕ ಮಂಡನೆಗೆ ಅರ್ಧಗಂಟೆ ಮೊದಲೇ ಕಾಂಗ್ರೆಸ್ ಪಕ್ಷದ ಮುಖ್ಯ ಮುಖ್ಯ ಸಚೇತಕರಿಗೆ ಸ್ಪೀಕರ್ ಮಾಹಿತಿ ನೀಡಿದ್ದರು. ಆದರೂ ಅವರು ವಿಧೇಯಕ ಮಂಡಿಸುವಾಗ ಉಪಸ್ಥಿತರಿರಲಿಲ್ಲ. ಇದು ಬೇಜವಾಬ್ದಾರಿ ವಿರೋಧಪಕ್ಷ ಎಂದು ಬೊಮ್ಮಾಯಿ ತಿರುಗೇಟು ನೀಡಿದರು. ನಿಯಮದಂತೆಯೇ ಸದನದಲ್ಲಿ ನಾವು ವಿಧೇಯಕ ಮಂಡಿಸಿದ್ದೇವೆ. ಮತಬ್ಯಾಂಕ್​ಗಾಗಿ ಅವರು ವಿಧೇಯಕ ವಿರೋಧಿಸುತ್ತಿದ್ದಾರೆ. ಚರ್ಚೆಗೆ ಮುಕ್ತ ಅವಕಾಶವಿದೆ, ನಾಳೆ (ಡಿ.22) ಚರ್ಚೆ ಮಾಡಲಿ ಎಂದರು ಸಲಹೆ ಮಾಡಿದರು. ಕದ್ದು ಮುಚ್ಚಿ ವಿಧೇಯಕ ಮಂಡಿಸಲಾಗಿದೆ. . ನಾವು ಇಲ್ಲದಿದ್ದಾಗ ವಿಧೇಯಕ ಮಂಡನೆ ಮಾಡಿದ್ದಾರೆ. ಈಗಾಗಲೇ ಇಂಥ ವಿಧೇಯಕಕ್ಕೆ ಗುಜರಾತ್‌ ಹೈಕೋರ್ಟ್‌ನಲ್ಲಿ ತಡೆ ನೀಡಲಾಗಿದೆ. ಈ ಬಗ್ಗೆ ನಾಳೆ ಸರ್ಕಾರದ ಬಣ್ಣ  ಬಯಲು ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದರು. ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು…

Read More

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :   ಸರ್ಕಾರವು ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಏಕಾಏಕಿ ಮಂಡಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು. ರಾಜ್ಯ ಸರ್ಕಾರದಿಂದ ಇಂದು ಮಧ್ಯಾಹ್ನದ ಭೋಜನ ವಿರಾಮದ ಕಲಾಪ ಆರಂಭ ನಂತ್ರ ಮತಾಂತರ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಸಂರಕ್ಷಣೆಗಾಗಿ ಮಂಡಿಸಲಾಗಿರುವಂತ ಈ ಮಸೂದೆಯನ್ನು ವಿಪಕ್ಷಗಳು ತೀವ್ರವಾಗಿ ವಿರೋಧಿಸುತ್ತಿವೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ  ವಿಧೇಯಕ ಮಂಡನೆ ಬಗ್ಗೆ ಅಜೆಂಡಾದಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಸಚಿವರು ಉತ್ತರ ನೀಡುವಾಗ ಅರ್ಧಕ್ಕೆ ನಿಲ್ಲಿಸಿ ಮತಾಂತರ ನಿಷೇಧ ವಿಧೇಯಕ ಮಂಡನೆ ಕುರಿತು ಪ್ರಸ್ತಾಪಿಸಿದರು ಎಂದರು.  ಕದ್ದು ಮುಚ್ಚಿ ವಿಧೇಯಕ ಮಂಡಿಸಲಾಗಿದೆ. . ನಾವು ಇಲ್ಲದಿದ್ದಾಗ ವಿಧೇಯಕ ಮಂಡನೆ ಮಾಡಿದ್ದಾರೆ. ಈಗಾಗಲೇ ಇಂಥ ವಿಧೇಯಕಕ್ಕೆ ಗುಜರಾತ್‌ ಹೈಕೋರ್ಟ್‌ನಲ್ಲಿ ತಡೆ ನೀಡಲಾಗಿದೆ. ಈ ಬಗ್ಗೆ ನಾಳೆ ಸರ್ಕಾರದ ಬಣ್ಣ  ಬಯಲು ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು ತಪ್ಪು…

Read More

ಬೆಳಗಾವಿ: ರಾಜ್ಯದ ಎಲ್ಲಾ ಪ್ರತಿಮೆಗಳ ಮುಂದೆ ಸರ್ಕಾರ ಸಿಸಿಟಿವಿ ಅಳವಡಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣದ ಹಿನ್ನೆಲೆ ಬೆಳಗಾವಿಯಲ್ಲಿ ಮಾತನಾಡಿದ ಅವರು ಎಂಇಎಸ್ ಹೆಸರು ಹೇಳಿಕೊಂಡು ಕೆಲ ದುಷ್ಕರ್ಮಿಗಳು ಗಲಾಟೆ ಮಾಡುತ್ತಿದ್ದಾರೆ. ಮರಾಠಿ ಭಾಷಿಕರು ಮತ್ತು ಕನ್ನಡಿಗರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು. ಹಲಸಿಯಲ್ಲಿ ಬಸವಣ್ಣನವರ ಮೂರ್ತಿಗೆ ಧಕ್ಕೆ ಮಾಡಿದ್ದನ್ನ ಖಂಡಿಸಿ ಚರ್ಚೆ ಮಾಡಿ ಪ್ರತಿಭಟನೆ ಮಾಡುತ್ತೇವೆ. ನಾಳೆ ಎಲ್ಲರೊಂದಿಗೆ ಚರ್ಚೆ ಮಾಡಿ ಪ್ರತಿಭಟನೆ ದಿನಾಂಕ ನಿಗದಿ ಮಾಡುತ್ತೇವೆ. ರಾಜ್ಯದ ಎಲ್ಲಾ ಪ್ರತಿಮೆಗಳ ಮುಂದೆ ಸರ್ಕಾರ ಸಿಸಿಟಿವಿ ಅಳವಡಿಸಬೇಕು, ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ, ಬಸವಣ್ಣನವರು ಮತ್ತು ಶಿವಾಜಿಯವರ ಮೂರ್ತಿಗೆ ಮಸಿ ಬಳಿದಿದ್ದನ್ನು ಖಂಡಿಸುತ್ತೇವೆ ಎಂದು ಹೇಳಿದರು. https://kannadanewsnow.com/kannada/night-curfew-extedend-in-dec31/ https://kannadanewsnow.com/kannada/omicron-fear-no-entry-for-fans-to-india-africa-mathc-field/ https://kannadanewsnow.com/kannada/st-somashekar-ordered-to-seez-the-proprty/

Read More

ಬೆಳಗಾವಿ : ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿದವರಿಗೆ ಬಿಗ್ ಶಾಕ್ ಎದುರಾಗಿದ್ದು, ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದು, ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ನಕಲಿ ತುಪ್ಪ ತಯಾರಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು. ಕಲಬೆರೆಕೆ ತುಪ್ಪದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೈಸೂರಿನಲ್ಲಿ ನಕಲಿ ತುಪ್ಪ ತಯಾರಿಸಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು…

Read More

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :   ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಎಲ್ಲಾ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶ ನಿರಾಕರಿಸಲಾಗಿದೆ.    ಈ ಪ್ರವಾಸದಲ್ಲಿ ಭಾರತ ತಂಡ ಮೂರು ಟೆಸ್ಟ್ ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಿದ್ದು,  ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ದಕ್ಷಿಣ ಮುನ್ನೆಚ್ಚರಿಕೆ ಕ್ರಮವಾಗಿ ಪಂದ್ಯಗಳ ಸಮಯದಲ್ಲಿ ಪ್ರೇಕ್ಷಕರಿಗೆ ಮೈದಾನಕ್ಕೆ ಪ್ರವೇಶಿಸಲು ಅನುಮತಿ ನೀಡಲು ನಿರಾಕರಿಸಿದೆ.  ಕೊರೊನಾ ಮಾರ್ಗಸೂಚಿ ಪಾಲನೆ ಷರತ್ತಿಗೊಳಪಟ್ಟು ದಕ್ಷಿಣ ಆಫ್ರಿಕಾ ಸರ್ಕಾರವು ಇತ್ತೀಚೆಗೆ 2000 ಜನರಿಗೆ ಕ್ರೀಡಾಂಗಣಕ್ಕೆ ಬರಲು ಅವಕಾಶ ನೀಡಿತ್ತು. ಆದರೆ ಈಗ ಆಟಗಾರರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶ ನಿರಾಕರಿಸಲಾಗಿದೆ. ಭಾರತ ಸತತ ಮೂರು ದಿನಗಳ ಕಾಲ ಭಾರತ ತಂಡ ಮೊದಲ ಟೆಸ್ಟ್‌ಗೆ ಸಿದ್ಧತೆ ನಡೆಸುತ್ತಿದ್ದು, ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತೀಯ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.…

Read More

ಕೆ ಎನ್ ಎನ್ ಸ್ಪೆಷಲ್ ಡೆಸ್ಕ್ :  ಈರುಳ್ಳಿ ಹೆಚ್ಚಿದರೆ ಕಣ್ಣಿನಲ್ಲಿ ನೀರು ಬರುತ್ತದೆ ಎಂಬುದು ಹಳೆಯ ಮಾತು, ಆದರೆ ಈಗ ಅಡುಗೆ ಮನೆಯಲ್ಲಿ ಈರುಳ್ಳಿಗೆ ಮೊದಲ ಸ್ಥಾನ ನೀಡಲಾಗುತ್ತೆ, ಹೌದು. ವೆಜ್ ಇರಲಿ, ನಾನ್ ವೆಜ್ ಇರಲಿ ಈರುಳ್ಳಿ ಇಲ್ಲದೇ ಯಾವುದೇ ಅಡುಗೆ ರುಚಿಸಲ್ಲ..ಇನ್ನೂ, ಅದಷ್ಟೇ ಅಲ್ಲದೇ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ಸೇವಿಸುವುದರಿಂದ ಭಾರೀ ಆರೋಗ್ಯ ಲಾಭ ಪಡೆಯಬಹುದು. 1) ಈರುಳ್ಳಿ ಸೇವಿಸುವುದರಿಂದ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ, ಹಸಿ ಈರುಳ್ಳಿ ಸೇವಿಸುವುದರಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಯಂತೆ. 2) ನಮ್ಮ ದೇಹದಲ್ಲಿ ಎದುರಾಗುವ ಕೆಲವೊಂದು ಅಲರ್ಜಿ ಸಮಸ್ಯೆಗಳಿಗೆ ಈರುಳ್ಳಿ ರಾಮಬಾಣ. 3) ಈರುಳ್ಳಿ ನಮ್ಮ  ದೇಹದಲ್ಲಿನ ರಕ್ತ ಪರಿಚಲನೆಯನ್ನು ಸರಿಪಡಿಸುತ್ತದೆ ಮತ್ತು ದೇಹದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸುತ್ತದೆ. 4) ಈರುಳ್ಳಿ ಸೇವನೆಯಿಂದ, ಅವುಗಳಲ್ಲಿರುವ ಆರ್ಗನೋ ಸಲ್ಫರ್ ಅಂಶಗಳು ನಮ್ಮ ದೇಹಕ್ಕೆ ಉತ್ತಮವಾಗಿ ಕೆಲಸ ಮಾಡುತ್ತವೆ. 5) ಅರಿಶಿಣದ…

Read More

ಗುಜರಾತ್ :   ಗುಜರಾತ್  ಸರ್ಕಾರವು ಎಂಟು ಪ್ರಮುಖ ನಗರಗಳಲ್ಲಿ ನೈಟ್  ಕರ್ಫ್ಯೂವನ್ನು ಡಿಸೆಂಬರ್ 31  ರವರೆಗೆ ವಿಸ್ತರಿಸಿದೆ. ಅಹಮದಾಬಾದ್, ರಾಜ್ ಕೋಟ್, ಸೂರತ್, ವಡೋದರಾ, ಜಾಮ್ ನಗರ್, ಭಾವನಗರ್, ಗಾಂಧಿನಗರ ಮತ್ತು ಜುನಾಗಢದಲ್ಲಿ ನೈಟ್  ಕರ್ಫ್ಯೂ ವಿಸ್ತರಿಸಲಾಗಿದೆ. ಕೋವಿಡ್-19 ನ ಒಮೈಕ್ರಾನ್ ರೂಪಾಂತರದ ಭೀತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಭಾನುವಾರ ರಾಜ್ಯದಲ್ಲಿ ಒಮೈಕ್ರಾನ್ ರೂಪಾಂತರದ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 11 ಕೇಸ್ ಪತ್ತೆಯಾಗಿದೆ. https://kannadanewsnow.com/kannada/brother-married-sister-in-uttrrpradessha/ https://kannadanewsnow.com/kannada/scholarship-2021-22/

Read More


best web service company